ನಮ್ಮ ಕನ್ನಡ ಚಿತ್ರರಂಗದಲ್ಲಿ ಪದಗಳಲ್ಲಿ ವರ್ಣಿಸಲು ಸಾಧವಿಲ್ಲ ನಟ ಎಂದರೆ ಅದು ನಮ್ಮ ವರ ನಟ ಡಾ. ರಾಜ್ ಕುಮಾರ್ ಅವರು. ತಮ್ಮ ಜೀವದಲ್ಲಿ ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿರುವ ರಾಜ್ ಕುಮಾರ್ ನಮ್ಮ ಕನ್ನಡ ಚಿತ್ರರಂಗದ ಹೆಮ್ಮೆ ಅಂತಾನೇ ಹೇಳಬಹುದು. ಇನ್ನು ತಂದೆಯಂತೆಯೇ ಮಕ್ಕಳೆಲ್ಲರೂ ಕೂಡ ಚಿತ್ರರಂಗದಲ್ಲಿ ಸಕ್ರಿರಾಗಿದ್ದು ಅವರು ಕೂಡ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ. ಇನ್ನು ರಘುವೇಂದ್ರ ರಾಜ್ ಕುಮಾರ್ ಅವರು ನಟರಾಗಿ, ನಿರ್ಮಾಪಕರಾಗಿ, ಗಾಯಕರಾಗಿಯು ಕೂಡ ಸೇವೆ ಸಲ್ಲಿಸುತ್ತಿದ್ದಾರೆ.
ಅಣ್ಣಾವ್ರ ಪಾರ್ವತಮ್ಮ ಅವರ ಎರಡನೇ ಮಗನಾಗಿರುವ ರಾಘುವೇಂದ್ರ ರಾಜ್ ಕುಮಾರ್ ಇವರು 1989 ರಲ್ಲಿ ಭಾರಿ ಯಶಸ್ಸು ಕಂಡ ಸಿನೆಮಾ ನಂಜುಂಡಿ ಕಲ್ಯಾಣ ಚಿತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ ಹಲವು ಕನ್ನಡ ಸಿನೆಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡರು. ಇನ್ನು ಕೆಲವೇ ಕೆಲವು ಚಿತ್ರಗಳಲ್ಲಿ ನಟಿಸಿದರು ಕೂಡ ಕನ್ನಡ ಚಿತ್ರರಂಗದಲ್ಲಿ ತಮ್ಮದೇಯಾದ ಹಿಸ್ಟರಿಯನ್ನೂ ಸೃಷ್ಟಿಸಿದ್ದರು. ಅಂದಿನಿಂದ ಅವರು ವಜ್ರೇಶ್ವರಿ ಕಂಬೈನ್ಸ್ ಅಡಿಯಲ್ಲಿ ಮೂರು ಸಿನೆಮಾಗಳನ್ನು ನಿರ್ಮಾಣಮಾಡಿದ್ದಾರೆ.
ಇನ್ನು ರಾಘವೇಂದ್ರ ರಾಜ್ ಕುಮಾರ್ ಅವರು ವೈವಾಹಿಕ ಜೀವನ ನೋಡುವುದಾದರೆ ಅವರ ಪತ್ನಿಯ ಹೆಸರು ಮಂಗಳಾ. ಇನ್ನು ರಾಘಣ್ಣ ಅವರು ತನ್ನ ಚಿಕ್ಕ ಮಗ ಯುವ ರಾಜ್ ಕುಮಾರ್ ಅವರಿಗೆ ಈಗಾಗಲೇ ಅದ್ದೂರಿಯಾಗಿ ಮದುವೆ ಮಾಡಿದ್ದು ಆದರೆ ಹಿರಿಯ ಪುತ್ರ ವಿನಯ್ ರಾಜ್ ಕುಮಾರ್ ಅವರಿಗೆ ಮಾತ್ರ ಇನ್ನೂ ಕೂಡ ಮದುವೆ ಮಾಡಿಲ್ಲ ಯಾಕೆ ಎಂಬುದು ಅವರ ಅಭಿಮಾನಿಗಳಲ್ಲಿ ಮೂಡುತ್ತಿರುವ ಪ್ರೆಶ್ನೆ.
ಹಾಗಾದರೆ ಯಾಕೆ ನೋಡಿ. ಅಲ್ಲದೆ ವಿನಯ್ ರಾಜ್ ಕುಮಾರ್ ಅವರ ಬದುಕಿನಲ್ಲಿ ಎರಡು ಲವ್ ಬ್ರೇಕ್ ಅಪ್ ಕೂಡ ಅಗಿದ್ದು ಈ ವಿಚಾರದ ಬಗ್ಗೆ ಸಂಪೂರ್ಣವಾಗಿ ತಿಳಿಯಲು ಮುಂದೆ ಓದಿ. ಹೌದು ರಾಘಣ್ಣ ಅವರ ದ್ವಿತೀಯ ಪುತ್ರ ಯುವ ರಾಜ್ ಕುಮಾರ್ ಅವರಿಗೆ 25ನೇ ವಯಸ್ಸಿಗೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ. ಈ ಸಮಯದಲ್ಲಿ ವಿನಯ್ ರಾಜ್ ಕುಮಾರ್ ಅವರು ಯಾವುದೇ ಸಂದರ್ಶನ ಮತ್ತು ಇಲ್ಲೇ ಕಾಣಿಸಿಕೊಂಡರು ಕೂಡ ಸಾಕಷ್ಟು ಪ್ರೆಶ್ನೆಗಳು ಎದುರಾಗಿದ್ದು ನಿಮ್ಮ ಮದುವೆಯಾಯಿತು ನಿಮ್ಮ ಮದುವೆ ಯಾವಾಗ? ನೀವು ಯಾಕೆ ಇನ್ನೂ ಮದುವೆ ಆಗಿಲ್ಲ ಎಂದು ಮಾಧ್ಯಮದವರು ಪ್ರೆಶ್ನೆ ಮಾಡುತ್ತಲೇ ಇರುತ್ತಾರೆ.
