ಜೀವನದಲ್ಲಿ ನಾವು ನಂಬಿಕೊಂಡು ಬಂದಿರುವಂತಹ ದೊಡ್ಡ ಸುಳ್ಳುಗಳು ಯಾವುವು ಗೊತ್ತಾ??

News

ಚಿಕ್ಕವಯಸ್ಸಿನಿಂದಲೂ ಕೂಡ ನಾವು ಅದನ್ನು ಮಾಡಿದರೆ ಹಾಗಾಗುತ್ತದೆ ಇದನ್ನು ಮಾಡಿದರೆ ಹೀಗಾಗುತ್ತದೆ ಎನ್ನುವುದಾಗಿ ನಮ್ಮ ಹೆತ್ತವರಿಂದ ಹಾಗೂ ನಮ್ಮ ವಯಸ್ಸಿಗಿಂತ ದೊಡ್ಡವರಾದರು ಹೇಳುವ ಮಾತಿನಂತೆ ನಡೆದುಕೊಂಡು ಬರುತ್ತಿದ್ದೆವು. ಆದರೆ ಆ ತರಹದ ಹಲವಾರು ವಿಚಾರಗಳ ಹಿಂದೆ ಕೆಲವು ವೈಜ್ಞಾನಿಕ ಕಾರಣಗಳಿವೆ. ಅದರ ಕುರಿತಂತೆ ಇಂದಿನವರೆಗೂ ಕೂಡ ನಾವು ವಿಚಾರ ಮಾಡಿಲ್ಲ. ಹಾಗಿದ್ದರೆ ಅವುಗಳೇನು ಎಂಬುದನ್ನು ಮೊದಲು ತಿಳಿದುಕೊಳ್ಳೋಣ ಬನ್ನಿ.

ಬುದ್ದಿವಂತಿಕೆ ಹೆಚ್ಚಾಗಲು ಬಾದಾಮ್ ತಿನ್ನಿ ಬೆಂಡೆಕಾಯಿ ತಿನ್ನಿ ಎಂಬುದಾಗಿ ಕೆಲವರು ಸಲಹೆ ನೀಡುತ್ತಾರೆ. ಆದರೆ ಇದರಿಂದ ಬುದ್ಧಿ ಶಕ್ತಿ ಹೆಚ್ಚಾಗುತ್ತದೆ ಎನ್ನುವುದು ಸುಳ್ಳು. ಚಿಕ್ಕ ವಯಸ್ಸಿನಲ್ಲಿ ತಲೆಗೂದಲು ಒಳ್ಳೆಯದೇ ಮನೆ ಹೊರಗಡೆ ಹೋಗಬೇಡ ಸೀತ ವಾಗುತ್ತದೆ ಎಂಬುದಾಗಿ ಹೇಳುವುದನ್ನು ನೀವು ಕೇಳಿರುತ್ತೀರಿ. ಒದ್ದೆ ತಲೆಗೂದಲಿನಿಂದ ಇಂತಹ ಯಾವುದೇ ಕಾಯಿಲೆಗಳು ಬರುವುದಿಲ್ಲ ಬದಲಾಗಿ ರೋಗಾಣುಗಳಿಂದ ಬರುತ್ತದೆ. ಇನ್ನು ಹೆಚ್ಚಾಗಿ ಚಾಕಲೇಟ್ ಹಾಗೂ ಕರಿದ ತಿಂಡಿಗಳನ್ನು ತಿನ್ನಬಾರದು ಪಿಂಪಲ್ ಆಗುತ್ತದೆ ಎಂಬುದಾಗಿ ಹೇಳುತ್ತಾರೆ. ಆತರ ಆಗೋದು ಆಗಿದ್ರೆ ನಮ್ಮ ಪ್ರಪಂಚದ ಎಲ್ಲ ಜನರಿಗೂ ಕೂಡ ಆ ತರಹ ಪಿಂಪಲ್ ಆಗಬೇಕಾಗಿತ್ತು. ಸಿಂಪಲ್ ಆಗೋದು ನಮ್ಮ ದೇಹದಲ್ಲಿರುವ ಹಾರ್ಮೋನುಗಳ ಪ್ರಕ್ರಿಯೆಯಿಂದಾಗಿ ಹೊರತು ಚಾಕಲೇಟ್ ಅಥವಾ ಕರಿದ ತಿಂಡಿಗಳನ್ನು ತಿನ್ನುವುದರಿಂದಾಗಿ ಅಲ್ಲ.

