ದರ್ಶನ್ ಅವರ ಈ ಸಿನಿಮಾವನ್ನು ನೋಡಿ. ಅಣ್ಣಾವ್ರು ಮನೆಗೆ ಕರೆಸಿ ಮಾಡಿದ್ದೇನು ಗೊತ್ತಾ…!?

ಸುದ್ದಿ

ಗೆಳೆಯರ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಇಂದಿನ ಕಾಲದಲ್ಲಿ ಯಾರಾದರೂ ಹೊಂದಿದ್ದರೆ ಖಂಡಿತವಾಗಿ ಕನ್ನಡ ಚಿತ್ರರಂಗದ ಸ್ಟಾರ್ ನಟರ ಸಾಲಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹೆಸರು ಖಂಡಿತವಾಗಿ ಕೇಳಿಬರುತ್ತದೆ. ಅದರಲ್ಲೂ ಮಾಸ್ ಅಭಿಮಾನಿಗಳಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರಿಗೆ ಅವರದೇ ಆದಂತಹ ದೊಡ್ಡಮಟ್ಟದ ಅಭಿಮಾನಿ ಬಳಗವಿದೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ಮಾಸ್ ಅಭಿಮಾನಿಗಳ ವಿಚಾರದಲ್ಲಿ ಇಡೀ ಭಾರತೀಯ ಚಿತ್ರರಂಗದಲ್ಲಿ ದರ್ಶನ ರವರಿಗೆ ಸರಿಸಾಟಿ ಇನ್ನೊಬ್ಬ ನಟನಿಲ್ಲ ಎಂದು ಹೇಳಬಹುದಾಗಿದೆ.

ಸ್ಟಾರ್ ನಟನ ಮಗನಾಗಿದ್ದರೂ ಕೂಡ ಕನ್ನಡ ಚಿತ್ರರಂಗದಲ್ಲಿ ಅವಕಾಶ ಪಡೆಯುವುದು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರಿಗೆ ಅಷ್ಟೊಂದು ಸುಲಭವಾಗಿರಲಿಲ್ಲ. ಮೊದಲಿಗೆ ಲೈಟ್ ಬಾಯ್ ಆಗಿ ಕನ್ನಡ ಚಿತ್ರರಂಗದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಕೆಲಸ ಮಾಡಿ ನಂತರ ಚಿಕ್ಕಪುಟ್ಟ ಕೆಲಸಗಳನ್ನು ಮಾಡುತ್ತಾ ನಟನೆಯಲ್ಲೂ ಕೂಡ ಕಿರುತೆರೆಗೆ ಕಾಲಿಡುತ್ತಾರೆ. ಕಿರುತೆರೆಯಲ್ಲಿ ಹಲವಾರು ಧಾರವಾಹಿಗಳಲ್ಲಿ ಕಾಣಿಸಿಕೊಂಡು ನಂತರ ಕೆಲವೊಂದು ಸಿನಿಮಾಗಳಲ್ಲಿ ಚಿಕ್ಕಪುಟ್ಟ ಪಾತ್ರಗಳನ್ನು ನಿಭಾಯಿಸುತ್ತಾರೆ. ನಂತರ ಅವರ ಕೈಗೆ ಬಂದಿದ್ದೆ ಮೆಜೆಸ್ಟಿಕ್ ಚಿತ್ರ. ಮೆಜೆಸ್ಟಿಕ್ ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿದ ಮೇಲೆ ಅವರು ಹಿಂದಿರುಗಿ ನೋಡಿದ್ದೇ ಇಲ್ಲ ಎಂದು ಹೇಳಬಹುದಾಗಿದೆ. ಒಂದಾದಮೇಲೊಂದರಂತೆ ಸೂಪರ್ ಹಿಟ್ ಸಿನಿಮಾಗಳನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ನಲ್ಲಿ ದಾಖಲಿಸಿದ್ದಾರೆ.

ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕನ್ನಡ ಚಿತ್ರರಂಗದ ನಟಸಾರ್ವಭೌಮ ಆಗಿರುವ ಡಾಕ್ಟರ್ ರಾಜಕುಮಾರ್ ಅವರು ಕನ್ನಡ ಚಿತ್ರರಂಗದ ಪ್ರತಿಯೊಬ್ಬ ಕಲಾವಿದನನ್ನು ಕೂಡ ಅವರ ನಟನೆಯನ್ನು ಮೆಚ್ಚಿ ಪ್ರೋತ್ಸಾಹಿಸುವುದರಲ್ಲಿ ಹಿಂದೆ ಬಿದ್ದಿಲ್ಲ. ಒಂದು ಲೆಕ್ಕದಲ್ಲಿ ಹೇಳುವುದಾದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಕೂಡ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದು ರಾಜಕುಮಾರ್ ರವರ ಪ್ರೊಡಕ್ಷನ್ ನಲ್ಲಿ ಕೆಲಸ ಮಾಡಿಕೊಂಡು. ನಿಮಗೆಲ್ಲ ತಿಳಿದಿರಬಹುದು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ನನ್ನ ಪ್ರೀತಿಯ ರಾಮು ಎನ್ನುವ ಸಿನಿಮಾದಲ್ಲಿ ಅಂಧ ಗಾಯಕರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ.

ಈ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಅಂಧ ಗಾಯಕನ ಪಾತ್ರದಲ್ಲಿ ಸಾಕಷ್ಟು ಸೊಗಸಾಗಿ ನಟಿಸಿದ್ದು ಹಲವಾರು ಪ್ರಶಸ್ತಿಗಳು ಕೂಡ ಈ ಪಾತ್ರಕ್ಕಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಹುಡುಕಿಕೊಂಡು ಬಂದಿತ್ತು. ಈ ಪಾತ್ರದ ಮೂಲಕ ಕೇವಲ ಮಾಸ್ ಪಾತ್ರಗಳಲ್ಲಿ ಮಾತ್ರವಲ್ಲದೆ ನಟನೆಯನ್ನು ತೋರ್ಪಡಿಸುವಂತಹ ಚಾಲೆಂಜಿಂಗ್ ಪಾತ್ರಗಳಲ್ಲಿ ಕೂಡ ತಾನು ಕಾಣಿಸಿಕೊಳ್ಳಬಲ್ಲೆ ಎಂಬುದಾಗಿ ಸಾಬೀತುಪಡಿಸಿದರು. ಈ ಪಾತ್ರವನ್ನು ನೋಡಿದ ನಂತರ ರಾಜಕುಮಾರ್ ರವರ ಸ್ವತಹ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರನ್ನು ಕರೆಸಿಕೊಂಡು ನಟನೆಯ ಕುರಿತಂತೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ತಂದೆ ಕುರಿತಂತೆ ಹಲವಾರು ಭಾವನಾತ್ಮಕ ವಿಚಾರಗಳನ್ನು ಮಾತನಾಡಿದ್ದರು ಎಂಬುದಾಗಿ ತಿಳಿದುಬಂದಿದೆ. ಇಂದಿಗೂ ಕನ್ನಡ ಚಿತ್ರರಂಗದಲ್ಲಿ ರಾಜಕುಮಾರ್ ರವರಂತೆ ದರ್ಶನ್ ರವರು ಕೂಡ ಹೊಸ ಕಲಾವಿದರಿಗೆ ಪ್ರೋತ್ಸಾಹ ನೀಡುವುದರಲ್ಲಿ ಹಿಂದೆ ಬಿದ್ದಿಲ್ಲ.


Leave a Reply

Your email address will not be published. Required fields are marked *