ಡಿ ಬಾಸ್ ಅವರ ಕ್ರಾಂತಿ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದ್ರೂ ನಟ ಪ್ರಮೋದ್ ಶೆಟ್ಟಿ ಒಪ್ಪಿಲ್ಲ ಯಾಕೆ ಗೊತ್ತಾ? ಯಾಕೆ ಹೀಗೆ ಮಾಡಿದ್ರು ಶೆಟ್ರು.. ಒಮ್ಮೆ ನೋಡಿ

ಸುದ್ದಿ

ಚಂದನವನದಲ್ಲಿ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಸಾಕಷ್ಟು ಕಲಾವಿದರು ಕಿರುತೆರೆ ಹಾಗೂ ಬೆಳ್ಳಿತೆರೆಯನ್ನು ನಟ ನಟಿಯರು, ನಂಬಿಕೊಂಡಿದ್ದಾರೆ. ಕೆಲವರಿಗೆ ಸಿನೆಮಾ ಕ್ಷೇತ್ರವು ಅವಕಾಶಗಳನ್ನು ನೀಡಿ ಒಳ್ಳೆಯ ಬದುಕನ್ನು ನೀಡಿದೆ. ಆದರೆ ಇನ್ನು ಕೆಲವರು ಒಂದೆರಡು ಸಿನೆಮಾಗಳಲ್ಲಿ ಕಾಣಿಸಿಕೊಂಡು ಚಿತ್ರರಂಗ ಹಾಗೂ ನಟನೆಯಿಂದಲೇ ದೂರ ಉಳಿದಿದ್ದರೆ. ಅದರೆ ಈ ಸಿನೆಮಾರಂಗದಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿರುವ ಈ ನಟನಿಗೆ, ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡರು ಅವಕಾಶಗಳು ಸಿಗದೇ ಇರುವ ಕಾಲದಲ್ಲಿ ಸಣ್ಣ ಪುಟ್ಟ ಪಾತ್ರವನ್ನು ಮಾಡುತ್ತಿದ್ದಾರೆ.

ಈ ನಟ ಬೇರೆ ಯಾರು ಅಲ್ಲ, ನಟ ಪ್ರಮೋದ್ ಶೆಟ್ಟಿ. ನಿಮಗೆ ಗೊತ್ತಿರುವ ಹಾಗೇ ನಟ ಪ್ರಮೋದ್ ಶೆಟ್ಟಿ ಅವರು, ನಿರ್ದೇಶಕ ರಿಷಿಬ್ ಶೆಟ್ಟಿ ನಿರ್ದೇಶನದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿನಿಮಾದಲ್ಲಿ ಶಾಂತಾರಾಮ ಉಪಾಧ್ಯಯ ಪಾತ್ರದಲ್ಲಿ ಯಕ್ಷಗಾನ ಉಡುಪು ಧರಿಸಿ ಅಭಿನಯಿಸಿದ್ದರು. ಈ ಪಾತ್ರವು ನಟ ಪ್ರಮೋದ್ ಶೆಟ್ಟಿ ಅವರಿಗೆ ತುಂಬಾ ಫೇಮ್ ತಂದುಕೊಟ್ಟಿದೆ. ಅಲ್ಲದೇ. ಪ್ರಮೋದ್ ಶೆಟ್ಟಿ ಅವರು ರಕ್ಷಿತ್ ಶೆಟ್ಟಿ ಅವರ ‘ಉಳಿದವರು ಕಂಡಂತೆ’ ಚಿತ್ರದಲ್ಲಿ ನಟಿಸಿ ಸಾಕಷ್ಟು ಖ್ಯಾತಿg ಗಳಿಸಿದ್ದಾರೆ. ನಂತರ ರಿಕ್ಕಿ ಚಿತ್ರದಲ್ಲಿ ನಕ್ಸುಲ್ ಪತ್ರದಲ್ಲಿ ಅದ್ಭುತ ಅಭಿನಯವನ್ನು ಮಾಡಿದ್ದಾರೆ.

