ಗಂಡ ಹೆಂಡತಿ ಸಂತೋಷದಿಂದ ಜೀವನ ನಡೆಸಬೇಕೆಂದರೆ ಯಾವುದೇ ಕಾರಣಕ್ಕೂ ಈ ತಪ್ಪನ್ನು ಮಾಡಬೇಡಿ ; ಇಲ್ಲವಾದರೆ ದಾಂಪತ್ಯ ಜೀವನದಲ್ಲಿ ಬಿರುಕು ಬಿಡುವುದು ಪಕ್ಕ ..!?

ಸುದ್ದಿ

ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಕೂಡ ನಡೆಯಲೇಬೇಕು. ಹುಟ್ಟಿದ ಮನುಷ್ಯನಿಗೆ ಜೀವನಸಂಗಾತಿ ಇಲ್ಲವೆಂದರೆ ಖಂಡಿತವಾಗಿ ಆತನ ಜೀವನ ಎನ್ನುವುದು ಒಂಟಿಯಾಗಿ ಬಿಡುತ್ತದೆ. ಮದುವೆಯಾದ ಮೇಲೆ ಕೂಡ ಸಂಸಾರ ಸುಖವಾಗಿ ದೀರ್ಘಕಾಲದ ಸಮಯದವರೆಗೆ ನಡೆಯಬೇಕು ಎಂದರೆ ಅಲ್ಲಿ ಶಾಂತಿ ಹಾಗೂ ಪರಸ್ಪರ ಸೌಹಾರ್ದತೆ ಇರುವುದು ಅಗತ್ಯವಾಗಿರುತ್ತದೆ. ಇಲ್ಲದಿದ್ದರೆ ಅತಿ ಕಡಿಮೆ ಸಮಯದಲ್ಲಿ ಮದುವೆ ಎನ್ನುವುದು ಜಗಳಗಳಲ್ಲಿ ಪ್ರಾರಂಭವಾಗಿ ವಿವಾಹ ವಿಚ್ಛೇದನದಲ್ಲಿ ಅಂತ್ಯವಾಗುತ್ತದೆ.

ಒಂದು ಸಂಸಾರದಲ್ಲಿ ಗಂಡಿನ ಜವಾಬ್ದಾರಿ ಎಷ್ಟು ಮಟ್ಟಿಗೆ ಪ್ರಮುಖವಾಗಿರುತ್ತದೆ ಯಾವ ಹೆಣ್ಣಿನ ತಾಳ್ಮೆ ಹಾಗೂ ನಿರ್ಧಾರ ತೆಗೆದುಕೊಳ್ಳುವ ರೀತಿಯೂ ಕೂಡ ಪ್ರಮುಖವಾಗಿರುತ್ತದೆ. ಯಾವ ಮನೆಯಲ್ಲಿ ಹೆಣ್ಣು ಸಂತೋಷವಾಗಿ ಸಂಸಾರವನ್ನು ಮಾಡಿಕೊಂಡಿರುತ್ತಾಳೋ ಅಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆ ಎಂಬುದಾಗಿ ಮಾತನಾಡಿಕೊಳ್ಳುತ್ತಾರೆ. ಇನ್ನು ಸಂಸಾರ ಯಾವುದೇ ಜಗಳಗಳಲ್ಲಿ ಅಥವಾ ಶಾಂತಿ ನೆಲೆಸಿದೆ ಸುಖವಾಗಿ ಸಾಗಬೇಕು ಎಂದರೆ ಮಲಗುವ ಕೋಣೆಯಲ್ಲಿ ವಾಸ್ತು ಕೂಡ ಸರಿಯಾಗಿರಬೇಕು. ಇಲ್ಲದಿದ್ದರೆ ಇದು ಸಾಕಷ್ಟು ಸಮಸ್ಯೆಗಳನ್ನು ಮಾಡಬಹುದಾಗಿದೆ ಎಂಬುದು ತಿಳಿದುಬಂದಿದೆ.

