ಜೆಪಿ ನಗರದ ಬಂಗಲೆ ಮಾರಿ, ಉತ್ತರ ಕರ್ನಾಟಕದಲ್ಲಿ 20 ಹಳ್ಳಿಗಳನ್ನು ದತ್ತು ತೆಗೆದುಕೊಂಡಿದ್ದ ನಟಿ ಆರತಿ ಅವರ ಮುಂದಿನ ಜೀವನ ಹೇಗಿತ್ತು ಗೊತ್ತಾ.! ನಿಜವಾದ ದಾನಿ ಅಂದ್ರೆ ಇವರೇ ಕಣ್ರೀ.

ಸುದ್ದಿ

ಡಾ. ರಾಜ್ ಕುಮಾರ್ ಅವರ ಕಾಲದಲ್ಲಿ ಕನ್ನಡ ಚಿತ್ರರಂಗದ ಟಾಪ್ ನಟಿ ಎಂದರೆ ಅದು ಆರತಿಯವರು ಚಿತ್ರರಂಗದಲ್ಲಿ ರಂಗನಾಯಕಿ ಎಂದೇ ಖ್ಯಾತಿಯನ್ನು ಪಡೆದಿದ್ದರು. ಹುಟ್ಟಿದ್ದು ಮೈಸೂರಿನಲ್ಲಿ, ಹದಿನಾರು ವಯಸ್ಸಿನಲ್ಲಿ ಗೆಜ್ಜೆ ಪೂಜೆ ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮೊದಲ ಪಾದಾರ್ಪಣೆ ಮಾಡುತ್ತಾರೆ. ಇವರನ್ನು ಬಣ್ಣದ ಬದುಕಿಗೆ ಬರಮಾಡಿಕೊಂಡವರು ಬೇರೆಯಾರು ಅಲ್ಲ ಕನ್ನಡ ಸಿನೆಮಾರಂಗದ ನಿರ್ದೇಶಕರ ಪಟ್ಟಿಯಲ್ಲಿ ಟಾಪ್ ಸ್ಥಾನದಲ್ಲಿ ಇರುವ ಚಿತ್ರ ಬ್ರಹ್ಮ ಪುಟ್ಟಣ್ಣ ಕಣಗಾಲ್ ಅವರು.

ಇವರ ಅಭಿನಯದ ಮೊದಲ ಚಿತ್ರದಲ್ಲೇ ಡಾ. ರಾಜ್ ಕುಮಾರ್ ಅವರೊಂದಿಗೆ ನಟಿಸಿ, ಒಂದೇ ಒಂದು ಹಾಡಿನ ಮುಲಕ ಎಲ್ಲರ ಗಮನ ಸೆಳೆದಿದ್ದರೆ. ನಂತರ ಒಂದರ ಮೇಲೊಂದು ಒಂದು ಸಿನೆಮಾಗಳಲ್ಲಿ ನಾಯಕಿಯಾಗಿ ನಟಿಸುತ್ತಾ. ಜನಪ್ರಿಯತೆ ಪಡೆದುಕೊಂಡು ನಟಿ ಆರತಿ. ಕನ್ನಡದ ಎಲ್ಲಾ ಸೂಪರ್ ಸ್ಟಾರ್ ಗಳಾದ ಡಾ. ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶ್ರೀನಾಥ್ ಸೇರಿದಂತೆ ಹಲವು ನಟರ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಇನ್ನು ಪುಟ್ಟಣ್ಣ ಕಣಗಾಲ್ ಅವರ ಆಪ್ತ ಶಿಷ್ಯರಾದ ಆರತಿಯವರು, ತನ್ನ ಗುರುಗಳ ಜೊತೆಯಲ್ಲಿ ಪ್ರೇಮಕ್ಕೆ ಬೀಳುತ್ತಾರೆ. ಅಲ್ಲದೆ ತಾವು ಇಷ್ಟ ಪಡುವ ವಿಚಾರವನ್ನು ನೇರವಾಗಿ ಪುಟ್ಟಣ್ಣ ಕಣಗಾಲ್ ಅವರ ಬಿಳಿಯೇ ಹೇಳಿಬಿಡುತ್ತಾರೆ. ಆದರೆ ಅದಾಗಲೇ ಪುಟ್ಟಣ್ಣ ಅವರು ಲಕ್ಷ್ಮೀ ಎಂಬುವರನ್ನು ಮದುವೆಯಾಗಿರುತ್ತಾರೆ. ಆದರೂ ಕೂಡ ಹಿಂದೆ ಯೋಚಿಸದ ಪುಟ್ಟಣ್ಣ ಅವರು ಆರತಿ ಅವರ ಪ್ರೀತಿಗೆ ಮನಸೋತು ಒಪ್ಪಿ ಬಿಡುತ್ತಾರೆ.

