ಜನುಮದ ಜೋಡಿ ಖ್ಯಾತಿಯ ನಟಿ ಶಿಲ್ಪ ಈಗ ಹೇಗಿದ್ದಾರೆ ಗೊತ್ತಾ; ಅವರ ಪರಿಸ್ಥಿತಿ ನೋಡಿದರೆ ನೀವು ಕೂಡ ಕಣ್ಣೀರು ಹಾಕುತ್ತೀರ..!?

ಸುದ್ದಿ

ಇದುವರೆಗೂ ನಮ್ಮ ಕನ್ನಡ ಚಿತ್ರರಂಗದಲ್ಲಿ ಕೆಲವು ವರ್ಷಗಳ ಹಿಂದೆ ಹೋದರೆ ನಾಯಕ ನಟಿಯರ ನಾಗಿ ಪರಭಾಷಾ ನಟಿಯರನ್ನು ಕರೆತರಲಾಗುತ್ತಿತ್ತು. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಶಿವಣ್ಣನವರ ಸಿನಿಮಾ ಜೀವನದಲ್ಲಿ ಎವರ್ಗ್ರೀನ್ ಸೂಪರ್ ಹಿಟ್ ಸಿನಿಮಾಗಳಲ್ಲಿ ಜನುಮದ ಜೋಡಿ ಸಿನಿಮಾ ಕೂಡ ಒಂದು. ಈ ಸಿನಿಮಾದಲ್ಲಿ ಕರುನಾಡ ಚಕ್ರವರ್ತಿ ಶಿವಣ್ಣನವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದು ನಟಿ ಶಿಲ್ಪ. ಇನ್ನು ನಿಮಗೆಲ್ಲರಿಗೂ ಗೊತ್ತಿದೆಯೋ ಇಲ್ಲವೋ ಗೊತ್ತಿಲ್ಲ ನಟಿ ಶಿಲ್ಪ ರವರು ಮೂಲತಹ ಮಲಯಾಳಂ ಅವರು. ಆದರೂ ಕೂಡ ಕನ್ನಡ ಪ್ರೇಕ್ಷಕರು ಅವರನ್ನು ತಮ್ಮ ಸ್ವಂತ ಮನೆಮಗಳಂತೆ ಒಪ್ಪಿಕೊಳ್ಳುತ್ತಾರೆ.

ನಾಗಾಭರಣ ನಿರ್ದೇಶನದಲ್ಲಿ ಮೂಡಿಬಂದಿರುವ ಕರುನಾಡ ಚಕ್ರವರ್ತಿ ಶಿವಣ್ಣ ಹಾಗೂ ಶಿಲ್ಪ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಜನುಮದ ಜೋಡಿ ಸಿನಿಮಾ ಬರೋಬ್ಬರಿ ಚಿತ್ರಮಂದಿರಗಳಲ್ಲಿ ಐದುನೂರು ದಿನಗಳಿಗೂ ಅಧಿಕ ಕಾಲ ಪ್ರದರ್ಶನ ಕಂಡಿತ್ತು. ಈ ಮೂಲಕ ಜನುಮದ ಜೋಡಿ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ದಾಖಲೆಯನ್ನು ನಿರ್ಮಿಸಿತ್ತು. ಈ ಮೂಲಕ ನಟಿ ಶಿಲ್ಪಾ ಅವರಿಗೆ ಕನ್ನಡ ಚಿತ್ರರಂಗದಲ್ಲಿ ಒಂದೊಳ್ಳೆ ಜನ ಮನ್ನಣೆ ಸಿಗುತ್ತದೆ ಎಂದರೆ ಕಂಡಿತವಾಗಿ ತಪ್ಪಾಗಲ್ಲ. ಈ ಮೂಲಕ ಮೊದಲ ಚಿತ್ರದಲ್ಲೇ ಕರ್ನಾಟಕ ರಾಜ್ಯ ಪ್ರಶಸ್ತಿಯನ್ನು ಕೂಡ ಅವರು ಪಡೆದುಕೊಳ್ಳುತ್ತಾರೆ. ಜನುಮದ ಜೋಡಿ ಸಿನಿಮಾದ ನಂತರ ಶಿಲ್ಪ ರವರಿಗೆ ಒಂದಾದಮೇಲೊಂದರಂತೆ ಸಿನಿಮಾಗಳ ಅವಕಾಶ ಬರುತ್ತದೆ.

