ಪುನೀತ್ ರಾಜ್ ಕುಮಾರ್ ಅವರ ಕನಸಿನ ಸಿನೆಮಾ ಗಂಧದ ಗುಡಿ ನಿನ್ನೆ ತೆರೆಗೆ ಅಪ್ಪಳಿಸಿದೆ. ಹೌದು, ಈ ಅಕ್ಟೋಬರ್ 29ಕ್ಕೆ ಸರಿಯಾಗಿ ಎರಡು ವರ್ಷಗಳ ಹಿಂದೆ ಅಂದರೆ 2020ರ ಅಕ್ಟೋಬರ್ 29ರಂದು ಶುರುವಾಗಿದ್ದ ಗಂಧದಗುಡಿ ಜರ್ನಿಯನ್ನು ಬೆಳ್ಳಿತೆರೆ ಮೇಲೆ ವೀಕ್ಷಿಸಿದ ಅಪ್ಪು ಫ್ಯಾನ್ಸ್ ಭಾವುಕರಾಗಿದ್ದಾರೆ. ದಕ್ಷಿಣದಿಂದ ಉತ್ತರ ಕರ್ನಾಟಕದವರೆಗಿನ ಪ್ರಮುಖ ವನ್ಯ ಸಂಪತ್ತು ಹಾಗೂ ಯಾರೂ ಕಂಡಿರದ ರೀತಿಯ ಜಾಗಗಳನ್ನು ಹಾಗೂ ಅವುಗಳ ವಿಶೇಷತೆಗಳನ್ನು ಪುನೀತ್ ಹಾಗೂ ಅಮೋಘವರ್ಷ ಜೋಡಿಯೂ ತೆರೆ ಮೇಲೆ ತಂದಿದೆ.
ಕರ್ನಾಟಕ ವನ್ಯಸಂಪತ್ತಿನ ದರ್ಶನ ಮಾತ್ರವಲ್ಲದೆ ಚಿತ್ರಮಂದಿರಕ್ಕೆ ಬರುವ ಜನರಿಗೆ ಈ ಚಿತ್ರದಲ್ಲಿಯೂ ಸಹ ಪುನೀತ್ ರಾಜ್ ಕುಮಾರ್ ಒಂದೊಳ್ಳೆ ಸಂದೇಶವನ್ನು ನೀಡುವ ಮೂಲಕ ಅಪ್ಪುವಿನ ಕೊನೆಯ ಸಿನಿಮಾ ಗಂಧದ ಗುಡಿ ಅಭಿಮಾನಿಗಳ ಮನಸ್ಸಿನಲ್ಲಿ ಉಳಿದಿದೆ. ಅಂದಹಾಗೆ, ಅಕ್ಟೋಬರ್ 27 ರಂದು ಸೆಲೆಬ್ರಿಟಿ ಹಾಗೂ ಅಭಿಮಾನಿಗಳಿಗಾಗಿ ಗಂಧದ ಗುಡಿ ಸ್ಪೆಷಲ್ ಪ್ರಿಮಿಯಾರ್ ಶೋ ಆಯೋಜನೆ ಮಾಡಲಾಗಿತ್ತು. ಕನ್ನಡದ ಬಹುತೇಕ ನಟ, ನಟಿಯರು ಹಾಗೂ ತಂತ್ರಜ್ಞರು ಸೇರಿದಂತೆ ಅನೇಕರು ಸಿನಿಮಾ ವೀಕ್ಷಿಸಿದ್ದಾರೆ.
ಅಪ್ಪುವಿನ ಗಂಧದ ಗುಡಿ ಸಿನಿಮಾ ವೀಕ್ಷಿಸಲು ಸುಧಾ ಮೂರ್ತಿಯವರು ಪ್ರೀಮಿಯರ್ ಶೋಗೆ ಬಂದಿದ್ದು,ಈ ವೇಳೆ ಪುನೀತ್ ಅವರ ಕಿರಿಯ ಪುತ್ರಿ ವಂದಿತಾ ಸುಧಾ ಮೂರ್ತಿಯವರನ್ನು ಮಾತನಾಡಿಸಿದ್ದಾಳೆ. ಅಪ್ಪುವಿನ ಮಗಳನ್ನು ನೋಡಿ ನೀನೇನಾ ಅಪ್ಪುವಿನ ಎರಡನೇ ಮಗಳು ಮುದ್ದು ಮಾಡಿದ್ದಾರೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈ’ರಲ್ ಆಗಿದೆ. ಸುಧಾ ಮೂರ್ತಿಯವರಿಗೆ ಈ ಸಿನಿಮಾ ಅವರಿಗೆ ಬಹಳ ಖುಷಿಕೊಟ್ಟಿದೆ. ಪುನೀತ್ ರಾಜ್ಕಮಾರ್ ಅವರ ಈ ಪ್ರಯತ್ನಕ್ಕೆ ಸುಧಾ ಮೂರ್ತಿ ಫುಲ್ ಮಾರ್ಕ್ಸ್ ನೀಡಿದ್ದಾರೆ.
