ಜಗ್ಗೇಶ್ ಅವರ ಆರಾಧ್ಯ ದೇವರು ಅಣ್ಣಾವ್ರು ನ್ನು ನೋಡಲು ಹೋದಾಗ ಜಗ್ಗೇಶ್ ಅವರನ್ನು ಮನೆಯ ಗೇಟ್ ಒಳಕ್ಕೂ ಬಿಟ್ಟಿರಲಿಲ್ಲ ಯಾಕೆ ಗೊತ್ತೇ.? ನೋಡಿ

ಸುದ್ದಿ

ನಮಸ್ತೆ ಪ್ರೀತಿಯ ವೀಕ್ಷಕರೆ, 40ದಶಕದಲ್ಲಿ ಸಿನೆಮಾರಂಗದಲ್ಲಿ ಏನಾದರು ಸಾಧನೆ ಮಾಡಬೇಕು ಎಂದು ಮದ್ರಾಸ್ ಟ್ರೈನ್ ಹತ್ತಿ ಬಂದರು. ಆ ಯುವಕನ ಆಸೆ ಕೇವಲ ಸಿನೆಮಾ ರಂಗಕ್ಕೆ ಸೇರುವ ಬಯಕೆಯ ಜೊತೆಗೆ ಡಾ. ರಾಜ್ ಕುಮಾರ್ ಅವರನ್ನು ನೋಡಲು ಹಾಗೂ ಅವರನ್ನು ಭೇಟಿಮಾಡಿ ಅವರ ಆಶೀರ್ವಾದ ಪಡೆದುಕೊಳ್ಳಬೇಕು ಎಂದು ಅತೀ ದೊಡ್ಡ ಆಸೆ. ಮದ್ರಾಸ್ ಗೆ ಹೋಗಬೇಕು ಎಂದು ತೀರ್ಮಾನಿಸಿದ ಮೇಲೆ ಹೇಗೋ ಡಾ. ರಾಜ್ ಕುಮಾರ್ ಅವರ ಮನೆಯ ವಿಳಾಸವನ್ನು ಪಡೆದುಕೊಳ್ಳುತ್ತಾರೆ.

ರಾಜ್ ಕುಮಾರ್ ಅವರನ್ನು ಅಂದು ಭೇಟಿ ಮಾಡಿ ಆಶೀರ್ವಾದ ಪಡೆಯಬೇಕು ಎಂದು ಮದ್ರಾಸ್ ಗೆ ಹೋಗಿದ್ದ ನಟ ಬೇರೆ ಯಾರು ಅಲ್ಲ ಅದುವೇ ಈಗಿನ ನಮ್ಮ ನಿಮ್ಮೆಲ್ಲರ ನೆಚ್ಚಿನ ನವರಸ ನಾಯಕ ಜಗ್ಗೇಶ್. ರಾಜ್ ಕುಮಾರ್ ಅವರನ್ನು ಭೇಟಿಯಾಗಲು ಜಗ್ಗೇಶ್ ಅವರು ಅವರ ಮನೆಯ ಹತ್ತಿರ ಹೋದಾಗ ಎಷ್ಟೋ ಹೊತ್ತು ಕಳೆದರೂ ಅವರು ಕಾಣಲು ಸಿಗುವುದೇ ಇಲ್ಲ ಆಗ ಜಗ್ಗೇಶ್ ಅವರಿಗೆ ನಾನು ಹುಡುಕಿಕೊಂಡು ಬಂದ ಮನೆ ಇದೇ ಹೌದ ಅಲ್ಲವಾ ಎಂದು ಅನುಮಾನ ಶುರುವಾಗುತ್ತದೆ. ಆಗ ರಾಜ್ ಕುಮಾರ್ ಅವರು ಮನೆಯಿಂದ ಹೊರಗೆ ಬರುವ ದೃಶ್ಯ ಜಗ್ಗೇಶ್ ಅವರಿಗೆ ಕಾಣುತ್ತದೆ.

