ನಮ್ಮ ಕನ್ನಡ ಕಿರುತೆರೆ ವಾಹಿನಿಗಳು ಇತ್ತೀಚಿನ ದಿನಗಳಲ್ಲಿ ಸಿನಿಮಾರಂಗ ಗಿಂತ ಹೆಚ್ಚಾಗಿ ಬೆಳೆದಿದೆ ಎಂದರೆ ತಪ್ಪಾಗಲಾರದು. ಒಂದು ಕಾಲದಲ್ಲಿ ಅಂದರೆ ಲಾಕ್ಡೌನ್ ಸಮಯದಲ್ಲಿ ಸಿನಿಮಾ ಇಲ್ಲದಿದ್ದ ಸಂದರ್ಭದಲ್ಲಿ ಕಿರುತೆರೆ ವಾಹಿನಿಯ ಧಾರವಾಹಿಗಳು ಕನ್ನಡ ಪ್ರೇಕ್ಷಕರಿಗೆ ಮನೋರಂಜನೆಯ ರಸದೌತಣವನ್ನು ನೀಡಿದ್ದವು. ಹೀಗಾಗಿ ಕಿರುತೆರೆ ವಾಹಿನಿಗಳು ಇತ್ತೀಚಿನ ವರ್ಷದಲ್ಲಿ ಗಮನೀಯವಾಗಿ ಬೆಳವಣಿಗೆಯನ್ನು ಕಂಡಿದೆ ಎಂದರೆ ಖಂಡಿತವಾಗಿ ತಪ್ಪಾಗಲಾರದು.
ಹೌದು ಅದರಲ್ಲಿ ಇತ್ತೀಚಿನ ದಿನಗಳಲ್ಲಿ ಕಥೆ ಹಾಗೂ ಮೇಕಿಂಗ್ ಕ್ವಾಲಿಟಿ ವಿಚಾರದಲ್ಲಿ ಸಿನಿಮಾಗಳಿಗೆ ಕಾಂಪಿಟೇಷನ್ ನೀಡುತ್ತಿವೆ ಕಿರುತೆರೆಯ ಧಾರವಾಹಿಗಳು. ಕಿರುತೆರೆ ವಾಹಿನಿಯ ಕಲಾವಿದರು ಕೂಡ ಸಿನಿಮಾ ನಟರಷ್ಟೇ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ದಾರವಾಹಿಗಳ ಪ್ರಸಾರವು ಕೂಡ ವಾಹಿನಿಗಳಲ್ಲಿ ಪ್ರಾರಂಭವಾಗಿದೆ. ಇನ್ನು ಇವುಗಳಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವಂತಹ ಗಟ್ಟಿಮೇಳ ಧಾರವಾಹಿ ಸಾಕಷ್ಟು ಪ್ರಸಿದ್ಧವಾಗಿದೆ. ಹೌದು ಜೀ ಕನ್ನಡ ವಾಹಿನಿಯಲ್ಲಿ ಗಟ್ಟಿಮೇಳ ಧಾರಾವಾಹಿ ಹಲವಾರು ವರ್ಷಗಳಿಂದ ಪ್ರಸಾರವನ್ನು ಕಾಣುತ್ತಿದ್ದು ಪ್ರೇಕ್ಷಕರ ನೆಚ್ಚಿನ ಧಾರವಾಹಿಗಳಲ್ಲಿ ಅಗ್ರಪಂಕ್ತಿಯಲ್ಲಿ ಕಾಣಸಿಗುತ್ತದೆ.