ಆದರೆ ಈ ಎಲ್ಲಾ ಪ್ರೆಶ್ನೆಯನ್ನು ವಿನಯ್ ತಳ್ಳಿಹಾಕಿದ್ದು ಇನ್ನೂ ಇದಕ್ಕೆ ಕಾರಣ ಕೂಡ ಇದ್ದು ತಮಿಳು ಹಾಗೂ ಕನ್ನಡ ಎರಡು ಚಿತ್ರರಂಗದಲ್ಲಿ ಕಾಣಿಸಿಕೊಂಡಿದ್ದ ನಟಿ ಪಾರ್ವತಿ ನಾಯರ್ ಜೊತೆ ವಿನಯ್ ಲವ್ ನಲ್ಲಿ ಇದ್ದಾರೆ ಎಂಬ ಗಾಸಿಪ್ ಎಲ್ಲೆಡೆ ಹಬ್ಬಿತು. ಆದರೆ ಪಾರ್ವತಿ ನಾಯರ್ ಮಾತ್ರ ನಾವಿಬ್ಬರು ಕ್ಲಾಸ್ ಮೇಟ್ಸ್ ಗಳು ಹಾಗೂ ಸ್ನೇಹಿತರು ಎಂದಿದ್ದು ಸಿನೆಮಾ ವಿಚಾರವಾಗಿ ಜೊತೆಯಲ್ಲಿದ್ದೇವೆ ಎಂದು ಸ್ಪಷ್ಟನೆ ನೀಡುತ್ತಾರೆ. ಇನ್ನೂ ರನ್ ಆಂಟೋನಿ ಚಿತ್ರದ ರುಕ್ಷ್ಯ ಅವರ ಜೊತೆಯೂ ಕೂಡ ವಿನಯ್ ಹೆಸರು ಕೇಳಿ ಬಂದಿದ್ದು ತಾಮ್ಮನ ಮದುವೆಯಲ್ಲೂ ಕೂಡ ಇವರಿಬ್ಬರೂ ಒಟ್ಟಿಗೆ ಓಡಾಡುತ್ತಿದ್ದರು.
ಇದನ್ನು ನೋಡಿದ ಅಭಿಮಾನಿಗಳು ಲವ್ ನಲ್ಲಿ ಬಿದ್ದಿದ್ದಾರೆ ಎಂದು ಹೇಳಲಾಗಿದ್ದು ಆಗಲೂ ಕೂಡ ಇವರಿಬ್ಬರು ನಾವು ಕೇವಲ ಫ್ರೆಂಡ್ಸ್ ಎಂದು ಹೇಳುವ ಮೂಲಕ ವದಂತಿಗಳನ್ನು ತಳ್ಳಿ ಹಾಕಿದ್ದಾರೆ. ಆ ಸಮಯದಲ್ಲಿ ತಂದೆ ರಾಘವೇಂದ್ರ ರಾಜ್ ಕುಮಾರ್ ಅವರು ವಿನಯ್ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ ಕುಟುಂಬದ ಯಶಸ್ಸುನ್ನು ವಿನಯ್ ಮುಂದುವರಿಸಿಕೊಂಡು ಹೋಗಬೇಕು. ಸಾಲು ಸಾಲು ಸಿನೆಮಾಗಳನ್ನು ಸಹ ವಿನಯ್ ಒಪ್ಪಿಕೊಂಡಿದ್ದಾರೆ.
ಹಾಗಾಗಿ ಮದುವೆಯಾದರೆ ಅವನ ಮುಂದಿನ ಯೋಜನೆಗಳಿಗೆ ತೊಂದರೆ ಆಗಬಹುದು ಎನ್ನುವ ಕಾರಣಕ್ಕೆ ವಿನಯ್ ಇನ್ನು ಮದುವೆಯಾಗಿಲ್ಲ ಎಂದು ರಾಘಣ್ಣ ಒಂದು ಸಂದರ್ಶನದಲ್ಲಿ ಹೇಳಿದ್ದರು. ವಿನಯ್ ರಾಜ್ ಕುಮಾರ್ ಸಹ ಮಾತನಾಡಿ ತಮ್ಮನ ಮದುವೆಯಾಗಿ ತಾನು ಮದುವೆಯಾಗದೆ ಇರಲು ಇದೊಂದೇ ಕಾರಣ ಇನ್ನೇನು ಇಲ್ಲ ಎಂದು ಎಲ್ಲಾ ಊಹೆ ಪೂಹೆಗಳಿಗೂ ವಿನಯ್ ತೆರೆ ಎಳೆದಿದ್ದರೆ. ಈ ಮಾಹಿತಿ ಕುರಿತು ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.