ಸ್ಯಾಂಡಲ್ವುಡ್ ಲೋಕದಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ತಮ್ಮ ಆದ ಚಪಾನ್ನು ಮೂಡಿಸಿರುವ ನಟ ಚಿರಂಜೀವಿ ಸರ್ಜಾ ಅವರು ಧೈಹಿಕವಾಗಿ ನಮ್ಮೊಂದಿಗೆ ಇಲ್ಲವಾದರೂ ಕೂಡ ಇಂದಿಗೂ ಚಿರು ಸರ್ಜಾ ಅವರ ಅಭಿಮಾನಿಗಳು ತಮ್ಮ ಪ್ರೀತಿಯ ನಟನನ್ನು ನೆನಪಿಸಿಕೊಳ್ಳುತ್ತಾರೆ. ಅವರ ಕುಟುಂಬದವರು ಸಹ ಚಿರು ಅವರನ್ನು ನೆನೆದು ಇಂದಿಗೂ ಸಹ ನೆನೆಯುತ್ತಾರೆ. ಚಿರು ಸರ್ಜಾ ಅವರು 2020 ರಲ್ಲಿ ಹೃ ದ ಯ ಘಾ ತ ಅತಿ ಚಿಕ್ಕ ವಯಸ್ಸಿಗೆ ಎಲ್ಲರಿಂದ ದೂರ ಆದರು.
ಇದು ಬರೇ ಚಿರು ಕುಟುಂಬಕ್ಕೆ ಮಾತ್ರ ಅಲ್ಲದೇ ಕನ್ನಡ ಚಿತ್ರರಂಗ ಹಾಗೂ ಅವರ ಅಪಾರ ಅಭಿಮಾನಿಗಳಿಗೆ ತುಂಬಾಲಾರದ ನಷ್ಟವಾಗಿದೆ. ಚಿರಂಜೀವಿ ಸರ್ಜಾ ಅವರ ನೆನೆದು ಇಂದಿಗೂ ಅವರ ಕುಟುಂಬ ಹಾಗೂ ಪತ್ನಿ ಮೇಘನಾ ರಾಜ್ ಪತಿ ಇಲ್ಲದೆ ಕುಗ್ಗಿ ಹೋಗಿದ್ದಾರೆ. ಪತಿ ಇಲ್ಲದ ನನ್ನ ಬದುಕು ಮುಂದೇನು ಎಂಬ ನೋವಿನಲ್ಲಿ ಕೊರಗುತ್ತಿದ್ದರು. ಅದರ ಆ ನೋವನ್ನೆಲ್ಲ ಮರೆಯಲು ರಾಯನ್ ಸರ್ಜಾ ಅವರನ್ನು ಚಿರು ರೂಪದಲ್ಲಿ ಇಡೀ ಕುಟುಂಬದವರು ಕಾಣುತಿದ್ದಾರೆ.
ನಿಮಗೆ ಗೊತ್ತಿರುವ ಹಾಗೇ ಚಿರು ಇದ್ದಾಗ ಅವರ ಜೊತೆಯಲ್ಲಿ ಯಾವಾಗಲು ಮೇಘನಾ ರಾಜ್ ಹಾಗೂ ಧ್ರುವ ಸರ್ಜಾ ಇದ್ದೆ ಇರುತ್ತಿದ್ದರು ನಿಮಗೆ ತಿಳಿದಿರೋ ಹಾಗೇ ಧ್ರುವ ನಿಗೆ ಅಣ್ಣ ಅಂದರೆ ಪಂಚಪ್ರಾಣ. ಅವರಿಬ್ಬರೂ ಎರಡು ದೇಹ ಒಂದೇ ಪ್ರಾಣ ಎಂಬಂತೆ ಇದ್ದರು. ಆದರೆ ಅದು ಈಗ ಬರೇ ನೆನೆಪು ಮಾತ್ರ. ಅಂದು ಹೇಗೆ ಚಿರು ತುಂಟಾಟ ಮತ್ತು ನಗುವನ್ನು ಅದನ್ನೆಲ್ಲಾ ರಾಯನ್ ಸರ್ಜಾ ನಲ್ಲಿ ಇಡೀ ಕುಟುಂಬ ದವರು ಕಾಣುತ್ತಿದ್ದಾರೆ. ಕಳೆದು ವರ್ಷ ಅಣ್ಣ ಚಿರು ಸರ್ಜಾ ಅವರ ಪುಣ್ಯಸ್ಮರಣೆ ಇತ್ತು ಆ ವೇಳೆ ತಮ್ಮ ಧ್ರುವ ಸರ್ಜಾ ಭಾವನಾತ್ಮಕ ಪತ್ರ ಬರೆದಿದ್ದಾರೆ.