ಗಟ್ಟಿಮೇಳ ಧಾರವಾಹಿಯಲ್ಲಿ ಕಂಡುಬರುವಂತಹ ಟ್ವಿಸ್ಟ್ ಹಾಗೂ ರೋಚಕ ಕಥೆ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇನ್ನು ಗಟ್ಟಿಮೇಳ ಧಾರವಾಹಿ ಈಗ ರೇಟಿಂಗ್ ವಿಚಾರದಲ್ಲಿ ಮೊದಲು ಒಂದನೇ ಸ್ಥಾನದಲ್ಲಿ ಮಿಂಚುತ್ತಿತ್ತು ಕಳೆದ ಕೆಲವು ತಿಂಗಳಿನಿಂದ ಎರಡನೇ ಸ್ಥಾನದಲ್ಲಿ ಕಂಡುಬರುತ್ತಿದೆ. ಈ ದಾರವಾಹಿಯಲ್ಲಿ ವೇದಾಂತ ಅದಿತಿ ಧ್ರುವ ಹೀಗೆ ಹಲವಾರು ಪಾತ್ರಗಳು ಪ್ರಮುಖವಾಗಿ ಕಂಡುಬರುತ್ತದೆ. ಫ್ಯಾಮಿಲಿ ಒಟ್ಟಿಗೆ ಕೂತು ನೋಡುವಂತಹ ಸದಬಿರುಚಿಯ ಧಾರವಾಹಿ ಆಗಿದೆಯೆಂದರೆ ಖಂಡಿತವಾಗಿ ತಪ್ಪಾಗಲಾರದು. ಪ್ರತಿಯೊಬ್ಬ ಧಾರವಾಹಿ ಪ್ರಿಯನು ಕೂಡ ಈ ಧಾರವಾಹಿಯನ್ನು ಖಂಡಿತವಾಗಿ ವೀಕ್ಷಿಸುತ್ತಾನೆ. ಅಷ್ಟರಮಟ್ಟಿಗೆ ಚೆನ್ನಾಗಿ ಮೂಡಿ ಬರುತ್ತಿದೆ.
ಈಗ ಧ್ರುವನ ಪ್ರೀತಿಯ ಸಂಚಿಕೆಗಳು ಪ್ರಾರಂಭವಾಗಿದ್ದು ಅಲ್ಲಿ ಆತ ಪ್ರೊಪೋಸ್ ಮಾಡಿ ಬಂದು ಆಫೀಸ್ ಗೆ ಹೋಗಬೇಕಾದರೆ ಅಲ್ಲಿ ಆತನಿಗೆ ಧ್ರುವ ಹಾಗೂ ವೇದಾಂತನ ಅಮ್ಮ ಯಾರನ್ನೆವುದಾಗಿ ತಿಳಿದು ಬರುತ್ತದೆ. ಈ ವಿಚಾರದ ತಿಳಿದುಕೊಂಡ ಸುಹಾಸಿನಿ ಧೃವನನ್ನು ಮುಗಿಸಿಬಿಡುತ್ತಾಳೆ. ಮುಂದಿನ ದಿನಗಳಲ್ಲಿ ಸುಹಾಸಿನಿಯ ಮುಖವಾಡ ಬಯಲಾಗುತ್ತದೆಯೋ ಇಲ್ಲವೋ ಎನ್ನುವುದನ್ನು ಕಾದು ನೋಡಬೇಕಾಗಿದೆ. ಒಟ್ಟಾರೆಯಾಗಿ ಗಟ್ಟಿಮೇಳ ಧಾರವಾಹಿ ಈಗ ರೋಚಕ ಹಂತವನ್ನು ತಲುಪಿದ್ದು ಪ್ರೇಕ್ಷಕರು ಖಂಡಿತವಾಗಿ ಮುಗಿಬಿದ್ದು ಈ ಧಾರವಾಹಿ ನೋಡುವುದರಲ್ಲಿ ಯಾವುದೇ ಅನುಮಾನವಿಲ್ಲ.
ಮುಂದಿನ ಸಂಚಿಕೆಯಲ್ಲಿ ಈ ದಾರವಾಹಿ ಯಾವ ಹಂತವನ್ನು ತಲುಪಬಹುದು ಎಂಬುದನ್ನು ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ತಿಳಿಸಿ. ಇನ್ನು ಗಟ್ಟಿಮೇಳ ಧಾರವಾಹಿಯಲ್ಲಿ ನಿಮಗೆ ಯಾವ ಅಂಶ ಅಥವಾ ಯಾವ ಪಾತ್ರ ಇಷ್ಟ ಎಂಬುದನ್ನು ಕೂಡ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ. ನೀವು ಕೂಡ ಧಾರವಾಹಿ ಪ್ರಿಯರಾಗಿದ್ದರೆ ಈ ವಿಚಾರವನ್ನು ಶೇರ್ ಮಾಡಿ.