ಸಾಧ್ಯ ಅನೇಕ ಚಿತ್ರಗಳು ಪ್ರಮೋದ್ ಶೆಟ್ಟಿ ಅವರ ಕೈನಲ್ಲಿದ್ದು, ಚಿತ್ರರಂಗದಲ್ಲಿ ಸಾಕಷ್ಟು ಬ್ಯುಸಿ ಆಗಿದ್ದಾರೆ. ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ನಿರ್ಮಾಣ ಸಂಸ್ಥೆಯಲ್ಲಿ ರೆಡಿಯಾಗುತ್ತಿರುವ ಲಾಫಿಂಗ್ ಬುದ್ಧಿ ಚಿತ್ರದಲ್ಲೂ ಪ್ರಧಾನ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಸದ್ಯಕ್ಕೆ ನಟ ಪ್ರಮೋದ್ ಶೆಟ್ಟಿ ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟರಾಗಿದ್ದು, ಇವರು ಹೆಂಡತಿಯು ಕೂಡ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ.

ಇವರ ಪತ್ನಿ ಹೆಸರು ಸುಪ್ರೀತಾ ಶೆಟ್ಟಿ ಇವರು ಅಭಿನಯದಲ್ಲಿ ತೊಡಗಿಸಿಕೊಂಡಿದ್ದು ‘ಕುಲವಧು’ ಸೀರಿಯಲ್ ನಲ್ಲಿ ಇವರ ನಟನೆಯಿಂದ ಪ್ರಸಿದ್ದರಾಗಿದ್ದಾರೆ. 2010 ರಲ್ಲಿ ಸುಪ್ರೀತಾ ಶೆಟ್ಟಿ ಎಂಬುವರ ಜೊತೆಗೆ ಸಪ್ತಪದಿ ತುಳಿದ್ದಿದ್ದಾರೆ. ಈ ದಂಪತಿಗಳಿಗೆ ಇಬ್ಬನಿ ಎಂಬ ಮುದ್ದಾದ ಹೆಣ್ಣು ಮಗಳಿದ್ದು,2019 ರಲ್ಲಿ ಸುಪ್ರೀತಾ ಶೆಟ್ಟಿಯವರು ಗಂಡು ಮಗನಿಗೆ ಜನ್ಮ ನೀಡಿದ್ದಾರೆ. ಗಂಡು ಮಗುವಿಗೆ ಮನೋಜ್ ಶೆಟ್ಟಿ ಎಂದು ನಾಮಕರಣ ಮಾಡಿದ್ದಾರೆ. ಸದ್ಯಕ್ಕೆ ದಂಪತಿಗಳು ಇಬ್ಬರು ನಟನೆಯಲ್ಲಿ ಬ್ಯುಸಿ ಆಗಿದ್ದಾರೆ.

ಅಂದಹಾಗೆ ಪ್ರಮೋದ್ ಶೆಟ್ಟಿ ಅವರಿಗೆ ಕ್ರಾಂತಿ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕರೂ ಕೂಡ ನಟಿಸಲಿಲ್ಲ ಯಾಕೆ ಗೊತ್ತಾ? ಹೌದು ಮೀಡಿಯಾದವರು ಹಾಗೂ ಅಭಿಮಾನಿಗಳು ಕೇಳ್ತಾರೇ ದರ್ಶನ್ ಅವರ ಜೊತೆ ಯಾವಾಗ ಸಿನೆಮಾ ಮಾಡ್ತೀರಾ ಎಂಬ ಪ್ರೆಶ್ನೆ. ಅದಕ್ಕೆ ಪ್ರತಿಕ್ರಿಯೇ ನೀಡಿದ ಪ್ರಮೋದ್ ಶೆಟ್ಟಿ. ನನಗು ಪೋಸ್ಟ್ ಗಳಲ್ಲಿ ಮೆಸೇಜ್ಗಳು ಬರ್ತಾ ಇರುತ್ತೆ. ದರ್ಶನ್ ಅವರ ಜೊತೆಗೆ ಯಾವಾಗ ಸಿನೆಮಾ ಮಾಡ್ತೀರಾ, ಸುದೀಪ್ ಸರ್ ಜೊತೆಗೆ ಯಾವಾಗ ಸಿನೆಮಾ ಮಾಡೀತೀರಾ ಅಂತ.