ಅವರ ಪ್ರೀತಿಯ ಅಣ್ಣನನ್ನು ಪ್ರತಿ ಕ್ಷಣವು ಮಿಸ್ ಮಾಡಿಕೊಳ್ಳುತ್ತಾರೆ ನೋಡಿ ಈ ಪತ್ರದಲ್ಲಿ “ನೀನು ದೇವರ ಮನೆಗೆ ಹೋಗಿ ಒಂದು ವರುಷವಾಯಿತು. ಎಷ್ಟು ಬೇಗ ಒಂದು ವರ್ಷ. ಈ 365 ದಿನ ನಿನ್ನ ನೆನೆಯದ ದಿನಗಳೇ ಇಲ್ಲ. ನನ್ನ ಕನಸಿನಲ್ಲಿ ನಿನ್ನ ಕಾಣದ ದಿನಗಳೇ ಇಲ್ಲ. ಮರೆಯಲಾಗದ ಚಿರು ನೆನಪು ಗಳು ಕುಟುಂಬದ ಮೇಲೆ ನಿನಗಿದ್ದ ಅಪಾರವಾದ ಗೌರವ, ನಿನ್ನ ಅಭಿಮಾನಿಗಳಿಗೆ ನೀನು ತೋರಿಸುತ್ತಿದ್ದ ಪ್ರೀತಿ, ಪ್ರೇಮ ಸ್ನೇಹ, ನಿನ್ನ ಉದಾರಗುಣ ಮತ್ತು ಅಜಾತಶತ್ರುವಾಗಿದ್ದ ನಿನ್ನ ನೆನಪುಗಳೇ ಈಗ ನಮ್ಮ ಕರಾಗಲಾಗದ ಆಸ್ತಿ.
ನೀನೆಲ್ಲಿದ್ದರು ಅಲ್ಲಿ ನಗು ತುಂಬಿರಬೇಕು. ನಿನ್ನ ಆತ್ಮ ಶಾಂತಿಯಿಂದ ಇರಬೇಕು. ಆ ಪ್ರಾರ್ಥನೆಯಲ್ಲೇ, ಎಂದೆಂದೂ ನಿನ್ನ ನೆನಪಿನಲ್ಲೇ, ನಿನ್ನ ಪ್ರೀತಿಯ ಕುಟುಂಬ ” ಎಂಬ ಭಾವನಾತ್ಮಕವಾಗಿ ಚಿರು ನೆನೆದು ಪತ್ರ ಬರೆದಿದ್ದರು. ಚಿರು ಇಲ್ಲವಾಗಿ ಎರಡು ವರ್ಷಗಳೇ ಕಳೆದಿದೆ. ಕೆಲವು ತಿಂಗಳಲ್ಲಿ ಸಮಾಧಿಯ ನಿರ್ಮಾಣ ಕಾರ್ಯ ಶುರುವಾಗಿದೆ. ತಮ್ಮ ಧ್ರುವ ಸರ್ಜಾ ಹಾಗೂ ಅತ್ತಿಗೆ ಪ್ರೇರಣಾ ಮುಂದೆ ನಿಂತು ಚಿರು ಸಮಾಧಿಗೆ ಭೂಮಿ ಪೂಜೆ ಮಾಡಿದರು.
