ತಂದೆ ಜೊತೆ ಇರುವ ಬಾಲ್ಯದ ಫೋಟೋ ಹಂಚಿಕೊಂಡು ಭಾವುಕರಾದ ನಟಿ ಅನು ಪ್ರಭಾಕರ್!

ಸುದ್ದಿ

ನಮ್ಮ ಸ್ಯಾಂಡಲ್ವುಡ್ ನಲ್ಲಿ ತಮ್ಮ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ನಟಿಯರಲ್ಲಿ ಒಬ್ಬರು ಅಂದ್ರೆ ಅದು ಅನುಪ್ರಭಾಕರ್ ಕರುನಾಡ ಚಕ್ರವರ್ತಿ ಶಿವಣ್ಣ ಅವರ ಜೊತೆ ಹೃದಯ ಹೃದಯ ಸಿನೆಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಎಂಟ್ರಿಕೊಟ್ಟರು. ಅದಕ್ಕೂ ಮೊದಲು ಅನು ಪ್ರಭಾಕರ್ ಅವರು ಬಾಲನಟಿಯಾಗಿ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರು. ಅನು ಪ್ರಭಾಕರ್ ಅವರ ತಾಯಿ ಗಾಯತ್ರಿ ಪ್ರಭಾಕರ್ ಕೂಡ ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟಿಯು ಹೌದು.

ನಟಿ ಅನುಪ್ರಭಾಕರ್ ಅವರು ಸಾಕಷ್ಟು ಕನ್ನಡ ಚಿತ್ರಗಳಲ್ಲಿ ನಟಿಸಿ ಕಾಮಷಿಯಲ್ ಹಾಗೂ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಿದ್ದಾರೆ. ನಟಿ ಅನು ಪ್ರಭಾಕರ್ ಅವರಿಗೆ ಕರ್ನಾಟಕದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಅನು ಪ್ರಭಾಕರ್ ಅವರಿಗೆ ಈಗ ಸುಮಾರು 40 ವರ್ಷ. ಅವರನ್ನು ನೋಡೋಕ್ಕೆ ಈಗಲೂ 20 ರ ಹರೆಯದ ಚಲುವೆಯಂತೆ ಕಾಣುತ್ತಾರೆ. 2016 ರಲ್ಲಿ ಸ್ಯಾಂಡಲ್ವುಡ್ ನ ನಟ ರಘು ಮುಖರ್ಜಿ ಅವರ ಜೊತೆಗೆ ಮದುವೆ ಆಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಆ ದಂಪತಿಗಳಿಗೆ ನಂದನ ಎಂಬ ಹೆಸರಿನ ಮುದ್ದಾದ ಮಗಳಿದ್ದಾರೆ. ಅವರ ಮುದ್ದಾದ ಮಗಳಿಗೆ ಇತ್ತೀಚಿಗೆ 3 ವರ್ಷ ತುಂಬಿದೆ. ಅನು ಪ್ರಭಾಕರ್ ಅವರು ಈಗಲೂ ಎವರ್ ಗ್ರೀನ್ ನಟಿ ಎನಿಸಿಕೊಂಡಿದ್ದಾರೆ. ಸಖತ್ ಯಂಗ್ ಆಗಿ ಕಾಣಿಸುತಿದ್ದಾರೆ. ಇತ್ತೀಚಿಗೆ ಬಿಡುಗಡೆಯದ ಪುನೀತ್ ಅಭಿನಯದ ಕೊನೆಯ ಚಿತ್ರ ಜೇಮ್ಸ್ ನಲ್ಲಿ ಅನು ಪ್ರಭಾಕರ್ ಅವರು ಸಹ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ನಟಿ ಅನು ಪ್ರಭಾಕರ್ ಅವರು ಇತ್ತೀಚಿಗೆ ಹೊಸ ಫೋಟೋ ಶೂಟ್ ಕೂಡ ಮಾಡಿಸಿದ್ದಾರೆ. ಆ ಫೋಟೋ ಗಳನ್ನು ಸೋಷಿಯಲ್ ಮೀಡಿಯಾ ದಲ್ಲಿ ಶೇರ್ ಮಾಡಿದ್ದಾರೆ. ಅನು ಪ್ರಭಾಕರ್ ಅವರ ಹೊಸ ಫೋಟೋ ಶೂಟ್ ಕಂಡು ಅಭಿಮಾನಿಗಳು ಸಾಕಷ್ಟು ಮೆಚ್ಚಿಕೊಂಡಿದ್ದಾರೆ. ಅವರು ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಅವರು ಅವರ ಮುದ್ದಾದ ಮಗಳ ಜೊತೆಗೆ ಹಾಗೂ ಪತಿ ಮತ್ತು ಕುಟುಂಬದ ಜೊತೆ ಇರುವ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ.

ನನ್ನಮ್ಮ ಸೂಪರ್ ಸ್ಟಾರ್ ಮೂಲಕ ಕಿರುತೆರೆಗೆ ಜಡ್ಜ್ ಆಗಿ ಕೂಡ ಎಂಟ್ರಿ ಕೊಟ್ಟಿದ್ದರು. ಅನು ಪ್ರಭಾಕರ್. ಮೊದಲು ಬಾರಿಗೆ ಅನು ಅವರು ಜಡ್ಜ್ ಆಗಿ ಬಂದಿದ್ದು ಅವರ ಅಭಿಮಾನಿಗಳು ಸಿಕ್ಕಾಪಟ್ಟೆ ಇಷ್ಟ ಪಟ್ಟಿದ್ದಾರೆ. ಇತ್ತೀಚಿಗೆ ಅನು ಅವರು ತಮ್ಮ ತಂದೆ ಜೊತೆಗೆ ಇರುವ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಅವರ ತಂದೆಯ ಹುಟ್ಟುಹಬ್ಬದ ಪ್ರಯುಕ್ತ, ತಂದೆ ತಾಯಿ ಜೊತೆಗಿನ ಸುಂದರ ಕ್ಷಣಗಳ ಹಳೆಯ ಎರಡು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ಅನು ಪ್ರಭಾಕರ್ ಅವರ ಬಾಲ್ಯದ ಫೋಟೋ ನೋಡಿದ ಅಭಿಮಾನಿಗಳು ತುಂಬಾ ಕ್ಯೂಟ್ ಆಗಿದ್ದೀರಾ ಎಂದು ಕಾಮೆಂಟ್ಸ್ ಮೂಲಕ ತಿಳಿಸುದ್ದಿದ್ದಾರೆ.
ಅನು ಅವರ ಈ ಫೋಟೋಸ್ ಗೆ ಸ್ಯಾಂಡಲ್ವುಡ್ ಕಲಾವಿದರು ಕೂಡ ಮೆಚ್ಚುಗೆ ಸುರಿಮಳೆ ಸೂಚಿಸಿದ್ದಾರೆ. ಅನು ಪ್ರಭಾಕರ್ ಈ ಸುಂದರ ಕುಟುಂಬಕ್ಕೆ ನಿಮ್ಮ ಕಾಮೆಂಟ್ಸ್ ಮೂಲಕ ತಿಳಿಸಿ ಧನ್ಯವಾದಗಳು


Leave a Reply

Your email address will not be published. Required fields are marked *