ಡಿಬಾಸ್ ಹಾಗೂ ಕಿಚ್ಚ ಸುದೀಪ್ ಅಭಿನಯದ ಸಿನೆಮಾಗಳು ಒಂದೇ ದಿನ ಬಿಡುಗಡೆಯಗಿದ್ದರು ಬಾಕ್ಸ್ ಆಫೀಸ್ ನಲ್ಲಿ ಗೆದ್ದು ದೂಳಿಪಟ ಮಾಡಿರುವ ಸಿನೆಮಾ ಯಾವುದು ಗೊತ್ತಾ.?

ಸುದ್ದಿ

ಪ್ರೀತಿಯ ವೀಕ್ಷಕರೆ ಅಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್ ಹಾಲು ಜೇನಿನಂತೆ ಇದ್ದ ಸಂಬಂಧ ಇಂದು ಹಾವು ಮುಂಗುಸಿ ಇದ್ದ ಹಾಗೆ ಇದ್ದಾರೆ ಎಂಬುದು ಎಷ್ಟು ನಿಜವೋ ಆದರೆ ಈ ಹಿಂದೆ ಅವರಿಬ್ಬರ ನಡಿವೆ ಇದ್ದ ಸ್ನೇಹ ಪ್ರಾಮಾಣಿಕತೆಯಿಂದ ಕೂಡಿತ್ತು. ಸಿನೆಮಾ ಕ್ಷೇತ್ರಕ್ಕೆ ಹೊಸದಾಗಿ ಪಾದಾರ್ಪಣೆ ಮಾಡಿರುವ ಇಬ್ಬರು ನಟರು ಕೂಡ ಸಾಕಷ್ಟು ಕಷ್ಟ ಪಟ್ಟು ಬಂದಿದ್ದರು. ಚಿತ್ರರಂಗಕ್ಕೆ ಬಂದಾಗ ಇವರಿಬ್ಬರ ನಡುವೆ ಯಾವುದೇ ರೀತಿಯ ಸ್ನೇಹ ಬಾಂಧವ್ಯ ಇರಲಿಲ್ಲ.

ಹೀಗಿರುವಾಗ ದರ್ಶನ್ ಹಾಗೂ ಸುದೀಪ್ ನಟನೆಯ ಎರಡು ಸಿನೆಮಾಗಳು ಒಂದೇ ದಿನ ಬಿಡುಗಡೆಯಗುತ್ತದೆ. 2 ಚಿತ್ರಗಳು ಕೂಡ ಉತ್ತಮವಾದ ಕಥೆಯನ್ನು ಹೊಂದಿದ್ದವು ಹಾಗೂ ಅವರಿಗೆ ತಕ್ಕಂತೆ ಅವರ ಶೈಲಿಯ ನಟನೆಯಿಂದಲೇ ಸಿನೆಮಾಗೆ ಯಶಸ್ಸುನ್ನು ತಂದು ಕೊಟ್ಟಿದ್ದರು. ಹಗಾದರೆ ಆ ಸಿನೆಮಾಗಳು ಯಾವುವು ಹಾಗೂ ಆ ಎರಡು ಸಿನೆಮಾಗಳಲ್ಲಿ ಗೆದ್ದ ಸಿನೆಮಾಗಳು ಯಾವುವು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಒಂದು ಕಡೆ ದರ್ಶನ್ ಅಭಿನಯದ ಸುಂಟರಗಾಳಿ ಮತ್ತೊಂದು ಕಡೆ ಸುದೀಪ್ ನಟನೆಯ ಮೈ ಆಟೋಗ್ರಾಫ್ ಸಿನೆಮಾ. ಆ ಸಂದರ್ಭದಲ್ಲಿ ಸುದೀಪ್ ಅವರಿಗೆ ಗೆಲುವಿನ ಅವಶ್ಯಕತೆ ತುಂಬಾ ಇತ್ತು. ಆದರೆ ದರ್ಶನ್ ಅವರು ಈ ರೀತಿಯ ಪರಿಸ್ಥಿತಿಯಲ್ಲಿ ಇರಲಿಲ್ಲ ಏಕೆಂದರೆ ಅದಾಗಲೇ ದರ್ಶನ್ ಅವರು ಹಲವಾರು ಹಿಟ್ ಸಿನೆಮಾಗಳನ್ನು ನೀಡಿದ್ದರು. ಸುದೀಪ್ ಅವರು ಹಿಟ್ ಸಿನೆಮಾಗಳನ್ನು ನೀಡಿದ್ದರು ತಾನೊಬ್ಬ ನಿರ್ದೇಶಕನಾಗಿ ಚಿತ್ರರಂಗದಲ್ಲಿ ಗೆಲ್ಲಬೇಕು ಎಂಬ ಪಣವನ್ನು ತೊಟ್ಟಿದ್ದರು.

