ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಒಟ್ಟು ಆಸ್ತಿ ಎಷ್ಟು ಗೊತ್ತಾ..!?

Cinema Entertainment information

ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಪ್ರಥಮ ಸ್ಥಾನದಲ್ಲಿ ಕಾಣಿಸುತ್ತಾರೆ ಎಂದರೆ ತಪ್ಪಾಗಲಾರದು. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಗೆಲುವಿನ ಕುದುರೆಯಾಗಿ ಕಾಣಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದ ಬಹುತೇಕ ಎಲ್ಲ ನಿರ್ದೇಶಕ ಹಾಗೂ ನಿರ್ಮಾಪಕರು ಮಾಡಬೇಕು ಎನ್ನುವುದಾಗಿ ಸಾಲಿನಲ್ಲಿ ನಿಂತಿರುತ್ತಾರೆ. ಸಂಭಾವನೆ ವಿಚಾರದಲ್ಲಿ ಕೂಡ ಕನ್ನಡ ಚಿತ್ರರಂಗದ ಟಾಪ್ ನಟನಾಗಿ ಕಾಣಿಸಿಕೊಳ್ಳುತ್ತಾರೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ಡಿ ಬಾಸ್ ರವರು ಮುಟ್ಟಿದ್ದೆಲ್ಲ ಚಿನ್ನ ಎನ್ನುವ ಪರಿಸ್ಥಿತಿ ಈಗ ಸದ್ಯಕ್ಕೆ ನಿರ್ಮಾಣವಾಗಿದೆ.

ಈಗಾಗಲೇ ಬಿಡುಗಡೆಯಾಗಿರುವ ಕುರುಕ್ಷೇತ್ರ ಹಾಗೂ ರಾಬರ್ಟ್ ಎರಡು ಚಿತ್ರಗಳು ಕೂಡ ಬಾಕ್ಸಾಫೀಸ್ ನಲ್ಲಿ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಸದ್ಯಕ್ಕೆ ಕ್ರಾಂತಿ ಚಿತ್ರದ ಚಿತ್ರೀಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬ್ಯುಸಿಯಾಗಿದ್ದಾರೆ. ಇನ್ನು ಅವರ ಕೈನಲ್ಲಿ ಹಲವಾರು ಸಿನಿಮಾಗಳು ಕೂಡ ಇವೆ. ಕೇವಲ ಕನ್ನಡದಲ್ಲಿ ನಟಿಸಿಕೊಂಡು ಬಂದರೂ ಕೂಡ ಅವರ ಜನಪ್ರಿಯತೆಯನ್ನು ವುದು ರಾಜ್ಯದ ಎಲ್ಲೆಯನ್ನು ಮೀರಿ ಹೊರಗೆ ಕೂಡ ಪಸರಿಸಿದೆ.

ಕನ್ನಡ ಚಿತ್ರರಂಗದ ಖ್ಯಾತ ಖಳನಟನ ಮಗನಾಗಿದ್ದರೂ ಕೂಡ ತಮ್ಮ ಸ್ವಂತ ಪ್ರತಿಭೆಯ ಪರಿಶ್ರಮದ ಸಾಧನದಿಂದ ಆಗಿ ಚಾಲೆಂಜ್ ಸ್ಟಾರ್ ದರ್ಶನ್ ಅವರು ಕನ್ನಡ ಚಿತ್ರರಂಗದಲ್ಲಿ ಪ್ರವರ್ಧಮಾನಕ್ಕೆ ಬಂದವರು. ಮೊದಲಿಗೆ ಲೈಟ್ ಬಾಯ್ ಆಗಿ ನಂತರ ಚಿಕ್ಕಪುಟ್ಟ ಧಾರಾವಾಹಿಗಳಲ್ಲಿ ನಟಿಸಿ ಕೊಂಡು ಮಾಡಲ್ ಆಗಿ ಸಿನಿಮಾಗಳಲ್ಲಿ ಚಿಕ್ಕಪುಟ್ಟ ಪಾತ್ರಗಳನ್ನು ನಿರ್ವಹಿಸಿಕೊಂಡು ನಂತರ ಮೆಜೆಸ್ಟಿಕ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ದೊಡ್ಡಮಟ್ಟದಲ್ಲಿ ಪರಿಚಿತರಾಗುತ್ತಾರೆ. ಆನಂತರ ಅವರು ಚಿತ್ರರಂಗದಲ್ಲಿ ಹಿಂದಿರುಗಿ ನೋಡಿದ್ದೇ ಇಲ್ಲ.