ಅಣ್ಣಾವ್ರು ತುಳಿಸಿ ಗಿಡಕ್ಕೆ ಪೂಜೆಯನ್ನು ಮಾಡಿದ ನಂತರ ಮನೆಯ ಬಳಿ ನಿಂತಿದ್ದ ಜಗ್ಗೇಶ್ ಅವರನ್ನು ನೋಡಿ ಹಾಗೆ ಮನೆ ಒಳಗೆ ಹೋಗಿ ಅಲ್ಲಿ ನಿಂತಿರುವ ವ್ಯಕ್ತಿ ಯಾರು ಎಂದು ವಿಚಾರಿಸಲು ಹೇಳುತ್ತಾರೆ. ಆಗ ಮನೆಯಿಂದ ಒಬ್ಬ ವ್ಯಕ್ತಿ ಬಂದು ಜಗ್ಗೇಶ್ ಅವರನ್ನು ನೀನು ಯಾರು ಯಾಕೆ ಬಂದಿದ್ದೀರಾ ಯಾರನ್ನ ಭೇಟಿಯಾಗಬೇಕಿತ್ತು ಎಂದು ಕೇಳುತ್ತಾರೆ.

ಅವರು ಕೇಳಿದ ಪ್ರೆಶ್ನೆಗಳಿಗೆ ಉತ್ತರಿಸಿದ ಜಗ್ಗೇಶ್ ಅವರು ತಾನು ಬೆಂಗಳೂರಿನಿಂದ ಬಂದಿರೋದಗಿ ಹಾಗೂ ಸಿನೆಮಾದಲ್ಲಿ ನಟಿಸಬೇಕು ಎಂಬ ಆಸೆಯನ್ನು ಇಟ್ಟುಕೊಂಡಿದ್ದೇನೆ ಆದ್ದರಿಂದ ಸಿನೆಮಾದಲ್ಲಿ ನಟಿಸುವುದಕ್ಕೆ ನಿಮ್ಮ ಆಶಿರ್ವಾದವನ್ನು ಪಡೆದುಕೊಳ್ಳಬೇಕು ಅದಕ್ಕಾಗಿ ಬೆಂಗಳೂರಿನಿಂದ ಇಲ್ಲಿಗೆ ಬಂದಿದ್ದೇನೆ ಎಂದು ಹೇಳುತ್ತಾರೆ. ಈ ವಿಷಯವನ್ನು ಆಲಿಸಿದ ಅಣ್ಣಾವ್ರು ಜಗ್ಗೇಶ್ ಅವರನ್ನು ಒಳಗೆ ಕರೆದು ಕೂರಿಸಿ ಮಾತನಾಡಿಸಿ ಸಿನೆಮಾದಲ್ಲಿ ನಟಿಸಬೇಕೆಂದರೆ ಏನು ಮಾಡಬೇಕು ಎಂದು ಕೆಲವೊಂದು ಸಲಹೆಗಳನ್ನು ಜಗ್ಗೇಶ್ ಅವರಿಗೆ ಅಣ್ಣಾವ್ರು ನೀಡುತ್ತಾರೆ.

ರಾಜ್ ಕುಮಾರ್ ಅವರು ನೀಡಿದ ಸಲಹೆಗಳನ್ನು ಪಡೆದುಕೊಂಡು ಜಗ್ಗೇಶ್ ಅವರು ಮದ್ರಾಸ್ ಇಂದ ಬೆಂಗಳೂರಿಗೆ ಬಂದು ಅವರು ಅಣ್ಣಾವ್ರು ಹೇಳಿದ ಹಾಗೆ ಮಾಡುತ್ತಾರೆ. ಹಾಗೂ ಸಿನೆಮಾ ರಂಗದಲ್ಲಿ ಹಂತ ಹಂತವಾಗಿ ಬೆಳೆಯುತ್ತಾರೆ. ಇಂದು ಸಾಕಷ್ಟು ಸೂಪರ್ ಹಿಟ್ ಸಿನೆಮಾಗಳನ್ನು ನೀಡಿ ಅದ್ಭುತನಟನಾಗಿ ಗುರುತಿಸಿಕೊಂಡಿದ್ದಾರೆ. ಅದಕ್ಕೆ ಹೇಳುವುದು ಬಣ್ಣದ ಲೋಕದಲ್ಲಿ ಏನು ಬೇಕಾದರು ಆಗುತ್ತದೆ ಆದರೆ ತಾಳ್ಮೆ ನಿಮ್ಮ ಪರಿಶ್ರಮ ಅತೀ ಮುಖ್ಯ ಎಂದು. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.


Leave a Reply

Your email address will not be published. Required fields are marked *