ನಮಸ್ತೆ ಪ್ರೀತಿಯ ವೀಕ್ಷಕರೆ ದಕ್ಷಿಣ ಭಾರತದ ಸಿನಿರಸಿಕರನ್ನು ನಿದ್ದೆ ಗೆಡಿಸಿದ ಖ್ಯಾತ ನಟಿ ನಿತ್ಯಮೆನನ್ ಚಂದನವನದಲ್ಲಿ ಜೋಶ್ ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಪಾದಾರ್ಪಣೆ ಮಾಡಿದರು. ಇನ್ನು ನಟಿ ನಿತ್ಯಮೆನನ್ ಅವರ ಮದುವೆಯ ವಿಚಾರಕ್ಕೆ ಅವರ ಅಭಿಮಾನಿಗಳಲ್ಲಿ ಸಂತಸವನ್ನು ಮನೆಮಾಡಿದೆ. ಹಾಗಾಗಿ ನಿತ್ಯಮೆನನ್ ಯಾವಾಗ ಮದುವೆ ಆಗುತ್ತಾರೆ ಎನ್ನುವ ಪ್ರೆಶ್ನೆ ಅವರ ಅಭಿಮಾನಿಗಳಲ್ಲಿ ಮೂಡಿದೆ. ಆ ಶುಭ ಗಳಿಗೆಗೆ ಕಾಲ ಕೂಡಿ ಬಂದಿದೆ ಎನ್ನುತ್ತಿದ್ದಾರೆ.
ಈ ಮೂಲಕ ತಮ್ಮ ನೆಚ್ಚಿನ ನಟಿಯ ಮದುವೆಯ ಸಂಭ್ರಮವನ್ನು ಅಭಿಮಾನಿಗಳು ಕಣ್ತುಂಬಿಕೊಳ್ಳುವ ಕಾಲ ಬಂದಿದೆ. ಬಹುದಿನದ ಗೆಳೆಯ ಮತ್ತು ಸ್ಟಾರ್ ನಟ ಆಗಿರುವ ಮಲಯಾಳಂ ಕಲಾವಿದನ ಜೊತೆ ನಿತ್ಯ ಮೆನನ್ ಮದುವೆ ಅಗಲಿದ್ದಾರೆ ಎನ್ನುವ ಸುದ್ಧಿ ಬಾರಿ ವೈ’ರಲ್ ಆಗುತ್ತಿದೆ. 1998 ರಲ್ಲಿ ಹನುಮಾನ್ ಎಂಬ ಚಿತ್ರದಲ್ಲಿ ನಿತ್ಯಾಮೆನನ್ ಬಾಲನಟಿಯಾಗಿ ಕಾಣಿಸಿಕೊಂಡರು. ಆ ನಂತರ ಅವರು ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡ ‘7 o’ ಕ್ಲಾಕ್ ಚಿತ್ರ 2006 ರಲ್ಲಿ ರಿಲೀಸ್ ಆಯಿತು.
ಅದಾದ ನಂತರದಲ್ಲಿ ಮಲಯಾಳಂ, ತೆಲುಗು, ತಮಿಳು, ಭಾಷೆಯ ಸಿನೆಮಾಗಳಲ್ಲಿ ನಿತ್ಯ ಮೆನನ್ ನಟಿಸಿದ್ದಾರೆ. ಹಲವು ಸಿನೆಮಾಗಳು ಹಿಟ್ ಅಗಿದ್ದು ಇನ್ನು ಕೆಲವು ಸಾಮಾನ್ಯವಾಗಿದೆ. ಸಿನೆಮಾರಂಗದಲ್ಲಿ ತನ್ನ ಗ್ಲಾಮರ್, ರೋಮ್ಯಾಂಟಿಕ್ ಪಾತ್ರಗಳ ಜೊತೆಗೆ ಅವರು ವಿಭಿನ್ನವಾದ ಪಾತ್ರಗಳಲ್ಲಿ, ಇನ್ನು ಹಲವು ವಿಶಿಷ್ಟ ಪಾತ್ರಗಳಲ್ಲಿ ನಿತ್ಯಮೆನನ್ ಕಾಣಿಸಿಕೊಂಡಿದ್ದಾರೆ.
