ಚಿಕ್ಕ ವಯಸಿನಲ್ಲೇ ಸನ್ಯಾಸತ್ವ ಸ್ವೀಕರಿಸಿದ ಖ್ಯಾತ ನಟಿ ಮಹಾಲಕ್ಷ್ಮಿ ಅವರ ನಿಜವಾದ ವಯಸ್ಸೆಷ್ಟು ಗೊತ್ತಾ? ಈಗ ಹೇಗಿದ್ದಾರೆ, ಯಾವ ಕೆಲಸ ಮಾಡುತ್ತಿದ್ದಾರೆ ನೋಡಿ!!

ಸುದ್ದಿ

ನಮಸ್ತೆ ಪ್ರೀತಿಯ ವೀಕ್ಷಕರೆ ಕನ್ನಡ ಚಿತ್ರರಂಗದತ್ತ ಒಮ್ಮೆ ಕಣ್ಣಾಯಿಸಿದರೆ ಅದೆಷ್ಟೋ ಕಲಾವಿದರು ಸಿನಿಮಾದಲ್ಲಿ ನಟಿಸಿ ಪ್ರೇಕ್ಷಕರ ಮನಸ್ಸಿನಲ್ಲಿ ಹಾಗೂ ಹೃದಯದಲ್ಲಿ ಉಳಿದು ಬಿಟ್ಟಿದ್ದಾರೆ. ಆದರೆ, ಕೆಲವರು ಸಿನಿಮಾ ರಂಗದಲ್ಲಿ ಬದುಕು ಕಟ್ಟಿಕೊಂಡರೆ, ಕೆಲವರು ದಿಢೀರನೇ ಸಿನಿಮಾ ಜಗತ್ತಿನಿಂದಲೇ ದೂರಾಗಿ ಬಿಟ್ಟರು. ವೈಯುಕ್ತಿಕ ಜೀವನದಲ್ಲಿ ನಡೆದ ಒಂದಷ್ಟು ಘಟನೆಗಳು ತೆರೆ ಮೇಲೆ ಕಾಣಿಸದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಂತಹ ಕಲಾವಿದರಲ್ಲಿ ನಟಿ ಮಹಾಲಕ್ಷ್ಮಿ ಕೂಡ ಒಬ್ಬರು. ಕನ್ನಡದಲ್ಲಿ 30ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ನಟಿ ಮಹಾಲಕ್ಷ್ಮೀ ಚಂದನವನದಿಂದ ದೂರವಾಗಿಬಿಟ್ಟರು.

ಅಷ್ಟೇ ಅಲ್ಲದೇ ಈ ನಟಿ ವೈವಾಹಿಕ ಬದುಕಿನ ಸಹವಾಸವೇ ಬೇಡ ಎಂದು ಸನ್ಯಾಸತ್ವ ಸ್ವೀಕರಿಸಿದ್ದು ಯಾಕೆ, ಈಗ ಅವರ ವಯಸು ಎಂದು ಕೇಳಿದರೆ ನಿಜಕ್ಕೂ ಅಚ್ಚರಿಯಾಗುತ್ತದೆ. ಇವರ ಬದುಕಿನ ಕುರಿತು ಹೇಳುವುದಾದರೆ, ತಮಿಳು ನಟಿಯಾದರೂ ಮಹಾಲಕ್ಷ್ಮಿ ಅವರ ಅದೃಷ್ಟ ಕೈ ಹಿಡಿದದ್ದು ಕನ್ನಡ ಸಿನಿಮಾ ರಂಗ. ಕೇವಲ 8 ವರ್ಷಗಳಲ್ಲಿ ಇವರು 30ಕ್ಕೂ ಅಧಿಕ ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು.

ಕನ್ನಡದ ಸ್ಟಾರ್ ನಟರಾದ ಡಾ. ರಾಜ್‌ಕುಮಾರ್, ಸಾಹಸಸಿಂಹ ವಿಷ್ಣುವರ್ಧನ್, ಅಂಬರೀಶ್, ರವಿಚಂದ್ರನ್ ಸೇರಿದಂತೆ ಅನೇಕ ನಟರ ಜೊತೆಗೆ ಸ್ಕ್ರೀನ್ ಶೇರ್ ಮಾಡಿಕೊಂಡರು. 1991ರಲ್ಲಿ ತೆರೆಕಂಡಿದ್ದ ‘ದುರ್ಗಾಷ್ಟಮಿ’ ಚಿತ್ರದ ಬಳಿಕ ಮಹಾಲಕ್ಷ್ಮೀ ಬಣ್ಣದ ಲೋಕದಿಂದ ದೂರ ಉಳಿದು ಬಿಟ್ಟರು. ನೋಡಲು ಸುಂದರವಾಗಿದ್ದ ಈ ನಟಿ ಆ ಕಾಲದ ಯುವಕರ ಡ್ರೀಮ್ ಗರ್ಲ್ ಆಗಿದ್ದರು. ನಟಿ ಮಹಾಲಕ್ಷ್ಮಿಯವರ ವೃತ್ತಿ ಜೀವನದ ನಡುವೆಯೂ ವೈಯುಕ್ತಿಕ ಜೀವನದಲ್ಲಿ ಎಡವಿ ಬಿಟ್ಟರು.

