ಗಾಯಕ ರಾಜೇಶ್ ಕೃಷ್ಣನ್ ಮೂರು ಮದುವೆಯಾದರೂ ಅವರ ಜೊತೆ ನಿಲ್ಲದ ಹೆಂಡತಿಯರು.! ಚಿಂತೆಯಲ್ಲಿ ಗಾಯಕ ರಾಜೇಶ್ ಕೃಷ್ಣನ್ ಮಾಡಿದ್ದೇನು ಗೊತ್ತಾ..?

ಸುದ್ದಿ

ಕನ್ನಡ ಚಿತ್ರರಂಗದಲ್ಲಿ ತಮ್ಮ ಗಾಯನದ ಮೂಲಕ ಸಾಕಷ್ಟು ಸಿನಿ ಪ್ರೇಮಿಗಳನ್ನು ಸೆಳೆದಿರುವ ಗಾಯಕರಲ್ಲಿ ರಾಜೇಶ್ ಕೃಷ್ಣನ್ ಕೂಡ ಒಬ್ಬರು ಸಿನೆಮಾರಂಗ ಹಾಗೂ ಕಿರುತೆರೆಯಲ್ಲಿ ಸಾಕಷ್ಟು ಸಕ್ರಿಯವಾಗಿ ಕೆಲಸ ಮಾಡುತ್ತಿರುವ ನಟನೆ ಹಾಗೂ ಹಾಡುವುದರಲ್ಲಿ ರಾಜೇಶ್ ಕೃಷ್ಣನ್ ಅವರು ಎರಡರಲ್ಲೂ ಸೈ ಎನಿಸಿಕೊಂಡಿದ್ದಾರೆ.

ರಾಜೇಶ್ ಕೃಷ್ಣನ್ ಅವರು ಕಿರುತೆರೆಯ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದರು. ಅವರ ಸ್ವರ ಕಂಠಕ್ಕೆ ಒಂದು ಕ್ಷಣ ಯಂಥಹ ನೋವಲ್ಲಿದ್ದರು ಕೂಡ ತಲೆ ಬಾಗಲೇಬೇಕು. ನಟ ಹಾಗೂ ಗಾಯಕ ದೇಶದ ವಿದೇಶದಲ್ಲಿ ಕೂಡ ತಮ್ಮ ನಟನೆಯ ಮೂಲಕ ಹೆಸರು ಮಾಡಿದ್ದಾರೆ. ಅವರ ವೃತ್ತಿ ಜೀವದಲ್ಲಿ ಎಲ್ಲಾ ಗಾಯಕರನ್ನು ಮೀರಿಸುವ ದೊಡ್ಡ ಮಟ್ಟದಲ್ಲಿ ಇದ್ದಾರೆ.

ಆದರೆ ರಾಜೇಶ್ ಕೃಷ್ಣನ್ ಅವರ ವೈವಾಹಿಕ ಜೀವನದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡರು. ಹೌದು ರಾಜೇಶ್ ಕೃಷ್ಣನ್ ಅವರು ಮೂರು ಮದುವೆಯಾದರೂ ಕೂಡ ಅವರ ವೈವಾಹಿಕ ಬದುಕು ಮುರಿದು ಬೀಳಲು ಕಾರಣವೇನು ಎಂಬ ಪ್ರೆಶ್ನೆಗಳು ರಾಜೇಶ್ ಕೃಷ್ಣನ್ ಅವರ ಅಭಿಮಾನಿಗಳಲ್ಲಿ ಕಾಡುತ್ತಿರುವ ದೊಡ್ಡ ಪ್ರೆಶ್ನೆಆಗಿಯೇ ಉಳಿದಿದೆ.
ಗಾಯಕ ರಾಜೇಶ್ ಕೃಷ್ಣನ್ ಅವರು ಜೂನ್ 3 1973 ರಲ್ಲಿ ತಮಿಳುನಾಡಿನಲ್ಲಿ ಹುಟ್ಟಿದರು. ಇವರ ತಂದೆ ರಂಗನಾಥನ್, ತಾಯಿ ಮೀರಾ ಕೃಷ್ಣನ್, ರಾಜೇಶ್ ಅವರ ಬಾಲ್ಯದ ವಿದ್ಯಾಭ್ಯಾಸ ಎಲ್ಲಾ ಬೆಂಗಳೂರಿನಲ್ಲಿ ಮುಗಿಸಿದ್ದಾರೆ. ಆದರೆ ರಾಜೇಶ್ ಅವರು ತಮ್ಮ ಬಾಲ್ಯದ ವಯಸ್ಸಿನಲ್ಲಿಯೇ ತಮ್ಮ ತಾಯಿಯ ಜೊತೆಗೆ ಸಂಗೀತವನ್ನು ಕಲಿತವರು. ಇನ್ನು 1991 ರಲ್ಲಿ ಬಿಡುಗಡೆಗೊಂಡ ಗೌರಿ ಗಣೇಶ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಹಿನ್ನಲೆ ಗಾಯಕರಾಗಿ ಹೊರ ಹೊಮ್ಮತ್ತಾರೆ.

