ನಮ್ಮ ಕನ್ನಡ ಚಿತ್ರರಂಗವನ್ನು ಹಲವು ನಟಿಯರು ಆಳಿದ್ದಾರೆ ಎಂದರೆ ತಪ್ಪಾಗಲಾರದು. ಕಪ್ಪು ಬಿಳುಪು ಸಿನೆಮಾಗಳು ಬರುವ ಕಾಲದಲ್ಲಿ ನಾಯಕನಟನಷ್ಟೇ ಪ್ರಾಮುಖ್ಯತೆ ನಾಯಕ ನಟಿಗೂ ಇರುತ್ತಿತ್ತು. ಹಾಗಾಗಿ ಆ ಕಾಲದಲ್ಲಿ ನಾಯಕಿಗೂ ಅಷ್ಟೇ ದೊಡ್ಡದಾದ ಅಭಿಮಾನಿಗಳ ಬಳಗವೂ ಇರುತ್ತಿತ್ತು.
ಉದಾಹರಣಗೆ ಹೇಳುವುದಾದರೆ ಆರತಿ, ಭಾರತಿ, ಮಂಜುಳಾ, ಜಯಂತಿ, ಜ್ಯೂಲಿ ಲಕ್ಷ್ಮಿ, ಸರಿತಾ ಹೀಗೆ ಹಲವು ನಟಿಯರು ಕಪ್ಪು ಬಿಳುಪಿನ ಕಾಲದಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಮಿಂಚಿದರೆ, ೯೦ರ ದಶಕದಲ್ಲಿ ನಟಿಯರ ಆಗಮನ ಇನ್ನಷ್ಟು ಹೆಚ್ಚಾಯಿತು. ಸುಧಾರಾಣಿ, ಮಾಲಾಶ್ರೀ, ಮಹಾಲಕ್ಷ್ಮಿ, ಖುಷ್ಬು, ಹೀಗೆ ಹಲವು ನಟಿಯರು ಸ್ಯಾಂಡಲ್‌ವುಡ್‌ನಲ್ಲಿ ಮಿಂಚಿದರು. ಹೀಗೆ ೯೦ರ ದಶಕದಲ್ಲಿ ಸೆಂಟಿಮೆಂಟ್ ಸಿನೆಮಾಗಳಿಂದಲೇ ಕನ್ನಡ ನಾಡಿನ ಜನರ ಮನಸನ್ನು ಗೆದ್ದ ನಟಿ ಎಂದರೆ ಅದು ಶೃತಿ ಅವರು ಮಾತ್ರ.
ನಟಿ ಶೃತಿ ಅವರು ಸ್ಯಾಂಡಲ್‌ವುಡ್ ಕಂಡಂತಹ ಅತ್ಯಂತ ಪ್ರಬುದ್ಧ ಹಾಗೂ ಅಪರೂಪದ ನಟಿ.
ತಮ್ಮ ಅದ್ಭುತ ನಟನೆಯಿಂದ ಕಳೆದ ಎರಡು ದಶಕಗಳಿಂದ ಕರುನಾಡಿನ ಜನರನ್ನು ರಂಜಿಸುತ್ತಿದ್ದಾರೆ. ಇವರು ಹೆಚ್ಚಾಗಿ ಸೆಂಟಿಮೆಂಟ್ ಸಿನೆಮಾಗಳಲ್ಲಿ ನಟಿಸುತ್ತಿದ್ದರಿಂದ ಇವರು ಕಣ್ಣೀರಿಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದರು ಎಂದರೆ ತಪ್ಪಾಗಲಾರದು. ಆದರೂ ಅಂತಹ ಚಿತ್ರಗಳು ಜನರ ಹೃದಯವನ್ನು ತಟ್ಟುತ್ತಿದ್ದವು. ನಿರ್ಮಾಪಕನ ಜೇಬನ್ನು ತುಂಬಿಸುತ್ತಿದ್ದವು. ಹಾಗಾಗಿಯೇ ಆ ಕಾಲದಲ್ಲಿ ಬಹುಬೇಡಿಕೆಯ ನಟಿಯರಲ್ಲಿ ಶೃತಿ ಅವರು ಒಬ್ಬರಾಗಿದ್ದರು. ನಟಿ ಶೃತಿ ಅವರು ಸ್ಯಾಂಡಲ್‌ವುಡ್‌ನ ಬಹುತೇಕ ಎಲ್ಲ ಸ್ಟಾರ್ ನಟರ ಜೊತೆ ಅಭಿನಯಿಸಿದ್ದಾರೆ.
