ನಮಸ್ಕಾರ ಸ್ನೇಹಿತರೆ ಅಂತು-ಇಂತು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೊನೆಯ ಚಿತ್ರವಾಗಿರುವ ಜೇಮ್ಸ್ ಚಿತ್ರದ ವಿಶ್ವಾದ್ಯಂತದ ಬಿಡುಗಡೆಗೆ ಎಲ್ಲ ಸಿದ್ಧತೆಗಳು ನಡೆದಿವೆ ಎಂಬುದಾಗಿ ನಿಮಗೆ ತಿಳಿದಿದೆ. ಇದೇ ಮಾರ್ಚ್ 17ರಂದು ಪಂಚ ಭಾಷೆಗಳಲ್ಲಿ ಜೇಮ್ಸ್ ಅಬ್ಬರಿಸಲಿದ್ದಾನೆ. ಪುನೀತ್ ರಾಜಕುಮಾರ್ ರವರನ್ನು ಕೊನೆಯ ಬಾರಿಗೆ ದೊಡ್ಡ ಪರದೆ ಮೇಲೆ ನೋಡಲು ಪ್ರೇಕ್ಷಕರು ಕಾತರರಾಗಿದ್ದಾರೆ.
ಇನ್ನು ಜೇಮ್ಸ್ ಚಿತ್ರ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೊನೆಯ ಸಿನಿಮಾ ವಾಗಿರುವುದರಿಂದ ಆಗಿ ಅಭಿಮಾನಿಗಳು ಇದನ್ನು ಹಬ್ಬದ ರೀತಿಯಲ್ಲಿ ಆಚರಿಸಲು ಎಲ್ಲ ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ. ಮಾರ್ಚ್ 16ರ ರಾತ್ರಿಯಿಂದ ಪ್ರಾರಂಭವಾಗಿ ಮಾರ್ಚ್ ಇಪ್ಪತ್ತರ ತನಕ ಬೆಂಗಳೂರಿನಲ್ಲಿ ಹಾಗೂ ರಾಜ್ಯದ ಪ್ರಮುಖ ಭಾಗಗಳಲ್ಲಿ ಮೆರವಣಿಗೆ ಅನ್ನಸಂತರ್ಪಣೆ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿ ಕೊಂಡಿದ್ದಾರೆ. ಇಷ್ಟೇಕೆ ಪ್ರಸನ್ನ ಹಾಗೂ ವೀರೇಶ್ ಚಿತ್ರಮಂದಿರದ ಮೇಲೆ ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಸಮಾಧಿಯ ಮೇಲೆ ಎರಡು ಹೆಲಿಕಾಪ್ಟರ್ ಗಳ ಮೂಲಕ ಪುಷ್ಪಾರ್ಚನೆಯನ್ನೂ ಕೂಡ ಮಾಡಲಿದ್ದಾರೆ.
ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಕೊನೆಯ ಸಿನಿಮಾ ಆಗಿರುವುದರಿಂದ ಆಗಿ ವಿಶ್ವಾದ್ಯಂತ ನಾಲ್ಕು ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಜೇಮ್ಸ್ ಚಿತ್ರ ಅದ್ದೂರಿಯಾಗಿ ತೆರೆಕಾಣಲಿದೆ. ಅದಕ್ಕೂ ಮಿಗಿಲಾಗಿ ಜಯಂತ್ ಚಿತ್ರ ಪುನೀತ್ ರಾಜಕುಮಾರ್ ರವರ ಕೊನೆಯ ಸಿನಿಮಾ ವಾಗಿರುವುದರಿಂದ ಆಗಿ ಹಲವಾರು ಬಿಡುಗಡೆ ಆಗಬೇಕಾಗಿದ್ದ ದೊಡ್ಡ ಸಿನಿಮಾಗಳು ಕೂಡ ತಮ್ಮ ಸಿನಿಮಾಗಳನ್ನು ಮುಂದಕ್ಕೆ ಅಥವಾ ಹಿಂದಕ್ಕೆ ಹಾಕಿಕೊಂಡಿದೆ. ರೆಬೆಲ್ ಸ್ಟಾರ್ ಪ್ರಭಾಸ್ ರವರ ಸಿನಿಮಾ ರಾಧೇಶ್ಯಾಮ್ ಇಂದು ಬಿಡುಗಡೆಯಾಗುತ್ತಿದೆ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾ ಮಾರ್ಚ್ 25ರಂದು ಬಿಡುಗಡೆಯಾಗುತ್ತಿದೆ. ಹೀಗಾಗಿ ಮಾರ್ಚ್ 17ರಂದು ಜೇಮ್ಸ್ ಸೋಲೋ ರಿಲೀಸ್ ಆಗುತ್ತಿದೆ.
ಇನ್ನು ಯಾವುದೇ ಬಿಡುಗಡೆ ಇಲ್ಲದೆ ಸೋಲೋ ರಿಲೀಸ್ ಆಗುತ್ತಿರುವ ಜೇಮ್ಸ್ ಚಿತ್ರ ಕೋಟಿ ಕೋಟಿ ಭಾಷಣದ ಎಂಬುದಾಗಿ ಸಿನಿಮಾ ಪಂಡಿತರ ಲೆಕ್ಕಾಚಾರ ಹಾಕಿದ್ದಾರೆ. ಹೌದು ಮಾರ್ಚ್ 17ರಂದು ಬಿಡುಗಡೆಯಾಗುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ಜೇಮ್ಸ್ ಚಿತ್ರ ಕಂಡಿತವಾಗಿ ನಾಲ್ಕು ದಿನಗಳಲ್ಲಿ ಅಂದರೆ ಮೊದಲ ವಾರದೊಳಗೆ 100 ಕೋಟಿ ಗಡಿಯನ್ನು ದಾಟಲಿದೆ ಎಂಬುದಾಗಿ ಎಲ್ಲರೂ ಊಹಿಸಿದ್ದಾರೆ. ಹೀಗೆ ಆದರೆ ಅತ್ಯಂತ ವೇಗವಾಗಿ 100 ಕೋಟಿ ರೂಪಾಯಿ ಬಾಕ್ಸಾಫೀಸ್ ನಲ್ಲಿ ಕಲೆಕ್ಷನ್ ಮಾಡಿರುವ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
