ನಟ ಪುನೀತ್ ರಾಜ್ ಕುಮಾರ್ ಅವರು ಹುಟ್ಟಿನಿಂದಲೂ ಅವರ ಬಗ್ಗೆ ಇಡೀ ಪ್ರಪಂಚಕ್ಕೆ ಗೊತ್ತು. ಏಕೆಂದರೆ ಅವರು ದೊಡ್ಮನೆ ಕುಟುಂಬದ ಕೂಡಿ ಎಂದು. ಈಗಾಗಲೇ ಸಿನೆಮಾದಲ್ಲಿ ಅವರು 44 ವರ್ಷಗಳನ್ನು ಪೂರೈಸಿದ್ದಾರೆ. ಹಲವಾರು ಹಿಟ್ ಸಿನೆಮಾಗಳನ್ನು ನೀಡಿದ್ದಾರೆ ಅಪ್ಪು. ಆದರೆ ಅವರ ಹೆಣ್ಣುಮಕ್ಕಳ ಬಗ್ಗೆ ಕೆಲವರಿಗೆ ಗೊತ್ತಿರಲಿಕ್ಕಿಲ್ಲ. ಏಕೆಂದರೆ ಅವರು ವಿಶೇಷವಾಗಿ ಎಲ್ಲಿಯೂ ಕಾಣಿಸಿಕೊಳ್ಳುವುದಿಲ್ಲ. ಕನ್ನಡಸಿನಿ ಕ್ಷೇತ್ರದ ಒನ್ ಅಂಡ್ ಓನ್ಲಿ ಪವರ್ ಸ್ಟಾರ್ ಅಂದ್ರೆ ಪುನೀತ್ ರಾಜ್ ಕುಮಾರ್.
1999ರಲ್ಲಿ ಅಶ್ವಿನಿ ಹಾಗೂ ಪುನೀತ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಪುನೀತ್ ರಾಜ್ ಕುಮಾರ್ ಹಾಗೂ ಅಶ್ವಿನಿ ಅವರದ್ದು ಪ್ರೇಮ ವಿವಾಹ. ಇಬ್ಬರೂ ಪ್ರೀತಿಸಿ ಮದುವೆ ಆಗಿದ್ದರು. ಪುನೀತ್ ಗೆ ಪತ್ನಿ ಮೇಲೆ ಅಪಾರ ಪ್ರೀತಿ ಇತ್ತು. ಆದರೆ, ಈಗ ಪತ್ನಿಯನ್ನು ಬಿಟ್ಟು ಅವರು ಬಾರದ ಲೋಕಕ್ಕೆ ತೆರಳಿದ್ದಾರೆ. ಇಡೀ ಕುಟುಂಬಕ್ಕೆ ಈ ದುಃಖ್ಖವನ್ನು ಸಹಿಸಿಕೊಳ್ಳೊಕೆ ಆಗುತ್ತಿಲ್ಲ. ಪುನೀತ್ ಪಕ್ಕ ಫ್ಯಾಮಿಲಿ ಮ್ಯಾನ್. ಅಶ್ವಿನಿ ಬಗ್ಗೆ ಅವರು ಎಷ್ಟು ಪ್ರೀತಿ ಇಟ್ಟುಕೊಂದಿದ್ದರು ಎಂಬುದು ಸಾಕಷ್ಟು ಬಾರಿ ಸಾಬೀತಾಗಿತ್ತು.
ಈ ಜೋಡಿಗೆ ಇಬ್ಬರು ಪವರ್ ಫುಲ್ ಹೆಣ್ಣು ಮಕ್ಕಳಿದ್ದಾರೆ ದೃತಿ ಹಾಗೂ ವಂದಿತಾ. ಪುನೀತ್ ರಾಜ್ ಕುಮಾರ್ ಅವರು ಸಾಕಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡಿದ ರೀತಿಯಲ್ಲಿ ಅವರ ಹಿರಿಯ ಮಗಳು ದೃತಿ ಕೂಡ ತಂದೆಯ ಹಾದಿಯಲ್ಲೇ ಸಾಗುತ್ತಿದ್ದಾರೆ ಅದೂ ಇಷ್ಟು ಚಿಕ್ಕ ವಯಸ್ಸಿನಲ್ಲಿ. ಕಳೆದ ವರ್ಷವಷ್ಟೇ ನೇತ್ರದಾನದ ವಿಚಾರವಾಗಿ ರೋಟರಿ ಕ್ಲಬ್ ಗೆ ಪುನೀತ್ ರಾಜ್ ಕುಮಾರ್ ಅವರ ಹಿರಿಯ ಮಗಳು ಧೃತಿ ಬೆಂಬಲ ನೀಡಿದ್ದಾರೆ.
ವಿದೇಶದಲ್ಲಿ ದೊಡ್ಡ ಮಗಳು ಧೃತಿ ಓದುತ್ತಿದ್ದರೂ ಕೂಡ ತನ್ನ ಸ್ವಂತ ಹಣದಿಂದ ವ್ಯಾಸಂಗ ಮಾಡುತ್ತಿದ್ದಾರೆ ಎಂದರೆ ನಿಮಗೂ ಆಶ್ಚರ್ಯವಾಗಬಹುದು. ವಿದೇಶದಲ್ಲಿ ಸ್ಕೋಲರ್ ಶಿಪ್ ಪಡೆಯುವುದು ತುಂಬಾ ದೊಡ್ಡ ವಿಷಯವಾಗಿದ್ದು ಅಲ್ಲಿ ಅವರು ಶಾಲಾ ಕಾಲೇಜುಗಳಲ್ಲಿ 85 ರಿಂದ 90 ಪರ್ಸೆಂಟ್ ಪಡೆದರೂ ಕೂಡ ಮತ್ತೊಂದು ಪರೀಕ್ಷೆಯನ್ನು ನಡೆಸಿ ಅದರಲ್ಲಿ 95% ಗಿಂತ ಅಧಿಕ ಇದ್ದಾರೆ ಮಾತ್ರ ಸ್ಕಲಾರ್ ಶಿಪ್ ಪಡೆದುಕೊಳ್ಳುತ್ತಾರೆ.
ಹೀಗೆ ವಿದ್ಯಾರ್ಥಿಗಳು ಸ್ಕಾಲರ್ ಶಿಪ್ ಗಾಗಿ ಪರೀಕ್ಷೆ ಬರೆದರು ಅದರಲ್ಲಿ 500 ಮಾತ್ರ ಸ್ಕಾಲರ್ ಶಿಪ್ ಪಡೆದುಕೊಳ್ಳುವ ಯೋಗ ಇರುತ್ತದೆ. ಅಂತೆಯೇ ಧೃತಿ ಕೂಡ ತಾವು ಪಡೆದ ವಿದ್ಯಾಭ್ಯಾಸದ ಅಂಕಗಳ ಮೂಲಕ ತಮ್ಮ ಜ್ಞಾನದ ಮೂಲಕ ಸ್ಕಾಲರ್ ಶಿಪ್ ಪಡೆದು ಓದುತ್ತಿದ್ದು ಇದು ಹೆಮ್ಮೆಯ ವಿಷಯವೇ ಸರಿ. ಇಷ್ಟೆಲ್ಲ ಶ್ರೀಮಂತರಾದರೂ ತಮ್ಮ ಸ್ವ ಪ್ರತಿಭೆಯಿಂದ ವಿದ್ಯಾಭ್ಯಾಸ ಮುಂದುವರಿಸುವ ಧೃತಿ ನಿಜಕ್ಕೂ ಗ್ರೇಟ್. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.