ಸ್ಯಾಂಡಲ್ವುಡ್ ನಲ್ಲಿ ನಟ ರವಿಚಂದ್ರನ್ ಅವರ ಹುಟ್ಟುಹಬ್ಬ ಮೊನ್ನೆ ತಾನೇ ಸಂಭ್ರಮದಿಂದ ನಡೆಯಿತು. ರವಿಚಂದ್ರನ್ ಅವರು ಕನ್ನಡದ ಬೆಸ್ಟ್ ರಿಯಾಲಿಟಿ ಶೋ ಡ್ರಾಮಾ ಜೂನಿಯರ್ ಮಕ್ಕಳು ಶೋ ನ ಸೆಟ್ ನಲ್ಲಿ ಎಂಜಾಯ್ ಮಾಡುತ್ತಾ ಜಡ್ಜ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು 61 ನೇ ವರ್ಷಕ್ಕೆ ಕಲಿಟ್ಟಿದ್ದಾರೆ.
ಅವರ ಹುಟ್ಟುಹಬ್ಬಕ್ಕೆ ಚಿತ್ರರಂಗದ ಗಣ್ಯರು, ಅಭಿಮಾನಿಗಳು ಸ್ನೇಹಿತರು,ಕುಟುಂಬದವರು ಭಾಗಿಯಾಗಿ ಶುಭ ಕೊರಿದ್ದಾರೆ. ನಟ ರವಿಚಂದ್ರನ್ ಅವರ ಅಭಿನಯದ ರವಿ ಬೋಪಣ್ಣ ಎನ್ನುವ ಅವರ ಚಿತ್ರವನ್ನು ಅವರೇ ನಿರ್ದೇಶನ ಮಾಡುತಿದ್ದರೆ. ಜೊತಗೆ ನಿರ್ಮಾಣ, ಮ್ಯೂಸಿಕ್, ಲಿರಿಕ್ಸ್, ಕಥೆ ಎಲ್ಲವು ಕೂಡ ರವಿಚಂದ್ರನ್ ಅವರೇ ಮಾಡುತ್ತಿದ್ದಾರೆ.
ರವಿಚಂದ್ರನ್ ಅವರ ನಿರ್ದೇಶನದ ರವಿ ಬೋಪಣ್ಣ ಚಿತ್ರದಲ್ಲಿ ನಟ ಕಿಚ್ಚ ಸುದೀಪ್ ಅವರು ಕೂಡ ಅಭಿನಯಿಸಿದ್ದಾರೆ. ರವಿ ಬೋಪಣ್ಣ ಚಿತ್ರದ ಟೀಸರ್ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಇದೆ ವಿಚಾರವಾಗಿ ನಟ ರವಿಚಂದ್ರನ್ ಅವರು ನೀಡಿದ ಒಂದು ಸಂದರ್ಶನದಲ್ಲಿ, ಕೆಲವೊಂದು ವಿಚಾರಗಳನ್ನು ರವಿಚಂದ್ರನ್ ಅವರು ಹೇಳುವಾಗ ಕಣ್ಣಲ್ಲಿ ನೀರು ತರುವಂತಿತ್ತು.
ಹೌದು ಈ ರವಿ ಬೋಪಣ್ಣ ಸಿನಿಮಾ ಒಂದು ವಿಭಿನ್ನವಾದ ಚಿತ್ರ. ಎರಡು ಮೂರು ಸಾರಿ ನೋಡಿದರೆ ಮಾತ್ರ ಅರ್ಥವಾಗುವಂತೆ ಇರುತ್ತೆದೆ ಎಂದು ಸಂದರ್ಶನದಲ್ಲಿ ರವಿ ಸರ್ ಹೇಳಿದ್ದಾರೆ.
ಈ ಚಿತ್ರದಲ್ಲಿ ಫಿಲಸಫಿ ಕೂಡ ಇದೆ. ಈ ಚಿತ್ರ ಒಂದು ಹತ್ತು ವರ್ಷ ನಿಮ್ಮನ್ನು ಮುಂದೆ ಕರೆದುಕೊಂಡು ಹೋಗುವಂತೆ ಮಾಡುತ್ತದೆ. ನೀವು ಕೂಡ ನನ್ನ ಜೊತೆಗೆ ಬರಬೇಕು ಅದನ್ನು ಬಿಟ್ಟು ನನ್ನನು ಮತ್ತೆ ಹಿಂದೆ ಉಳಿಯುವಂತೆ ಮಾಡಬೇಡಿ ಈ ಸಿನೆಮಾ ತುಂಬಾ ಅದ್ಭುತವಾಗಿ ಮೂಡಿಬಂದಿದೆ. ನಿಮಗೆ ಖಂಡಿತ ಇಷ್ಟ ವಾಗುತ್ತೆ.
