ಚಾರ್ಲಿ ಚಿತ್ರದ ಮೂಲಕ ಎಲ್ಲರ ಮನಸ್ಸು ಕದ್ದ ಪುಟಾಣಿ ಶ್ರಾವರಿ ಅಕ್ಕೌಂಟಿಗೆ ಪುನೀತ್ ರಾಜ್ ಕುಮಾರ್ ಎಷ್ಟು ಹಣ ಹಾಕಿದ್ರು ಗೊತ್ತಾ? ನಿಜ ಹೇಳಿದ ಶ್ರಾವರಿ ನೋಡಿ!

ಸುದ್ದಿ

ನಮಸ್ತೆ ಪ್ರೀತಿಯ ವೀಕ್ಷಕರೆ ಇತ್ತೀಚಿಗೆ ಬಿಡುಗಡೆಯದ ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ 777 ಸಿನೆಮಾ ದೊಡ್ಡ ಯಶಸ್ಸುಅನ್ನು ಕಂಡಿತು. ಅದರಲ್ಲೂ ಶಾರ್ವರಿ ಈ ಪುಟ್ಟ ಬಾಲನಟಿ ಎಲ್ಲರಿಗೂ ಕೂಡ ತಿಳಿದೇ ಇರುತ್ತದೆ ಅದರಲ್ಲಿಯೂ ಕೂಡ ಚಾರ್ಲಿ ಸಿನೆಮಾದಲ್ಲಿ ಮಾಡಿದಂತಹ ಮುಗ್ಧ ಅಭಿನಯ ಯಾರಿಂದಲೂ ಮರೆಯಲು ಸಾಧ್ಯವಿಲ್ಲ. ಇದು ಅಲ್ಲದೆ ಕನ್ನಡದಲ್ಲಿ ಅನೇಕ ಸಿನೆಮಾಗಳಲ್ಲಿ ಅಭಿನಯಿಸಿದ್ದಾಳೆ.

ಆದರೆ ಈ ಪುಟ್ಟ ಬಾಲಕಿಗೆ ಪುನೀತ್ ರಾಜ್ ಕುಮಾರ್ ಅವರ ಜೊತೆ ನಟನೆ ಮಾಡಬೇಕು ಎಂಬ ಮಹದಾಸೆ ಇರುತ್ತದೆ ಆದರೆ ಅವಕಾಶಗಳು ಎಂಬುದು ದೊರಕಲೇಇಲ್ಲ ಪಾಪ. ಒಂದು ಬಾರಿ ಶಾರ್ವರಿ ಅಪ್ಪು ಅವರನ್ನು ಪೈಲ್ವಾನ್ ಚಿತ್ರದ ಆಡಿಯೋ ಲಾಂಚ್ ನಲ್ಲಿ ನೋಡುತ್ತಾಳೆ ಆ ಸಮಯದಲ್ಲಿ ಅಪ್ಪು ಅವರೇ ಸ್ವತಃ ಶಾರ್ವರಿ ಯನ್ನು ಕರೆದು ಮಾತನಾಡಿಸುತ್ತಾರೆ. ಅಪ್ಪು ಕರೆದಾಗ ಆಕೆಗೆ ಆಶ್ಚರ್ಯವಾಗುತ್ತದೆ ಅಷ್ಟೇ ಅಲ್ಲದೆ ತನ್ನ ಅಮ್ಮನೊಂದಿಗೆ ಇರುವಾಗ ಅಪ್ಪು ಅವರು ನನ್ನನ್ನು ಹೆಸರಿಡಿದು ಮಾತನಾಡಿಸಿದರು ನಿಜಕ್ಕೂ ಅಪ್ಪು ಅವರಿಗೆ ನನ್ನ ಹೆಸರು ಗೊತ್ತಾ ಅಮ್ಮ ಎಂದು ಭಾವುಕಲಾಗುತ್ತಾಳೆ.

