ಸ್ಯಾಂಡಲ್ ವುಡ್ ನಲ್ಲಿ ತನ್ನದೇ ಆದ ಸ್ಟೈಲ್ ನಿಂದ ಗುರುತಿಸಿಕೊಂಡ ನಟ ಡಿಬಾಸ್ ದರ್ಶನ್. ತಮ್ಮ ಸಿನಿಮಾ ಮೂಲಕ ಮಾತ್ರವಲ್ಲದೆ ತಮ್ಮ ಸ್ಟೈಲ್ ಮೂಲಕವೂ ದರ್ಶನ್ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ. ಬಾಕ್ಸಾಫೀಸ್ ಸುಲ್ತಾನ, ಡಿ ಬಾಸ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ದಾಸ ಹೀಗೆ ನಾನಾ ಹೆಸರುಗಳಿಂದ ಗುರುತಿಸಿಕೊಂಡಿರುವ ನಟ ದರ್ಶನ್. ಸಾವಿರಾರು ಜನರ ಮಧ್ಯೆ ದರ್ಶನ್ ಇದ್ದರೂ ಎದ್ದು ಕಾಣುವಂತಹ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್.
ಇವರು ಹೆಚ್ಚಾಗಿ ತಮ್ಮ ಸಿನಿಮಾಗಳಲ್ಲಿ ವಿಭಿನ್ನ ಹೇರ್ಸ್ಟೈಲ್ಗಳಿಂದ ಗಮನ ಸೆಳೆಯುತ್ತಿರುತ್ತಾರೆ. ಅವರ ಹೇರ್ ಸ್ಟೈಲ್ ಟ್ರೆಂಡ್ ಕೂಡ ಆಗುತ್ತವೆ. ಸಲೂನ್ ಗಳಲ್ಲಿ ದರ್ಶನ್ ಹೇರ್ ಸ್ಟೈಲ್ ಎಂದೇ ಕೆಲವೊಂದು ಹೇರ್ ಸ್ಟೈಲ್ ಮಾಡಲಾಗುತ್ತದೆ. ಅಲ್ಲಿಯವರೆಗೆ ದರ್ಶನ್ ಅವರ ಹೇರ್ ಸ್ಟೈಲ್ ಕ್ಲಿಕ್ ಆಗುತ್ತವೆ. ಪಾತ್ರಗಳಿಗೆ ತಕ್ಕಂತೆ ಹೇರ್ ಸ್ಟೈಲ್ ಮಾಡುವುದರಲ್ಲಿ ದಾಸ ಎತ್ತಿದ ಕೈ. ಉದಾಹರಣೆಗೆ ದರ್ಶನ್ ಅವರು ತಮ್ಮ ‘ಗಜ’ ‘ಅಭಯ್’ ಅದೇ ರೀತಿ ‘ಪೋಕಿರಿ’ ಸಿನಿಮಾಗಳಲ್ಲಿ ಉದ್ದನೆಯ ಕೂದಲು ಬಿಟ್ಟು ಮಿಂಚಿದ್ದರು.
ಆ ಹೇರ್ ಸ್ಟೈಲ್ ಅನ್ನು ಯುವಕರು ಟ್ರೆಂಡ್ ಮಾಡಿ ಬಿಟ್ಟಿದ್ದರು. ಆ ಸಮಯದಲ್ಲಿ ಎಷ್ಟೋ ಯುವಕರ ಹೇರ್ ಸ್ಟೈಲ್ ಅದೇ ಆಗಿತ್ತು. ಇನ್ನು ದರ್ಶನ್ ಅವರ ಸಿನಿಮಾ ಚಕ್ರವರ್ತಿ. ಇದರಲ್ಲಿ ದರ್ಶನ್ ಅವರ ಲುಕ್ ಹಾಗೂ ಸ್ಟೈಲ್, ಟ್ರೆಂಡ್ ಕ್ರಿಯೇಟ್ ಮಾಡಿತ್ತು. ಅದೇ ರೀತಿ ‘ತಾರಕ್’ ಸಿನಿಮಾದಲ್ಲಿ ಅಮೆರಿಕನ್ ರಗ್ಬಿ ಆಟಗಾರನಾಗಿ ಮಿಂಚಿದ್ದ ದರ್ಶನ್ ಅವರ ಶಾರ್ಟ್ ಹೇರ್ ಸ್ಟೈಲ್ ಕ್ಲಿಕ್ ಆಗಿತ್ತು.ಬಾಕ್ಸಾಫೀಸ್ ಉಡೀಸ್ ಮಾಡಿದ್ದ ರಾಬರ್ಟ್ ಸಿನಿಮಾದಲ್ಲಿ ಕೂಡ ಡಿಫರೆಂಟ್ ಲುಕ್ನಲ್ಲಿ ಮೋಡಿ ಮಾಡಿದ್ದರು.