ಮುಂಗಾರಿನ ಮಿಂಚು ಭೂಮಿತಾಯಿಯ ಚೊಚ್ಚಲ ಮಗ ಹೀಗೆ ಹಲವಾರು ಸಿನಿಮಾಗಳಲ್ಲಿ ನಟಿ ಶಿಲ್ಪ ರವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡು ಜನರ ಮನಸ್ಸನ್ನು ತಮ್ಮ ನಟನೆಯ ಮೂಲಕ ಗೆಲ್ಲುವುದರಲ್ಲಿ ಯಶಸ್ವಿಯಾಗುತ್ತಾರೆ. ಕನ್ನಡ ಮಾತ್ರವಲ್ಲದೆ ತಮಿಳು ತೆಲುಗು ಮಲಯಾಳಂ ಹೀಗೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ನಟಿಸುವ ಮೂಲಕ ತಮ್ಮದೇ ಆದಂತಹ ಅಭಿಮಾನಿ ಬಳಗವನ್ನು ಕೂಡ ಹೊಂದಿರುತ್ತಾರೆ. ಚಿತ್ರರಂಗದಲ್ಲಿ ಇಷ್ಟೆಲ್ಲಾ ಸಾಧನೆಯನ್ನು ಮಾಡಿರುವ ಶಿಲ್ಪಾ ಅವರು ಈಗ ಹೇಗಿರಬಹುದು ಹಾಗೂ ಅವರ ವೈಯಕ್ತಿಕ ಜೀವನದ ಕುರಿತಂತೆ ತಿಳಿಯುವಂತಹ ಕುತೂಹಲ ನಿಮ್ಮಲ್ಲಿ ಇರುತ್ತದೆ. ಈ ಕುರಿತಂತೆ ಸಂಪೂರ್ಣವಾಗಿ ತಿಳಿಯೋಣ ಬನ್ನಿ.

ನಟಿ ಶಿಲ್ಪ ರವರು ನಿರ್ದೇಶಕ ರಂಜಿತ ರವರನ್ನು ಮದುವೆಯಾಗುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ. ಅವಂತಿಕ ಎನ್ನುವ ಹೆಣ್ಣು ಮಗುವಿನ ತಾಯಿ ಕೂಡ ಆಗುತ್ತಾರೆ. ತಮ್ಮ ಪತಿ ನಿರ್ದೇಶಿಸಿರುವ ಸಿನಿಮಾಗಳಲ್ಲಿ ಕೂಡ ಹಲವಾರು ಬಾರಿ ನಟಿಸಿದ್ದಾರೆ. ಮದುವೆ ನಂತರ ಹಲವಾರು ಸಿನಿಮಾಗಳನ್ನು ನಿರ್ಮಾಣ ಕೂಡ ಮಾಡಿದ್ದಾರೆ. ಆದರೆ ಈ ನಿರ್ಮಾಣಕಾರ್ಯದಲ್ಲಿ ಹಣವನ್ನು ಕಳೆದುಕೊಂಡು ಆರ್ಥಿಕವಾಗಿ ಕೂಡ ಕೆಳಮಟ್ಟಕ್ಕೆ ಇಳಿಯುತ್ತಾರೆ. ನಂತರ ಸತತವಾಗಿ ಧಾರಾವಾಹಿಗಳಲ್ಲಿ ನಟಿಸಿ ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಂಡ ನಂತರ ಮತ್ತೆ ಧಾರವಾಹಿ ನಿರ್ಮಾಣಕ್ಕೆ ಕೈ ಹಾಕುತ್ತಾರೆ.

ಸದ್ಯಕ್ಕೆ ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಧಾರವಾಹಿ ನಿರ್ಮಾಣವನ್ನು ಮಾಡುತ್ತಿದ್ದಾರೆ. ತಾವು ಧಾರವಾಹಿ ಮನೆ ನಿರ್ಮಾಣ ಮಾಡುವಾಗ ಶಿಲ್ಪಾ ರವರು ಕೆಳಮಟ್ಟದ ಕೆಲಸಗಾರ ನಿಂದ ಹಿಡಿದು ಎಲ್ಲರನ್ನೂ ಕೂಡ ಸಮಾನ ದೃಷ್ಟಿಯಲ್ಲಿ ಕಾಣುತ್ತಾರೆ ಇದು ಅವರನ್ನು ಎಲ್ಲರಿಂದ ಗೌರವಕ್ಕೆ ಪಾತ್ರರಾಗುವಂತೆ ಮಾಡುತ್ತದೆ. ಮತ್ತೊಮ್ಮೆ ಶಿಲ್ಪ ರವರು ದೊಡ್ಡ ಪರದೆ ಮೇಲೆ ಅದರಲ್ಲೂ ಕೂಡ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಬೇಕು ಎನ್ನುವುದಾಗಿ ಅಭಿಮಾನಿಗಳು ಇಷ್ಟಪಡುತ್ತಾರೆ.


Leave a Reply

Your email address will not be published. Required fields are marked *