ಕನ್ನಡದ ನಿರ್ದೇಶನದ ದಿಗ್ಗಜರುಗಳಾದ. ಮನೋಮೂರ್ತಿ, ಕಲ್ಯಾಣ್, ಹಂಸಲೇಖ, ಹೀಗೆ ಹಲವಾರು ನಿರ್ದೇಶಕರ ಸಿನೆಮಾಗಳಲ್ಲಿನ ಹಾಡಗಳಿಗೆ ಇವರ ಕಂಠ ಸಿರಿ ಧ್ವನಿಯಾಗಿದ್ದಾರೆ. ರಾಜೇಶ್ ಕೃಷ್ಣನ್ ಅವರು ಇದುವರೆಗೂ ಸರಿ ಸುಮಾರು 3000ಕ್ಕೂ ಹೆಚ್ಚು ಕನ್ನಡ, 500ಕ್ಕೂ ಹೆಚ್ಚು ತೆಲುಗು, 250ಕ್ಕೂ ಹೆಚ್ಚು ಹಿಂದಿ ಚಿತ್ರಗಳಲ್ಲಿ ಹಾಡಿ ದಾಖಲೆಮಾಡಿ ಅಭಿಮಾನಿ ಬಳಗವನ್ನು ಕಟ್ಟಿಕೊಂಡಿದ್ದಾರೆ.
ಅದ್ಭುತ ಗಾಯಕರಾಗಿ ಬೆಳ್ಳಿತೆರೆಯಲ್ಲಿ ಉನ್ನತ ಸ್ಥಾನದಲ್ಲಿದ್ದ ರಾಜೇಶ್ ಕೃಷ್ಣನ್ ಅವರ ವೈಯಕ್ತಿಕ ಬದುಕಿನಲ್ಲಿ ಸಾಕಷ್ಟು ನೋವನ್ನು ಅನುಭವಿಸಿದ್ದಾರೆ. ಅಂದಹಾಗೆ, ಮೂರು ಹೆಂಡತಿಯರನ್ನು ಕಟ್ಟಿಕೊಂಡ ಅವರು ಅಷ್ಟೇ ಕಷ್ಟಗಳನ್ನು ಅನುಭವಿಸಿದ್ದರು. ಅವರು ಒಂದಲ್ಲ ಎರಡಲ್ಲ ಬರೋಬ್ಬರಿ ಮೂರು ಜನ ಹೆಂಡತಿಯರು ಗಾಯಕ ರಾಜೇಶ್ ಕೃಷ್ಣನ್ ಅವರನ್ನು ಬೇಡ ಎಂದು ಹೊರಟು ಹೋದರು.

ಇನ್ನು ರಾಜೇಶ್ ಅವರು ಮೊದಲಿಗೆ ಗಾಯಕಿ ಸೌಮ್ಯ ರಾವ್ ಅವರನ್ನು ಮದುವೆಯಾದರು. ಇವರು ಯಾವುದೇ ಕಾರಣವನ್ನು ಯಾರಿಗೂ ನೀಡದೆ ರಾಜೇಶ್ ಅವರನ್ನು ದೂರ ಮಾಡಿ ಹೋದರು. ನಂತರ ರಾಜೇಶ್ ಅವರು ದಂತ ಚಿಕಿತ್ಸೆಯ ಡಾಕ್ಟರ್ ಆದಂತಹ ಹರಿಪ್ರಿಯಾ ಅವರ ಜೊತೆಗೆ ಮದುವೆ ಆದರು. ಡಾ.ಹರಿಪ್ರಿಯಾ ಇವರ ಜೊತೆಗೂ ರಾಜೇಶ್ ಕೃಷ್ಣನ್ ಹೆಚ್ಚು ದಿನ ಸಾಂಸಾರಿಕ ಜೀವನ ನಡೆಸಲಿಲ್ಲ. ರಾಜೇಶ್ ಅವರ ವೈಯಕ್ತಿಕ ಬದುಕಿನಲ್ಲಿ ಕೆಲವೇ ವರ್ಷಗಳಲ್ಲಿ ಈ ಇಬ್ಬರು ಕೂಡ ದೂರವಾಗಿ ಬಿಟ್ಟರು.

