ಡೈವೋರ್ಸ್ ಬಳಿಕ ಸಮಂತಾರನ್ನು ಎತ್ತಿಕೊಂಡು ಕುಣಿದ ಬಾಲಿವುಡ್ ನಟ ಅಕ್ಷಯ್ ಕುಮಾರ್, ವಿಡಿಯೋ ನೋಡಿ ಬೆಚ್ಚಿಬಿದ್ದ ಬಾಲಿವುಡ್ ಜನತೆ! ನೋಡಿ

ಸುದ್ದಿ

ನಮಸ್ತೆ ಪ್ರೀತಿಯ ವೀಕ್ಷಕರೆ ಬಾಲಿವುಡ್ ನಲ್ಲಿ ವಿವಾದಿತ ಶೋ ಎಂದೇ ಕೆರೆಯಲಾಗುವ ಕಾಫಿ ವಿತ್ ಕರಣ್ ಶೋ ನಲ್ಲಿ ಸೌತ್ ಅಂಡ್ ನಾರ್ಥ್ ನ ಅನೇಕ ಸ್ಟಾರ್ ಗಳು ಭಾಗಿಯಾಗಿದ್ದಾರೆ. ಈ ಶೋನಲ್ಲಿ ಆ ಸ್ಟಾರ್‍ ನಟರ ಅನೇಕ ವೈಯುಕ್ತಿಕ ವಿಚಾರಗಳು ಸಹ ರಿವೀಲ್ ಆಗಿದ್ದು, ಎಲ್ಲೆಡೆ ವೈ’ರಲ್ ಆಗಿದೆ. ಇದೀಗ ಈ ಶೋ ನಲ್ಲಿ ಮತ್ತೊಂದು ವಿಚಾರ ಜೋರಾಗಿಯೇ ಹರಿದಾಡುತ್ತಿದೆ. ಅದು ಬಾಲಿವುಡ್ ಖ್ಯಾತ ನಟ ಅಕ್ಷಯ್ ಕುಮಾರ್ ನಟಿ ಸಮಂತಾರವನ್ನು ಎತ್ತಿಕೊಂಡು ಕುಣಿದಿದ್ದಾರೆ. ಕರಣ್ ಶೋ ಗೆ ಎಂಟ್ರಿ ಕೊಡುವಾಗ ಅಕ್ಷಯ್ ಕುಮಾರ್‍ ಸಮಂತಾ ರವರನ್ನು ಎತ್ತಿಕೊಂಡು ಬರುತ್ತಿದ್ದಾರೆ. ಸದ್ಯ ಈ ವಿಡಿಯೋ ಅಂಡ್ ಪೋಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈ’ರಲ್ ಆಗುತ್ತಿವೆ.

ಇತ್ತೀಚಿಗೆ ಕಾಫಿ ವಿತ್ ಕರಣ್ ಸೀಸನ್ 7 ಈಗಾಗಲೇ ದೊಡ್ಡ ಸುದ್ದಿ ಮಾಡುತ್ತಿದೆ. ಮೊದಲ ಬಾರಿಗೆ ಕರಣ್ ರವರ ಕಾಫಿ ವಿತ್ ಕರಣ ಶೋ ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ. ಈ ಶೋ ಕಳೆದ ಆರು ಸೀಸನ್ ಗಳನ್ನು ಯಶಸ್ವಿಯಾಗಿ ವಿವಾದಗಳಿಂದಲೇ ಯಶಸ್ವಿಯಾಗಿದೆ. ಇದೀಗ 7ಸೀಸನ್ ತುಂಬಾ ಕುತೂಹಲ ಮೂಡಿಸಿದೆ. ಸದ್ಯ ಈ ಶೋನ ಪ್ರಮೋಗಳಿಂದಲೇ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ.

ಇನ್ನೂ ಕಾಫಿ ವಿತ್ ಕರಣ್ ಶೋ ಸೀಸನ್ 7 ರಲ್ಲಿ ಸಾರಾ ಅಲಿ ಖಾನ್ ಹಾಗೂ ಜಾನ್ವಿ ಕಪೂರ್ ರವರಿಗೆ ಸಂಬಂಧಿಸಿದ ಎಪಿಸೋಡ್ ಪ್ರಸಾರವಾಗಿದೆ. ಈ ಎಪಿಸೋಡ್ ನಲ್ಲಿ ಜಾನ್ವಿ ಹಾಗೂ ಸಾರಾ ಅನೇಕ ವಿಚಾರಗಳನ್ನು ಸಹ ಬಿಚ್ಚಿಟ್ಟಿದ್ದಾರೆ. ಈ ಪೈಕಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ರವರ ನಡುವಣ ಲವ್ ಲೈಫ್ ಬಗ್ಗೆ ಹಾಗೂ ಅವರು ವಿಜಯ್ ದೇವರಕೊಂಡ ಜೊತೆ ಡೇಟಿಂಗ್ ಮಾಡುವುದರ ಬಗ್ಗೆ ಹೇಳಿಕೊಂಡಿದ್ದರು.

