ಜಿಮ್ ನಲ್ಲಿ ಮಸ್ತ್ ವರ್ಕೌಟ್ ಮಾಡಿ ಬೆವರಿಳಿಸಿದ ನಟಿ ಪ್ರಿಯಾಂಕಾ ಉಪೇಂದ್ರ ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದೇನು ಗೊತ್ತಾ? ಕಿಲಾಡಿ ನೆಟ್ಟಿಗರು ನೋಡಿ!!

ಸುದ್ದಿ

ಕನ್ನಡ ಚಿತ್ರರಂಗದಲ್ಲಿ ತಮ್ಮ ಸಹಕಲಾವಿದರನ್ನು ಮದುವೆಯಾಗಿರುವ ಅಂತಹ ಹಲವಾರು ನಟ ನಟಿಯರು ಇದ್ದಾರೆ. ಅವರಲ್ಲಿ ಪ್ರಮುಖವಾಗಿ ಎಲ್ಲರೂ ಮೆಚ್ಚುವಂತಹ ಜೋಡಿ ಎಂದರೆ ಅದು ಉಪೇಂದ್ರ ಹಾಗೂ ಪ್ರಿಯಾಂಕಾ ಉಪೇಂದ್ರ ಎಂದರೆ ಖಂಡಿತವಾಗಿ ತಪ್ಪಾಗಲಾರದು. ರಿಯಲ್ ಸ್ಟಾರ್ ಉಪೇಂದ್ರ ರವರ ಬಗ್ಗೆ ಮಾತನಾಡುವುದಾದರೆ ಇಡೀ ಭಾರತ ಚಿತ್ರರಂಗ ಕಂಡಂತಹ ಅತ್ಯಂತ ಉತ್ಕೃಷ್ಟ ನಿರ್ದೇಶಕರಲ್ಲಿ ಒಬ್ಬರಾದ ಕಾಣಿಸಿಕೊಳ್ಳುತ್ತಾರೆ.

ಕನ್ನಡ ಚಿತ್ರರಂಗದಲ್ಲಿ ಆರಂಭದಲ್ಲಿ ಅವರ ಸಂಬಂಧಿ ಹಾಗೂ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಹಾಗೂ ನಟ ಆಗಿರುವ ಕಾಶಿನಾಥ್ ರವರ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಾರೆ. ನಂತರ ತಾವೇ ನಿರ್ದೇಶಕರಾಗಿ ಕನ್ನಡ ಚಿತ್ರರಂಗದಲ್ಲಿ ಕಾಲಿಡುತ್ತಾರೆ. ಕರುನಾಡ ಚಕ್ರವರ್ತಿ ಶಿವಣ್ಣ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಕಾಂಬಿನೇಷನ್ನಲ್ಲಿ ಮೂಡಿ ಬಂದಿರುವಂತಹ ಓಂ ಚಿತ್ರ ಯಾವ ಮಟ್ಟಿಗೆ ಹವಾ ಕ್ರಿಯೆಟ್ ಮಾಡಿದೆ ಎಂಬುದು ನಿಮಗೆಲ್ಲಾ ಗೊತ್ತಿದೆ. ಕನ್ನಡದಲ್ಲಿ ದಾಖಲೆಯ ಬಾಕ್ಸಾಫೀಸ್ ಕಲೆಕ್ಷನ್ ಮಾಡಿದ್ದು ಮಾತ್ರವಲ್ಲದೆ ಹಲವಾರು ಭಾಷೆಗಳಿಗೆ ಕೂಡ ರೀಮೇಕ್ ಆಗಿದೆ.

