ಗರ್ಜನೆ ಇಲ್ಲದೆ ಬೋನಿಗೆ ಸೇರಿದ ಲೈಗರ್… ಫುಲ್ ಬಿಲ್ಡ್ ಅಪ್ ಕೊಟ್ಟು ನೂರಾರು ಕೋಟಿ ಖರ್ಚು ಮಾಡಿದ ಲೈಗರ್ ಸಿನೆಮಾಗೆ ಎಷ್ಟು ಲಾಸ್ ಆಗುತ್ತೆ ಗೊತ್ತೇ??

ಸುದ್ದಿ

ವಿಜಯ್ ದೇವರಕೊಂಡ ಅಭಿನಯದ ಲೈಗರ್ ಚಿತ್ರ ಮೊನ್ನೆ ಅಷ್ಟೇ ಬಿಡುಗಡೆಯಾಗಿದೆ. ಆದರೆ ಅಂದುಕೊಂಡಷ್ಟು ಸಿನೆಮಾ ಯಶಸ್ಸು ಕಂಡಿಲ್ಲ ಬದಲಾಗಿ ಲೈಗರ್ ಚಿತ್ರಕ್ಕೆ ಎಲ್ಲೆಡೆ ನೆಗೆಟಿವ್ ಒಪೀನಿಯನ್ ಬರ್ತಿದೆ. ಈ ಚಿತ್ರ ಕನ್ನಡಕ್ಕೂ ಡಬ್ ಆಗಿ ಬಿಡುಗಡೆಯಗಿದೆ. ಅಯೋಗ್ಯ ಚಿತ್ರ ನಿರ್ಮಾಪಕರಾದ ಚಂದ್ರಶೇಖರ್ ಹಾಗೂ ಗಂಗಾಧರ್ ಅವರು 5ಕೋಟಿ ರೂಪಾಯಿ ಬಂಡವಾಳ ಹೂಡಿ ಲೈಗರ್ ಚಿತ್ರ ಡಿಸ್ಟಿಬ್ಯೂಶನ್ ಹಕ್ಕು ಪಡೆದು ಕನ್ನಡದಲ್ಲಿ ಬಿಡುಗಡೆ ಮಾಡಿದ್ದಾರೆ. ಆದರೆ ಲೈಗರ್ ಸಿನೆಮಾ ಚನ್ನಾಗಿಲ್ಲ ಎಂದು ಜನರಿಂದ ಬರುತ್ತಿದೆ. ಮೊದಲ ದಿನವೇ ಲೈಗರ್ ಬಗ್ಗೆ ನೆಗೆಟಿವ್ ರೀವ್ಯೂ ತುಂಬಾನೇ ಹರಿದಾಡತ್ತಾನೆ ಇತ್ತು.

ಹಾಗಾಗಿ ವೀಕೆಂಡ್ ಬಳಿಕ ಈ ಸಿನೆಮಾ ಚಿತ್ರಮಂದಿರಗಳಲ್ಲಿ ಇರುತ್ತೋ ಇಲ್ಲವೋ ಎಂದು ಹೇಳಲು ಆಗುವುದಿಲ್ಲ. ಲೈಗರ್ ಚಿತ್ರ ಮೊದಲ ದಿನದ ಕಲೆಕ್ಷನ್ ಸುಮಾರು 26 ರಿಂದ 28 ಕೋಟಿ ರೂಪಾಯಿ ಕರ್ನಾಟಕದಲ್ಲಿ 1.05 ಕೋಟಿ ರೂಪಾಯಿ, ತೆಲುಗು 20ಕೋಟಿ ರೂಪಾಯಿ ಹಾಗೂ ಭಾರತದ ಬೇರೆ ಬೇರೆ ಕಡೆಗಳಲ್ಲಿ ಸುಮಾರು 5ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ 1.05ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಅಗಿದ್ದು, ಡಿಸ್ಟ್ರಿಬ್ಯೂಟರ್ ಕೈಗೆ ಸಿಗುವುದು ಸುಮಾರು 55ಲಕ್ಷ ರೂಪಾಯಿ ಆಗಿದೆ.

