ನಮಸ್ತೆ ಪ್ರೀತಿಯ ವೀಕ್ಷಕರೆ ನಾಡು ಕಂಡ ಹೆಮ್ಮೆಯ ಶ್ರೀಮತಿ ಸುಧಾ ಮೂರ್ತಿ… ಈ ಹೆಸರಿನಲ್ಲಿಯೇ ಅದೇನೋ ಒಂದು ಆಕರ್ಷಣೆ ಇದೆ. ಕನ್ನಡ ಮಣ್ಣಿನ ಕುವರಿ, ಅಸಾಮಾನ್ಯ ಸಾಧಕಿ ಇವರು. ಇದರ ಜೊತೆಗೆ ಕನ್ನಡ ಮತ್ತು ಇಂಗ್ಲಿಷ್ನ ಖ್ಯಾತ ಬರಹಗಾರ್ತಿ, ಸಮಾಜಸೇವಕಿಯೂ ಆಗಿರುವ ಸುಧಾ ಮೂರ್ತಿಯವರು ಜನಿಸಿದ್ದು 19ನೇ ಆಗಸ್ಟ್ 1950ರಂದು. ಅವರು ಜನಸಾಮಾನ್ಯನ ಏಳಿಗೆಗಾಗಿ ಹಲವು ಸಂಘ ಸಂಸ್ಥೆಗಳೊಂದಿಗೆ ದುಡಿದವರು.ಇನ್ಫೋಸಿಸ್ ಎಂಬ ಪ್ರತಿಷ್ಠಾನದ ಮೂಲಕ, ಸಮಾಜ ಸೇವೆಯೊಂದಿಗೆ, ಜನ ಸಾಮಾನ್ಯರ ಸಮಸ್ಯೆಗಳಿಗೆ ಮಿಡಿದ ಹೆಮ್ಮೆಯ ಕನ್ನಡತಿ.
ಹೀಗಿರುವಾಗ ತಿರುಪತಿಯ ತಿಮ್ಮಪ್ಪನ ಮೇಲೆ ಅಪಾರ ಭಕ್ತಿಯನ್ನು ಹೊಂದಿರುವ ಸುಧಾ ಮೂರ್ತಿ ಮತ್ತು ನಾರಾಯಣ್ ಮೂರ್ತಿ ದಂಪತಿಗಳು ಇತ್ತೀಚಿಗಅಷ್ಟೇ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿ ತಿಮ್ಮಪ್ಪನಿಗೆ ತಮ್ಮ ಕೈಲಾದ ಕಿರು ಕಾಣಿಕೆಯೊಂದನ್ನು ನೀಡಿದ್ದಾರೆ. ಹೌದು ಲಕ್ಷಾಂತರ ರೂಪಾಯಿ ಬೆಲೆಬಾಳುವಂತಹ ಸೇವೆಯನ್ನು ಡಾ. ಸುಧಾ ಮೂರ್ತಿ ಅಮ್ಮನವರು ದೇವರಿಗೆ ಸಲ್ಲಿಸಿದ್ದು. ಈ ಒಂದು ವಿಚಾರ ಸಾಧ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆಗೆ ಹಾಗೂ ಚರ್ಚೆಗೂ ಕಾರಣವಾಗುತ್ತಿದೆ. ಅಷ್ಟಕ್ಕೂ ಸುಧಾ ಮೂರ್ತಿ ಅವರು ತಿರುಪತಿಗೆ ಹೋಗಿ ನೀಡಿದ ಕಾಣಿಕೆಯಾದರು ಏನು? ನೋಡೋಣ ಬನ್ನಿ.
ಸುಧಾ ಮೂರ್ತಿ ದಂಪತಿಗಳು ಪ್ರತಿ ವರ್ಷವೂ ತಪ್ಪದೇ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಹೋಗಿ ದೇವರ ಆಶೀರ್ವಾದ ಪಡೆಯಿವಂತಹ ಸುಧಾ ಮೂರ್ತಿ ದಂಪತಿಗಳು ಒಂದಲ್ಲ ಒಂದು ವಿಶೇಷ ಸೇವೆಯನ್ನು ದೇವರಿಗೆ ಸಲ್ಲಿಸುವ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಪಡೆಯುತ್ತಾರೆ. ಅಲ್ಲದೆ ಕಳೆದ ವರ್ಷದಂದು ದೇವಸ್ಥಾನದಲ್ಲಿನ ಹೂ ಕಟ್ಟುವ ಮಹಿಳೆಯರ ಜೊತೆಗೆ ಲಕ್ಷಾಂತರ ಕೋಟಿ ಒಡತಿ ಸುಧಾ ಮೂರ್ತಿ ಅಮ್ಮನವರು ಅತಿ ಸರಳವಾಗಿ ಕುಳಿತುಕೊಂಡು ಹೂ ಕಟ್ಟಿದ್ದನ್ನು ನಾವೆಲ್ಲರೂ ನೋಡಿದ್ದೇವೆ.
ಹಾಗೆಯೇ ಮೊನ್ನೆ ತಾನೆ ಸುಧಾ ಮೂರ್ತಿ ದಂಪತಿಗಳು ತಿರುಪತಿ ತಿಮ್ಮಪ್ಪನ ದರ್ಶನ ಪಡೆದಂತಹ ಸುಧಾ ಮೂರ್ತಿ ಮತ್ತು ನಾರಾಯಣ ಮೂರ್ತಿ ದಂಪತಿಗಳು ತಿರುಮಲ ತಿರುಪತಿ ದೇವಸ್ಥಾನಕ್ಕೆ ಸುಮಾರು 42 ಲಕ್ಷ ವೆಚ್ಚದ ಧರ್ಮ ರಥ ವಾಹನವನ್ನು ಕೊಡುಗೆಯಾಗಿ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಸುಧಾಮೂರ್ತಿ ಅವರ ಸೋದರಿ ಹಾಗೂ ಸ್ನೇಹಿತರು ಬಂಧು ಮಿತ್ರರು ಹಾಜರಿದ್ದರು. ಈ ಧರ್ಮ ರಥವು ತಿರುಪತಿಯ ಸುತ್ತಮುತ್ತ ಹಳ್ಳಿ ಪ್ರದೇಶಗಳಿಗೆ ಪ್ರವೇಶ ಮಾಡುವ ಮೂಲಕ ಭಕ್ತರಿಗೆ ಶ್ರೀನಿವಾಸನ ದರ್ಶನ ನೀಡಲಿದೆಯಂತೆ.
ಬಹು ಕೋಟಿ ಒಡತಿಯಾಗಿರುವ ಕನ್ನಡದ ಸುಧಾ ಮೂರ್ತಿ ಅಮ್ಮನವರು ತಮ್ಮ ಫೌಂಡೇಶನ್ ಮೂಲಕ ತಿಂಗಳಿಗೆ ಕೋಟ್ಯಂತರ ರೂಪಾಯಿ ಗಳಿಕೆಯನ್ನು ಮಾಡುತ್ತಿದ್ದರು, ಕೂಡ ಅವರು ಅತಿ ಸರಳವಾಗಿ ತಿರುಪತಿಯಲ್ಲಿ ಎಲ್ಲರ ಗಮನ ಸೆಳೆದರು. ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಡಾ. ಸುಧಾ ಮೂರ್ತಿ ದಂಪತಿಗಳ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ.