ಡಿಬಾಸ್ ಬಳಿ ಇರುವ ಕಾರುಗಳ ಸಂಖ್ಯೆ ಎಷ್ಟು ಗೊತ್ತಾ.? ಅದೊಂದು ಕಾರು ಖರೀದಿಸಲು ಕಾಯುತ್ತಿರುವ ದರ್ಶನ್ ಯಾವ ಕಾರ್ ಗೊತ್ತಾ ನೋಡಿ!

ಸುದ್ದಿ

ಕನ್ನಡದ ಚಿತ್ರರಂಗದ ಹೆಮ್ಮೆಯ ನಟ ಅಭಿಮಾನಿಗಳ ಬಾಸ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಕಾರುಗಳೆಂದರೆ ಸಿಕ್ಕಾಪಟ್ಟೆ ಕ್ರೀಜ್ ಹೊಂದಿದ್ದಾರೆ. ಮಾರುಕಟ್ಟೆಯಲ್ಲಿ ಹೊಸದಾಗಿ ಕಾರು ಬಂದಿದೆ ಅಂದರೆ ಆ ಕಾರನ್ನು ಡ್ರೈವ ಅಥವಾ ಆ ಕಾರನ್ನು ಖರೀದಿ ಮಾಡಬೇಕು ಎಂಬ ದೊಡ್ಡ ಆಸೆ ಅವರದ್ದಾಗಿರುತ್ತದೆ. ಅದರಂತೆ ಹೊಸ ಹೊಸ ಕರಗಳನ್ನು ಅವರ ಮನೆಯ ಶೆಡ್ ಗೆ ಇಂದು ಅವರು ಸೇರಿಸುತ್ತ ಇಂದು ಡಿಬಾಸ್ ಮನೆಯಲ್ಲಿ ದುಬಾರಿ ಕಾರುಗಳು ಇದ್ದು ಕೂಡ ಮಾರುಕಟ್ಟೆಯಲ್ಲಿ ಬರುವ ಹೊಸ ಹೊಸ ಕರುಗಳನ್ನು ಖರೀದಿಸುತ್ತಾಲೇ ಇರುತ್ತಾರೆ.

ದರ್ಶನ್ ಅವರ ಬಳಿ ಈಗಾಗಲೇ ಲಂಬೊರ್ಗಿನಿ ಕಾರು ಒಂದಿದ್ದು ಇದೀಗ ಮತ್ತೊಂದು ಲಂಬೊರ್ಗಿನಿ ಕಾರನ್ನು ಕೂಡ ಖರೀದಿಸಿ ತಮ್ಮದಾಗಿಸಿಕೊಂಡಿದ್ದಾರೆ. ಬಳಿ ಬಣ್ಣದ ಲ್ಯಾಬೊರ್ಗಿನಿ ಅವೆಂಟೆಡರ್ ಇಟ್ಟುಕೊಂಡಿದ್ದ ದರ್ಶನ್ ಈಗ ಲಂಬೊರ್ಗಿನಿ ಊರಸ್ ಕಾರು ಕೂಡ ಖರೀದಿ ಮಾಡಿದ್ದಾರೆ. ತಿಳಿದ ಹಾಗೆ ಲಂಬೋರ್ಗಿನಿ ಅವೆಂಟೆಡರ್ ಕಾರಿನ ಬೆಲೆ 5 ಕೋಟಿ ಬೆಲೆ ಹೊಂದಿದ್ದು ಡಿಬಾಸ್ ಖರೀದಿ ಮಾಡಿರುವ ಮತ್ತೊಂದು ಕಾರಿನ ಬೆಲೆ ಸುಮಾರು 3 ಕೋಟಿ ಎಂದು ಹೇಳಲಾಗುತ್ತಿದೆ. ತೂಗುದೀಪ ನಿಲಯಕ್ಕೆ ಹಳದಿ ಬಣ್ಣದ ಕಾರು ಮತ್ತಷ್ಟು ಮೆರಗು ನೀಡಿದ್ದು ಅಭಿಮಾನಿಗಳು ಕೂಡ ನೋಡಿ ಸಂಭ್ರಮಿಸಿದ್ದಾರೆ.