ನಟಿ ಶೃತಿ ಅವರ ತಂದೆ-ತಾಯಿಗಳು ರಂಗಭೂಮಿ ಕಲಾವಿದರು. ಹಾಗಾಗಿಯೇ ರಂಗದ ನಂಟು ಶೃತಿ ಅವರಿಗೆ ಹುಟ್ಟಿನಿಂದಲೇ ಬಂದಿದೆ. ನಟಿ ಶೃತಿ ಕುಟುಂಬದ ಎಲ್ಲರೂ ಕಲಾವಿದರೇ. ಕಲಾವಿದರೇ ತುಂಬಿರುವ ಕುಟುಂಬ ಎಂದರೆ ತಪ್ಪಾಗಲಾರದು. ಒಂದು ಕಾಲದಲ್ಲಿ ರಂಗಭೂಮಿ ಹಾಗೂ ನಾಟಕಗಳ ಮೂಲಕ ಜನರನ್ನು ಇವರು ರಂಜಿಸುತ್ತಿದ್ದರು. ಈಗ ಸಿನೆಮಾ ಕ್ಷೇತ್ರದಲ್ಲಿ ಅವರು ತೊಡಗಿಸಿಕೊಂಡಿದ್ದಾರೆ.
ನಟಿ ಶೃತಿ ಅವರ ಸಹೋದರ ಶರಣ್ ಅವರು ಕೂಡ ಇಂದು ಸ್ಯಾಂಡಲ್‌ವುಡ್‌ನ ಸ್ಟಾರ್ ನಟ. ಹಾಸ್ಯನಟರಾಗಿ ಗಾಂಧಿನಗರಕ್ಕೆ ಬಂದ ಶರಣ್ ಅವರು ತಮ್ಮ ಪ್ರತಿಭೆ ಹಾಗೂ ಶ್ರಮದಿಂದ ಇಂದು ಸ್ಟಾರ್ ನಟರಾಗಿದ್ದಾರೆ. ಜೊತೆಗೆ ನಿರ್ಮಾಪಕರೂ ಆಗಿದ್ದಾರೆ. ನಟಿ ಶೃತಿ ಅವರು ವೈಯಕ್ತಿಕ ಜೀವನದಲ್ಲಿ ಹಲವು ಏಳು-ಬೀಳುಗಳನ್ನು ಕಂಡಿದ್ದಾರೆ. ಎಷ್ಟೇ ಕಷ್ಟಗಳೂ ಬಂದರೂ ಅವರು ಸಿನೆಮಾ ವಿಚಾರ ಬಂದಾಗ ಮಾತ್ರ ತಮ್ಮ ಕಷ್ಟಗಳನ್ನು ಮರೆತು ಅಭಿನಯಿಸುತ್ತಿದ್ದರು.ಮಕ್ಕಳು ತಮ್ಮ ತಂದೆ-ತಾಯಿಯ ಜನ್ಮದಿನವನ್ನು ಆಚರಿಸುವುದು ರೂಢಿ. ಅಲ್ಲದೆ ಆದಿನ ಸರ್‌ಫ್ರೈಸ್ ಆಗಿ ಉಡುಗೊರೆ ನೀಡಿ ತಂದೆತಾಯಿಯನ್ನು ಖುಷಿಪಡಿಸುವವರು ಹಲವು ಜನರಿದ್ದಾರೆ. ಮೊನ್ನೆ ಮೊನ್ನೆ ನಟಿ ಶೃತಿ ಅವರು ತಮ್ಮ ತಾಯಂದಿರ ಜನ್ಮದಿನವನ್ನು ಬಹಳ ಸಂತೋಷದಿಂದ ಆಚರಿಸಿದ್ದಾರೆ.
ಈ ಬಾರಿ ತಿರುಪತಿಯಲ್ಲಿ ಅವರು ತಮ್ಮ ತಾಯಂದಿರ ಜನ್ಮದಿನವನ್ನು ಆಚರಿಸಿದಸರು. ಈ ವೇಳೆ ನಟಿ ಶೃತಿ ಅವರು ತಮ್ಮ ತಾಯಂದಿರ ಜೊತೆ ಬಿಂದಾಸ್ ಆಗಿ ಡಾನ್ಸ್ ಮಾಡಿದ್ದಾರೆ. ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನಟಿ ಶೃತಿ ಅವರು ತಾಯಂದಿರ ಜೊತೆ ಡಾನ್ಸ್ ಮಾಡುವ ವಿಡಿಯೋ ಬಹಳ ವೈರಲ್ ಆಗಿದೆ. ನೆಟ್ಟಿಗರು ಈ ಡಾನ್ಸ್ ನೋಡಿ ಫುಲ್ ಫಿದಾ ಆಗಿದ್ದಾರೆ.
