ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕನ್ನಡ ಚಿತ್ರರಂಗದ ಬೆಳವಣಿಗೆಗೆ ಎಷ್ಟು ಕೊಡುಗೆಯನ್ನು ನೀಡಿದ್ದಾರೆ ಎನ್ನುವುದು ನಮಗೆಲ್ಲಾ ಗೊತ್ತಿದೆ. ನಿಜಕ್ಕೂ ಕೂಡಾ ಕನ್ನಡ ಚಿತ್ರರಂಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ಕಳೆದುಕೊಂಡು ಯಾವ ಬಾಧೆಯನ್ನು ಪಡುತ್ತಿದೆ ಎಂಬುದು ನಮಗೆಲ್ಲ ತಿಳಿದಿದೆ. ನಿಜಕ್ಕೂ ಕೂಡ ಕನ್ನಡ ಚಿತ್ರರಂಗದ ಅನರ್ಘ್ಯರತ್ನವಾಗಿ ದ್ದರು ನಮ್ಮೆಲ್ಲರ ನೆಚ್ಚಿನ ಅಪ್ಪು.
ಆದರೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ವಯಸ್ಸಿಗೂ ಮೀರಿದ ಸಾಧನೆಗಳನ್ನು ಮಾಡಿ ಬಾರದ ಲೋಕಕ್ಕೆ ಹೋಗಿದ್ದಾರೆ. ತಂದೆಗೆ ತಕ್ಕ ಮಗನಾಗಿ ಕನ್ನಡ ಚಿತ್ರರಂಗದ ಹಲವಾರು ಯುವ ಪ್ರತಿಭೆಗಳಿಗೆ ಅವಕಾಶವನ್ನು ನೀಡಿರುವ ನಿಜವಾದ ಅನ್ನದಾತ ಕೂಡ ಆಗಿದ್ದಾರೆ. ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ಕಷ್ಟದಲ್ಲಿರುವವರಿಗೆ ಸಹಾಯವನ್ನು ಮಾಡಿ ಅವರ ಜೀವನಕ್ಕೆ ದಾರಿ ಆಗಿದ್ದಾರೆ. ಒಂದರ್ಥದಲ್ಲಿ ಹೇಳುವುದಾದರೆ ಪುನೀತ್ ರಾಜಕುಮಾರ್ ಅವರು ಪ್ರತಿಯೊಂದು ಕ್ಷೇತ್ರದಲ್ಲಿ ಕೂಡ ತಮ್ಮ ಯೋಗದಾನವನ್ನು ನೀಡಿದ್ದಾರೆ.
ಈಗಾಗಲೇ ಮಾರ್ಚ್ 17 ರಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜನ್ಮದಿನದ ವಿಶೇಷವಾಗಿ ಅವರ ಕೊನೆಯ ಚಿತ್ರವಾಗಿರುವ ಜೇಮ್ಸ್ ಅದ್ದೂರಿಯಾಗಿ ಪಂಚ ಭಾಷೆಗಳಲ್ಲಿ ಬಿಡುಗಡೆಯಾಗುವುದು ನಿಶ್ಚಯವಾಗಿದೆ. ಅಭಿಮಾನಿಗಳು ತಮ್ಮ ಆರಾಧ್ಯದೈವ ನ ಕೊನೆಯ ಸಿನಿಮಾವನ್ನು ಕಣ್ತುಂಬಿಕೊಳ್ಳುವ ಮುನ್ನವೇ ಮತ್ತೊಂದು ಆಶ್ಚರ್ಯಕರ ಸುದ್ದಿಯೊಂದು ಹೊರಬಿದ್ದಿದೆ.
ಹೌದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಸಿನಿಮಾರಂಗದ ಸೇವೆ ಹಾಗೂ ಸಾಧನೆ ಮತ್ತು ಸಮಾಜ ಸೇವಕರಾಗಿ ಅವರು ಮಾಡಿರುವಂತಹ ಕಾರ್ಯಗಳನ್ನು ಗಮನಿಸಿರುವ ಮೈಸೂರು ವಿಶ್ವವಿದ್ಯಾಲಯ ಅವರಿಗೆ ಮರಣೋತ್ತರ ಗೌರವ ಡಾಕ್ಟರೇಟ್ ಅನ್ನು ಇದೇ ಮಾರ್ಚ್ 22ರಂದು ನೀಡುವ ನಿರ್ಧಾರವನ್ನು ಮಾಡಿದೆ. ನಟರ ವಿಭಾಗದಲ್ಲಿ ದಾನ ಧರ್ಮವನ್ನು ಮಾಡಿ ಡಾಕ್ಟರೇಟ್ ಪದವಿಗೆ ಭಾಜನರಾದ ಅಂತಹ ಏಕೈಕ ವ್ಯಕ್ತಿ ಪುನೀತ್ ರವರು ಎಂದು ಹೆಮ್ಮೆಯಿಂದ ಹೇಳಬಹುದಾಗಿದೆ.
