ಡಾಲಿ ಧನಂಜಯ್ ಮತ್ತು ಅಮೃತಾ ಅಯ್ಯಂಗಾರ್ ಸದ್ಯದಲ್ಲೇ ಸಪ್ತಪದಿ ತುಳಿಯಲಿದ್ದಾರೆ! ಸ್ಯಾಂಡಲ್‌ವುಡ್‌ನಲ್ಲಿ ಹೊಸ ಪ್ರೇಮ್ ಕಹಾನಿ ಶುರು.?

ಸುದ್ದಿ

ಚಂದನವನದಲ್ಲಿ ತಮ್ಮ ಅದ್ಭುತ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ನಟ ಎಂದರೆ ಅದು ಡಾಲಿ ಧನಂಜಯ್. ಅವರು ಸಣ್ಣ ಗ್ರಾಮದಲ್ಲಿ ಹುಟ್ಟಿ ಬೆಟ್ಟದಷ್ಟು ಕನಸನ್ನು ಕಂಡು ಬಂದ ಅವಕಾಶಗಳನ್ನು ಉಪಯೋಗಿಸಿಕೊಂಡು ಇಂದು ಈ ಎತ್ತರಕ್ಕೆ ಬೆಳದಿದ್ದರೆ ಧನಂಜಯ್. ಒಬ್ಬ ಯಶಸ್ವಿ ನಟನಾಗಲು ಹರಾಸಾಹಸ ಪಟ್ಟು ಅವರಿಗೆ ಮಾಡಿದಂತ ಅವಮಾನಗಳನ್ನು ಸಹಿಸಿಕೊಂಡು. ನಂತರ ಶಿವಣ್ಣ ಅಭಿನಯದ ಟಗರು ಚಿತ್ರದಲ್ಲಿ ವಿಲ್ಲನ್ ಆಗಿ ನಟಿಸಿದ ಇವರ ಬದುಕನ್ನೇ ಬದಲಾಯಿಸಿ ಬಿಟ್ಟಿತು.

ಇನ್ನು ಧನಂಜಯ್ ಅವರು ಎಂಥಹ ಪಾತ್ರ ಕೊಟ್ಟರು ಹಾಲು ಕುಡಿದಷ್ಟೇ ಅದ್ಭುತವಾಗಿ ನಟಿಸುತ್ತಾರೆ. ಇನ್ನು ನಟನೆಯಲ್ಲಿ ನಟ ರಾಕ್ಷಸ ಎಂದೇ ಖ್ಯಾತಿ ಪಡೆದಿದ್ದರೆ. ಇನ್ನು ಬಡವ ರಾ- ಸ್ಕಲ್ ಚಿತ್ರದ ಮೂಲಕ ನಟ ಧನಂಜಯ್ ನಿರ್ಮಾಪಕರಾಗಿ ಕೂಡ ಹೊರಹೋಮ್ಮಿದ್ದಾರೆ. ಇತ್ತೀಚಿಗೆ ಬಿಡುಗಡೆಯದ ಬಡವ ರಾ-ಸ್ಕಲ್ ಚಿತ್ರ ದೊಡ್ಡ ಮಟ್ಟದಲ್ಲಿ ಯಶಸ್ಸುನ್ನು ಕಂಡಿತು.

ಈಗ ಎಲ್ಲೆಲ್ಲೂ ಡಾಲಿದೆ ಹವಾ ಎಂದರೆ ತಪ್ಪಾಗಲ್ಲ. ಮೊದಲಿಗೆ ರತ್ನನ್ ಪ್ರಪಂಚ ಚಿತ್ರ ಓಟಿಟಿಯಲ್ಲಿ ಬಿಡುಗಡೆಯಾಗಿ ಎಲ್ಲರ ಮೆಚ್ಚುಗೆ ಗಳಿಸಿದ್ದು, ನಂತರ ಈಗ ಬಡವ ರಾ-ಸ್ಕಲ್ ಚಿತ್ರ ದೊಡ್ಡ ಸೂಪರ್ ಹಿಟ್ ಆಗಿದೆ. ಈ ಚಿತ್ರದಲ್ಲಿ ಮಾಸ್ ಕಥೆಗಳ ಜೊತೆಗೆ ಜನರಿಗೆ ಇಷ್ಟವಾಗಿರುವ ಡಾಲಿ ಧನಂಜಯ್ ಹಾಗೂ ಅಮೃತಾ ಅಯ್ಯಂಗಾರ್ ಕ್ಯೂಟ್ ಲವ್ ಸ್ಟೋರಿ.

ಇವರಿಬ್ಬರ ಮುದ್ದಾದ ಲವ್ ಸ್ಟೋರಿಯನ್ನು ಈಗಿನ ಕಾಲದ ಯುವಜನರು ತುಂಬಾ ಇಷ್ಟಪಟ್ಟಿದ್ದಾರೆ. ಬಡವ ರಾ-ಸ್ಕಲ್ ಈ ಚಿತ್ರ ಸಕ್ಸಸ್ ಇಂದಾಗಿ ನಟ ಧನಂಜಯ್ ಮಾಧ್ಯಮಗಳ ಮುಂದೆ ಹಾಗೂ ಸೋಷಿಯಲ್ ಮೀಡಿಯಾಗಳಲ್ಲಿ ಮುಂದೆ ಕಾಣಿಸಿಕೊಳ್ಳುತ್ತಿದ್ದರು. ಇತ್ತೀಚಿಗೆ ಜೀಕನ್ನಡ ವಾಹಿನಿಯಲ್ಲಿ ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮದಲ್ಲಿ ಧನಂಜಯ್ ಮತ್ತು ಸ್ನೇಹಿತರು ಬಂದಿದ್ದರು, ಚಿತ್ರದ ನಾಯಕಿ ಅಮೃತಾ ಅಯ್ಯಂಗಾರ್ ಅವರು ಕೂಡ ಶೋಗೆ ಬಂದಿದ್ದರು.

