ಡಿಬಾಸ್ ಗೆ ಮಾಲಾಶ್ರೀ ಮಗಳು ನಾಯಕಿಯಾಗುತ್ತಿದ್ದಂತೆ ಕನ್ನಡಿಗರು ಆಕ್ರೋಶ ಹೊರಹಾಕಿದ್ದಾರೆ.! ಅಷ್ಟಕ್ಕೂ ಆಗಿದ್ದು ಏನು ನೋಡಿ.

ಸುದ್ದಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹೊಸ ಚಿತ್ರದ ಮುಹೂರ್ತ ವರಮಹಾಲಕ್ಷ್ಮಿ ಹಬ್ಬದ ದಿನದಂದು ನಗರದ ದೇವಸ್ಥಾನವೊಂದರಲ್ಲಿ ಬಹಳ ಅದ್ದೂರಿಯಾಗಿ ನಡೆದಿತ್ತು. ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಹೊಸ ಚಿತ್ರಕ್ಕೆ ತರುಣ್ ಸುಧೀರ್ ಆಕ್ಷನ್ ಕಟ್ ಹೇಳುತ್ತಿದ್ದು ಆರ್ಟ್ ಆಫ್ ಲಿವಿಂಗ್ ನ ರವಿಶಂಕರ್ ಗುರೂಜಿಯವರು ಚಿತ್ರದ ಮುಹೂರ್ತಕ್ಕೆ ಚಾಲನೆ ನೀಡಿದರು. ಹೌದು ಡಿಬಾಸ್ ಮತ್ತು ತರುಣ್ ಸುಧೀರ್ ಕಾಂಬಿನೇಶನ್ ನ ಮತ್ತೊಂದು ಚಿತ್ರ ಇದಾಗಿದೆ. ಇದಿಷ್ಟೇ ವಿಷಯವಲ್ಲ.

ಕನ್ನಡ ಚಿತ್ರರಂಗದ ಕನಸಿನ ರಾಣಿ ಮಾಲಾಶ್ರೀಯವರ ಮಗಳು ರಾಧನಾ ರಾಮ್ ಅವರು ಈ ಚಿತ್ರದ ಮೂಲಕ ಕನ್ನಡದ ಚಿತ್ರರಂಗಕ್ಕೆ ನಾಯಕಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಚಿತ್ರರಂಗದ ಹೆಮ್ಮೆಯ ದಂಪತಿಗಳಾದ ಮಾಲಾಶ್ರೀ ಹಾಗೂ ಕೋಟಿ ರಾಮು ಅವರ ಮಗಳು ಸಿನೆಮಾರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವುದು ವಿಶೇಷ. ಈ ಚಿತ್ರದ ಮೂಲಕ ಅನನ್ಯ ಹೆಸರು ರಾಧನಾ ರಾಮ್ ಎಂದು ಜನರಿಗೆ ಪರಿಚಯವಾಗಲಿದೆ. ದಶಕಗಳ ಕಾಲ ಕನ್ನಡ ಪ್ರೇಕ್ಷಕರನ್ನು ರಂಜಿಸಿ ಮೋಡಿ ಮಾಡಿದ್ದ ಮಾಲಾಶ್ರೀಯವರ ಮಗಳು ಕೂಡ ಸ್ಯಾಂಡಲ್ವುಡ್ ನಲ್ಲಿ ಕಮಾಲ್ ಮಾಡಲಿದ್ದಾರಾ.? ಎಂದು ನೋಡಬೇಕಾಗಿದೆ.

ಸದ್ಯ ಇದರ ನಡುವೆ ದರ್ಶನ್ ಸಿನೆಮಾಗೆ ಮಾಲಾಶ್ರೀ ಮಗಳು ನಾಯಕಿ ಆಗುತ್ತಿದ್ದಂತೆ ವಿವಾದವೊಂದು ಸೃಷ್ಟಿಯಾಗಿದೆ ಏನಿದು ವಿವಾದ? ನೋಡೋಣ ಬನ್ನಿ. ಈ ಹಿಂದೆ ಮಾಲಾಶ್ರೀ ಅವರು ತೆಲುಗಿನ ಕಾಮಿಡಿ ನಟ ಅಲಿ ಯವರ ಅಲಿತೋ ಸರದಾಗ ಎಂಬ ಶೋ ನಲ್ಲಿ ಕಾಣಿಸಿಕೊಂಡಿದ್ದು ಈ ವೇಳೆ ಅಲಿ ಅವರು ಮಗಳ ಬಗ್ಗೆ ಪ್ರೆಶ್ನೆ ಮಾಡುತ್ತಾರೆ. ಇದಕ್ಕೆ ಉತ್ತರಿಸಿದ ಮಾಲಾಶ್ರೀ ಯವರು ನನ್ನ ಮಗಳು ತೆಲುಗು ಚಿತ್ರರಂಗದ ಮೂಲಕವೇ ಪಾದಾರ್ಪಣೆ ಮಾಡುವುದು. ನಾನು ಕನ್ನಡ ಸಿನೆಮಾ ಮೂಲಕ ಎಂಟ್ರಿ ಕೊಟ್ಟಿರಬಹುದು.