ಈ ಚಿತ್ರದ ಮೂಲಕ ನಾಯಕನಾಗಿ ಕೂಡ ಹಾಗೂ ನಿರ್ದೇಶಕನಾಗಿ ಕೂಡ ಕನ್ನಡ ಚಿತ್ರರಂಗಕ್ಕೆ ತಮ್ಮ ನಿಜವಾದ ಸಾಮರ್ಥ್ಯವನ್ನು ಸಾಬೀತು ಪಡಿಸುತ್ತಾರೆ. ಇದಾದ ನಂತರ ರಿಯಲ್ ಸ್ಟಾರ್ ಉಪೇಂದ್ರ ರವರು ಚಿತ್ರರಂಗದಲ್ಲಿ ಹಿಂದಿರುಗಿ ನೋಡಿದ್ದೇ ಇಲ್ಲ. ಉಪೇಂದ್ರರವರು ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ ಎಂದರೆ ಅದರಲ್ಲಿ ಖಂಡಿತವಾಗಿ ಏನಾದರೂ ಒಂದು ಅಂಶ ಇದ್ದೇ ಇರುತ್ತದೆ ಎಂಬುದಾಗಿ ಪ್ರೇಕ್ಷಕರು ನಂಬಿಕೆ.
ಉಪೇಂದ್ರರವರ ಸಿನಿಮಾ ದಷ್ಟು ವಿಶೇಷತೆ ಯಾವ ಚಿತ್ರಗಳಲ್ಲೂ ಕೂಡ ಇರುವುದಿಲ್ಲ ಎನ್ನುವುದಾಗಿ ಅವರ ಭಾವನೆಯಾಗಿದೆ. ಇನ್ನು ಕೇವಲ ಕನ್ನಡದಲ್ಲಿ ಮಾತ್ರವಲ್ಲ ರಿಯಲ್ ಸ್ಟಾರ್ ಉಪೇಂದ್ರ ಅವರ ಜನಪ್ರಿಯತೆಯನ್ನು ವುದು ತೆಲುಗು ಚಿತ್ರರಂಗದಲ್ಲಿ ಕೂಡ ಹೆಚ್ಚಾಗಿದೆ. ತೆಲುಗು ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಕನ್ನಡ ನಟ ಯಾರು ಎಂದು ಕೇಳಿದರೆ ಅದಕ್ಕೆ ಮೊದಲನೇದಾಗಿ ಕೇಳಿ ಬರುವ ಹೆಸರು ಎಂದರೇ ಅದು ಖಂಡಿತವಾಗಿ ರಿಯಲ್ ಸ್ಟಾರ್ ಉಪೇಂದ್ರ. ಈಗಾಗಲೇ ಹಲವಾರು ಸಿನಿಮಾಗಳಿಂದ ಇಡೀ ಭಾರತೀಯ ಚಿತ್ರರಂಗದ ಹಲವಾರು ಖ್ಯಾತನಾಮ ನಿರ್ದೇಶಕರಿಗೂ ಕೂಡ ಸ್ಪೂರ್ತಿಯಾಗಿದ್ದಾರೆ ನಮ್ಮ ನೆಚ್ಚಿನ ಹೆಮ್ಮೆಯ ಕನ್ನಡಿಗ ರಿಯಲ್ ಸ್ಟಾರ್ ಉಪೇಂದ್ರ ರವರು.

ಈಗ ನಾವು ಮಾತನಾಡಲು ಹೋಗುತ್ತಿರುವುದು ರಿಯಲ್ ಸ್ಟಾರ್ ಉಪೇಂದ್ರ ರವರ ವೈವಾಹಿಕ ಜೀವನದ ಕುರಿತಂತೆ. ಬಂಗಾಳಿ ಮೂಲದ ಪ್ರಿಯಾಂಕಾ ಉಪೇಂದ್ರ ರವರನ್ನು ರಿಯಲ್ ಸ್ಟಾರ್ ಉಪೇಂದ್ರ ರವರು 2003 ರಲ್ಲಿ ಮದುವೆಯಾಗುತ್ತಾರೆ. ಇನ್ನು ಇವರಿಬ್ಬರು ಒಟ್ಟಾಗಿ ನಟಿಸಿರುವ ಹೆಚ್ 2 0 ಚಿತ್ರದ ಕುರಿತಂತೆ ನಿಮಗೆಲ್ಲರಿಗೂ ಗೊತ್ತೇ ಇದೆ.

