ಟೈಗರ್ ಪ್ರಭಾಕರ್ ಅವರ ಮೂರು ಹೆಂಡತಿಯರು ಯಾರು ಗೊತ್ತಾ..! ಮುದ್ದಿನ ಹೆಂಡತಿಯರು ಈಗ ಹೇಗಿದ್ದಾರೆ ಗೊತ್ತಾ.? ನೋಡಿ

ಸುದ್ದಿ

ನಮಸ್ತೆ ಪ್ರೀತಿಯ ವೀಕ್ಷಕರೆ ಚಂದನವನದಲ್ಲಿ ಟೈಗರ್ ಪ್ರಭಾಕರ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಅವರ ಸ್ಟೈಲ್, ಅವರ ಗತ್ತು, ಅವರ ಫೈಟಿಂಗ್ ಯಾವ ಜನರು ಮರೆಯಲು ಸಾಧ್ಯ ಹೇಳಿ. ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಸ್ವಂತ ಪರಿಶ್ರಮದಿಂದ ತುಂಬಾ ಖ್ಯಾತಿಯನ್ನು ಪಡೆದವರು. ತನ್ನ ಹದಿನಾಲ್ಕು ವರ್ಷದಲ್ಲೇ ಇಬ್ಬರು ಬಾಕ್ಸರ್ ಗಳನ್ನು ಪ್ರಭಾಕರ್ ಸೋಲಿಸಿದ್ದರು. ಇವರು ಕನ್ನಡ ಚಿತ್ರರಂಗಕ್ಕೆ ಸ್ಟಂಟ್ ಮ್ಯಾನ್ ಆಗಿ ಎಂಟ್ರಿ ಕೊಟ್ಟರು. ನಂತರದಲ್ಲಿ ಸ್ಟಂಟ್ ಮಾಸ್ಟರ್ ಆಗಿ ಆಕ್ಷನ್ ಸೀನ್ ಗಳನ್ನು ನಿರ್ದೇಶಿಸುತ್ತಿದ್ದರು.

ಇವರ ಫೈಟ್ ಗಳನ್ನು ನೋಡುವುದಕ್ಕಾಗಿಯೇ ಜನರು ಚಿತ್ರಮಂದಿರಕ್ಕೆ ಬರುತ್ತಿದ್ದ. ಮೊದಲು ಟೈಗರ್ ಪ್ರಭಾಕರ್ ಚಿಕ್ಕಪುಟ್ಟ ಪಾತ್ರಗಳಲ್ಲಿ ಅಭಿಯಿಸುತ್ತಿದ್ದರು. ಅನಂತರ ಮುತ್ತೈದೆ ಭಾಗ್ಯ ಸಿನೆಮಾದ ಮೂಲಕ ಹೀರೊ ಆಗಿ ನಟನೆಯನ್ನು ಮಾಡಲು ಶುರುಮಾಡಿದರು. ಟೈಗರ್ ಸುಮಾರು 450 ಸಿನೆಮಾಗಳಲ್ಲಿ ಇವರು ನಟಿಸಿದ್ದಾರೆ. ಟೈಗರ್ ಪ್ರಭಾಕರ್ ಅವರ ಮೊದಲು ಮೇರಿ ಅಲ್ಫೋನ್ಸಾ ಅವರನ್ನು ಮದುವೆಯಾಗುತ್ತರೆ.

ಇವರಿಗೆ ಇಬ್ಬರು ಹೆಣ್ಣು ಮಕ್ಕಳು ಒಬ್ಬ ಗಂಡು ಮಗು ಇತ್ತು. ಆ ಗಂಡು ಮಗುವೇ ವಿನೋದ್ ಪ್ರಭಾಕರ್. ಸ್ವಲ್ಪ ವರ್ಷಗಳ ನಂತರ ಮೇರಿ ಅಲ್ಫೋನ್ಸಾ ಅವರಿಗೆ ಡೈವೋರ್ಸ್ ಕೊಡುತ್ತಾರೆ. ಪ್ರಭಾಕರ್ ಜೊತೆ ಹಲವಾರು ಸಿನೆಮಾಗಳಲ್ಲಿ ನಟಿಸಿ ಸೂಪರ್ ಜೋಡಿ ಎನಿಸಿಕೊಂಡಿದ್ದ ಜಯಮಾಲ ಅವರನ್ನು ಮದುವೆಯಾಗುತ್ತಾರೆ. ಹಲವು ವರ್ಷಗಳು ಒಟ್ಟಿಗೆ ಜೀವನ ನಡೆಸಿ ಇವರು ದಾಂಪತ್ಯದಲ್ಲಿ ವೈಮನಸ್ಸು ಉಂಟಾಗಿ ಪ್ರಭಾಕರ್ ಅವರು ಜಯಮಾಲಾ ಅವರಿಗೆ ವಿಚ್ಚೇದನ ನೀಡುತ್ತಾರೆ.

