ಗೋಲ್ಡನ್ ಸ್ಟಾರ್ ಗಣೇಶ್ ಅವರು ಕಟ್ಟಿಸಿರುವ ಭವ್ಯ ಬಂಗಲೆ ಮನೆ ಎಷ್ಟು ಕೋಟಿ ಬೆಲೆಬಾಳುತ್ತೇ ಗೊತ್ತೆ?? ಒಳಗಡೆ ಹೇಗಿದೆ ಗೊತ್ತಾ ಅದ್ಭುತವಾಗಿದೆ ನೋಡಿ!

ಸುದ್ದಿ

ನಮಸ್ಕಾರ ನಮಸ್ಕಾರ ನಮಸ್ಕಾರ ಅಂತಾನೇ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿರುವ ಗೋಲ್ಡನ್ ಸ್ಟಾರ್ ಗಣೇಶ್ ಅವರ ಸಿನೆಮಾ ಜರ್ನಿ ಖಂಡಿತವಾಗಿಯೂ ಕನ್ನಡದ ಜನತೆಗೆ ಸ್ಫೂರ್ತಿದಾಯಕವಾಗಿದೆ. ನಿಮಗೆ ಗೊತ್ತಿರುವ ಹಾಗೆ ಗೋಲ್ಡನ್ ಸ್ಟಾರ್ ಗಣೇಶ್ ಅವರು ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಾರ್ಯಕ್ರಮದಲ್ಲಿ ನಿರೂಪಕರಾಗಿ ನಮಸ್ಕಾರ ನಮಸ್ಕಾರ ನಮಸ್ಕಾರ ಎನ್ನುವ ಡೈಲಾಗ್ ನಿಂದಾಗಿ ಕರ್ನಾಟಕ ಮನೆಮಾತಾಗಿದ್ದರು.

ಹೌದು ವೀಕ್ಷಕರೇ ಗೋಲ್ಡನ್ ಸ್ಟಾರ್ ಗಣೇಶ್ ಅವರು ಕನ್ನಡ ಚಿತ್ರರಂಗದಲ್ಲಿ ಮೊದಲು ಹಾಸ್ಯ ನಟನಾಗಿ ಕಾಣಿಸಿಕೊಂಡಿದ್ದರು. ನಂತರ ಕೆಲವು ಪ್ರಮುಖ ಪಾತ್ರಗಳ ಮೂಲಕ ಕಾಣಿಸಿಕೊಂಡರು. ಗಣೇಶ್ ಅವರು ನಾಯಕ ನಟನಾಗಿ ಕಾಣಿಸಿಕೊಂಡಿದ್ದು ಯೋಗರಾಜ್ ಭಟ್ ನಿರ್ದೇಶನದ ಮುಂಗಾರು ಮಳೆ ಚಿತ್ರದ ಮೂಲಕ ಈ ಚಿತ್ರ ಇವರಿಗೆ ಅತೀ ದೊಡ್ಡ ಯಶಸ್ಸನ್ನು ತಂದು ಕೊಟ್ಟಿತು.

ಗಣೇಶ್ ಅಭಿನಯದ ಮುಂಗಾರು ಮಳೆ ಚಿತ್ರ ಆಗಿನ ಕಾಲದಲ್ಲೇ ಕನ್ನಡ ಚಿತ್ರರಂಗ ಮಾತ್ರವಲ್ಲದೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ಮೊದಲ ಬಾರಿಗೆ 50 ಕೋಟಿಗೂ ಅಧಿಕ ಗಲ್ಲಾಪೆಟ್ಟಿಗೆಯಲ್ಲಿ ಗಳಿಕೆಯನ್ನು ಮಾಡಿದ ಚಿತ್ರವಾಗಿ ಹೊರಹೋಮ್ಮಿತು. ಈ ಕ್ರೆಡಿಟ್ ಸಂಪೂರ್ಣ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಇಡೀ ಚಿತ್ರ ತಂಡಕ್ಕೆ ಸಲ್ಲುತ್ತದೆ. ಇನ್ನೂ ಮುಂಗಾರು ಮಳೆ ಚಿತ್ರರಂಗದಲ್ಲಿ ಹಿಟ್ ಆದ ಬಳಿಕ ಗಣೇಶ್ ಅವರು ದೊಡ್ಡ ಸ್ಟಾರ್ ನಟರಾಗಿ ಗುರುತಿಸಿಕೊಂಡರು.

ಇನ್ನೂ ಗಣೇಶ್ ಅವರು ಶಿಲ್ಪಾ ಅವರನ್ನು ವಿವಾಹವಾಗುತ್ತಾರೆ. ಈ ದಂಪತಿಗಳಿಗೆ ಎರಡು ಮುದ್ದಾದ ಮಕ್ಕಳು ಇಂದು ಹೆಣ್ಣು ಮಗು ಇನ್ನೊಂದು ಗಂಡು ಮಗು. ಇನ್ನೂ ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೀವನ ಅಷ್ಟು ಸುಲಭವಾಗಿ ಇರಲಿಲ್ಲ ಗಣೇಶ್ ಅವರು ತಮ್ಮ ಸ್ವಂತ ಪರಿಶ್ರಮದಿಂದ ಇಲ್ಲಿಯವರೆಗೆ ಬಂದಿದ್ದು ಇವರ ಗೆಲುವು ಹಲವು ಯುವಕರಿಗೆ ಉತ್ತೇಜನ ನೀಡಿದೆ. ಉತ್ತೇಜನ ನೀಡಿದೆ.

