ಡಿ ಬಾಸ್ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ಮೇಘ ಶೆಟ್ಟಿ..!?

Entertainment

ಇತ್ತೀಚಿನ ದಿನಗಳಲ್ಲಿ ಕಿರುತೆರೆ ಕ್ಷೇತ್ರದ ಧಾರವಾಹಿಗಳು ಸಿನಿಮಾಗಳಿಗೆ ಸರಿಸಮನಾಗಿ ಕರ್ನಾಟಕದ ಮೂಲೆಮೂಲೆಯ ಪ್ರೇಕ್ಷಕರಿಗೂ ಕೂಡ ತಲುಪುತ್ತಿವೆ. ಪ್ರೇಕ್ಷಕರು ಸಿನಿಮಾ ಗಳಷ್ಟು ಧಾರವಾಹಿಗಳನ್ನು ಕೂಡ ಇಂಟರೆಸ್ಟಿಂಗ್ ಆಗಿ ನೋಡುತ್ತಿದ್ದಾರೆ. ಹಲವಾರು ಧಾರವಾಹಿಗಳು ಸಿನಿಮಾಗಳಷ್ಟೆ ಜನಪ್ರಿಯತೆಯನ್ನು ಕೂಡ ಹೊಂದಿದ್ದಾವೆ. ಅವುಗಳಲ್ಲಿ ಅಗ್ರಗಣ್ಯ ವಾಗಿ ಕಾಣಿಸಿಕೊಳ್ಳುವ ಧಾರವಾಹಿ ಎಂದರೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜೊತೆ ಜೊತೆಯಲ್ಲಿ ದಾರವಾಹಿ.
ಜೊತೆ ಜೊತೆಯಲ್ಲಿ ದಾರವಾಹಿ ಕಿರುತೆರೆ ಇತಿಹಾಸದಲ್ಲಿ ಮೊದಲ ಬಾರಿಗೆ ದೊಡ್ಡಮಟ್ಟದಲ್ಲಿ ಸಂಚಲನವನ್ನು ಸೃಷ್ಟಿಸಿದ ಧಾರವಾಹಿ ಎಂದರೆ ತಪ್ಪಾಗಲಾರದು. ಹಲವಾರು ವರ್ಷಗಳ ನಂತರ ಚಿತ್ರರಂಗದಿಂದ ಬಿಡುವು ಮಾಡಿಕೊಂಡು ಧಾರವಾಹಿಯಲ್ಲಿ ಅನಿರುದ್ಧ್ ರವರು ಆರ್ಯವರ್ಧನ್ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಇನ್ನು ಇದೇ ಧಾರವಾಹಿಯಲ್ಲಿ ನಾಯಕಿಯಾಗಿ ಮೇಘ ಶೆಟ್ಟಿ ಅನುಸಿರಿಮನೆ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ.
ಮೇಘ ಶೆಟ್ಟಿ ಮೂಲತಹ ಕರಾವಳಿ ಅವರಾಗಿದ್ದರು ಕೂಡ ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿಯೇ. ಅಚಾನಕ್ಕಾಗಿ ಸಿಕ್ಕಂತಹ ಅದೃಷ್ಟದ ಅವಕಾಶದಿಂದಾಗಿ ಜೊತೆ ಜೊತೆಯಲಿ ಧಾರಾವಾಹಿ ಯಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಾರೆ. ಈಗಂತೂ ಜೊತೆ ಜೊತೆಯಲ್ಲಿ ದಾರವಾಹಿಯ ಮೂಲಕ ಪಡೆದುಕೊಂಡಿರುವ ಜನಪ್ರಿಯತೆಯಿಂದಾಗಿ ಕನ್ನಡ ಚಿತ್ರರಂಗದಲ್ಲಿ ಕೂಡ ಅವಕಾಶಗಳ ಸುರಿಮಳೆ ಮೇಘ ಶೆಟ್ಟಿಯವರಿಗೆ ಹರಿದುಬರುತ್ತಿದೆ. ಇದೇ ಸಂದರ್ಭದಲ್ಲಿ ಡಿಬಾಸ್ ರವರ ಕುರಿತಂತೆ ಕೂಡ ಮೇಘ ಶೆಟ್ಟಿ ಅವರು ಮಾತನಾಡಿದ್ದಾರೆ.
ಹೌದು ಮೇಘ ಶೆಟ್ಟಿ ಅವರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಎಂದರೆ ಮೆಚ್ಚಿನ ನಟ. ಅವರ ಜೊತೆಗೆ ನಟಿಸುವ ಅವಕಾಶ ಸಿಕ್ಕರೆ ಖಂಡಿತವಾಗಿ ಸಿನಿಮಾಗಳಲ್ಲಿ ನಟಿಸುತ್ತೇನೆ ಎಂಬುದಾಗಿ ಕೂಡ ಮೇಘ ಶೆಟ್ಟಿ ಅವರು ಹೇಳಿಕೊಂಡಿದ್ದಾರೆ. ಸದ್ಯಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅವಕಾಶಗಳು ಮೇಘ ಶೆಟ್ಟಿ ಅವರನ್ನು ಅರಸಿ ಬರಲಿ ಎಂದು ಹಾರೈಸೋಣ.


Leave a Reply

Your email address will not be published. Required fields are marked *