ಈ ವಿಚಾರವನ್ನು ತಮ್ಮ ಪತ್ನಿ ಲಕ್ಷ್ಮಿ ಯ ಅವರಿಗೆ ತಿಳಿಸಲು ಮುಜುಗರಗೊಂಡ ಪುಟ್ಟಣ್ಣ ಮಾಧ್ಯಮಗಳ ಮುಕಾಂತರ ಅವರ ಸಂಬಂಧವನ್ನು ಬೆಳಕಿಗೆ ತರುತ್ತಾರೆ. ಇನ್ನು ಪುಟ್ಟಣ್ಣ ಹಾಗೂ ಆರತಿಯವರ ಮಧ್ಯೆ ವಯಸ್ಸಿನ ಅಂತಾರಾವಿರುತ್ತದೆ ಪುಟ್ಟಣ್ಣ ಅವರಿಗೆ ನಲವತ್ತು ವರ್ಷ ಪ್ರಯವಾದರೆ ಆರತಿಯವರಿಗೆ ಕೇವಲ ಇಪ್ಪತ್ತು ವರುಷದ ಯುವತಿಯಾಗಿದ್ದರು. ದಿನ ಕಳೆದಂತೆ ಆರತಿಯವರು ಪುಟ್ಟಣ್ಣ ಅವರನ್ನು ಮದುವೆಯಾಗಲು ಮತ್ತೆ ಆಸಕ್ತಿ ತೋರಿಸಲೇ ಇಲ್ಲ.

ಅದಾಗಲೇ ಆರತಿಯವರು ನಟ ಅಶೋಕ್ ಅವರ ಜೊತೆ ಸುತ್ತಾಡುತ್ತಿರುವುದನ್ನು ನೋಡಿದ ಪುಟ್ಟಣ್ಣ ಅವರು ಇದರಿಂದ ಬಹಳ ಬೇಸರವಾಗಿ ತನ್ನ ಪ್ರೀತಿಯನ್ನು ತ್ಯಜಿಸುತ್ತಾರೆ. ಈ ಘಟನೆ ನಡೆದ ನಾಲ್ಕು ವರ್ಷಗಳ ನಂತರ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಇಹಲೋಕ ತ್ಯಜಿಸಿ ಬಿಡುತ್ತಾರೆ. ಅವರ ಪತ್ನಿ ಲಕ್ಷ್ಮಿ ಮತ್ತು ಆರು ಜನ ಮಕ್ಕಳು ಸಿನೆಮಾ ರಂಗದಲ್ಲಿ ದೂರ ಉಳಿದು ನೆಮ್ಮದಿಯ ಜೀವನವನ್ನು ಸಾಗಿಸುತ್ತಿದ್ದರು. ಇತ್ತ ಆರತಿಯವರು ರಾಜಕಾರಾಣಿ ರಘುಪತಿ ಅವರನ್ನು ವಿವಾಹವಾಗುತ್ತಾರೆ. ಆದರೆ ಈ ದಾಂಪತ್ಯ ಹೆಚ್ಚು ವರ್ಷಗಳ ಕಾಲ ಉಳಿಯುದಿಲ್ಲ.