ಸಂಭಾವನೆ ವಿಚಾರಕ್ಕೆ ಬರುವುದಾದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾಗಿದ್ದಾರೆ. ಹೌದು ಪ್ರತಿ ಸಿನಿಮಾಗಳಿಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು 12 ಕೋಟಿ ರೂಪಾಯಿ ಸಂಭಾವನೆ ಪಡೆಯುವುದು ಕನ್ಫರ್ಮ್. ಆದರೆ ಕೆಲವೊಮ್ಮೆ ಸ್ನೇಹದ ಸಲುವಾಗಿ ಉಚಿತವಾಗಿ ಕೂಡ ಸಿನಿಮಾವನ್ನು ಮಾಡಿಕೊಟ್ಟಿರುವ ಉದಾಹರಣೆ ಸಾಕಷ್ಟಿದೆ. ಹಣಕ್ಕಿಂತ ಹೆಚ್ಚಾಗಿ ಸ್ನೇಹಕ್ಕೆ ನಮ್ಮೆಲ್ಲರ ನೆಚ್ಚಿನ ದಾಸ್ ತಲೆಬಾಗುತ್ತಾರೆ ಎನ್ನುವುದು ಈಗಾಗಲೇ ಹಲವಾರು ವಿಚಾರಗಳಿಂದ ನಮಗೆ ತಿಳಿದು ಬಂದಿದೆ. ಇನ್ನು ಅವರ ಬಳಿ ಇರುವಂತಹ ಐಶಾರಾಮಿ ಕಾರು ಗಳ ಪಟ್ಟಿ ನಿಮಗೆಲ್ಲ ಗೊತ್ತೇ ಇದೆ.

ಒಟ್ಟು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಬಳಿ ಬರೋಬ್ಬರಿ 150 ಕೋಟಿಗೂ ಅಧಿಕ ಆಸ್ತಿ ಇದೆ ಎಂಬುದಾಗಿ ತಿಳಿದುಬಂದಿದೆ. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ ತಮ್ಮ ಬಳಿಗೆ ಬರುವಂತಹ ಜನರನ್ನು ಬರಿಗೈಯಲ್ಲಿ ಕಳಿಸುವುದಿಲ್ಲ. ಜನರಿಗೆ ಸಹಾಯ ಮಾಡಲೆಂದೇ ವರ್ಷಕ್ಕೆ ಕೋಟಿ ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಾರೆ. ಆದರೆ ತಾವು ಸಹಾಯ ಮಾಡಿದರು ಕೂಡ ಬಲಗೈಯಲ್ಲಿ ಸಹಾಯ ಮಾಡಿದ್ದು ಎಡಗೈಗೆ ತಿಳಿಯದಂತೆ ಸಹಾಯ ಮಾಡುತ್ತಾರೆ. ಅಂಬರೀಶ್ ರವರ ನಂತರ ಕನ್ನಡ ಚಿತ್ರರಂಗದಲ್ಲಿ ಕಲಿಯುಗದ ಕರ್ಣ ಎಂಬುದಾಗಿ ಯಾರನ್ನಾದರೂ ಕರೆಯುತ್ತಾರೆ ಎಂದರೆ ಅದು ಕೇವಲ ಡಿ ಬಾಸ್ ರವರನ್ನು ಮಾತ್ರ ಎಂದು ಹೇಳಬಹುದಾಗಿದೆ.