ಕುರುಚಲು ಗಡ್ಡ ಬಿಟ್ಟು ಉದ್ದನೆಯ ಕೂದಲಿಗೆ ಹೆಡ್ ಬ್ಯಾಂಡ್ ಹಾಕಿಕೊಂಡು ಡಿ ಬಾಸ್ ಅಭಿಮಾನಿಗಳ ಮನಸ್ಸು ಗೆದ್ದಿದ್ದರು. ಇದೀಗ ಡಿ ಬಾಸ್ ದರ್ಶನ್ ಅವರು ಪೋಲ್ಯಾಂಡ್ ನಿಂದ ‘ಕ್ರಾಂತಿ’ ಸಿನಿಮಾ ಶೂಟಿಂಗ್ ಮುಗಿಸಿ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಬೆಂಗಳೂರಿನಲ್ಲಿ ತಮ್ಮ ಹೊಸ ಹೇರ್ ಸ್ಟೈಲ್ ಮೂಲಕ ದರ್ಶನ್ ಅಭಿಮಾನಿಗಳ ಮುಂದೆ ಬಂದಿದ್ದಾರೆ.ಹೌದು, ಸ್ಟೈಲಿಷ್ ಆಗಿ ಹೇರ್ ಕಟ್ ಮಾಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ತುಂಬಾನೆ ಸುಂದರವಾಗಿ ಕಂಡು ಬಂದಿದ್ದಾರೆ.
ಸ್ವಲ್ಪ ಶಾರ್ಟ್ ಆಗಿಯೇ ತಮ್ಮ ಕೂದಲು ಕಟ್ ಮಾಡಿಸಿರುವ ದರ್ಶನ್ ಅವರು ಹೇರ್ ಕಲರಿಂಗ್ ಕೂಡ ಮಾಡಿಸಿಕೊಂಡಿದ್ದಾರೆ. ಇವರ ಈ ಹೊಸ ಹೇರ್ ಸ್ಟೈಲ್ ನ ಫೋಟೋ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಅಭಿಮಾನಿಗಳು, ನೆಟ್ಟಿಗರು ದರ್ಶನ್ ಅವರ ಹೇರ್ ಸ್ಟೈಲ್ ಬಗ್ಗೆ ನಾನಾ ರೀತಿಯಲ್ಲಿ ಮೆಚ್ಚುಗೆಯ ಕಾಮೆಂಟ್ ಹಾಕುತ್ತಿದ್ದಾರೆ. ಅಷ್ಟೇ ಅಲ್ಲ ತಮ್ಮ ಖಾತೆಯಲ್ಲಿ ಕೂಡ ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಪೋಲಾಂಡ್ ನಿಂದ ಬಂದ ಕೂಡಲೇ ದರ್ಶನ್ ಅವರು ಅಭಿಮಾನಿಗಳ ಕಣ್ಣಿಗೆ ಬಿದ್ದಿದ್ದು ಅವರ ಹೊಸ ಲುಕ್ ಗೆ ಫಿದಾ ಆಗಿ ಬಿಟ್ಟಿದ್ದಾರೆ. ಇನ್ನು ಅವರ ಕ್ರಾಂತಿ ಸಿನಿಮಾದ ಪ್ರಚಾರ ಕೂಡ ಭಾರೀ ಜೋರಾಗಿ ನಡೆಯುತ್ತಿದೆ. ಸದ್ಯ ಸೋಶಿಯಲ್ ಮೀಡಿಯಾ ದಲ್ಲಿ ದರ್ಶನ್ ಅವರ ಕ್ರಾಂತಿ ಸಿನಿಮಾದ ವಿಚಾರಕ್ಕಿಂತ ಅವರ ಹೊಸ ಹೇರ್ ಸ್ಟೈಲ್ ವಿಚಾರದ ಬಗ್ಗೆಯೇ ಚರ್ಚೆ ಆಗುತ್ತಿದೆ.ನಿಮಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಈ ಹೊಸ ಹೇರ್ ಸ್ಟೈಲ್ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.