ಇದು ಎಲ್ಲೆಡೆ ಸಿಕ್ಕಾಪಟ್ಟೆ ವೈ’ರಲ್ ಆಗಿದೆ. ಇದೀಗ ಸಮಂತಾ ರನ್ನು ಅಕ್ಷಯ್ ಕುಮಾರ್‍ ಎತ್ತಿಕೊಂಡು ಹೋಗುತ್ತಿರುವ ವಿಡಿಯೋ ಬಿರುಗಾಳಿಯಂತೆ ಹರಿದಾಡುತ್ತಿದೆ. ಈ ಹಿಂದೆ ಸಹ ಸಮಂತಾ ರವರ ಎಪಿಸೋಡ್ ಪ್ರಮೋ ಸಿಕ್ಕಾಪಟ್ಟೆ ವೈ’ರಲ್ ಆಗಿತ್ತು. ಸ್ಯಾಮ್ ಮೊದಲ ಬಾರಿಗೆ ಕರಣ್ ಜೋಹಾರ ನಡೆಸುವ ಕಾಫಿ ವಿತ್ ಕರಣ್ ಶೋ ನಲ್ಲಿ ಭಾಗಿಯಾಗಿದ್ದಾರೆ. ಈ ಶೋಗೆ ಸಮಂತಾ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್‍ ಜೊತೆಗೆ ಕಾಣಿಸಿಕೊಂಡಿದ್ದಾರೆ.

ಸದ್ಯ ಅಕ್ಷಯ್ ಕುಮಾರ್ ಹಾಗೂ ಸಮಂತಾ ರವರ ಎಪಿಸೋಡ್ ನ ಪ್ರೊಮೋ ರಿಲೀಸ್ ಆಗಿದ್ದು, ಪ್ರೊಮೋ ದಲ್ಲಿ ಅಕ್ಷಯ್ ಕುಮಾರ್ ಸಮಂತಾ ರನ್ನು ಎತ್ತಿಕೊಂಡು ಕುಣಿದಾಡಿದ್ದಾರೆ. ಶೋಗೆ ಎಂಟ್ರಿಕೊಡುವಾಗ ಸಮಂತಾರವರನ್ನು ಎತ್ತಿಕೊಂಡೇ ಅಕ್ಷಯ್ ಕುಮಾರ್ ಎಂಟ್ರಿಕೊಡುತ್ತಾರೆ. ಈ ವೇಳೆ ಕರಣ್ ಜೋಹರ್ ದಕ್ಷಿಣ ಭಾರತದ ಒನ್ ನಟಿಯನ್ನು ನಂಬರ್ ಒನ್ ಸ್ಟಾರ್ ತೋಳಲ್ಲಿ ಎಂದು ಹೇಳಿದ್ದಾರೆ. ಸಮಂತಾ ಸಹ ರೆಡ್ ಕಾಲ್ಲರ್ ಡ್ರೆಸ್ ನಲ್ಲಿ ಶೋ ನಲ್ಲಿ ಭಾಗಿಯಾಗಿದ್ದರು.

ಈ ಹಿಂದೆ ಪ್ರಸಾರವಾದ ಪ್ರೊಮೋದಲ್ಲಿ ಸಮಂತಾ ಮದುವೆಯ ಬಗ್ಗೆ ಕರಣ್ ಕೇಳಿದ್ದು, ಈ ವೇಳೆ ಸಮಂತಾ ನನ್ನ ಅಸಂತೋಷದ ಮದುವೆಗೆ ಕಾರಣ ನೀವೆ ಎಂದು ಆರೋಪ ಸಹ ಮಾಡಿದ್ದರು. ಇನ್ನೂ ಸಮಂತಾ ರವರನ್ನು ಎತ್ತಿಕೊಂಡು ಬಂದ ಅಕ್ಷಯ್ ಕುಮಾರ್ ಚೆನ್ನಾಗಿ ಕುಣಿದಾಡಿದ್ದಾರೆ. ಪುಷ್ಪಾ ಸಿನೆಮಾದ ಹಾಡಿಗೆ ಸ್ಟೆಪ್ಸ್ ಸಹ ಹಾಕಿದ್ದಾರೆ. ಸದ್ಯ ಈ ಪ್ರೊಮೋ ಸೋಷಿಯಲ್ ಮಿಡಿಯಾದಲ್ಲಿ ವೈ’ರಲ್ ಆಗುತ್ತಿದ್ದು, ಪ್ರೊಮೋ ನೋಡಲು ಎಲ್ಲರೂ ಕಾದು ಕುಳಿತಿದ್ದಾರೆ. ಇನ್ನೂ ಈ ಶೋ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ನಲ್ಲಿ ಪ್ರಸಾರವಾಗುತ್ತಿದ್ದು. ಒಳ್ಳೆಯ ರೆಸ್ಪಾನ್ಸ್ ಪಡೆದುಕೊಳ್ಳು‌ತ್ತಿದೆ. ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.


Leave a Reply

Your email address will not be published. Required fields are marked *