ಇನ್ನು ಶೋನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರು ರೋಮ್ಯಾಂಟಿಕ್ ಆಗಿ ಅಮೃತಾ ಅವರಿಗೆ ಪ್ರೊಪೋಸ್ ಮಾಡಬೇಕು ಎಂದು ಹೇಳಿ, ಧನಂಜಯ್ ಅವರು ಬಹಳ ಮುದ್ದಾಗಿ ಅಮೃತಾ ಅವರಿಗೆ ಪ್ರೊಪೋಸ್ ಮಾಡಿದರು. ನಟಿ ಅಮೃತಾ ಅವರು ಧನಂಜಯ್ ಅವರಿಗೆ ಕವಿತೆ ಹೇಳುವ ಮೂಲಕ ಮುದ್ದಾಗಿ ಪ್ರೊಪೋಸ್ ಮಾಡಿದರು. ಇನ್ನು ಇವರಿಬ್ಬರು ಪ್ರೀತಿ ನಿವೇದನೆ ಮಾಡಿರುವ ರೀತಿ ಸನ್ನಿವೇಶ ಬಹಳ ನೈಜವಾಗಿತ್ತು.

ಹಾಗಾಗಿ ವೀಕ್ಷಕರು ಡಾಲಿ ಧನಂಜಯ್ ಮತ್ತು ಅಮೃತಾ ಇವರಿಬ್ಬರು ನಿಜ ಜೀವನದಲ್ಲಿ ಪ್ರೀತಿ ಮಾಡುತ್ತಿದ್ದಾರೆ, ಇಬ್ಬರು ಮದುವೆ ಆಗುತ್ತಾರೆ ಎನ್ನುವ ಸುದ್ಧಿ ಗಾಂಧಿನಗರದಲ್ಲಿ ಸಕ್ಕತ್ ಸೌಂಡ್ ಮಾಡುತ್ತಿದೆ. ಆದರೆ ಇವರಿಬ್ಬರ ಪ್ರೀತಿಯ ವಿಷಯ ಬಗ್ಗೆ ಖುದ್ದಾಗಿ ನಟಿ ಅಮೃತಾ ಅವರು ಹೇಳುವುದೇ ಬೇರೆ. ಈ ಜೋಡಿ ಹೇಳುವ ಹಾಗೆ ಇವರಿಬ್ಬರು ಒಳ್ಳೆಯ ಸ್ನೇಹಿತರಾಗಿದ್ದು, ನಮ್ಮಿಬ್ಬರ ನಡುವೆ ಏನು ಇಲ್ಲ ಎಂದಿದ್ದಾರೆ.

ಇನ್ನು ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮದ ಟಾಸ್ಕ್ ಗಾಗಿ ಪ್ರೊಪೋಸ್ ಮಾಡಿದ್ದು, ಜೊತೆಗೆ ನಾವು ಹೆಚ್ಚಿನ ಚಿತ್ರಗಳಲ್ಲಿ ಜೊತೆಯಾಗಿ ಅಭಿನಯಿಸುತ್ತಿರುವ ಕಾರಣ, ಈ ರೀತಿಯ ಸುದ್ಧಿ ಹಬ್ಬಿದೆ ಎನ್ನುತ್ತಿದ್ದಾರೆ. ಆದರೆ ಇದನ್ನು ನೋಡಿ ನಾವು ಪ್ರೇಮಿಗಳು ಎಂದು ಹೇಳುವುದು ಸರಿಯಲ್ಲ, ಆ ರೀತಿ ಏನು ಇಲ್ಲ ಎಂದು ಹೇಳಿದ್ದಾರೆ ಅಮೃತಾ. ಆದರೆ ಅಮೃತಾ ಅವರು ಹೇಳಿರುವ ಈ ಮಾತನ್ನು ಅಭಿಮಾನಿಗಳು ಈ ಮಾತನ್ನು ನಂಬಲು ತಯಾರಿಲ್ಲ.

ಇನ್ನು ನಟ ರಾಕ್ಷಸ ಧನಂಜಯ್ ಅವರು ಈ ವಿಚಾರದ ಬಗ್ಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹಾಗಾಗಿ ಧನಂಜಯ್ ಅವರು ಇದರ ಬಗ್ಗೆ ಏನು ಹೇಳುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಒಂದು ಮೂಲದ ಪ್ರಕಾರ ಡಾಲಿ ಹಾಗೂ ಅಮೃತಾ ಅವರು ಸದ್ಯ ಪ್ರೇಮಿಗಲಾಗಿದ್ದು, ಮುಂದಿನ ವರ್ಷ ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಳಿದಲಿದ್ದಾರೆ ಎಂದು ತಿಳಿದು ಬಂದಿದೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ..


Leave a Reply

Your email address will not be published. Required fields are marked *