ನಂತರ ತನ್ನ ಅಮ್ಮನೊಂದಿದೆ ನಾನು ಅಪ್ಪು ಅವರ ಜೊತೆಗೆ ಅಭಿನಯ ಮಾಡಬೇಕು ಅಮ್ಮ ಎಂದು ತನ್ನ ಮನದಲ್ಲಿ ಇದ್ದ ಆಸೆಯನ್ನು ಹೇಳಿಕೊಳ್ಳುತ್ತಾಳೆ. ಆ ದೇವರು ಇದಕ್ಕೆ ಒಂದು ಅವಕಾಶ ರೂಪಿಸಿಕೊಡುತ್ತಾನೆ. ಅಪ್ಪು ಅವರ ಪಿ.ಆರ್.ಕೆ ಪ್ರೊಡಕ್ಷನ್ ಅಡಿಯಲ್ಲಿ ಒಂದು ಚಿತ್ರವನ್ನು ಮಾಡಬೇಕು ಎಂದು ಅಂದುಕೊಂಡಿದ್ದರಂತೆ. ಆ ಚಿತ್ರಕ್ಕಾಗಿ ಬಾಲ ನಟರು ಬೇಕಾಗಿದ್ದು ಹಾಗಾಗಿ ಶಾರ್ವರಿ ಅವರನ್ನು ಆಯ್ಕೆ ಮಾಡುತ್ತಾರೆ. ಈ ಸಂತೋಷದ ವಿಷಯವನ್ನು ಶಾರ್ವರಿ ಹಾಗೂ ಅವರ ತಂದೆ ತಾಯಿಗೂ ತಿಳಿಸುತ್ತಾರೆ ಈ ವಿಚಾರ ತಿಳಿಯುತ್ತಿದ್ದ ಹಾಗೆ ಶಾರ್ವರಿ ಸಿಕ್ಕಾಪಟ್ಟೆ ಖುಷಿಯಾಗುತ್ತಾಳೆ.

ಏಕೆಂದರೆ ಅಪ್ಪು ಅವರೊಟ್ಟಿಗೆ ನಟನೆ ಮಾಡಬೇಕು ಎಂಬುದು ಆಕೆಯ ಬಹುದಿನದ ಆಸೆ ಮತ್ತು ಕನಸು ಆಗಿರುತ್ತದೆ. ನಂತರ ಪಿ. ಆರ್. ಕೆ ಸಂಸ್ಥೆಯಲ್ಲಿ ಕೆಲಸ ಮಾಡುವಂತಹ ಸಿಬ್ಬಂದಿ ಒಬ್ಬರು ಶಾರ್ವರಿ ಅವರ ಮನೆಯವರಿಗೆ ಕರೆ ಮಾಡಿ ನಿಮ್ಮ ಅಕೌಂಟ್ ನಂಬರ್ ಕೊಡಿ ಪೇಮೆಂಟ್ ಹಾಕುತ್ತೇವೆ ಎಂದು ಹೇಳುತ್ತಾರಂತೆ. ನಂತರ ಶಾರ್ವರಿ ಪೋಷಕರು ಸಾಮಾನ್ಯವಾಗಿ ಸಿನೆಮಾಗಳಲ್ಲಿ ನಟನೆ ಮಾಡೋದಕ್ಕಿಂತ ಮುಂಚೆ ಯಾರು ಕೂಡ ಪೇಮೆಂಟ್ ಹಾಕುವುದಿಲ್ಲ ಆದರೂ ಕೂಡ ಇವರು ಕೇಳುತ್ತಿದ್ದಾರೆ ಹಾಕಿದರೂ ಸರಿ ಅಥವಾ ಬಿಟ್ಟರು ಸರಿ ಎಂದು ಅಕೌಂಟ್ ನಂಬರ್ ಕೊಡುತ್ತಾರಂತೆ. ಆದರೆ ಅಕೌಂಟ್ ನಂಬರ್ ಕೊಟ್ಟ ತಕ್ಷಣವೇ ಶಾರ್ವರಿ ಅಕೌಂಟ್ ಗೆ ಹಣ ಬಂದದ್ದನ್ನು ನೋಡಿ ಅವಳ ಪೋಷಕರು ಆಶ್ಚರ್ಯ ಪಡುತ್ತಾರೆ.