ಇನ್ನೂ ಗೋಲ್ಡನ್ ಸ್ಟಾರ್ ಗಣೇಶ್ ಅವರು ರಾಜರಾಜೇಶ್ವರಿ ನಗರದಲ್ಲಿ ಅವರು ಸ್ವಂತ ಪರಿಶ್ರಮದ ಮೂಲಕ ಸಂಪಾದನೆ ಮಾಡಿದ ಹಣದಿಂದ ತಮ್ಮ ಕನಸಿನ ಭವ್ಯ ಬಂಗಲೆಯನ್ನು ಕಟ್ಟಿದ್ದಾರೆ. ವೀಕ್ಷಕರೇ ಗಣೇಶ್ ಅವರು ಬರೋಬ್ಬರಿ 30ಕೋಟಿ ರೂಪಾಯಿ ವೆಚ್ಚದ ಅದ್ಭುತ ವಿನ್ಯಾಸವುಳ್ಳ ನೋಡಲು ಎರಡು ಕಣ್ಣು ಸಾಲದು ಅಂತಹ ಮನೆಯನ್ನು ಕಟ್ಟಿಸಿದ್ದಾರೆ.

ಈ ಮನೆಯನ್ನು ಹೊರಗಿನಿಂದ ಮಾತ್ರ ಅಲ್ಲದೇ ಒಳಗಿನಿಂದ ಕೂಡ ಗಾರ್ಡನ್, ಸ್ವಿಮ್ಮಿಂಗ್ ಫುಲ್ ಅತ್ಯಾದುನಿಕ ವಿನ್ಯಾಸ ಹಾಗೂ ಅತ್ಯಾಧುನಿಕ ಇಂಟೀರಿಯರ್ ಹೊಂದಿರುವ ಮನೆಯಾಗಿದೆ. ಹೌದು ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರ ಮನೆಯನ್ನು ನೋಡುವುಡಕ್ಕಾಗಿಯೇ ಅದೆಷ್ಟು ಅಭಿಮಾನಿಗಳು ಆಗಾಗ ಬರುತ್ತಿರುತ್ತಾರೆ.

ಹೆಸರಿಗೆ ತಕ್ಕಂತೆ ನಟ ಗಣೇಶ್ ಅವರು ಗೋಲ್ಡನ್ ಲೈಫ್ ಸ್ಟೈಲ್ ಜೀವನ ನಡೆಸುತ್ತಿದ್ದಾರೆ. ಇತ್ತೀಚಿಗೆ ಇವರು ಮಾಡಿರುವ ಚಿತ್ರಗಳು ತುಂಬಾ ಹೆಸರು ಮಾಡಿತು ಇನ್ನೂ ಹಲವು ಚಿತ್ರಗಳು ಬಿಡುಗಡೆಗೆ ಬಾಕಿ ಇದೆ ಇವರ ಅದ್ಭುತ ನಟನೆಇಂದ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ.

ಇನ್ನೂ ಜುಲೈ 2 ರಂದು ಗೋಲ್ಡನ್ ಸ್ಟಾರ್ ಗಣೇಶ್ ಅವರ ಹುಟ್ಟುಹಬ್ಬ ಇರೋದ್ರಿಂದ ಗಣೇಶ್ ಅವರು ಅಭಿಮಾನಿಗಳಲ್ಲಿ ಮನವಿಒಂದನ್ನು ಮಾಡಿಕೊಂಡಿದ್ದಾರೆ. ಹುಟ್ಟುಹಬ್ಬದ ದಿನದಂದು ನಾನು ಮನೆಯಲ್ಲಿ ಇರಲು ಸಾಧ್ಯವಾಗುತ್ತಿಲ್ಲ ಹಾಗಾಗಿ ನಿಮ್ಮಲ್ಲಿ ಕ್ಷಮೆ ಕೋರುತ್ತೇನೆ. ನನಗಾಗಿ ತರುವ ಹಾರ, ಕೇಕ್ ಇತ್ಯಾದಿಗಳ ಬದಲಿಗೆ ಅಗತ್ಯವಿರುವ ಕಡೆ ನಿಮ್ಮ ಕೈಲಾದಷ್ಟು ನೆರವು ನೀಡುವ ಮೂಲಕ ನಿಮ್ಮೆಲ್ಲರ ಅಕ್ಕರೆಯ ಹಾರೈಕೆಗಳು ನನಗೆ ತಲುಪಿಸಿಬಿಡಿ ಎಂದು ಕೇಳಿಕೊಂಡಿದ್ದಾರೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದಾರೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ.


Leave a Reply

Your email address will not be published. Required fields are marked *