ನಮ್ಮ ಪ್ರಪಂಚದಲ್ಲಿ ಸಾಕಷ್ಟು ವಿಚಿತ್ರಗಳು ಇತ್ತೀಚಿನ ದಿನಗಳಲ್ಲಿ ನಡೆದಿದೆ. ಅದರಲ್ಲೂ ಕೂಡ ಇಂದು ನಾವು ಹೇಳಲು ಹೊರಟಿರುವುದು ಶಂಕರಪ್ಪ ಹಾಗೂ ಮೇಘ ದಂಪತಿಗಳ ಕುರಿತಂತೆ. 50 ವರ್ಷದ ಶಂಕರಪ್ಪ ಎನ್ನುವ ವ್ಯಕ್ತಿ ಮೇಘ ಎನ್ನುವ 25 ವರ್ಷದ ಹುಡುಗಿಯನ್ನು ಮದುವೆಯಾಗಿದ್ದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಇನ್ನು ಇದು ನಡೆದಿದ್ದು ಕೂಡ ನಮ್ಮ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನಲ್ಲಿ. ಕಳೆದ ವರ್ಷ ಈ ಸುದ್ದಿಯನ್ನು ದೊಡ್ಡಮಟ್ಟದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಯಿತು.
ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರು ಜೋಡಿಗಳನ್ನು ಕೂಡ ಸಾಕಷ್ಟು ದೊಡ್ಡಮಟ್ಟದಲ್ಲಿ ಟೀ’ಕೆ ಮಾಡಲಾಗಿತ್ತು. ಆಕೆ ಅವನ ಬಳಿ ಇರುವ ದುಡ್ಡಿಗಾಗಿ ಮದುವೆಯಾಗಿದ್ದಾಳೆ ಎಂಬುದಾಗಿ ಕೂಡ ಬರೆಯಲಾಗಿತ್ತು. ಆದರೆ ಅವರಿಬ್ಬರು ಹೇಳುವ ಪ್ರಕಾರ ಪರಸ್ಪರ ಹೋಗ್ತಿ ಪ್ರೀತಿಗಾಗಿ ಮದುವೆಯಾಗಿದ್ದಾರೆ ಎಂಬುದಾಗಿ ಕೂಡಾ ಹೇಳಿಕೊಂಡಿದ್ದರು. ಮಾತ್ರವಲ್ಲದೆ ಸಾಮಾಜಿಕ ಜಾಲತಾಣಗಳು ಟೀ’ಕೆ ಮಾಡುವುದನ್ನು ಬಿಟ್ಟು ನಮ್ಮ ಮದುವೆಯನ್ನು ಒಪ್ಪಿಕೊಳ್ಳಿ ಎಂಬುದಾಗಿ ಕೂಡಾ ಕೇಳಿಕೊಂಡಿದ್ದರು. ಆದರೆ ಈಗ ಕೇಳಿಬರುತ್ತಿರುವ ಹೊಸಸುದ್ದಿ ಎಲ್ಲರನ್ನು ಕೂಡ ಬೆ’ಚ್ಚಿ ಬೀಳಿಸುವಂತಿದೆ. ಅಷ್ಟಕ್ಕೂ ನಡೆದಿದ್ದೇನು ಎಂಬುದನ್ನು ತಿಳಿಯೋಣ ಬನ್ನಿ.
