ಗಾಯಕ ಹೇಮಂತ್ ಕುಮಾರ್ ಅವರ ಮುದ್ದಿನ ಮಗನ ತೊಟ್ಟಿಲು ಶಾಸ್ತ್ರದ ಸಂಭ್ರಮದ ಕ್ಷಣಗಳು ಹೇಗಿತ್ತು ಗೊತ್ತಾ? ವಾವ್ ನೋಡಿ ಕ್ಯೂಟ್ ವಿಡಿಯೋ

ಸುದ್ದಿ

ಚಂದನವನದ ಚಂದದ ಗಾಯಕರಾದ ಹೇಮಂತ್ ಕುಮಾರ್ ಅವರು ತಂದೆಯದ ಸಂಭ್ರಮದಲ್ಲಿದ್ದಾರೆ. ಅಂದಹಾಗೆ, ಕಳೆದು ವರ್ಷ ವೈದ್ಯ ಕೃತಿಕಾ ಎಂಬುವರನ್ನು ಹೇಮಂತ್ ಕುಮಾರ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕರೋನಾ ಕಾರಣದಿಂದಾಗಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು ಕೇವಲ ಆತ್ಮೀಯರು ಹಾಗೂ ಕುಟುಂಬದವರು ಸಮ್ಮುಖದಲ್ಲಿ ಮದುವೆ ನಡೆದಿತ್ತು. ಈ ಮದುವೆಗೆ ಕುಟುಂಬಸ್ಥರು, ಸ್ನೇಹಿತರು, ಚಿತ್ರರಂಗದ ಗಣ್ಯರು ಸೇರಿದಂತೆ ಅನೇಕರು ಶುಭಗಳಿಗೆಗೆ ಭಾಗಿಯಾಗಿದ್ದರು. ಇನ್ನೂ ಗಾಯಕ ಹೇಮಂತ್ ಅವರು ವರಿಸಿದ ಹುಡುಗಿ ವೈದ್ಯೆಯಾಗಿದ್ದು ಬೆಂಗಳೂರಿನ ಸೆಂಟ್ ಜಾನ್ ಹಾಸ್ಪಿಟಲ್ ನಲ್ಲಿ ಕೆಲಸ ಮಾಡುತ್ತಿದ್ದಾರೆ.

ಇತ್ತೀಚಿಗೆ ಗಾಯಕ ಹೇಮಂತ್ ಕುಮಾರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಂದೆಯಗುತ್ತಿರುವ ಖುಷಿಯ ವಿಚಾರವನ್ನು ಹೊಂಚಿಕೊಂಡಿದ್ದರು. ಮುದ್ದಿನ ಹೆಂಡತಿಯ ಸೀಮಂತದ ಫೋಟೋ ಶೇರ್ ಮಾಡಿಕೊಂಡು, ನನ್ನ ಕೃತಿಕಾಳ ಕನಸು ಸಾಕಾರಗೊಳ್ಳುವ ಶುಭ ಘಳಿಗೆ ಅತೀ ಶೀಘ್ರದಲ್ಲಿ ಬರಲಿದೆ. ನಾವಿಬ್ಬರು ತಂದೆ ತಾಯಿ ಯಾಗುತ್ತಿದ್ದೇವೆ ಎಂದು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ. ನಿಮ್ಮೆಲ್ಲರ ಆಶಿರ್ವಾದ ಸದಾ ನಮ್ಮ ಮೇಲೆ ಇರಲಿ ಎಂದು ಬರೆದುಕೊಂಡಿದ್ದಾರೆ.

ಹೌದು ಇದೀಗ ಈ ದಂಪತಿಗಳ ಬದುಕಿಗೆ ಮತ್ತಷ್ಟು ಸಂತಸವನ್ನು ಮುದ್ದಿನ ಮಗ ತಂದಿದ್ದಾನೆ. ಮಗನ ತೊಟ್ಟಿಲು ಶಾಸ್ತ್ರವು ಅದ್ದೂರಿಯಾಗಿ ನಡೆದಿತ್ತು. ಮುದ್ದಿನ ಮಗನ ಅದ್ದೂರಿ ಶಾಸ್ತ್ರ ಹೇಗಿತ್ತು ಎಂದು ತಿಳಿಯಲು ಮುಂದೆ ಓದಿ. ಇನ್ನೂ ಹೇಮಂತ್ ಕುಮಾರ್ ಅವರ ವೃತ್ತಿ ಜೀವನದ ಕಡೆಗೆ ಗಮನ ಹರಿಸಿದರೆ, ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಅವರ ಗರಡಿಯಲ್ಲಿ ಪಳಗಿದ ಹೇಮಂತ್ ಅವರು ಕನ್ನಡದ ಸೂಪರ್ ಹಿಟ್ ಹಾಡುಗಳಿಗೆ ಧ್ವನಿಯಾಗಿದ್ದಾರೆ.