3ನೇ ಮದುವೆ ಆಗುವ ಸಮಯದಲ್ಲಿ ಆರತಿ ಸಾಮಾಜಿಕ ಕೆಲಸಗಳಲ್ಲಿ ತೊಡಗಿಕೊಂಡಿರುತ್ತಾರೆ. ಅಲ್ಲಿ ಚಂದ್ರಶೇಖರ್ ಕೂಡ ಪರಿಚಯವಾಗುತ್ತಾರೆ. ಸ್ನೇಹ ಪ್ರೀತಿಯಾಗಿ ಇಬ್ಬರು ಮದುವೆಯಾಗುತ್ತಾರೆ. 1987ರಲ್ಲಿ ಆರತಿ ಹಾಗೂ ಅವರ ಪತಿ, ಮಗಳ ಜೊತೆ ವಿದೇಶದಲ್ಲಿ ನೆಲೆಯೂರಲು ಹೋಗುತ್ತಾರೆ. ಇತ್ತ ರಘುಪತಿ ಮತ್ತಷ್ಟು ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ.

ಅತ್ತ ಆರತಿ ಅಲ್ಲಿದ್ದುಕೊಂಡೇ ಸಾಮಾಜಿಕ ಕೆಲಸಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದರು. ಅಂತಿಮವಾಗಿ ಸಿನೆಮಾ ರಂಗದಿಂದ ಸಂಪೂರ್ಣ ದೂರವಾಗಿದ್ದರು ನಟಿ ಆರತಿ. ತಾವೂ ಸಂಪಾದನೆ ಮಾಡಿದ್ದಾನೆಲ್ಲ ದಾನ ಮಾಡಿದ್ದರು. ಜೆಪಿ ನಗರದಲ್ಲಿದ್ದ ಬಂಗಲೆ ಮಾರಿ, ಉತ್ತರ ಕರ್ನಾಟಕದಲ್ಲಿ 20 ಹಳ್ಳಿಗಳನ್ನು ದತ್ತು ತೆಗೆದುಕೊಂಡಿದ್ದರು. ಶಾಲೆ ಹಾಸ್ಪಿಟಲ್ ಸೇರಿ ಸಾಕಷ್ಟು ಒಳ್ಳೆಯ ಸಮಾಜ ಮುಖಿ ಕೆಲಸಗಳನ್ನು ಮಾಡಿದ್ದರೆ.

ಅವರ ಅಭಿನಯದ ಮಿಠಾಯಿ ಮನೆ ಚಿತ್ರವು ಕರ್ನಾಟಕ ರಾಜ್ಯ ಪ್ರಶಸ್ತಿ ಕೂಡ ಮೂಡಿಗೆರಿಸಿಕೊಂಡಿತು. ಆರತಿ ಅವರ ಜೀವನ ಕಥೆಯನ್ನು ನೋಡುತ್ತಿದ್ದರೆ ಎಲ್ಲೋ ಹುಟ್ಟಿ ಎಲ್ಲೋ ಬೆಳೆದು, ಎಲ್ಲೋ ಸಾಗುವ ನಮ್ಮ ಜೀವನದ ನೆನಪುಗಳು ಮಾತ್ರ ಉಳಿಯುವುದು ಅನ್ನಿಸುತ್ತದೆ. ಕನ್ನಡದ ಜನತೆಗೆ ಪುಟ್ಟಣ್ಣ ಕಣಗಾಲ್ ಮತ್ತು ಆರತಿ ಅವರು ನೀಡಿರುವ ಕೊಡುಗೆಗಳು ಅಪಾರ. ಇವರಿಬ್ಬರು ಕನ್ನಡ ಚಿತ್ರರಂಗ ಉಸಿರಿರುವರೆಗೂ ಜನರ ಹೃದಯದಲ್ಲಿ ಭದ್ರವಾಗಿ ನೆಲೆಸಿರುತ್ತಾರೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನ ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.


Leave a Reply

Your email address will not be published. Required fields are marked *