ನಟಿ ಪ್ರಿಯಾಂಕ ಈ ರಂಗು ರಂಗಿನ ರಂಗೀನ್​ ದುನಿಯಾದಲ್ಲಿ ಎಲ್ಲವೂ ಗ್ಲಾಮರಸ್​. ಇಲ್ಲಿ ಒಮ್ಮೆ ನಾಯಕಿಯಾಗಿ ಮೆರೆದವರು… ನಾಯಕಿಯಾಗಿರುವವರು… ಸದಾ ತಮ್ಮ ಫಿಟ್​ನೆಸ್​ ಕಾಯ್ದುಕೊಳ್ಳಲು ಸಿಕ್ಕಾಪಟ್ಟೆ ಕಸರತ್ತು ಮಾಡುತ್ತಾರೆ. ಅದರಲ್ಲೂ ಸಿನಿಮಾಗಳಲ್ಲಿ ಮಾಡುವ ಪಾತ್ರಗಳ ವಿಷಯಕ್ಕೆ ಬಂದಾಗ ಹಗಲಿರುಳೆನ್ನದೆ ಕಷ್ಟ ಪಡುತ್ತಾರೆ.

ಹೌದು, ಪ್ರಿಯಾಂಕಾ ಈಗ ಜಿಮ್ ಮೆಟ್ಟಿಲೇರಿದ್ದು, ಅಲ್ಲಿ ನಿತ್ಯ ಬೆವರಿಳಿಸುತ್ತಿದ್ದಾರೆ. ಅದು ಕೂಡ ಅವರ ಹೊಸ ಸಿನಿಮಾಗಾಗಿ. ಫಿಡ್ನೆಸ್​ಗಾಗಿ ವ್ಯಾಯಮ ಮಾಡುತ್ತಿದ್ದ ಪ್ರಿಯಾಂಕಾ ಈಗ ಪರ್ಸನಲ್​ ಟ್ರೈನರ್​ ಜತೆ ನಿತ್ಯ ಗಂಟೆಗಟ್ಟಲೆ ಜಿಮ್​ನಲ್ಲಿ ಬೆವರಿಳಿಸುತ್ತಿದ್ದಾರೆ.

 

View this post on Instagram

 

A post shared by mysore.anthamas (@mysore.anthamas)

ಹೌದು, ಪ್ರಿಯಾಂಕಾ ಈಗ ಜಿಮ್ ಮೆಟ್ಟಿಲೇರಿದ್ದು, ಅಲ್ಲಿ ನಿತ್ಯ ಬೆವರಿಳಿಸುತ್ತಿದ್ದಾರೆ. ಅದು ಕೂಡ ಅವರ ಹೊಸ ಸಿನಿಮಾಗಾಗಿ. ಫಿಡ್ನೆಸ್​ಗಾಗಿ ವ್ಯಾಯಮ ಮಾಡುತ್ತಿದ್ದ ಪ್ರಿಯಾಂಕಾ ಈಗ ಪರ್ಸನಲ್​ ಟ್ರೈನರ್​ ಜತೆ ನಿತ್ಯ ಗಂಟೆಗಟ್ಟಲೆ ಜಿಮ್​ನಲ್ಲಿ ಬೆವರಿಳಿಸುತ್ತಿದ್ದಾರೆ. ಅವರು ತಮ್ಮ ಹೊಸ ಸಿನಿಮಾಗಾಗಿ ಪಡುತ್ತಿರುವ ಶ್ರಮಕ್ಕೆ ಅವರ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಲಾಗಿರುವ ವಿಡಿಯೋಗಳೇ ಸಾಕ್ಷಿ. ನೀವು ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ..


Leave a Reply

Your email address will not be published. Required fields are marked *