ಹೌದು ಅನ್ಯೋನ್ಯವಾಗಿ ಸಂಸಾರ ಮಾಡಿಕೊಂಡು ಬೇರೆಯವರ ಮಾತುಗಳಿಗೆ ಕಿವಿಗೊಡದೆ ಇದ್ದಂತಹ ಜೋಡಿಯಿಂದ ಈಗ ಒಂದು ಯಾರೂ ಕೂಡ ನಂಬಲಾಗದಂತಹ ಸುದ್ದಿಯೊಂದು ಹೊರ ಬಂದಿದೆ. ಹೌದು ಮೇಘಾ ಳನ್ನು ಮದುವೆಯಾಗಿದ್ದ 50ವರ್ಷದ ಶಂಕರಪ್ಪ ತಮ್ಮ ತೋಟದ ಮನೆಯಲ್ಲಿ ನೇ’ಣು ಹಾಕಿಕೊಂಡು ಆ’ತ್ಮಹ’ತ್ಯೆ ಮಾಡಿಕೊಂಡಿದ್ದಾರೆ. ಈ ಸುದ್ದಿ ಈಗಾಗಲೇ ಇದು ದೊಡ್ಡ ಮಟ್ಟದಲ್ಲಿ ಸಂಚಲನವನ್ನು ಸೃಷ್ಟಿಸಿದೆ. ಬೆಳ್ಳಂಬೆಳಗ್ಗೆ ಈ ವಿಚಾರವನ್ನು ಕೇಳಿದವರಿಗೆ ಇದು ಸುಳ್ಳೋ ನಿಜವೋ ಎಂಬುದಾಗಿ ಅನುಮಾನ ಮೂಡುವಂತೆ ಮಾಡಿದೆ. ಈಗಾಗಲೇ ಈ ಸುದ್ದಿ ಮೊದಲಿನಂತೆ ಈಗಲೂ ಕೂಡ ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡುತ್ತಿದೆ.
ಕಳೆದ ಮೂರ್ನಾಲ್ಕು ದಿನಗಳಿಂದ ಮೇಘ ಹಾಗೂ ಶಂಕರಪ್ಪ ನಡುವೆ ಕಲ’ಹಗಳು ಏರ್ಪಟ್ಟಿದ್ದ ವಂತೆ. ಇದೇ ಕಾರಣಕ್ಕಾಗಿ ಶಂಕರಪ್ಪ ನಿನ್ನೆ ಸಂಜೆ ಮನೆ ಬಿಟ್ಟು ಹೊರ ಹೋಗಿದ್ದರಂತೆ. ಮನೆ ಬಿಟ್ಟು ಹೊರಗೆ ಹೋದ ವ್ಯಕ್ತಿ ಈಗ ಶ’ವದ ಪರಿಸ್ಥಿತಿಯಲ್ಲಿ ಸಿಕ್ಕಿದ್ದಾರೆ ಎನ್ನುವುದು ವಿಷಾದನೀಯ ವಿಚಾರ. ಇನ್ನು ಶಂಕರಪ್ಪ ಡೆ’ತ್ ನೋಟ್ ಬರೆದಿಟ್ಟು ಆ’ತ್ಮಹ’ತ್ಯೆ ಮಾಡಿಕೊಂಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ತನಿಖೆ ಮೂಲಕ ಇದರಲ್ಲಿ ಏನಿದೆ ಎಂಬುದರ ಕುರಿತಂತೆ ಇನ್ನಷ್ಟೇ ತಿಳಿಯಬೇಕಾಗಿದೆ. ವಯಸ್ಸಿನ ಅಂತರದ ಬಗ್ಗೆ ಕೂಡ ತಲೆಕೆಡಿಸಿಕೊಳ್ಳದೆ ಸುಖವಾಗಿ ಸಂಸಾರ ನಡೆಸಿಕೊಂಡಿದ್ದ ಇವರ ನಡುವೆ ವಿರಸ ಮೂಡಿದ್ದೇಕೆ ಎನ್ನುವುದೇ ಪ್ರಶ್ನೆಯಾಗಿದೆ. ಇನ್ನು ಕೆಲವರು ಈ ಆ’ತ್ಮಹ’ತ್ಯೆ ಕುರಿತಂತೆ ಕೂಡ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಕಾಲಾಯ ತಸ್ಮೈ ನಮಃ ಎನ್ನುವಂತೆ ಕಾಲವೇ ಉತ್ತರ ಕೊಡಬೇಕಾಗಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ಮೂಲಕ ಹಂಚಿಕೊಳ್ಳಿ.