ಹೆಚ್ಚಾಗಿ ಮೆಸೇಜ್ ಬರ್ತಾ ಇರೋದು ದರ್ಶನ್ ಸರ್ ಜೊತೆ ಯಾವಾಗ ಮಾಡ್ತೀರಾ ಅಂತ. ಆ ಒಳ್ಳೆಯ ಅವಕಾಶಕ್ಕಾಗಿ ನಾನು ಕೂಡ ಕಾಯುತ್ತಿದ್ದನೆ. ಇತ್ತೀಚಿಗೆ ಏನಾಗಿದೆ ಅಂದರೆ ಇಡೀ ದೇಶದಲ್ಲಿ ಸಿನೆಮಾ ಹೋಗ್ಬೇಕು. ಇಂಡಿಯನ್ ಸಿನೆಮಾ ಆಗ್ಬೇಕು ಅಂತಾನೂ ಅಂದುಕೊಳ್ತೀರೆ. ಹೀಗಾಗಿ ಹೀರೊ ನಮ್ಮವರು ಆಗಿದ್ರೆ, ಖಡಕ್ ವಿಲನ್ ಬೇರೆ ಊರಿನಿಂದ ಬರ್ಬೇಕು ಅಂತ ಅಂದುಕೊಳ್ಳುತ್ತಾರೆ.
ಅದೇ ತರಹ ಬೇರೆ ಭಾಷೆಯವರು ಕೂಡ ಅವರನ್ನು ಬಿಟ್ಟು ಬೇರೆ ಭಾಷೆಯವರನ್ನು ಕರೆತರುತ್ತಾರೆ. ಹಾಗಾಗಿ ನನಗೆ ಹೊರಗಡೆಯಿಂದ ಹೆಚ್ಚು ಕರೆಗಳು ಬರ್ತಾ ಇವೆ. ದರ್ಶನ್ ಸರ್ ಜೊತೆ ಸಿನೆಮಾ ಮಾಡುವ ಅವಕಾಶ ಇನ್ನು ಸಿಕ್ಕಿಲ್ಲ. ಸಿನೆಮಾ ಬಂದ್ರೆ ನಾನು ಖಂಡಿತವಾಗಿಯೂ ಬಿಡಲ್ಲ.

ಕ್ರಾಂತಿ ಸಿನಿಮದಲ್ಲಿ ಕೇಳಿದ್ರು, ನೆಗೆಟಿವ್ ಪಾತ್ರ ಅಲ್ಲ. ಅವರ ಜೊತೆಗೆ ಫ್ರೆಂಡ್ ಪಾತ್ರ. ಆದರೆ ನನಗೆ ಡೇಟ್ ಮ್ಯಾಚ್ ಮಾಡ್ಲಿಕ್ಕೆ ಆಗಿಲ್ಲ. ಸೊ ಅವರ ಜೊತೆ ಆಕ್ಟ್ ಮಾಡ್ಲಿಕ್ಕೆ ಆಗಿಲ್ಲ. ಫೈನಲಿ ನನ್ನ ಈ ಪಾತ್ರಕ್ಕೆ ಯಾವಾಗ ಆದ್ರೂ ಕರೆದ್ರೆ ಬಂದು ಖಂಡಿತ ಮಾಡ್ತೀನಿ ಎಂದಿದ್ದಾರೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ..


Leave a Reply

Your email address will not be published. Required fields are marked *