ಆ ಹೊತ್ತಿಗಾಗಲೇ ಟೈಗರ್ ಪ್ರಭಾಕರ್ ಅವರು ಕನ್ನಡ, ತೆಲುಗು, ತಮಿಳು, ಮಲಯಾಳಂ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು. ಮಲಯಾಳಂ ಖ್ಯಾತ ನಟಿ ಅಂಜೂ ಅವರನ್ನು ಪ್ರಭಾಕರ್ ಮೂರನೇ ಮದುವೆಯಾಗುತ್ತಾರೆ. ಆದರೆ ಕೇವಲ ಒಂದೇ ಒಂದು ವರ್ಷ ಇವರ ದಾಂಪತ್ಯಜೀವನ ಮುರಿದು ಬೀಳುತ್ತದೆ. ತದನಂತರ ಪ್ರಭಾಕರ್ ಅವರು ಒಂಟಿ ಜೀವನ ನಡೆಸಲು ಪ್ರಾರಂಭಿಸುತ್ತಾರೆ.

1980ರಲ್ಲಿ ಟೈಗರ್ ಪ್ರಭಾಕರ್ ಬೈಕ್ ಅ-ಪ-ಘಾ-ತ ಕ್ಕೆ ಒಳಗಾಗಿ ಹಳೆ ಗಾಯಗಳು ಅವರಿಗೆ ತುಂಬಾ ನೋವು ಕೊಡುತ್ತಿದ್ದು. ಇವರ ಜೀವನದ ಕೊನೆಯ ದಿನಗಳು ಜನರು ಊಹೇ ಮಾಡಿದಷ್ಟು ಸುಂದರವಾಗಿರಲಿಲ್ಲ. ಇವರು ದೈಹಿಕ ನೋವುಗಳಿಂದ ತುಂಬಾ ಬಳಲುತ್ತಿದ್ದರು ಎನ್ನುವುದು ಬೇ’ಸರ’ದ ಸಂಗತಿ. ಹೌದು ಪ್ರಭಾಕರ್ ಅವರಿಗೆ ಅತಿಯಾದ ಅನಾರೋಗ್ಯದಿಂದ ತನ್ನ ಬಳಿ ಇದ್ದ ಹಣ ಖಾಲಿಯಾಗಿದ್ದು ಮಾರ್ಚ್ 25, 2001 ರಂದು ಬಹು ಅಂಗಾಂಗ ವೈಫಲ್ಯದಿಂದ ಪ್ರಭಾಕರ್ ಅವರು ಇಹ’ಲೋಕ ತ್ಯ’ಜಿಸುತ್ತಾರೆ.

ಇನ್ನು ಯಾರೇ ಕಷ್ಟದಲ್ಲಿ ಬಂದು ಸಹಾಯ ಕೇಳಿದರು ತಮ್ಮ ಕೈಯಲಿದ್ದ ಎಲ್ಲಾ ಹಣವನ್ನು ಕೊಟ್ಟುಬಿಡುತ್ತಿದ್ದರು. ಪ್ರಭಾಕರ್ ಅವರು ಮಾಡಿದ ಅದೆಷ್ಟೋ ಧನ್ ಧರ್ಮಗಳು ಲೆಕ್ಕಕ್ಕಿಲ್ಲ ಹೀಗಾಗಿ ಇವರು ಹೆಚ್ಚು ಉಳಿತಾಯವನ್ನು ಮಾಡುತ್ತಿರಲಿಲ್ಲ. ಪ್ರಭಾಕರ್ ಅವರು ಚಿತ್ರರಂಗದಲ್ಲೇ ಜನರ ಕಷ್ಟಕ್ಕೆ ಸ್ಪಂದಿಸುಬ ನಿಸ್ವಾರ್ಥಿ ಜೀವಿ ಹಾಗೂ ಹೃದಯದವಂತ. ಇವರನ್ನು ಇಷ್ಟಪಡುವ ಲಕ್ಷಾಂತರ ಅಭಿಮಾನಿಗಳು ಇಂದಿಗೂ ಇದ್ದಾರೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.


Leave a Reply

Your email address will not be published. Required fields are marked *