ಆದರೆ ನನ್ನ ಮಗಳು ಮಾತ್ರ ತೆಲುಗು ಸಿನೆಮಾ ಮೂಲಕವೇ ಎಂಟ್ರಿ ಕೊಡೋದು ಎಂಬ ಹೇಳಿಕೆ ನೀಡಿ ಬಿಡುತ್ತಾರೆ. ಅಲ್ಲದೇ ಅದಾದಮೇಲೆ ನನ್ನ ಮಗಳು ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಡಲು ತಯಾರಿ ನಡೆಸುತ್ತಿದ್ದು ತೆಲುಗು ಮೂಲಕ ಎಂಟ್ರಿ ಕೊಟ್ಟರೆ ಹೆಚ್ಚು ಜನಕ್ಕೆ ರೀಚ್ ಆಗ್ತಾರೆ. ಇನ್ನೂ ನನ್ನ ಮಗಳು ಕನ್ನಡಕ್ಕಿಂತ ಹೆಚ್ಚು ತೆಲುಗು ಸಿನೆಮಾವನ್ನೇ ನೋಡುವುದು ಎಂಬ ಹೇಳಿಕೆ ನೀಡಿರುತ್ತಾರೆ.

ಹೌದು ಈ ಮೂಲಕ ಕನ್ನಡಕ್ಕಿಂತ ತೆಲುಗು ಪ್ರೇಮವನ್ನು ನಟಿ ಮಾಲಾಶ್ರೀ ಮೆರೆದಿರುತ್ತಾರೆ. ಇನ್ನೂ ಮಾಲಾಶ್ರೀ ಮೂಲತಹ ತೆಲುಗು ನವರಾಗಿದ್ದು ಆದರೆ ಬದುಕು ಕಟ್ಟಿಕೊಂಡಿದ್ದೆ ಕನಸಿನ ರಾಣಿ, ಲೇಡಿ ಸೂಪರ್ ಸ್ಟಾರ್ ಅಗಿದ್ದು ಎಲ್ಲವೂ ಕೂಡ ಕನ್ನಡದಿಂದಲೇ. ಆದರೆ ಅಂದು ಯಾಕೆ ಅವರು ಆ ರೀತಿ ಹೇಳಿಕೆ ನೀಡಿದ್ದರೋ ಗೊತ್ತಿಲ್ಲ. ಹೀಗೆ ಮಾಲಾಶ್ರೀ ಎಡವಟ್ಟು ಮಾಡಿಕೊಂಡು ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದರು. ಸದ್ಯ ಆ ಸಂದರ್ಶನದ ವಿಡಿಯೋ ಇದೀಗ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ವೈ@ರಲ್ ಆಗುತ್ತಿದ್ದು ಕನ್ನಡಿಗರು ಮಾಲಾಶ್ರೀ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಇಂದು ನಿಮಗೆ ದರ್ಶನ್ ಅವರೇ ಬೇಕಾಯಿತಾ? ಅಂದು ಅಂಥಹ ಹೇಳಿಕೆಯನ್ನು ಯಾಕೆ ಕೊಟ್ರಿ? ನೀವು ಮಾತನಾಡಬೇಕಾದರೆ ಯೋಚನೆ ಮಾಡ ಬೇಕಿತ್ತು. ಇದರಿಂದ ಕನ್ನಡಿಗರಿಗೆ ಬೇಸರವಾಗಿದೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಇನ್ನು ಈ ವಿಚಾರ ಗಂಭೀರ ಸ್ವರೂಪ ಪಡೆದುಕೊಂಡರೆ ಮಾಲಾಶ್ರೀ ಕ್ಷಮೆ ಕೂಡ ಕೇಳಬೇಕಾಗುತ್ತದೆ. ಒಟ್ಟಾರೆ ತಾಯಿಯ ಹೇಳಿಕೆಯಿಂದ ಮಗಳ ಮೊದಲ ಸಿನೆಮಾದಲ್ಲಿಯೇ ವಿವಾದಕ್ಕೆ ಒಳಗಾಗಿದ್ದಾರೆ. ನಟಿ ಮಾಲಾಶ್ರೀ ಅವರ ಈ ಹೇಳಿಕೆ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.


Leave a Reply

Your email address will not be published. Required fields are marked *