ಇನ್ನು ಸಹಜವಾಗಿ ಡಿಬಾಸ್ ಅವರು ಹೊಸ ಕಾರು ಖರೀದಿಸಿದಾಗ ಅವರ ಕೆಲವು ಸ್ನೇಹಿತರು ಅವರ ಆತ್ಮೀಯರು ಅವರ ಮೆನೆಗೆ ಹೋಗುವುದು ಸಾಮಾನ್ಯ ಈ ವಿಚಾರಗಳು ಎಲ್ಲರಿಗೂ ತಿಳಿದಿದೆ. ಇನ್ನು ಇತ್ತೀಚಿಗೆ ದರ್ಶನ್ ಖರೀದಿಸಿದ ಹೊಸ ಕಾರಿನ ಬಳಿ ಡಿಬಾಸ್ ಜೊತೆಗೆ ಬಜಾರ್ ಖ್ಯಾತಿಯ ಯುವ ನಾಯಕ ಧನ್ವಿರ್ ಫೋಟೋ ತೆಗೆಸಿಕೊಂಡಿದ್ದು ಈ ಫೋಟೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇನ್ನು ನಮ್ಮ ಪುನೀತ್ ರಾಜ್ ಕುಮಾರ್ ಅವರು ಕೂಡ ಇದೇ ಲಂಬೋರ್ಗಿನಿ ನೀಲಿ ಬಣ್ಣದ ಊರುಸ್ ಕಾರನ್ನು ಖರೀದಿ ಮಾಡಿದ್ದರು ಈ ಕಾರನ್ನು ತನ್ನ ಪತ್ನಿಗೆ ಉಡುಗೊರೆಯಾಗಿ ನೀಡಿದ್ದರು. ಲಂಬೋರ್ಗಿನಿ ಕಾರು ಕನ್ನಡ ಸಿನೆಮಾರಂಗದಲ್ಲಿ ಮೂವರ ಬಳಿ ಇದ್ದು ನಿಖಿಲ್ ಕುಮಾರ್, ಡಿಬಾಸ್ ಬಳಿ ಎರಡು ಹಾಗೂ ಪುನೀತ್ ರಾಜ್ ಕುಮಾರ್ ಅವರ ಬಿಳಿ ಒಂದು ಲಂಬೋರ್ಗಿನಿ ಕಾರನ್ನು ಹೊಂದಿದ್ದಾರೆ. ಸಾಧ್ಯ ನಮ್ಮ ಕನ್ನಡ ಚಿತ್ರರಂಗದಲ್ಲಿ ಅತೀ ಹೆಚ್ಚು ದುಬಾರಿ ಕಾರನ್ನು ಹೊಂದಿರುವ ಏಕೈಕ ನಟ ಅಂದರೆ ಅದು ನಮ್ಮ ದರ್ಶನ್.
ಅವರ ಬಳಿ ಜಾಗ್ವಾರ್, ಪೋಶ್ಚ, ಆಡಿ ಕ್ಯೂ 7, ಐ 20, ರೇಂಜ್ ರೋವರ್, ಫಾರ್ಚುನರ್, ಮಿನಿ ಬೆಂಜ್, ಕೂಪಾರ್ಲನೋಂಬಿರ್ಗಿನಿ, ಜೀಪ್, ಅಂತಹ ಐಷಾರಾಮಿ ಕರುಗಳನ್ನು ಹೊಂದಿದ್ದಾರೆ. ಇನ್ನು ನಟ ದರ್ಶನ್ ಯಾವುದೇ ಹೊಸ ಕಾರನ್ನು ಖರೀದಿಸಿದರು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಪೂಜೆ ಮಾಡಿಸಿ ಹೊಸ ಕರಿಗೂ ದೇವಿ ದರ್ಶನ ಮಾಡಿಸಿ, ದೇವರಿಗೆ ಪೂಜೆ ಮಾಡಿಸಿ ಬರುತ್ತಾರೆ.

ಎಲ್ಲಾ ರೀತಿಯ ಕಾರನ್ನು ಹೊಂದಿರುವ ನಟ ದರ್ಶನ್ ಅವರು ತಮ್ಮ ಡ್ರೀಮ್ ಕಾರ್ ಬಗ್ಗೆ ಮಾತನಾಡಿದ್ದು ಸದ್ಯಕ್ಕೆ ನಾನು ಈ ಕಾರನ್ನು ಇಳಿಸಬೇಕು ಎಂಬ ಆಸೆಯಿದೆ. ಇಷ್ಟೋತ್ತಿಗಾಗಲೇ ಇಳಿಸಿ ಬಿಡುತ್ತಿದ್ದೆ ಆದರೆ ನಮ್ಮ ಬೆಂಗಕೂರಿನಲ್ಲಿ ಅದರುದ್ದು ಶೋರೂಮ್ ಇಲ್ಲ. ಮುಂಬೈನಲ್ಲಿ ಇದೆ ಯಾಕೆ ಈ ಮಾತನ್ನು ಹೇಳುತ್ತೇತ್ತಿದ್ದೇನೆ ಎಂದರೆ ಹಮ್ಮರ್ ಕ್ರೇಸ್ ನಲ್ಲಿ ನಾನು ಹಮ್ಮರ್ ಕರೊಂದನ್ನು ತೆಗೆದುಕೊಂಡೆ ಹೊರಗಡೆಯಿಂದ ಹಮ್ಮರ್ ಅಷ್ಟೇ ಒಳಗಡೆ ನೋಡಿದರೆ ಮಾರುತಿ 800 ಗಿಂತ ಕಡಿಮೆ ಅದು.

ಏನೇ ತೊಂದರೆ ಆದರೂ ಕೂಡ ಅಲ್ಲಿಂದ ಕರೆಸಬೇಕಿತ್ತು ಹಾಗಾಗಿ ಆ ಕಷ್ಟ ನೋಡೇ ನಾನು ಆ ಕಾರನ್ನು ಕೊಟ್ಟುಬಿಟ್ಟೆ. ಅವತ್ತಿಂದ ಒಂದು ಅನಿಸಿತ್ತು ಯಾವುದೇ ಇಂಪೋಟೆಡ್ ಕಾರ್ ತೆಗೆದುಕೊಂಡರು ಕೂಡ ಅದು ನಮ್ಮ ಇಂಡಿಯದಲ್ಲಿ ಶೋರೂಮ್ ಇರಬೇಕು. ಇಲ್ಲ ಆ ಗಾಡಿಯ ಸಹವಾಸವೇ ಬೇಡ. ಸಾಧ್ಯ ನನ್ನ ಡ್ರೀಮ್ ಬೆಂಟ್ಲಿ ಅಗಿದ್ದು ಅದರ ಶೋರೂಮ್ ಡೆಲ್ಲಿಯಲ್ಲಿದೆ. ಇದರ ಬಗ್ಗೆ ಕೂಡ ಯೋಚನೆ ಮಾಡಿದ್ದೇನೆ ಆದಷ್ಟು ಬೇಗ ತೆಗೆದುಕೊಳ್ಳುತ್ತೇನೆ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ.


Leave a Reply

Your email address will not be published. Required fields are marked *