ಬಾಲಿವುಡ್ ಚಿತ್ರರಂಗದಲ್ಲಿ ಮೊದಲಿನಿಂದಲೂ ಕೂಡ ಹಲವಾರು ಪ್ರತಿಭಾನ್ವಿತ ಹಾಗೂ ಸೌಂದರ್ಯದ ಗಣಿ ಜನುಮವೆತ್ತಂತೆ ಇರುವಂತಹ ನಟಿಯರು ಇದ್ದಾರೆ. ಇಂದು ನಾವು ಲೇಖನಿಯಲ್ಲಿ ಬಾಲಿವುಡ್ ಚಿತ್ರರಂಗದ ಒಬ್ಬ ನಟಿಯೊಬ್ಬರ ಕುರಿತಂತೆ ಹೇಳಲು ಹೊರಟಿದ್ದೇವೆ.
ಬಾಲಿವುಡ್ ಚಿತ್ರರಂಗದ ನಟಿ ಎವೆಲಿನ್ ಶರ್ಮ ರವರ ಕುರಿತಂತೆ ನೀವು ಕೇಳಿರಬಹುದು. ಇವರು ಬಾಲಿವುಡ್ ಚಿತ್ರರಂಗದಲ್ಲಿ ನಟಿಸಿದ ಕೆಲವು ಸಿನಿಮಾಗಳಲ್ಲಿ ಆದರೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಇವರಿಗೆ ಲಕ್ಷಾಂತರ ಜನಗಳು ಇದ್ದಾರೆ. ಹಲವಾರು ಸಿನಿಮಾಗಳಲ್ಲಿ ಇವರನ್ನು ನೋಡಿದವರು ಇವರನ್ನು ವಿದೇಶಿ ನಟಿ ಎಂಬುದಾಗಿ ತಿಳಿದುಕೊಂಡವರಂತೂ ಹಲವಾರು ಜನ ಇದ್ದಾರೆ.
ಇವರು ಯೇ ಜವಾನಿ ಹೇ ದಿವಾನಿ ಸಾಹೋ ಜಬ್ ಹ್ಯಾರಿ ಮೆಟ್ ಸೇಜಲ್ ಹೀಗೆ ಹಲವಾರು ಸೂಪರ್ ಹಿಟ್ ಬಾಲಿವುಡ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯಕ್ಕೆ ಚಿತ್ರರಂಗದಿಂದ ದೂರ ಇರುವ ಇವರು ಕಳೆದ ವರ್ಷ ಮೇನಲ್ಲಿ ಪ್ರೀಯ ತುಷಾನ್ ಬಿಂಡಿ ಎನ್ನುವವರನ್ನು ಮದುವೆಯಾಗಿದ್ದಾರೆ. ಇನ್ನು ಇವರಿಗೆ ಒಂದು ಹೆಣ್ಣು ಮಗು ಕೂಡ ಜನಿಸಿದ್ದು ಆವಾ ಎಂದು ಹೆಸರಿಟ್ಟಿದ್ದಾರೆ. ಇನ್ನು ನಟಿ ಎವೆಲಿನ್ ಶರ್ಮಾರವರು ಇತ್ತೀಚಿನ ದಿನಗಳಲ್ಲಿ ಶೇರ್ ಮಾಡಿಕೊಂಡಿರುವ ಫೋಟೋ ಒಂದು ದೊಡ್ಡಮಟ್ಟದಲ್ಲಿ ವೈರಲ್ ಆಗಿದ್ದು ಇದು ಚರ್ಚೆಗೆ ಕೂಡ ಕಾರಣವಾಗಿದೆ.
ಇನ್ಸ್ಟ್ರಾಗ್ರಾಮ್ ನಲ್ಲಿ ನಟಿ ತಮ್ಮ ಮಗುವಿಗೆ ಹಾಲುಣಿಸುತ್ತಿರುವ ಫೋಟೋವನ್ನು ಇತ್ತೀಚೆಗೆ ಪೋಸ್ಟ್ ಮಾಡಿರುವುದು ಸಾಕಷ್ಟು ಸಂಚಲನಕ್ಕೆ ಕಾರಣವಾಗಿದೆ. ತಾಯಿಯಾಗಿ ಮಗುವನ್ನು ಸಾಕುವುದು ಎಷ್ಟು ಜವಾಬ್ದಾರಿಯುತ ಕೆಲಸ ಎನ್ನುವುದಾಗಿ ಫೋಟೋ ಮೂಲಕ ತೋರ್ಪಡಿಸಿದ್ದಾರೆ. ಆಗಾಗ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಎವ್ಲಿನ್ ಶರ್ಮ ಫೋಟೋ ಹಾಕು ವಿಡಿಯೋಗಳನ್ನು ಅಪ್ಲೋಡ್ ಮಾಡುವ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ.