ದುಡ್ಡಿಗಿಂತ ಹೆಚ್ಚಾಗಿ ಮನಸ್ಸಿನಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಶ್ರೀಮಂತ ಎಂದರೆ ತಪ್ಪಾಗಲಾರದು. ಇಷ್ಟು ಮಾತ್ರವಲ್ಲದೆ ಆಗಾಗ ತಮ್ಮ ಸ್ನೇಹಿತರೊಂದಿಗೆ ದೂರ ದೂರದ ಊರುಗಳಿಗೆ ಬೈಕ್ ರೈಡ್ ಹೋಗುವುದು ಕೂಡ ನೀವು ನೋಡಿರುತ್ತೀರಿ. ಕುಟುಂಬದೊಂದಿಗೆ ಕೂಡ ಆಗಾಗ ಸಫಾರಿಯಲ್ಲಿ ಸಂತೋಷದ ಸಮಯಗಳನ್ನು ಕಳೆಯುತ್ತಾರೆ. ಇದೇ ಅವರ ದೊಡ್ಡ ಆಸ್ತಿ ಎಂದು ಹೇಳಬಹುದಾಗಿದೆ. ಇದಕ್ಕಿಂತ ದೊಡ್ಡ ಆಸ್ತಿ ಎಂದರೆ ಅವರ ಅಭಿಮಾನಿಗಳು. ತಮ್ಮ ಅಭಿಮಾನಿಗಳನ್ನು ಸೆಲೆಬ್ರಿಟಿಗಳು ಎನ್ನುವುದಾಗಿ ಪ್ರೀತಿಯಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಕರೆಯುತ್ತಾರೆ. ಈ ವಿಚಾರದ ಕುರಿತಂತೆ ನಿಮ್ಮ ಒಪಿನಿಯನ್ ಹಾಗೂ ಅನಿಸಿಕೆಗಳನ್ನು ತಪ್ಪು ಹೇಳಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಇನ್ನೊಂದು ವಿಷಯ ಹೇಳಬೇಕೆಂದರೆ ಅವರು ಅತ್ಯಂತ ದೊಡ್ಡ ಪ್ರಾಣಿ ಪ್ರಿಯರು ಅವರಿಗೆ ಪ್ರಾಣಿಗಳೆಂದರೆ ಅತ್ಯಂತ ಪ್ರೀತಿ ಮೈಸೂರು ರೈಲ್ವೆ ಚಿಕ್ಕ ಮೃಗಾಲಯವನ್ನು ಕಟ್ಟಿಕೊಂಡಿದ್ದಾರೆ ಅವರು ಅದನ್ನು ನೋಡಿಕೊಳ್ಳುವುದಕ್ಕೆ ಹತ್ತಾರು ಜನ ಕೆಲಸಗಾರರು ಕೂಡ ಇದ್ದಾರೆ ತಮ್ಮ ಪ್ರೀತಿಯ ಪ್ರಾಣಿಗಳನ್ನು ನೋಡಲು ಆಗಾಗ ತಮ್ಮ ಫಾರ್ಮಿಗೆ ದರ್ಶನ್ ಅವರ ಭೇಟಿ ಕೊಡುತ್ತಿರುತ್ತಾರೆ ಶೂಟಿಂಗ್ ಇಲ್ಲದ ಸಮಯದಲ್ಲಿ ಹೆಚ್ಚಿನ ಕಾಲವನ್ನು ಅಲ್ಲಗಳೆಯುತ್ತಾರೆ ಪ್ರಾಣಿಗಳ ಜೊತೆ ಇವರು ಕೂಡ ತುಂಬಾ ಸಲುಗೆಯಿಂದ ಅವುಗಳನ್ನು ನೋಡಿಕೊಳ್ಳುತ್ತಾರೆ.

ದರ್ಶನ್ ಅವರ ಪ್ರೀತಿಯ ಪ್ರಾಣಿಗಳೆಂದರೆ ಕುದುರೆ ಹುಲಿ ಆನೆ ಹಸುಗಳು ಕೋಳಿಗಳು ಹೀಗೆ ಹತ್ತಾರು ಪ್ರಾಣಿಗಳು ಕಂಡರೆ ಅವರಿಗೆ ತುಂಬಾ ಇಷ್ಟ ಇತ್ತೀಚಿಗಷ್ಟೇ ದರ್ಶನ್ ಅವರ ಸಫಾರಿ ಮೂಲಕ ತಮಗೆ ಇಷ್ಟವಾದ ಪ್ರಾಣಿಗಳ್ಳನ್ನು ಸೆರೆ ಹಿಡಿದ್ದಿದ್ದಾರೆ ಅದು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಸ್ ವೈರಲ್ ಆಗಿದೆ ಕನ್ನಡ ಚಿತ್ರರಂಗದಲ್ಲಿ ಅತೀ ಹೆಚ್ಚು ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ ಡಿಬಾಸ್ ಅವರ ಸರಳತೆ ವಿನಾಯತೆ ಅವರು ಮಾಡುವ ದಾನ ಧರ್ಮ ಅಷ್ಟಿಷ್ಟಲ್ಲ ತರ ದೇವರು ಮೆಚ್ಚುವ ಕೆಲಸ ಮುಂದುವರಿಯಲಿ ಎಂದು ದೇವರಲ್ಲಿ ಪ್ರಾಪ್ತಿಸುತ್ತೇವೆ ಧನ್ಯವಾದಗಳು


Leave a Reply

Your email address will not be published. Required fields are marked *