ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಪತ್ನಿ ಪ್ರಾರಂಭಿಸಿದ್ರು ಎರಡೆರಡು ಉದ್ಯಮ; ಅಷ್ಟಕ್ಕೂ ರಾಗಿಣಿ ಪ್ರಜ್ವಲ್ ಪ್ರಾರಂಭಿಸಿದ್ದೇನು ಗೊತ್ತಾ..!?

Entertainment

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಡೈನಾಮಿಕ್ ಸ್ಟಾರ್ ದೇವರಾಜ್ ರವರು ಖಡಕ್ ಪಾತ್ರಗಳಿಗೆ ಹೆಸರುವಾಸಿಯಾಗಿದ್ದರು. ಅದರಲ್ಲೂ ದೇವರಾಜ್ ರವರು ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು ಎಂದರೆ ಪ್ರೇಕ್ಷಕರು ಸಿಳ್ಳೆ ಹೊಡೆಯೋದಕ್ಕೆ ಕಾತರರಾಗಿ ಕಾಯುತ್ತಿದ್ದರು. ಕನ್ನಡ ಚಿತ್ರರಂಗಕ್ಕೆ ಖಳನಾಯಕನಾಗಿ ಎಂಟ್ರಿಕೊಟ್ಟು ನಂತರ ಹೀರೋ ಆಗಿ ಮಿಂಚಿದವರು ದೇವರಾಜ್ ಅವರು. ಸದ್ಯಕ್ಕೆ ಅವರ ಮಗನಾಗಿರುವ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರು ಕನ್ನಡ ಚಿತ್ರರಂಗದಲ್ಲಿ ಉದಯೋನ್ಮುಖ ನಟರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಅದರಲ್ಲಿ ಇತ್ತೀಚಿನ ವರ್ಷಗಳಲ್ಲಿ ಬಿಡುಗಡೆಯಾಗಿರುವ ಇನ್ಸ್ಪೆಕ್ಟರ್ ವಿಕ್ರಂ ಚಿತ್ರದಿಂದ ಮತ್ತೊಮ್ಮೆ ಸ್ಯಾಂಡಲ್ವುಡ್ ಚಿತ್ರರಂಗಕ್ಕೆ ಸ್ಟ್ರಾಂಗ್ ಕಂಬ್ಯಾಕ್ ಮಾಡಿದ್ದಾರೆ ಎಂದು ಹೇಳಬಹುದಾಗಿದೆ. ಇನ್ನು ಇವರು ರಾಗಿಣಿ ರವರನ್ನು ಮದುವೆಯಾಗಿರುವುದು ನಿಮಗೆಲ್ಲ ಗೊತ್ತಿರಬಹುದು.

ರಾಗಿಣಿ ರವರು ಪ್ರಜ್ವಲ್ ದೇವರಾಜ್ ಅವರ ಬಾಲ್ಯದ ಗೆಳತಿಯಾಗಿದ್ದು ಇಬ್ಬರು ಕೂಡ ಹಲವಾರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಬ್ಬರು ಕೂಡ ಮೇಡ್ ಫಾರ್ ಈಚ್ ಅದರ್ ಎನ್ನುವಂತೆ ಚೆನ್ನಾಗಿ ಅನ್ಯೋನ್ಯವಾಗಿದ್ದಾರೆ. ಪ್ರಜ್ವಲ್ ದೇವರಾಜ್ ಅವರು ಈಗಾಗಲೇ ಮೂವತ್ತಕ್ಕೂ ಅಧಿಕ ಸಿನಿಮಾಗಳಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ. ತಮ್ಮ ಪತ್ನಿ ರಾಗಿಣಿ ಅವರೊಂದಿಗೆ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋಗಳ ಮೂಲಕ ಆಗಾಗ ಸುದ್ದಿಯಲ್ಲಿರುತ್ತಾರೆ. ಮತ್ತೊಂದು ಪ್ರಮುಖವಾದ ವಿಚಾರವೇನೆಂದರೆ ಪ್ರಜ್ವಲ್ ದೇವರಾಜ್ ಅವರ ಪತ್ನಿ ಆಗಿರುವ ರಾಗಿಣಿ ರವರು ಒಳ್ಳೆಯ ಡ್ಯಾನ್ಸರ್.

ಪತಿ ನಾಯಕನಟರಾಗಿ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ ಹೆಂಡತಿ ರಾಗಿಣಿ ಅವರು ನೃತ್ಯಗಾರ್ತಿಯಾಗಿ ತಮ್ಮದೇ ಆದಂತಹ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇನ್ನು ಜಾಹೀರಾತುಗಳಲ್ಲಿ ಮಾಡೆಲ್ ಆಗಿ ಕೂಡ ರಾಗಿಣಿ ಪ್ರಜ್ವಲ್ ರವರು ಕಾಣಿಸಿಕೊಂಡಿರುವುದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬಹುದು. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಿರ್ಮಾಣ ಮಾಡಿರುವ ಲಾ ಸಿನಿಮಾದಲ್ಲಿ ನಾಯಕಿಯಾಗಿ ಕೂಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ್ದರು.