ಮತ್ತೊಂದು ಮಾತಿದೆ ಮರಣಹೊಂದಿದಾಗ ದೇಹದ ಉಗುರು ಹಾಗೂ ಕೂದಲುಗಳು ಬೆಳೆಯುತ್ತವೆ ಎಂಬ ಮಾತುಗಳಿವೆ. ಇದು ಕೂಡ ಶುದ್ಧ ಸುಳ್ಳಾಗಿದೆ. ಕೆಲವು ದಿನಗಳ ಕಾಲ ಆ ದೇಹವನ್ನು ಹಾಗೆ ಇಟ್ಟರೆ ಅಲ್ಲಿ ನಡೆಯುವಂತಹ ಪ್ರಕ್ರಿಯೆಗಳಿಂದಾಗಿ ಬೆಳೆದಂತೆ ಕಾಣಿಸುತ್ತದೆ ಆದರೆ ಅದು ಬೆಳೆದಿರುವುದಿಲ್ಲ. ನಾವು ಚಿಕ್ಕವರಿಗೆ ಬೇಕಾದರೆ ಒಂದು ಮಾತನ್ನು ಎಲ್ಲರೂ ಕೂಡ ಹೇಳುತ್ತಿದ್ದರು. ಅದೇನೆಂದರೆ ಶೇವ್ ಮಾಡಿಕೊಂಡರೆ ಕೂದಲು ಬೇಗ ಬೆಳೆಯುತ್ತದೆ ಎಂಬುದಾಗಿ. ಇದು ಕೂಡ ಸುಳ್ಳು ಯಾಕೆಂದರೆ ಶೇವ್ ಮಾಡಿದರೆ ಕೂದಲು ಬೆಳೆಯುವ ಹಾಗಿದ್ದರೆ ಇಂದು ಬೋಳುತಲೆ ಅವರು ಇರುತ್ತಲೇ ಇರಲಿಲ್ಲ.

ಸೀನು ಬಂದಾಗ ಹೃದಯ ಬಡಿತ ನಿಲ್ಲುತ್ತದೆ ಎಂಬುದಾಗಿ ಹೇಳುತ್ತಾರೆ. ಹಾಗೆಲ್ಲ ಏನು ಇಲ್ಲ ಹೃದಯ ಬಡಿತ ನಿಲ್ಲುವುದು ಒಂದೇ ಒಂದು ಸಮಯದಲ್ಲಿ ಮಾತ್ರ ಅದು ಯಾವಾಗ ಎಂಬುದು ನಿಮಗೆ ಗೊತ್ತಿದೆ. ಆದರೆ ಹೃದಯ ಬಡಿತದಲ್ಲಿ ಸ್ವಲ್ಪ ಏರುಪೇರು ಆಗುವುದಂತೂ ನಿಜ. ಇನ್ನು ಕೆಲವೊಮ್ಮೆ ನೆಟ್ಟಿಗೆ ತೆಗೆಯುವುದರಿಂದ ಆಗಿ ಮೂಳೆಗಳಿಗೆ ಹಾನಿಯಾಗುತ್ತದೆ ಹಾಗೂ ಕೈ ಸೊಟ್ಟ ವಾಗುತ್ತದೆ ಎಂಬುದಾಗಿ ಹೇಳುತ್ತಾರೆ. ಇದು ಕೂಡ ಸುಳ್ಳು. ನೆಟ್ಟಿಗೆ ತೆಗೆಯುವುದರಿಂದಾಗಿ ಬೆರಳುಗಳ ಮೂಳೆಗಳ ನಡುವೆ ಇಲ್ಲೇ ಇರುವ ಬಬಲ್ ಗಳು ಸದ್ದು ಮಾಡುತ್ತವೆ ಅಷ್ಟೇ.

ಹೆಚ್ಚು ಟೆನ್ಷನ್ ಮಾಡಿಕೊಂಡರೆ ಕೂದಲು ಬಿಳಿಯಾಗುತ್ತದೆ ಎನ್ನುವ ಮಾತುಗಳನ್ನು ಕೂಡ ನೀವು ಕೇಳಿರುತ್ತೀರಿ. ಇದು ಕೂಡ ಸುಳ್ಳು ಕೂದಲು ಬಿಳಿಯಾಗುವುದು ದೈಹಿಕ ಬದಲಾವಣೆಗಳ ಕಾರಣವೇ ಹೊರತು ಟೆನ್ಶನ್ ಅಲ್ಲ. ನೀವು ಇದೊಂದು ಜನಪ್ರಿಯ ಮಾತುಗಳನ್ನು ನೀವು ಕೇಳಿರಬಹುದು. ಅದೇನೆಂದರೆ ದೈನಂದಿನ ವಾಗಿ ಸೇಬು ಹಣ್ಣು ತಿನ್ನುವುದರಿಂದ ಆಗಿ ಡಾಕ್ಟರನ್ನು ಅಂದರೆ ಕಾಯಿಲೆಗಳನ್ನು ದೂರವಿರಿಸಬಹುದು ಎನ್ನುವುದನ್ನು. ಸೇಬು ಆರೋಗ್ಯದ ದೃಷ್ಟಿಯಲ್ಲಿ ಒಳ್ಳೆಯ ಪೋಷಕಾಂಶವಿರುವ ಹಣ್ಣು ಹೌದು. ಆದರೆ ಇದನ್ನು ತಿಂದರೆ ರೋಗ ಬರುವುದಿಲ್ಲ ಎನ್ನುವುದು ನಿಜಕ್ಕೂ ಕೂಡ 100% ಸುಳ್ಳು.