ಸದ್ಯಕ್ಕೆ ಚಿರು ಸಮಾಧಿಯನ್ನು ತಾತ್ಕಾಲಿಕವಾಗಿ ಶೇಡ್ ನಂತೆ ನಿರ್ಮಿಸಿದ್ದರು. ಆದರೆ ಈಗ ಚಿರು ಸ್ಮಾರಕ ನಿರ್ಮಾಣ ಮಾಡಲು ಸಕಲ ತಯಾರಿ ನಡೆಸಿದ್ದಾರೆ. ಅಣ್ಣ ಅರಮನೆಯಲ್ಲಿ ಸುರಕ್ಷಿತವಾಗಿರಬೇಕು ಎನ್ನುವ ದೃಷ್ಟಿಯಲ್ಲಿ ಸಮಾಧಿಯ ಸುತ್ತಲೂ ಕಾಪೌಂಡ್ ನಿರ್ಮಿಸಿ ಸ್ಮಾರಕ ಮಾಡುತಿದ್ದರೆ. ಸ್ಮಾರಕ ಸುತ್ತಲೂ ಚಿರು ಅವರ ಬಾಲ್ಯದ ಫೋಟೋದಿಂದ ಪ್ರತಿಯೊಂದು ಸಿನಿಮಾಗಳ ಫೋಟೋಗಳನ್ನು ಅಳವಡಿಸುವ ಯೋಜನೆಇದೆ. ನಿಮಗೆ ತಿಳಿದಿರೋ ಹಾಗೇ ನಟಿ ಮೇಘನಾ ರಾಜ್ ಅವರು ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡು ಬೆಳ್ಳಿ ತೆರೆ ಹಾಗೂ ಕಿರುತೆರೆ ಯಲ್ಲಿ ಬ್ಯುಸಿಯಾಗಿದ್ದಾರೆ.
ಆದರೆ ಧ್ರುವ ಸರ್ಜಾ ಮೇಘನಾ ರಾಜ್ ಅವರನ್ನು ಚಿರು ಸಮಾಧಿ ಬಳಿ ಬರಬಾರದು ಎಂದು ಧ್ರುವ ಸರ್ಜಾ ಹೇಳಿದ್ದಾರೆ. ಹೀಗೆ ಹೇಳುದಕ್ಕೂ ಕಾರಣವಿದ್ದು, ಮೇಘನಾ ರಾಜ್ ಅವರು ರಾಯನ್ ಜೊತೆಗೆ ಚಿರು ಸಮಾಧಿ ಬಳಿ ಬಂದು ಚಿರುವನ್ನು ನೆನೆದು ಕಣ್ಣೀರು ಹಾಕುತ್ತಾರೆ. ಪದೇ ಪದೇ ಚಿರು ಸಮಾಧಿಗೆ ಬಂದು ನೋವು ಪಡುವ ಅತ್ತಿಗೆ ಮೇಘನಾ ರಾಜ್ ಅವರನ್ನು ನೋಡಿದ ಧ್ರುವ ಸರ್ಜಾ ಅವರು ಸಮಾಧಾನ ಮಾತನ್ನು ಹೇಳಿದ್ದಾರೆ. ನಿಜ ಅತ್ತಿಗೆ ನೀವು ಪದೇ ಪದೇ ಅಣ್ಣನ ಸಮಾಧಿ ಬಳಿ ಬಂದರೆ ನಿಮಗೆ ಹಳೆಯ ನೆನಪುಗಳು ನಿಮಗೆ ಮಾರುಕಲಿಸುತ್ತದೆ. ಮತ್ತೆ ದುಃಖ್ಖ ಹೆಚ್ಚಾಗುತ್ತದೆ, ಹೆಚ್ಚು ದುಃಖ್ಖವಾದರೆ ನಿಮ್ಮ ಅರೋಗ್ಯ ಮೇಲೆ ಪರಿಣಾಮ ಬಿರುತ್ತದೆ.
ಹಾಗಾಗಿ ನೀವು ಸಮಾಧಿ ಬಳಿ ಹೆಚ್ಚಾಗಿ ಬರಬೇಡಿ. ನಿಮ್ಮ ಅಳು ರಾಯನ್ ಮೇಲೆ ಕೂಡ ಪ್ರಭಾವ ಬೀರಬಹುದು. ಹಾಗಾಗಿ ಹಬ್ಬಗಳು ಇದ್ದಾಗ ಅಥವಾ ಚಿರು ಪುಣ್ಯ ದಿನವಿದ್ದಾಗ ಅಣ್ಣನಿಗೆ ಪೂಜೆ ಸಲ್ಲಿಸಿ ಎಂದು ಸಮಾಧಾನದ ಮಾತುಗಳನ್ನು ಹೇಳಿದ್ದಾರೆ ಧ್ರುವ ಸರ್ಜಾ. ಎಷ್ಟಾದರೂ ಒಡಹುಟ್ಟಿದ ಅಣ್ಣ, ಪ್ರೀತಿಯಿಂದ ಮದುವೆ ಆದ ಗಂಡ ಈ ಎರಡು ಜೀವಕ್ಕೂ ನೋವಾಗಬಾರದು ಎಂದು ದೇವರಲ್ಲಿ ಪ್ರಾರ್ಥಿಸೋಣ.