ಸಿನಿಮಾರಂಗದಲ್ಲಿ ಹೆಸರು ಮಾಡುತ್ತಿದ್ದ ವೇಳೆಯಲ್ಲಿ ಇವರಿಗೆ ನಿರ್ದೇಶಕ, ನಿರ್ಮಾಪಕ ಆಗಿರುವ ಕನ್ನಡದ ಟಾಪ್ ನಟನ ಸ್ನೇಹ ಬೆಳೆಯಿತು. ಈ ಸ್ನೇಹವು ಪ್ರೀತಿಯಾಗಿ ಬದಲಾಯಿತು. ಇಬ್ಬರೂ ಒಬ್ಬರನ್ನು ಒಬ್ಬರು ದೂರ ಮಾಡಲು ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ತುಂಬಾ ಪ್ರೀತಿಸುತ್ತಿದ್ದರು. ಇವರಿಬ್ಬರ ಪ್ರೀತಿಯ ವಿಚಾರ ಆ ಸಮಯದಲ್ಲಿ ಆ ಸಮಯದಲ್ಲಿ ಬಹುದೊಡ್ಡ ಮಟ್ಟಿಗೆ ಸುದ್ದಿಯಾಗಿತ್ತು.

ಈ ವಿಚಾರವೂ ಮಹಾಲಕ್ಷ್ಮಿ ಪ್ರೀತಿಸುತ್ತಿದ್ದ ನಟನ ಮನೆಯಲ್ಲಿ ತಿಳಿಯಿತು. ನಟನ ಮನೆಯಲ್ಲಿ ಮಹಾಲಕ್ಷ್ಮಿ ಮದುವೆಯಾಗುವುದು ಯಾರಿಗೂ ಇಷ್ಟ ಇರಲಿಲ್ಲ. ಈ ಸಮಯದಲ್ಲೇ ಮಹಾಲಕ್ಷ್ಮಿ ಪ್ರೀತಿಸುತ್ತಿದ್ದ ಆ ನಟನಿಗೆ ಮನೆಯವರು ಹುಡುಗಿಯನ್ನು ಹುಡುಕಿ ಮದುವೆ ಮಾಡಿ ಬಿಟ್ಟರು. ಪ್ರೀತಿ ಮಾಡುತ್ತಿದ್ದ ಹುಡುಗ ಕೈ ಕೊಟ್ಟು ಬೇರೆ ಹುಡುಗಿಯನ್ನು ಮದುವೆಯಾದ ಎನ್ನುವ ನೋವಿನಿಂದ ಸಂಪೂರ್ಣವಾಗಿ ಕುಗ್ಗಿ ಹೋದರು.

ಈ ಘಟನೆ ಅವರ ಬದುಕಿಗೆ ಬಹುದೊಡ್ಡ ಹೊಡೆತ ನೀಡಿತು. ಹೀಗಾಗಿ ಚಿತ್ರರಂಗವನ್ನೂ ತೊರೆದು ಬಿಟ್ಟರು ನಟಿ ಮಹಾಲಕ್ಷ್ಮಿ. ನಟಿ ಮಹಾಲಕ್ಷ್ಮಿಯವರಿಗೆ ಮನೆಯವರು ಮದುವೆ ಮಾಡಿದರು. ವೈಯುಕ್ತಿಕ ಕಾರಣಗಳಿಂದ ಪತಿಗೆ ವಿಚ್ಛೇದನ ನೀಡಿದರು. ಬಳಿಕ ಎರಡನೇ ಮದುವೆ ಮಾಡಿಕೊಂಡರು. ಆ ಮದುವೆಯ ಸಂಬಂಧ ತುಂಬಾ ದಿನ ಉಳಿಯಲೇ ಇಲ್ಲ. ಕೊನೆಗೆ ಮೂರನೇ ಮದುವೆಯನ್ನು ಮಾಡಿಕೊಂಡರೂ ಆ ಮಾಡುವೆಯೂ ಮುರಿದು ಬಿತ್ತು.

ವೈಯುಕ್ತಿಕ ಜೀವನದಲ್ಲಿ ಬಾರಿ ಹೊಡೆತ ತಿದ್ದ ಮಹಾಲಕ್ಷ್ಮಿ ಕುಗ್ಗಿ ಹೋದರು. ಜೀವನದಲ್ಲಿ ನಡೆದ ಕಹಿ ಘಟನೆಯಿಂದಾಗಿ ಮಹಾಲಕ್ಷ್ಮಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡು ಎಲ್ಲವನ್ನು ತ್ಯಜಿಸಿ ಸನ್ಯಾಸತ್ವವನ್ನು ಸ್ವೀಕರಿಸಿ ಚೆನ್ನೈನ ಒಂದು ಚರ್ಚ್ ನಲ್ಲಿ ಉಳಿದು ಬಿಟ್ಟರು. ನಟಿ ಮಹಾಲಕ್ಷ್ಮಿಯವರು ಗುರುತು ಸಿಗದಷ್ಟು ಬದಲಾಗಿ ಬಿಟ್ಟಿದ್ದಾರೆ. ಇದೀಗ ನಟಿ ಮಹಾಲಕ್ಷ್ಮಿಯವರಿಗೆ 60 ವರ್ಷ ಆಗಿರಬಹುದು ಎಂದು ಅಂದಾಜಿಸಲಾಗಿದೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.


Leave a Reply

Your email address will not be published. Required fields are marked *