ಕನ್ನಡ ಚಿತ್ರರಂಗದ ಆಲ್-ರೌಂಡರ್ ನಟ ಎಂದೆನಿಸಿಕೊಂಡಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೊನೆಯ ಸಿನಿಮಾ ಜೇಮ್ಸ್ ಇದೇ ಮಾರ್ಚ್ 17ರಂದು ಬಿಡುಗಡೆಯಾಗಲು ಸರ್ವಸನ್ನದ್ಧವಾಗಿದೆ. ಜೇಮ್ಸ್ ಚಿತ್ರ ಮಾರ್ಚ್ 17ಕ್ಕೆ ಬಿಡುಗಡೆಯಾಗಬೇಕು ಎಂಬುದು ಅವರ ಅಭಿಮಾನಿಗಳ ಮಹದಾಸೆಯಾಗಿತ್ತು. ಚಿತ್ರತಂಡ ಕೂಡ ಅಭಿಮಾನಿಗಳ ನಾಡಿಮಿಡಿತವನ್ನು ಅರಿತುಕೊಂಡು ಚಿತ್ರವನ್ನು ಅವರ ಜನ್ಮದಿನದ ಪ್ರಯುಕ್ತ ವಾಗಿಯೇ ಪಂಚ ಭಾಷೆಗಳಲ್ಲಿ ಬಿಡುಗಡೆ ಮಾಡುತ್ತಿದೆ.
ಜೇಮ್ಸ್ ಚಿತ್ರದ ಬೇಡಿಕೆ ನಿಮಗೆಲ್ಲ ತಿಳಿದಿರುವಂತೆ ಈಗಾಗಲೇ ಸಾಕಷ್ಟು ದೊಡ್ಡ ಮಟ್ಟದಲ್ಲಿ ಹೆಚ್ಚಿದೆ. ಪ್ರತಿಯೊಬ್ಬ ಸಿನಿಮಾ ರಸಿಕನು ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಡೈಲಾಗ್ ಡೆಲಿವರಿ ಅಕ್ಷನ್ ಸಿಕ್ವೆನ್ಸ್ ನಟನೆ ಸ್ಟೈಲಿಂಗ್ ಎಲ್ಲವನ್ನು ಕೊನೆ ಬಾರಿ ದೊಡ್ಡ ಪರದೆ ಮೇಲೆ ನೋಡಲು ಉತ್ಸುಕರಾಗಿದ್ದಾರೆ. ಅದರಲ್ಲೂ ಅಪ್ಪು ಅಭಿಮಾನಿಗಳಂತೂ ದೊಡ್ಡಮಟ್ಟದಲ್ಲಿ ಅಪ್ಪು ಅವರ ಕೊನೆಯ ಸಿನಿಮಾವನ್ನು ಸೆಲೆಬ್ರೇಶನ್ ಮಾಡೋದಕ್ಕೆ ತಯಾರಿಗಳನ್ನು ನಡೆಸಿಕೊಂಡಿದ್ದಾರೆ. ಹೌದು ಈ ತಯಾರಿಗಳನ್ನು ಕೇಳಿದರೆ ನೀವು ಕೂಡ ಬೆಚ್ಚಿ ಬೆರಗಾಗುತ್ತೀರಾ.
ಪ್ರಮುಖ ಚಿತ್ರಮಂದಿರಗಳು ಆಗಿರುವ ವೀರೇಶ್ ಹಾಗೂ ಪ್ರಸನ್ನ ಚಿತ್ರಮಂದಿರಗಳಿಗೆ ಒಂದು ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಚನೆ. ಕಂಠೀರವ ಸ್ಟುಡಿಯೋದಲ್ಲಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಸಮಾಧಿಗೆ ಒಂದು ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಚನೆ ಮಾಡಲಾಗುತ್ತದೆ. ಮಾರ್ಚ್ 16 ರ ರಾತ್ರಿ ಇಂದ ಪ್ರಾರಂಭವಾಗಿ ಮಾರ್ಚ್ 20 ರವರೆಗೆ ನಾಲ್ಕು ದಿನಗಳ ಕಾಲ ಜಾತ್ರೆಯಂತೆ ಜೇಮ್ಸ್ ಚಿತ್ರದ ಬಿಡುಗಡೆಯನ್ನು ಆಚರಿಸಲಾಗುತ್ತದೆ. ಹತ್ತು ಜೆಸಿಬಿ ಗಳಿಂದ 33ಕ್ಕೂ ಅಧಿಕ ಕಟೌಟ್ ಗಳಿಗೆ ಪುಷ್ಪಾರ್ಚನೆ ಮಾಡಲಾಗುತ್ತದೆ.
ಕರ್ನಾಟಕ ರಾಜ್ಯದಾದ್ಯಂತ ಪ್ರತಿಯೊಂದು ಚಿತ್ರಮಂದಿರಗಳಿಗೆ ಕೂಡ ಫ್ಲೆಕ್ಸ್ ಹಾಗೂ ಪೋಸ್ಟರ್ ಗಳನ್ನು ಕಳಿಸಲಾಗಿದೆ. ಅವುಗಳಲ್ಲಿ ಹ್ಯಾಪಿ ಬರ್ತಡೆ ಅಪ್ಪು ಎನ್ನುವುದಾಗಿ ಬರೆಯಲಾಗಿದೆ. ಪ್ರಮುಖ ಚಿತ್ರಮಂದಿರದಲ್ಲಿ ನಡೆಯುವ ಪ್ರತಿಯೊಂದು ಶೋಗೂ ಪಟಾಕಿಯನ್ನು ಸಿಡಿಸಲಾಗುತ್ತದೆ. ವೀರೇಶ್ ಚಿತ್ರಮಂದಿರದಲ್ಲಿ ನಾಲ್ಕು ದಿನವೂ ಕೂಡ ಸಿಹಿ ಹಂಚುವುದಕ್ಕೆ ವ್ಯವಸ್ಥೆಯನ್ನು ಮಾಡಲಾಗಿದ್ದು ಕೆಲವು ಕಡೆಗಳಲ್ಲಿ ಅನ್ನಸಂತರ್ಪಣೆ ಕೂಡ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇನ್ನು ಇದಕ್ಕೆ ಖರ್ಚ್ ಆಗುತ್ತಿರುವ ಒಟ್ಟು ಮೊತ್ತ ಬರೋಬ್ಬರಿ 30 ರಿಂದ 35 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಇದನ್ನು ಯಾರ ಬಳಿ ಕೂಡ ಕೇಳದೆ ಸ್ವತಹ ಅಪ್ಪು ಅಭಿಮಾನಿಗಳು ತಮ್ಮ ಸ್ವಂತ ಜೇಬಿನಿಂದ ಖರ್ಚು ಮಾಡುತ್ತಿದ್ದಾರೆ. ನಿಜಕ್ಕೂ ಅಪ್ಪು ಅಭಿಮಾನಿಗಳ ಅಭಿಮಾನಕ್ಕೆ ನಮ್ಮ ಸಲಾಂ.