ಯುವಜನತೆ ನೋಡಿ ತಿಳಿಯಬೇಕಾದ ಅನೇಕ ಅಂಶಗಳು ಇದರಲ್ಲಿ ಇವೆ ಎಂದು ಅವರು ಹೇಳಿದ್ದಾರೆ. ‘ಕನ್ನಡದಲ್ಲಿ ಇಂಥ ಚಿತ್ರವನ್ನು ನೋಡಿ ಗರ್ವ ಎನಿಸಿತು’ ಎಂದು ಅವರು ಹೇಳಿದ್ದಾರೆ. ಇನ್ನು ಗಂಧದ ಗುಡಿ ಪ್ರೀಮಿಯರ್ ಶೋನಲ್ಲಿ ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ, ಪುನೀತ್ ಕಿರಿಯ ಪುತ್ರಿ ವಂದಿತಾ, ಯುವರಾಜ್‌ಕುಮಾರ್, ರಮ್ಯಾ, ನೆನಪಿರಲಿ ಪ್ರೇಮ್, ದೇವರಾಜ್, ನಿಶ್ವಿಕಾ ನಾಯ್ಡು, ಸುಧಾ ಬೆಳವಾಡಿ, ಗುರುಕಿರಣ್, ಅಜಯ್ ರಾವ್, ವಿನಯ್ ರಾಜ್‌ಕುಮಾರ್, ‘ಬಹದ್ದೂರ್’ ಚೇತನ್, ಅಭಿಷೇಕ್ ಅಂಬರೀಶ್, ಪ್ರಜ್ವಲ್ ದೇವರಾಜ್, ಸಂತೋಷ್ ಆನಂದ್ರಾಮ್, ವಿಜಯ್ ರಾಘವೇಂದ್ರ, ರಿಷಬ್ ಶೆಟ್ಟಿ, ಪ್ರಗತಿ ಶೆಟ್ಟಿ, ರಕ್ಷಿತ್ ಶೆಟ್ಟಿ ಮುಂತಾದವರು ಪ್ರೀಮಿಯರ್ ಶೋನಲ್ಲಿ ‘ಗಂಧದ ಗುಡಿ’ ಸಾಕ್ಷ್ಯಚಿತ್ರವನ್ನು ವೀಕ್ಷಿಸಿದ್ದಾರೆ.
ಅದರ ಜೊತೆಗೆ ಈ ಸಿನಿಮಾದ ಬಗ್ಗೆ ಮೆಚ್ಚುಗೆ ಮಾತು ಗಳನ್ನು ಆಡಿದ್ದಾರೆ. ಸದ್ಯಕ್ಕೆ ಗಂಧದ ಗುಡಿ ಸಿನಿಮಾಕ್ಕೆ ಒಳ್ಳೆಯ ರೆಸ್ಪಾನ್ಸ್ ಬಂದಿದೆ. ಅಭಿಮಾನಿ ಗಳು ಚಿತ್ರ ಮಂದಿರಗಳಲ್ಲಿ ಪುನೀತ್ ರಾಜ್ ಕುಮಾರ್ ಅವರ ಕೊನೆಯ ಸಿನಿಮಾ ನೋಡಲು ಸಾಗರೋಪಡಿಯಲ್ಲಿ ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ಗಂಧದ ಗುಡಿ ಬಿಡುಗಡೆಯಾದ ಮೊದಲ ದಿನವೇ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದ್ದು, ಬಾಕ್ಸ್ ಆಫೀಸಿನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಗಂಧದ ಗುಡಿ ಚಿತ್ರದ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ತಿಳಿಸಿ