ಮಲಗುವ ಕೋಣೆ ನೈರುತ್ಯ ದಿಕ್ಕಿನಲ್ಲಿರಬೇಕು. ಸಂಸಾರ ಯಾವುದೇ ಕಷ್ಟಗಳಿಲ್ಲದ ನಡೆಯಲು ಈ ದಿಕ್ಕಿನಲ್ಲಿ ದಂಪತಿಗಳು ಮಲಗಬೇಕು ಎನ್ನುವುದಾಗಿ ಪ್ರತೀತಿಯಿದೆ. ತಲೆದಿಂಬು ದಕ್ಷಿಣ ದಿಕ್ಕಿನಲ್ಲಿ ಇರಬೇಕು. ಯಾವುದೇ ಕಾರಣಕ್ಕೂ ಗೋಡೆಗೆ ಅಂಚಿಗೆ ಮಂಚವನ್ನು ತಾಗಿಸಬಾರದು ಇದರಿಂದಾಗಿ ಪತಿ ಪತ್ನಿಯ ನಡುವೆ ಕಲಹ ಉಂಟಾಗುತ್ತದೆ. ಯಾವುದೇ ಕಾರಣಕ್ಕೂ ಪಶ್ಚಿಮ ದಿಕ್ಕಿಗೆ ತಲೆ ಹಾಕಿ ಮಲಗಬಾರದು. ಯಾವುದೇ ಕಾರಣಕ್ಕೂ ಬಾಗಿಲಿನ ಎದುರುಗಡೆ ಮಂಚವನ್ನು ಇಡಬಾರದು ಹೀಗೆ ಮಾಡಿದರೆ ಆರೋಗ್ಯ ಸಮಯದಲ್ಲಿ ಸಾಕಷ್ಟು ವೈಪರೀತ್ಯ ಉಂಟಾಗುವ ಸಾಧ್ಯತೆಯಿದೆ.

ಇನ್ನು ನಿಮ್ಮ ಮನೆ ಸಮೃದ್ಧಿಯಿಂದ ಕಂಗೊಳಿಸಲು ಎಲ್ಲಾ ಬಾಗಿಲು ಗಳಿಗಿಂತ ಮನೆಯ ಮುಖ್ಯದ್ವಾರ ಎನ್ನುವುದು ದೊಡ್ಡದಾಗಿರಬೇಕು. ಈ ಎಲ್ಲಾ ನಿಯಮಗಳನ್ನು ಪಾಲಿಸಿದರೆ ಖಂಡಿತವಾಗಿ ಸಂಸಾರದಲ್ಲಿ ಸುಖ-ಶಾಂತಿ ನೆಮ್ಮದಿ ಸಮೃದ್ಧಿ ತುಂಬಿ ತುಳುಕುತ್ತದೆ. ಹೀಗಾಗಿ ಉತ್ತಮ ಸಂಸಾರಕ್ಕಾಗಿ ಇಂತಹ ಜ್ಯೋತಿಷ್ಯ ಹಾಗೂ ವಾಸ್ತು ಶಾಸ್ತ್ರಗಳ ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಪ್ರಮುಖವಾಗಿರುತ್ತದೆ. ಖಂಡಿತವಾಗಿ ಇದು ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬೆಳವಣಿಗೆಗಳನ್ನು ಹೊಂದಲು ಕಾರಣವಾಗುತ್ತದೆ. ನೀವು ಕೂಡ ಇವುಗಳನ್ನು ನಿಮ್ಮ ಜೀವನದಲ್ಲಿ ಬಳಸಿ ಹಾಗೂ ಫಲಿತಾಂಶವನ್ನು ಪಡೆಯಿರಿ.

ಮದುವೆ ಪ್ರತಿಯೊಬ್ಬರು ಕೂಡ ಮಾಡಿಕೊಳ್ಳುತ್ತಾರೆ ಆದರೆ ಅದರಲ್ಲಿ ಸಂತೋಷವಾಗಿ ಹಾಗೂ ದೀರ್ಘಕಾಲದವರೆಗೆ ಯಾವುದೇ ಸಮಸ್ಯೆಗಳಿಲ್ಲದೆ ಬಾಳಿ ಬದುಕಿ ತೋರಿಸುವುದೇ ನಿಜವಾದ ಸಾಧನೆ. ಆಗಲೇ ನಿಮ್ಮ ದಾಂಪತ್ಯ ಜೀವನ ಯಶಸ್ವಿಯಾಗಿದೆ ಎನ್ನುವುದಾಗಿ ಸಮಾಜ ಒಪ್ಪಿಕೊಳ್ಳುತ್ತದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗು ಅಭಿಪ್ರಾಯಗಳನ್ನು ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.


Leave a Reply

Your email address will not be published. Required fields are marked *