ದರ್ಶನ್ ಅವರ ಸುಂಟರಗಾಳಿ ಸಿನೆಮಾವನ್ನು ಸಾಧುಕೋಕಿಲ ಅವರು ನಿರ್ದೇಶನ ಮಾಡಿದ್ದರು. ಇದರ ಜೊತೆಗೆ ಸಂಗೀತ ನಿರ್ದೇಶನ ಕೂಡ ಸಾಧುಕೋಕಿಲ ಅವರೇ ಮಾಡಿದ್ದರು. ಸುಂಟರಗಾಳಿ ಸಿನೆಮಾ ಚನ್ನಾಗಿ ಮೂಡಿಬಂದಿತ್ತು ಹಾಗೂ ಪ್ರೇಕ್ಷಕರು ಕೂಡ ಇಷ್ಟಪಟ್ಟಿದ್ದರು. 50 ದಿನಗಳ ಯಶಸ್ವಿ ಪ್ರದರ್ಶನವನ್ನು ಕಂಡ ಸುಂಟರಗಾಳಿ ಸಿನಿಮಾ ಬಾಕ್ಸ್ ಆಫೀಸ್ ನ ಗಲ್ಲಾಪೆಟ್ಟಿಗೆಯಲ್ಲಿ ಒಳ್ಳೆಯ ಗಳಿಕೆಯನ್ನು ಕೂಡ ಕಂಡಿತ್ತು.

ಇನ್ನು ಮೈ ಆಟೋಗ್ರಾಫ್ ಸುದೀಪ್ ಅವರ ವೃತ್ತಿ ಜೀವನದಲ್ಲಿ ಒಂದು ಹೊಸ ಮೈಲುಗಲ್ಲನ್ನು ಸೃಷ್ಟಿಸಿದ ಸಿನೆಮಾ. ಮೈ ಆಟೋಗ್ರಾಫ್ ಸಿನೆಮಾದಲ್ಲಿ ಬಾಲ್ಯ, ಯವ್ವನ ಹಾಗೂ ನಮ್ಮ ಜೀವನದಲ್ಲಿ ನಾವು ಹಿಂದೆ ತಿರುಗಿ ನೋಡಿದಾಗ ಏನೆಲ್ಲಾ ಸಂತೋಷವನ್ನು ಕಂಡಿದ್ದೆವು ಹಾಗೂ ಯಾವ ರೀತಿಯಲ್ಲಿ ನೋವನ್ನು ಅನುಭವಿಸಿದ್ದೆವು ಎಂಬುದನ್ನು ಸುದೀಪ್ ಅವರು ತುಂಬಾ ಅಚ್ಚುಕಟ್ಟಾಗಿ ತಮ್ಮ ನಿರ್ದೇಶನದ ಚೊಚ್ಚಲ ಸಿನೆಮಾದಲ್ಲಿಯೇ ತೋರಿಸಿದ್ದರು.

ಮೈ ಆಟೋಗ್ರಾಫ್ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಯಾವುದೇ ನಿರೀಕ್ಷೆಇಲ್ಲದೆ ಗಾಂಧಿನಗರದ ಪಂಡಿತರ ನಿರೀಕ್ಷೆಗೂ ಮೀರಿದ ಅತೀ ಹೆಚ್ಚು ಹಣವನ್ನು ಸಂಪಾದಿಸಿ ಸುದೀಪ್ ಅವರ ವೃತ್ತಿ ಜೀವನಕ್ಕೆ ಒಂದು ಹೊಸ ಮೈಲುಗಲ್ಲು ಸೃಷ್ಟಿ ಮಾಡಿತ್ತು. ಅಂತಿಮವಾಗಿ ಹೇಳುವುದಾದರೆ ದಾಸ ದಾಸನಾಗಿಯೇ ಗೆದ್ದರೆ ಸುದೀಪ್ ಕಿಚ್ಚನಾಗಿಯೇ ಗೆದಿದ್ದರು. ಅವರವರ ಅಭಿಮಾನಿಗಳು ತಮ್ಮ ಹೀರೊಗಳ ಸಿನೆಮಾವನ್ನು ನೋಡಿ ಮೆಚ್ಚಿಕೊಂಡಿದ್ದರು. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು.


Leave a Reply

Your email address will not be published. Required fields are marked *