ಹೌದು ಉಪೇಂದ್ರ ಅವರ ಪ್ರೀತ್ಸೆ ಚಿತ್ರದ ಪ್ರೀತ್ಸೆ ಪ್ರೀತ್ಸೆ ಹಾಡು ಗಾಯಕ ಹೇಮಂತ್ ಅವರಿಗೆ ಬಹು ದೊಡ್ಡ ಬ್ರೇಕ್ ನೀಡಿತ್ತು. ಈ ಹಾಡು ಹೇಮಂತ್ ಅವರಿಗೆ ನೇಮ್ ಹಾಗೂ ಫೇಮ್ ತಂದು ಕೊಟ್ಟಿದ್ದು ಅಲ್ಲದೆ ಒಂದಿಷ್ಟು ಫ್ಯಾನ್ಸ್ ಗಳನ್ನು ಕೂಡ ಸಂಪಾದಿಸಿಕೊಂಡರು. ಇನ್ನು ಉಪೇಂದ್ರ, ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಯಶ್, ಗಣೇಶ್, ಶ್ರೀ ನಗರ್ ಕಿಟ್ಟಿ, ಸುದೀಪ್, ಸೇರಿದಂತೆ ಅನೇಕ ಕಲಾವಿದರಿಗೆ ತಮ್ಮ ಅದ್ಭುತ ಕಂಠ ಸಿರಿಇಂದ ಮೋಡಿಮಾಡಿದ್ದಾರೆ.

ಅಷ್ಟೇ ಅಲ್ಲದೆ ಹಂಸಲೇಖ, ವಿ.ಮನೋಹರ್,ಗುರುಕಿರಣ್, ಮನೋಮೂರ್ತಿ,ಅರ್ಜುನ್ ಜನ್ಯ,ಹರಿ ಕೃಷ್ಣ,ಸಾಧು ಕೋಕಿಲ,ರಿಕ್ಕಿ ಕ್ರೇಜ್,ಶ್ರೀಧರ್ ವಿ ಸಂಭ್ರಮ್ ಈ ಇಷ್ಟು ಸಂಗೀತ ನಿರ್ದೇಶಕ ದಿಗ್ಗಜರ ಸಂಗೀತದಲ್ಲಿ ಇವರು ಹಾಡಿದ್ದಾರೆ. ಇನ್ನೂ ಹಲವು ಸ್ಟೇಜ್ ಕಾರ್ಯಕ್ರಮಗಳಲ್ಲಿ ಫೇಮಸ್ ಆಗಿದ್ದಾರೆ. ಇಲ್ಲಿಯವರೆಗೆ ಸಾಕಷ್ಟು ಸ್ಟೇಜ್ ಶೋ ಕಾರ್ಯಕ್ರಮಗಳನ್ನು ಮಾಡಿ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಗಾಯಕ ಹೇಮಂತ್ ಕುಮಾರ್ ಈ ಮೊದಲು 2007 ರಲ್ಲಿ ಪ್ರಿಯದರ್ಶಿನಿ ಎನ್ನುವವರನ್ನು ಮದುವೆಯಾಗುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಆದರೆ ಈ ವೈವಾಹಿಕ ಜೀವನ ಅಷ್ಟೇನು ಚನ್ನಾಗಿಲ್ಲ ಹಾಗಾಗಿ ಒಂದು ವರ್ಷದ ಬಳಿಕ ವಿಚ್ಚೇದಾನವನ್ನು ಪಡೆದುಕೊಂಡರು.

ಈಗ ಎರಡನೇ ಮದುವೆಯಾಗಿ ತಂದೆಯಾದ ಸಂಭ್ರಮದಲ್ಲಿದ್ದಾರೆ ಹೇಮಂತ್ ಕುಮಾರ್. ಮಗನ ತೊಟ್ಟಿಲು ಶಾಸ್ತ್ರವು ಕೂಡ ಅದ್ದೂರಿಯಾಗಿ ನೆರವೇರಿತು. ತನ್ನ ಮುದ್ದು ಮಗನ ಮುದ್ದಾದ ವಿಡಿಯೋ ತುಣುಕನ್ನು ಶೇರ್ ಮಾಡಿಕೊಂಡು. ಪ್ರತಿಯೊಬ್ಬ ತಂದೆಯ ಜೀವನದ ಅಮೂಲ್ಯ ಕ್ಷಣ, ವ್ಯಕ್ತ ಪಡಿಸಲಾಗದ ಸಂತೋಷ್, ಮುಗಿಲು ಮುಟ್ಟದ ಸಂತಸ ನಮ್ಮ ಮನೆಯ ಅರಸನ ತೊಟ್ಟಿಲು ಶಾಸ್ತ್ರದ ಈ ಸುವರ್ಣ ಘಳಿಗೆ.ಹೇ ಭಗವಂತನೇ ತೀರಿಸಲಾಗದ ನಿನ್ನ ಋಣ, ಹರಸಿ ಹಾರೈಸಿ ಎಂದು ಬರೆದುಕೊಂದ್ದಿದ್ದಾರೆ ಗಾಯಕ ಹೆಮ್ಮೆಯ ಕುಮಾರ್.ಗಾಯಕ ಹೇಮಂತ್ ಕುಮಾರ್ ಅವರ ಸಂತೋಷದ ಕ್ಷಣಗಳ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.


Leave a Reply

Your email address will not be published. Required fields are marked *