ಹೆಚ್ಚಾಗಿಯಾವುದೇ ಸಿನೆಮಾ ರಿಲೀಸ್ ಆದ ನಂತರ ಅಥವಾ ಶೋಟಿಂಗ್ ಮುಗಿದ ನಂತರ ಹಣವನ್ನು ಹಾಕುತ್ತಾರೆ. ಆದರೆ ಅಪ್ಪು ಸಂಸ್ಥೆ ಮಾತ್ರ ಶೋಟಿಂಗ್ ಪ್ರಾರಂಭವಾಗುದಕ್ಕಿಂತ ಮುಂಚೆಯೇ ಒಬ್ಬ ಚೈಲ್ಡ್ ಆರ್ಟಿಸ್ಟ್ ಗೆ ಇಷ್ಟೊಂದು ಮಾನ್ಯತೆ ನೀಡುತ್ತಿರುವುದನ್ನು ನೋಡಿದರೆ ಅಪ್ಪು ಅವರ ವ್ಯಕ್ತಿತ್ವ ಎಂತಹದ್ದು ಎಂದು ತಿಳಿಯುತ್ತದೆ ಎಂದು ಶಾರ್ವರಿ ಅವರ ಪೋಷಕರು ಹೇಳುತ್ತಾರೆ.ಆದರೆ ದುರದೃಷ್ಟಕರ ಶಾರ್ವರಿ ಕೊನೆಗೂ ಅಪ್ಪು ಅವರ ಒಟ್ಟಿಗೆ ಅಭಿನಯ ಮಾಡುವುದಕ್ಕೆ ಅವಕಾಶ ದೊರೆಯಲೇ ಇಲ್ಲ ಏಕೆಂದರೆ ಅಸ್ಟೊತ್ತಿಗೆ ಅಪ್ಪು ನಮ್ಮೆಲ್ಲರನ್ನೂ ಬಿಟ್ಟು ಸ್ವರ್ಗದಲ್ಲಿ ಇದ್ದಾರೆ.

ಇದಾದ ನಂತರ ಶಾರ್ವರಿ ಅವರ ಪೋಷಕರು ಪಿ ಆರ್ ಕೆ ಪ್ರೊಡಕ್ಷನ್ ಸಿಬ್ಬಂದಿಗೆ ಕರೆ ಮಾಡಿ ನೀವು ಹಾಕಿರುವಂತ ಹಣವನ್ನು ನಿಮಗೆ ಹಿಂತಿರುಗಿಸಿ ನೀಡುತ್ತೇವೆ ಎಂದು ಹೇಳುತ್ತಾರೆ ಅದಕ್ಕೆ ಸಿಬ್ಬಂದಿಯವರು ಬೇಡ ಅಂತ ನಿರಾಕರಿಸುತ್ತಾರೆ. ಅದರೆ ಶಾರ್ವರಿ ಅವರ ಪೋಷಕರು ಮುಂದೊಂದು ದಿನ ಪಿ ಆರ್ ಕೆ ಸಂಸ್ಥೆಯಲ್ಲಿ ನನ್ನ ಮಗಳಿಗೆ ಅಭಿನಯ ಮಾಡುವಂತಹ ಅವಕಾಶ ಸಿಕ್ಕರೆ ಇದೇ ಹಣದಿಂದ ಅಭಿನಯ ಮಾಡುತ್ತಲೇ.ಒಂದುವೇಳೆ ಶಾರ್ವರಿ ಗೆ ಅವಕಾಶ ದೊರೆಯದಿದ್ದರೆ ಈ ಹಣದಿಂದ ಸಮಾಜಮುಖಿ ಕೆಲಸಗಳಿಗಾಗಿ ಬಳಕೆ ಮಾಡಿಕೊಳ್ಳುತ್ತೇವೆ ಎಂದು ಮಾಧ್ಯಮಒಂದರಲ್ಲಿ ಹೇಳಿಕೊಂಡಿದ್ದಾರೆ. ನಿಜಕ್ಕೂ ಅಪ್ಪು ಅವರ ಕನಸಿನ ಪಿ ಆರ್ ಕೆ ಸಂಸ್ಥೆ ಗ್ರೇಟ್ ಅಲ್ಲವಾ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.


Leave a Reply

Your email address will not be published. Required fields are marked *