ರಾಜೇಶ್ ಕೃಷ್ಣನ್ ಅವರ ಜೀವನದಲ್ಲಿ ಇನ್ನು ಮದುವೆ ಇಲ್ಲ ಅನ್ನೋವಾಗ ಕೊನೆಗೆ ರಾಜೇಶ್ ಕೃಷ್ಣನ್ ಅವರ ಬಾಳಲ್ಲಿ ಬಂದದ್ದು ನಿರೂಪಕಿ ಹಾಗೂ ಸಿಂಗರ್ ಆದಂತಹ ರಮ್ಯಾ ವಸಿಷ್ಠ. ರಾಜೇಶ್ ಅವರಿಗೆ ಮೂರನೇ ಹೆಂಡತಿಯಾಗಿ ಗಾಯಕಿ ರಮ್ಯಾ ವಸಿಷ್ಠ ಅವರು ರಾಜೇಶ್ ಕೃಷ್ಣನ್ ಅವರ ಜೊತೆಗೆ ದಾಂಪತ್ಯ ಜೇವನಕ್ಕೆ ಕಾಲಿಟ್ಟರು. ಆದರೆ ಮದುವೆಯಾದ ಬರೇ 18 ತಿಂಗಳಿನಲ್ಲಿ ಕೋರ್ಟ್ ನ ಮೆಟ್ಟಿಲೇರಿದ್ದಾರೆ ಗಾಯಕಿ ರಮ್ಯಾ ವಸಿಷ್ಠ ಅವರು.

ಇನ್ನು ನೀವು ಕೋರ್ಟ್ ಗೆ ಕೊಟ್ಟ ಕಾರಣ ನೀವು ಕೇಳಿದರೆ ಶಾಕ್ ಆಗ್ತೀರಾ. ರಾಜೇಶ್ ಕೃಷ್ಣನ್ ಅವರಿಗೆ ಸಾಂಸಾರಿಕ ಜೀವನ ನಡೆಸಲು ಸರಿ ಬರುವುದಿಲ್ಲ ಎಂದು ಕೋರ್ಟ್ ನಲ್ಲಿ ಹೇಳಿ ವಿಚ್ಚೇದಾನ ಪಡೆದುಕೊಂಡಿದ್ದಾರೆ. ಹೀಗೆ ರಾಜೇಶ್ ಅವರ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ನೋವುಗಳನ್ನು ಕಂಡ ರಾಜೇಶ್ ಮತ್ತೆ ಮದುವೆ ಅನ್ನೋ ಮುರಕ್ಷರಕ್ಕೆ ಯೋಚನೆಯೇ ಮಾಡಿಯೇ ಇಲ್ಲ.

ನಿಜ ಮೂರು ಮದುವೆಯಿಂದ ಬೇಸತ್ತ ರಾಜೇಶ್ ಅವರು ಇದೀಗ ಮದುವೆ ಎಂಬ ಸಾಂಸಾರಿಕ ಜೀವನವೇ ಬೇಡ ಎಂದು ತನ್ನ ತಾಯಿಯ ಜೊತೆಗೆ ಸಂತೋಷದಿಂದ ಇದ್ದಾರೆ. ಈಗ ಸಾಧ್ಯಕ್ಕೆ ರಾಜೇಶ್ ಅವರು ಸಿನೆಮಾ ಹಾಗೂ ಕಿರುತೆರೆ ಎಂದು ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ. ಇನ್ನು ಗಾಯಕ ರಾಜೇಶ್ ಕೃಷ್ಣನ್ ಅವರು ಹಾಡಿರುವ ಯಾವ ಹಾಡು ನಿಮಗೆ ಇಷ್ಟ ಕಾಮೆಂಟ್ ಮಾಡಿ ತಿಳಿಸಿ


Leave a Reply

Your email address will not be published. Required fields are marked *