ಬಿಪಿ ಹಾಗೂ ಶುಗರ್ ಮಾತುಗಳನ್ನು ಜೀವನದಲ್ಲಿ ಒಮ್ಮೆ ತಿಂದರೆ ಅದನ್ನು ಜೀವನಪರ್ಯಂತ ತಿನ್ನಬೇಕು ಎನ್ನುವುದು ಕೆಲವರು ಹೇಳುತ್ತಾರೆ. ಇದು ಕೂಡ ಸುಳ್ಳು ಇವುಗಳನ್ನು ನಾವು ಕಂಟ್ರೋಲ್ ಮಾಡಿದರೆ ಇವುಗಳ ಮಾತ್ರೆಯನ್ನು ತಿನ್ನುವುದನ್ನು ನಿಲ್ಲಿಸಬಹುದಾಗಿದೆ. ಇನ್ನು ಕೆಲವರು ಕಡಿಮೆ ಊಟ ಮಾಡಿದರೆ ತೂಕ ಕಡಿಮೆ ಆಗುತ್ತದೆ ಎನ್ನುವ ಕಾರಣಕ್ಕಾಗಿ ದಪ್ಪ ಇರುವವರು ಕಡಿಮೆ ಊಟ ಮಾಡಲು ಪ್ರಾರಂಭಿಸುತ್ತಾರೆ. ಕಡಿಮೆ ಊಟದಿಂದ ದಪ್ಪ ಕಡಿಮೆಯಾಗುವುದಿಲ್ಲ ನೀವು ಒಂದು ವೇಳೆ ಕಡಿಮೆ ಊಟವನ್ನು ಮಾಡಲು ಪ್ರಾರಂಭಿಸಿದರೆ ಗ್ಯಾಸ್ಟಿಕ್ ಸಮಸ್ಯೆಗಳನ್ನು ಎದುರಿಸುತ್ತೀರಿ. ದಪ್ಪ ಇರುವವರು ತೂಕ ಕಡಿಮೆ ಮಾಡಿಕೊಳ್ಳಲು ಸಮಪ್ರಮಾಣದ ಆಹಾರ ಹಾಗೂ ವ್ಯಾಯಾಮಗಳನ್ನು ದೈನಂದಿನ ವಾಗಿ ಮಾಡಬೇಕಾಗುತ್ತದೆ.

ಕಡಿಮೆ ಸಕ್ಕರೆ ತಿನ್ನುವವರು ಜೇನುತುಪ್ಪವನ್ನು ಯೂಸ್ ಮಾಡಬಹುದು ಎನ್ನುವುದಾಗಿ ಹಲವರು ಸಲಹೆ ನೀಡುತ್ತಾರೆ. ಆದರೆ ನಿಮಗೆ ತಿಳಿದಿರಲಿ ಸಾಮಾನ್ಯ ಸಕ್ಕರೆಗಿಂತ ಹೆಚ್ಚಾಗಿ ಸಿಹಿ ಎನ್ನುವುದು ಜೇನುತುಪ್ಪದಲ್ಲಿ ಇರುತ್ತದೆ. ನಿಮ್ಮ ದೇಹಕ್ಕೆ ಎಷ್ಟು ಕಡಿಮೆ ಸಕ್ಕರೆಯನ್ನು ನೀವು ಯೂಸ್ ಮಾಡುತ್ತೀರೋ ಅಷ್ಟು ಒಳ್ಳೆಯದಾಗಿದೆ. ಇದೇ ರೀತಿ ಹಲವಾರು ಮೂಢನಂಬಿಕೆಗಳು ಇಂದಿಗೂ ಕೂಡ ಜನರು ಪಾಲಿಸುತ್ತಿದ್ದಾರೆ ಅವುಗಳ ಕುರಿತಂತೆ ವೈಜ್ಞಾನಿಕ ಕಾರಣಗಳನ್ನು ಕಂಡು ಹಿಡಿದು ಜೀವನ ದಲ್ಲಿ ಅಳವಡಿಸಿಕೊಳ್ಳಬೇಕು.


Leave a Reply

Your email address will not be published. Required fields are marked *