ಚಿರಂಜೀವಿ ಸರ್ಜಾ ಇಲ್ಲದೇ ಉರುಳಿತು ಎರಡು ವರ್ಷ ಮನೆ ಮಗನಿಗೆ ವಿಶೇಷ ಪೂಜೆ ಸಲ್ಲಿಸಿದ ಕುಟುಂಬ! ಪತಿಗೆ ಭಾವುಕ ಸಾಲು ಬರೆದ ಮೇಘನಾ ರಾಜ್?

ಸುದ್ದಿ

ಕನ್ನಡ ಚಿತ್ರರಂಗದ ಮೇರು ನಟ ಚಿರಂಜೀವಿ ಸರ್ಜಾ ಅವರು ನಮ್ಮನ್ನು ಅಗಲಿ ಇಂದಿಗೆ ಎರಡು ವರ್ಷಗಳು ಕಳೆದಿದೆ. ಅಂದರೆ ಜೂನ್ 7 ಚಿರು ಕುಟುಂಬಕ್ಕೆ ಕರಾಳ ದಿನ. ಚಿರು ಅಗಲಿಕೆಯ ಸ್ಮರಣೆಯಲ್ಲಿ ಅವರ ಇಡೀ ಕುಟುಂಬ ಇಂದು ಚಿರು ಅವರ ಸಮಾಧಿಗೆ ತೆರಳಿ ಅಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ. ಬೆಂಗಳೂರಿನ ಕನಕಪುರ ರಸ್ತೆಯ ನೆಲಗುಳಿ ಬಳಿ ಇರುವ ಬೃಂದಾವನ ಫಾಮ್ ಹೌಸ್ ನಲ್ಲಿ ಚಿರಂಜೀವಿ ಸರ್ಜಾ ಅವರು ಅಂತ್ಯ ಸಂಸ್ಕಾರ. ಮಾಡಲಾಗಿತ್ತು.

ಇಂದು ಸಮಾಧಿ ಬಳಿ ಚಿರು ಪತ್ನಿ ಮೇಘನಾ ರಾಜ್, ಮಗ ರಾಯನ್ ಸರ್ಜಾ, ತಮ್ಮ ಧ್ರುವ ಸರ್ಜಾ ಮತ್ತು ಪತ್ನಿ ಪ್ರೇರಣಾ, ಮೇಘನಾ ರಾಜ್ ಅವರ ತಾಯಿ ಪ್ರಮೀಳಾ ಜೋಷಯಿ, ತಂದೆ ಸುಂದರ್ ರಾಜ್, ಅರ್ಜುನ್ ಸರ್ಜಾ ಅವರ ಕುಟುಂಬದವರು ತೆರಳಿ ಚಿರುವಿಗೆ ಪೂಜೆ ಸಲ್ಲಿಸಿದ್ದಾರೆ.

ಮೇಘನಾ ರಾಜ್ ಅವರ ತಂದೆ ಮೊಮ್ಮಗನಾ ಎತ್ತಿಕೊಂಡು ಅಪ್ಪನಿಗೆ ನಮಸ್ಕಾರ ಮಾಡು ಎನ್ನುವ ದೃಶ್ಯ ನೋಡಿದರೆ ಕಣ್ಣಲ್ಲಿ ನೀರು ಬರುತ್ತೆ. ಹಾಗೇ ಮೇಘನಾ ರಾಜ್ ತಮ್ಮ ಮಗನ ಜೊತೆ ಈ ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಚಿರು ಅಗಲಿದ್ದಾರು ಇನ್ನು ಸಹಾ ಅವರ ನೆನಪಲ್ಲೇ ಇರುವ ಮೇಘನಾ ರಾಜ್ ಆಗಾಗ ಪತಿ ಚಿರು ಅವರನ್ನು ಆಗಾಗ ನೆನಪಿಸಿಕೊಳ್ಳುತ್ತಾಳೆ ಇರುತ್ತಾರೆ.

ಇಂದಿಗೆ ಚಿರು ಅಗಲಿ ಎರಡು ವರ್ಷಗಲಾಗಿದ್ದು. ಇಂದು ಸಮಾಧಿಗೆ ವಿಶೇಷ ಪೂಜೆಗೂ ಮೊದಲು ಮೇಘನಾ ರಾಜ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಭಾವುಕವಾಗಿ ಕೆಲವು ಸಾಲುಗಳನ್ನು ಬೆರೆದುಕೊಂಡಿದ್ದಾರೆ. ಮೇಘನಾ ರಾಜ್ ಆ ಪೋಸ್ಟ್ ನಲ್ಲಿ ನೀವು ಮತ್ತು ನಾನು.. ಶಾಶ್ವತೆಗಾಗಿ. ನಿನ್ನಂತೆ ಯಾರು ಇರಲಿಲ್ಲ ಮತ್ತು ನಿನ್ನಂತೆ ಯಾರು ಇರುವುದಿಲ್ಲ. ಚಿರು ನೀವು ಒಬ್ಬರೇ, ನಿನ್ನನ್ನು ಸದಾ ಪ್ರೀತಿಸುತ್ತೇನೆ ಎಂದು ಬರೆದುಕೊಂಡು ಪ್ರೀತಿಯ ಪತಿ ಚಿರುವನ್ನು ಸ್ಮರಿಸಿದ್ದಾರೆ.

ಕರ್ನಾಟಕದ ಜನರಿಗೆ ತಿಳಿದಿರುವ ಹಾಗೇ ನಟಿ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಇಬ್ಬರು ಪ್ರೀತಿಸಿ ಮನೆಯವರ ಒಪ್ಪಿಗೆ ಮೇರೆಗೆ ಮದುವೆಯಾದವರು. ಇವರಿಬ್ಬರ ಮದುವೆ 2018 ರಲ್ಲಿ ಬಹಳ ಅದ್ದೂರಿಯಾಗಿ ನಡೆದಿತ್ತು.
ಅದರೆ ಇಷ್ಟ ಪಟ್ಟು ಮದುವೆಯಾದ ಇಬ್ಬರ ವಿಧಿಯ ಆಟ ಮಾತ್ರ ನಿಲ್ಲಲಿಲ್ಲ. ಮದುವೆಯಾದ ಬರೇ ಎರಡೇ ವರ್ಷಕ್ಕೆ ಅಂದರೆ 2020 ರ ಜೂನ್ 7 ರಂದು ಚಿರಂಜೀವಿ ಸರ್ಜಾ ಹೃ ದ ಯಾ ಘಾ ತ ದಿಂದ ಇಹಲೋಕವನ್ನು ತ್ಯಜಿಸಿದರು.

ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದ ಚಿರು ಕನ್ನಡ ಸಿನೆಮಾ ರಂಗಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಹಾಗೇ ಅವರ ಅದ್ಭುತ ನಟನೆಯಿಂದ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದರು. ನಿಮ್ಮ ನೆಚ್ಚಿನ ನಟಿ ಚಿರು ಅವರ ಒಂದು ವಿಶೇಷ ಗುಣ ನಿಮಗೆ ಗೊತ್ತಿದ್ದರೆ ಕಾಮೆಂಟ್ ಮೂಲಕ ತಿಳಿಸಿ


Leave a Reply

Your email address will not be published. Required fields are marked *