5ಕೋಟಿ ಬಂಡವಾಳ ಹಾಕಿರುವ ಲೈಗರ್ ಕನ್ನಡ ಡಬ್ಬಿಂಗ್ ಸಿನೆಮಾ, ಒಂದು ವೇಳೆ 6ಕೋಟಿ ಕಲೆಕ್ಷನ್ ಮಾಡಿದರೆ, ಬರಿ 4ಕೋಟಿ ಡಿಸ್ಟ್ರಿಬ್ಯೂಟರ್ ಕೈಗೆ ಸಿಗುತ್ತದೆ. ಹಾಗೆ ನೋಡಿದರೆ 2 ಕೋಟಿ ರೂಪಾಯಿ ನಷ್ಟ ಉಂಟಾಗುತ್ತದೆ. ವಿಜಯ್ ದೇವರಕೊಂಡ ಅಭಿನಯದ ಗೀತಾ ಗೋವಿಂದಮ್ ಚಿತ್ರ ಇದೇ ಡಿಸ್ಟ್ರಿಬ್ಯೂಟರ್ ಖರೀದಿ ಮಾಡಿ, ರಿಲೀಸ್ ಮಾಡಿದ್ದು, ಆ ಸಿನೆಮಾ ಆಗ ಡಬಲ್ ಧಮಾಕ ಮಾಡಿತ್ತು. ಅದೇ ನಿರೀಕ್ಷೆಯಲ್ಲಿ ಲೈಗರ್ ಸಿನೆಮಾವನ್ನು ಖರೀದಿ ಮಾಡಿದ್ದಾರೆ, ಆದರೆ ಲೈಗರ್ ಸಿನೆಮಾ ಸದ್ದಿಲ್ಲದೇ ಸೈಡೆಗೆ ಹೋಗಿದೆ.

ನೆಗೆಟಿವ್ ಕಾಮೆಂಟ್ಸ್ ಪಡೆಯುತ್ತಿರುವ ಕಾರಣ ಈ ಚಿತ್ರ ಇನ್ನು ಹೆಚ್ಚು ದಿನ ಚಿತ್ರಮಂದಿರದಲ್ಲಿ ಇರುತ್ತದೆ ಎಂದು ಹೇಳಲು ಕಷ್ಟ. ಹಾಗಾಗಿ ಕನ್ನಡದ ಡಿಸ್ಟ್ರಿಬ್ಯೂಟರ್ ಗಳಿಗೆ ಲಾಸ್ ಆಗೋದಂತೂ ಖಂಡಿತ. ಕರ್ನಾಟಕದ ಸಿನಿಪ್ರೇಕ್ಷಕರು ಈಗ ಬಹಳ ಚೂಸಿ ಆಗಿದ್ದಾರೆ, ಬಿಗ್ ಬಜೆಟ್ ಸಿನೆಮಾಗಳು, ಸ್ಟಾರ್ ನಟರು ಇರುವ ಸಿನೆಮಾ ಎಂದ ಮಾತ್ರಕ್ಕೆ ಜನರು ಥಿಯೇಟರ್ ಗೆ ಬರುವುದಿಲ್ಲ.

ಕಂಟೆಂಟ್ ಚೆನ್ನಾಗಿದ್ದರೆ ಮಾತ್ರ ಸಿನೆಮಾ ನೋಡುತ್ತಾರೆ. ಆಚಾರ್ಯ, ರಾಧೇ ಸ್ಯಾಮ್, ಬೀಸ್ಟ್ ಸಿನೆಮಾ ಕರ್ನಾಟಕದಲ್ಲಿ ಸೋಲು ಕಂಡಿತು. ಅದೇ ರೀತಿ ಸೀತಾರಾಮ್, ಕಾರ್ತಿಕೆಯ2 ನಂತಹ ಅದ್ಬುತ ಸಿನೆಮಾಗಳು ಕರ್ನಾಟಕದಲ್ಲು ಅಪಾರ ಗಳಿಕೆಯನ್ನು ಮಾಡಿದೆ. ಆದರೆ ಲೈಗರ್ ಸಿನೆಮಾ ಈ ಹಿಟ್ ಲಿಸ್ಟ್ ಗೆ ಸೇರಿಲ್ಲ ಎನ್ನಲಾಗಿದೆ. ನೀವು ಲೈಗರ್ ಸಿನೆಮಾ ನೋಡಿದ್ದಲ್ಲಿ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ಸ್ ಮಾಡಿ ತಿಳಿಸಿ.


Leave a Reply

Your email address will not be published. Required fields are marked *