ಸದ್ಯಕ್ಕೆ ರಾಗಿಣಿ ಪ್ರಜ್ವಲ್ ದೇವರಾಜ್ ರವರು ದೊಡ್ಡಮಟ್ಟದಲ್ಲಿ ಸುದ್ದಿ ಆಗುವುದಕ್ಕೆ ಕೂಡ ಒಂದು ಕಾರಣವಿದೆ. ಹೌದು ರಾಗಿಣಿ ಪ್ರಜ್ವಲ್ ದೇವರಾಜ್ ಅವರು ಹೊಸ ಉದ್ಯಮವನ್ನು ಆರಂಭಿಸಿದ್ದಾರೆ. ಹಾಗಿದ್ದರೆ ಅವರು ಪ್ರಾರಂಭಿಸಿರುವ ಹೊಸ ಉದ್ಯೋಗ ಯಾವುದೆನ್ನುವುದನ್ನು ಮೊದಲು ತಿಳಿದುಕೊಳ್ಳೋಣ ಬನ್ನಿ. ಅದು ಕೇವಲ ಒಂದು ಉದ್ಯಮವಲ್ಲ ಬದಲಾಗಿ ಎರಡೆರಡು ಉದ್ಯಮ. ಹಾಗಿದ್ದರೆ ಈ ವಿಚಾರದ ಕುರಿತಂತೆ ಸಂಪೂರ್ಣ ವಿವರವಾಗಿ ತಿಳಿಯೋಣ.

ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ರಾಗಿಣಿ ಪ್ರಜ್ವಲ್ ದೇವರಾಜ್ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ವಿಧವಿಧವಾದ ನೃತ್ಯ ಪ್ರಕಾರವನ್ನು ಚಿತ್ರೀಕರಿಸಿ ಪೋಸ್ಟ್ ಮಾಡಿ ವೈರಲ್ ಕೂಡ ಆಗಿದ್ದಾರೆ. ನೃತ್ಯದ ವಿಚಾರದಲ್ಲಿ ಪ್ರಾವೀಣ್ಯತೆಯನ್ನು ಹೊಂದಿದ್ದಾರೆ. ಇದೇ ಕಾರಣಕ್ಕಾಗಿ ನೃತ್ಯಶಾಲೆಯನ್ನು ತೆರೆದಿದ್ದಾರೆ. ಕೇವಲ ಸಂಸ್ಥೆಯಲ್ಲಿ ಮಾತ್ರವಲ್ಲದೆ ಆನ್ಲೈನ್ನಲ್ಲಿ ಕೂಡ ನೃತ್ಯವನ್ನು ಹೇಳಿಕೊಡುವ ಸೌಲಭ್ಯವನ್ನು ಕೂಡ ತೆರೆದಿದ್ದಾರೆ. ಇನ್ನು ಕ್ಲೌಡ್ ಕಿಚನ್ ಅನು ಕೂಡ ತೆರೆದಿದ್ದು ವಿಧವಿಧವಾದ ರುಚಿಯಾದ ತಿನಿಸುಗಳನ್ನು ಕೂಡ ಮಾರಾಟ ಮಾಡುತ್ತಿದ್ದಾರೆ.

ಒಬ್ಬ ನಟಿಯಾಗಿ ಸೋಶಿಯಲ್ ಮೀಡಿಯಾ ಇನ್ಫ್ಲುಎನ್ಸರ್ ಆಗಿ ಒಬ್ಬ ಸ್ಟಾರ್ ನಟನ ಪತ್ನಿಯಾಗಿ ರಾಗಿಣಿ ಪ್ರಜ್ವಲ್ ದೇವರಾಜ್ ಅವರು ಎರಡೆರಡು ಉದ್ಯಮವನ್ನು ಜವಾಬ್ದಾರಿಯುತವಾಗಿ ನಡೆಸಿಕೊಂಡು ಹೋಗುತ್ತಿರುವುದು ನಿಜಕ್ಕೂ ಕೂಡ ಪ್ರಶಂಸಾರ್ಹ ಸಂಗತಿ. ಇದೇ ರೀತಿ ಮುನ್ನಡೆಸಿಕೊಂಡು ಹೋಗಿ ಯಶಸ್ಸನ್ನು ಕಾಣಲಿ ಎಂಬುದಾಗಿ ಹಾರೈಸೋಣ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕೂಡ ನಮ್ಮೊಂದಿಗೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.


Leave a Reply

Your email address will not be published. Required fields are marked *