ಇತ್ತೀಚಿಗೆ ವೆಬ್ ಸಿರೀಸ್ ನತ್ತ ಮುಖ ಮಾಡಿದ್ದಾರೆ ನಿತ್ಯ ಮೆನನ್, ರಿಯಾಲಿಟಿ ಶೋನಲ್ಲಿಯೂ ಜಡ್ಜ್ ಆಗಿ ಗುರುತಿಸಿಕೊಂಡಿದ್ದಾರೆ. ಕನ್ನಡದಲ್ಲಿ ಜೋಶ್, ಇದೊಂದ್ಲಿ ಐದು, ನಟ ಚೇತನ್ ಜೊತೆಗೆ ಮೈನಾ, ಕಿಚ್ಚ ಸುದೀಪ್ ಅವರ ಜೊತೆ ಕೋಟಿಗೊಬ್ಬ 2 ಚಿತ್ರದಲ್ಲಿ ನಟಿಸಿದ್ದಾರೆ. ನಮಗೆಲ್ಲ ತಿಳಿಯದಂತೆ ನಿತ್ಯ ಮೆನನ್ ಓರ್ವ ಪ್ರತಿಭವಂತೆ ನಟಿ, ತನ್ನ ವಿಶೇಷ ಅದ್ಭುತ ನಟನೆಯ ಮೂಲಕವೇ ಗುರುತಿಸಿಕೊಂಡ ಸರಳ ಸುಂದರಿ ಇವರು.
ಜೀವನದಲ್ಲಿ ಸಾಧನೆಯ ಎಂಬ ಬೆಟ್ಟ ಹತ್ತುವವರೆಗೂ ಮದುವೆ ಅಗಲಾರೆ ಎನ್ನುವ ಹಠವಾದಿ ಈ ನಟಿ ಬೆಂಗಳೂರು ಮೂಲದ ನಟಿ ನಿತ್ಯಮೆನನ್ ಸದ್ಯ ಯಾವುದೇ ಸಿನೆಮಾಗಳನ್ನು ಒಪ್ಪಿಕೊಂಡಿಲ್ಲ. ಮಲಯಾಳಂ, ಕನ್ನಡ, ತಮಿಳಿನಲ್ಲಿಯೇ ಅತೀ ಹೆಚ್ಚು ಸಿನೆಮಾಗಳನ್ನು ಮಾಡುತ್ತಿರುವ 34 ವರ್ಷದ ಈ ನಟಿ ಈಗ ಮಲಯಾಳಂನ ಖ್ಯಾತ ಸ್ಟಾರ್ ಹೀರೋನ ಜೊತೆ ಸಪ್ತಪದಿ ತುಳಿಯಲಿದ್ದಾರೆ ಎಂಬ ಬಿಸಿ ಬಿಸಿ ಸುದ್ಧಿ ಕೇಳಿ ಬರುತ್ತಿದೆ.
ಇನ್ನು ನಿತ್ಯ ಮೆನನ್ ಯಾರನ್ನು ಮದುವೆಯಾಗುತ್ತಿದ್ದಾರೆ ಎಂಬ ಬಗ್ಗೆ ಅಧಿಕೃತವಾದ ಮಾಹಿತಿ ಇನ್ನು ಎಲ್ಲಿಯೂ ಬರಲಿಲ್ಲ. ಈಗಾಗಲೇ ಅದ್ಧುರಿ ಮದುವೆ ತಯಾರಿ ನಡೆಯುತ್ತಿದ್ದು,ಹೀಗಾಗಿಯೇ ಅವರು ಯಾವುದೇ ಚಿತ್ರ ಒಪ್ಪಿಕೊಳ್ಳುತ್ತಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.ಸಾಮಾನ್ಯವಾಗಿ ಇಂತಹ ವಿಚಾರ ಹೊರಬಿದ್ದಾಗ ಈ ಕುರಿತು ನಟಿ ನಿತ್ಯ ಮೆನನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂಬುದು ಸಹ ಮದುವೆಯ ವಿಚಾರಕ್ಕೆ ಎಂದು ಕ್ಲ್ಯೂ ಸಿಕ್ಕಿದೆ.
ಸದ್ಯ ಒಪ್ಪಿಕೊಂಡ ಹಳೆಯ ಸಿನೆಮಾಗಳ ಶೂಟಿಂಗ್ ಮುಗಿಸುತ್ತಿದ್ದಾರೆ. ಎನ್ನುವ ವಿಚಾರ ಸಾಕಷ್ಟು ಚರ್ಚೆ ಆಗುತ್ತಿದೆ. ಸದ್ಯ ನಿತ್ಯ ಮೆನನ್ ಅವರ ಮದುವೆ ವಿಚಾರ ಸದ್ಯ ಸಿನೆಮಾರಂಗದಲ್ಲಿ ಹಾಟ್ ಟಾಪಿಕ್ ಅಗಿದ್ದು ಎಲ್ಲೆಡೆ ಬಾರಿ ಚರ್ಚೆಯಾಗುತ್ತಿದೆ. ನಿತ್ಯ ಮೆನನ್ ನಿಜವಾಗ್ಲೂ ಮದುವೆ ಆಗ್ತಾರ ಅಥವಾ ಗಾಸಿಪ್ ವಿಚಾರದಲ್ಲಿ ಇದೂ ಒಂದಾ ಎನ್ನುವುದನ್ನು ಕಾದು ನೋಡಬೇಕಾಗಿದೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.