ಈ ಚಿತ್ರ ನೋಡಿದರೆ ನಿಮ್ಮನು ಬೇರೆ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ನಾನು ನನ್ನ ಹೆಂಡತಿ ಮಕ್ಕಳಿಗೆ ಮೋಸ ಮಾಡಿರಬಹುದು ಆದರೆ ಈ ಸಿನಿಮಾ ಅಂತ ಬಂದಾಗ ಆ ಬೆಳ್ಳಿಪರದೆಗೆ ಆಗಲಿ. ಆ ಕ್ಷೇತ್ರಕ್ಕೆ ಎಂದಿಗೂ ನಾನು ಕುಚೇಷ್ಟೆ ಮಾಡಿಲ್ಲ. ಅದಕ್ಕಾಗಿ ಏನು ಬೇಕೋ ಅದನ್ನೇ ಮತ್ತೆ ಮತ್ತೆ ಶೂಟ್ ಮಾಡಿದ್ದೇನೆ. ಇದ್ರಿಂದ ಸಾಲ ಆದರೆ ಆಗಲಿ, ಎಷ್ಟೇ ಸಮಸ್ಸೆ ಬಂದರು ಬರಲಿ, ಶಾಂತಿ ಕ್ರಾಂತಿ ಸಮಯದಲ್ಲೂ ನಾನು ಅದನ್ನು ಪರಿಪೂರ್ಣ ಮಾಡಿದ್ದೇನೆ. ನನ್ನ ಹೆಂಡತಿ ನೀನು ತಪ್ಪು ಮಾಡಿದ್ದಿಯಾ ಅಂದರೆ ನಾನು ಅದಕ್ಕೆ ಒಪ್ಪಿಕೊಳ್ಳುತ್ತೇನೆ, ಮಕ್ಕಳು ಕೂಡ ನಮ್ಮನ್ನು ಇಟ್ಟುಕೊಂಡು ಇನ್ನು ಸಿನಿಮಾ ಮಾಡಿಲ್ಲ ಎಂದರೆ, ಸರಿ ನಾನು ತಪ್ಪು ಮಾಡಿದೆ ಎಂದು ಹೇಳಬಹುದು, ಈ ಕನಸುಗಾರನಲ್ಲಿ ಇನ್ನು ಹೆಚ್ಚು ಕನಸುಗಳು ಇದೆ.
ನಿಮ್ಮ ರವಿಚಂದ್ರನ್ ಇಲ್ಲಿಯವರೆಗೆ ಕೇವಲ ಜೀವನ ನಡೆಸುದಕ್ಕೆ ಸಿನಿಮಾ ಮಾಡಿದ್ದೇನೆ. ನಾನು ತುಂಬಾ ಸಾಲ ಮಾಡಿಕೊಂಡು, ಹೆಂಡತಿ ಮಕ್ಕಳ ಜೊತೆ ಹೊಂದಾಣಿಕೆ ಜೀವನ ನಡೆಸಿದ್ದೇನೆ. ಅದು ನನಗೆ ಇಷ್ಟ ಇಲ್ಲ ಆದರೂ ಸಹ ಜೀವನ ಮಾಡಿದೆ. ವಿಧಿ ಇಲ್ಲದೆ ಎಂದರು. ಬದುಕುವುದಕ್ಕೆ ದುಡ್ಡಿಗಾಗಿ ಇಷ್ಟು ದಿನ ಸಿನೆಮಾ ಮಾಡಿದೆ. ಆದರೆ ಈಗ ಆ ಸಮಯ ಹತ್ತಿರ ಬಂದಿದೆ. ಮತ್ತೆ ಗೆಲ್ಲುವ ಹಂತಕ್ಕೆ ಬಂದು ನಿಂತಿದ್ದೇನೆ. ನನ್ನ ಮಕ್ಕಳಿಗೂ ಸಿನೆಮಾ ಕೂಡ ಮಾಡುತ್ತೇನೆ ಆದರೆ ನನ್ನೊಳಗೆ ಒಂದು ಇದೆ ಅದು ರವಿ ಬೋಪಣ್ಣ ಸಿನಿಮಾ ಮೂಲಕ ಎನ್ನಬಹುದು.
ಈ ಚಿತ್ರ ನಿಮಗೆ ಬೇರೆಯದೆ ರೀತಿ ಅನ್ನಿಸುವುದು ಪಕ್ಕ ಎಂದು ನಟ ರವಿಚಂದ್ರನ್ ಹೇಳಿ ಭಾವುಕರಾದರು. ನಟ ರವಿಚಂದ್ರನ್ ಅವರು ಸಿನಿಮಾ ಎಂದರೆ ಎಷ್ಟರ ಮಟ್ಟಿಗೆ ಪ್ರೀತಿ ಹೊಂದಿದ್ದಾರೆ ಎಂಬುದು ಇಲ್ಲಿ ಗೊತ್ತಾಗುತ್ತೆ. ನಿಮ್ಮ ನೆಚ್ಚಿನ ನಟ ರವಿಚಂದ್ರನ್ ಅವರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