ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಈಗಾಗಲೇ ನಮ್ಮನ್ನು ಅಗಲಿ ಆರು ತಿಂಗಳುಗಳು ಕಳೆದುವು. ಇಂದಿಗೂ ಕೂಡ ಅವರ ನೆನಪು ನಮಗೆ ಮರೆಯಲು ಸಾಧ್ಯವಾಗುತ್ತಿಲ್ಲ. ಅವರನ್ನು ನಾವು ಕಳೆದುಕೊಂಡಿದ್ದೇವೆ ಎಂಬ ಕಟು ಸತ್ಯವನ್ನು ಒಪ್ಪಿಕೊಳ್ಳಲು ಕೂಡ ಸಾಧ್ಯವಾಗುತ್ತಿಲ್ಲ. ಲಕ್ಷಾಂತರ ಅಭಿಮಾನಿಗಳನ್ನು ಅನಾಥರನ್ನಾಗಿ ಮಾಡಿ ಅಪ್ಪು ಬಾರದ ಲೋಕಕ್ಕೆ ತೆರಳಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ತಮ್ಮ ಕೊನೆಯ ಸಂದರ್ಭದಲ್ಲೂ ಕೂಡ ತಮ್ಮ ಕಣ್ಣುಗಳನ್ನು ದಾನ ಮಾಡಿ ನಾಲ್ಕು ಜನರ ಜೀವನದಲ್ಲಿ ಬೆಳಕು ಮೂಡುವಂತೆ ಮಾಡಿದ್ದಾರೆ. ತಮ್ಮ ಖಾತೆಯಲ್ಲಿ 8 ಕೋಟಿ ರೂಪಾಯಿಗಳನ್ನು ಸಮಾಜಸೇವೆಗಾಗಿ ಫಿಕ್ಸಡ್ ಡೆಪೋಸಿಟ್ ಮಾಡಿಟ್ಟಿದ್ದರು. ನಿಜಕ್ಕೂ ಕೂಡ ಇವೆಲ್ಲವೂ ಅವರು ಎಷ್ಟು ಪುಣ್ಯಾತ್ಮ ಆಗಿದ್ದರು ಎನ್ನುವುದನ್ನು ಸಾಬೀತು ಪಡಿಸುತ್ತದೆ. ಪವರ್ ಸ್ಟಾರ್ ಹೋದಮೇಲೆ ಕೂಡ ಅವರ ಹೆಸರಿನಲ್ಲಿ ದಾಖಲೆಗಳು ಮೂಡುವುದು ಕಡಿಮೆಯಾಗಲಿಲ್ಲ.
ಹೌದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೊನೆಯ ಸಿನಿಮಾ ವಾಗಿರುವ ಜೇಮ್ಸ್ ಚಿತ್ರ ಬರೋಬ್ಬರಿ ನಾಲ್ಕು ಸಾವಿರಕ್ಕೂ ಅಧಿಕ ಪರದೆಗಳ ಮೇಲೆ ಬಿಡುಗಡೆಯಾಗಿ ವಾರಾಂತ್ಯದೊಳಗೆ ಬರೋಬ್ಬರಿ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ 88 ವರ್ಷಗಳ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ದಾಖಲೆ ಬರೆದಿತ್ತು. ಬಹುತೇಕ ಎಲ್ಲಾ ದಾಖಲೆಗಳನ್ನು ಕೂಡ ಜೇಮ್ಸ್ ಚಿತ್ರ ಈಗಾಗಲೇ ಹಲವಾರು ಅಡೆತಡೆಗಳ ನಡುವೆ ಕೂಡ ಮುರಿದು ಹಾಕಿದೆ ಎನ್ನುವುದು ಸಾಬೀತುಪಡಿಸುತ್ತದೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಹೆಸರಿನ ಬ್ರಾಂಡ್ ಎಷ್ಟರ ಮಟ್ಟಿಗೆ ಸ್ಟ್ರಾಂಗ್ ಆಗಿದೆ ಎನ್ನುವುದಾಗಿ.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಚಿಕ್ಕವಯಸ್ಸಿನಲ್ಲಿ ಹೇಗಿದ್ದಾರೋ ಹಾಗೆಯೇ ಇರುವಂತಹ ಎರಡು ಮಕ್ಕಳ ಫೋಟೋ ವೈರ’ಲ್ ಆಗುತ್ತಿದೆ. ಇದನ್ನು ನೋಡಿ ರುವಂತಹ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಕೂಡ ಒಬ್ಬರ ಹಾಗೆ ಏಳು ಜನ ಇರುತ್ತಾರೆ ಎಂಬುದನ್ನು ನಾನು ಕೇಳಿದ್ದು ಈಗ ನೋಡುತ್ತಿದ್ದೇನೆ ಮಕ್ಕಳು ಪುನೀತ್ ರವರ ಹಾಗೆ ಇದ್ದಾರೆ ಎಂಬುದಾಗಿ ಭಾವುಕರಾಗಿ ಹೇಳಿಕೊಂಡಿದ್ದಾರಂತೆ.
ನೀವು ಕೂಡ ಈ ಫೋಟೋವನ್ನು ಸರಿಯಾಗಿ ಗಮನಿಸಿದರೆ ಖಂಡಿತವಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಚಿಕ್ಕವಯಸ್ಸಿನಲ್ಲಿ ಹೇಗಿದ್ದರೋ ಈ ಮಕ್ಕಳು ಕೂಡ ಹಾಗೆ ಇದ್ದಾರೆ ಎನ್ನುವುದನ್ನು ನೂರಕ್ಕೆ ನೂರರಷ್ಟು ಹೇಳುತ್ತೀರಿ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ. ನೀವು ಕೂಡ ಅಪ್ಪು ಅವರ ಅಭಿಮಾನಿ ಆಗಿದ್ದರೆ ನಿಮಗೆ ಅಪ್ಪು ಅವರ ನೆಚ್ಚಿನ ಸಿನಿಮಾ ಯಾವುದು ಎನ್ನುವುದನ್ನು ತಪ್ಪದೆ ನಮ್ಮೊಂದಿಗೆ ಹಂಚಿಕೊಳ್ಳಿ.