ದರ್ಶನ್ ಸರ್ ನೀವು ಕ್ಷೇಮೆ ಕೇಳಿಲ್ಲ ಅಂದ್ರೆ ಹೊಸಪೇಟೆನಲ್ಲಿ ನಿಮ್ಮ ಕ್ರಾಂತಿ ಹೇಗೆ ರಿಲೀಸ್ ಆಗುತ್ತೆ ಅಂತ ನೋಡ್ತೀವಿ ಎಂದ ಅಪ್ಪು ಅಭಿಮಾನಿಗಳು! ಅಷ್ಟಕ್ಕೂ ಆಗಿದ್ದೇನು ನೋಡಿ.

ಸುದ್ದಿ

ಸ್ಯಾಂಡಲ್ವುಡ್ ನಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ‘ಕ್ರಾಂತಿ’ ಮಾಡುವುದಕ್ಕೆ ಸಾಜ್ಜಾಗಿದ್ದಾರೆ. ಈಗಾಗಲೇ ಬಹುತೇಕ ಶೂಟಿಂಗ್ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಂದರ್ಶನವೊಂದರಲ್ಲಿ ಆಡಿದ ಮಾತು ವಿವಾದಕ್ಕೆ ಸೃಷ್ಟಿ ಮಾಡಿದೆ. ನಟ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಡಿಬಾಸ್ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

ಡಿಬಾಸ್ ಕೊಟ್ಟ ಒಂದೇ ಒಂದು ಹೇಳಿಕೆ ಈಗ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ನಿದ್ದೆಕೆಡಿಸಿದೆ. ಅದರಲ್ಲೂ ಪುನೀತ್ ರಾಜ್ ಕುಮಾರ್ ಸಾವಿನ ಬಗ್ಗೆ ಮಾತಾಡಿದ್ದು, ಪುನೀತ್ ಅಭಿಮಾನಿಗಳು ಆಕ್ರೋಶಕ್ಕೆ ಕಾರಣವಾಗಿದೆ. ಇನ್ನೇನು ಕ್ರಾಂತಿ ಸಿನೆಮಾ ಬಿಡುಗಡೆಗೆ ಸಜ್ಜಗಿರು ಸಮಯದಲ್ಲೇ ಡಿಬಾಸ್ ಸುತ್ತ ಮತ್ತೊಂದು ವಿವಾದ ಸುತ್ತಿಕೊಂಡಿದೆ.

ಡಿಬಾಸ್ ಸಂದರ್ಶನದ ವಿಡಿಯೋ ವೈ-ರಲ್ ಆಗುತ್ತಿದ್ದಂತೆ ಕರ್ನಾಟಕದ ಮೂಲೆ ಮೂಲೆಯಲ್ಲೂ ಅಭಿಮಾನಿಗಳು ಆ@ಕ್ರೋಶ ಹೊರ ಹಾಕುತ್ತಿದ್ದಾರೆ. “ಕ್ರಾಂತಿ” ಸಿನೆಮಾ ಬಿಡುಗಡೆ ಮಾಡುವುದಕ್ಕೆ ಬಿಡುವುದಿಲ್ಲ ಅಂತ ಪಟ್ಟು ಹಿಡಿದು ಕೂತಿದ್ದಾರೆ. ಅಷ್ಟಕ್ಕೂ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಬೇಡಿಕೆಯಾದರೂ ಏನು? ಡಿಬಾಸ್ ಹೇಳಿಕೆ ಬಗ್ಗೆ ಅವರು ಏನಂತಿದ್ದಾರೆ? ಅನ್ನೋದನ್ನು ತಿಳಿಯಲು ಮುಂದೆ ಸಂಪೂರ್ಣವಾಗಿ ಓದಿ.

ನಟ ದರ್ಶನ್ ಅವರು ಸಂದರ್ಶನದ ವೇಳೆ ನಟ ಪುನೀತ್ ರಾಜ್ ಕುಮಾರ್ ಅವರ ಅಗಲಿಕೆಯ ಬಗ್ಗೆ ಮಾತನಾಡಿದ್ದರು. “ಸಹಜವಾಗಿ ನಾವು ಸತ್ತಮೇಲೆ ನೋಡಿದ್ದೇವೆ. ಫ್ಯಾನ್ಸ್ಗಳು ಅಂದ್ರೆ ಹೇಗೆ ಎಂದು. ಪುನೀತ್ ರಾಜ್ ಕುಮಾರ್ ಒಬ್ಬರದ್ದೇ ಸಾಕು. ಫ್ಯಾನ್ಸ್ಗಳು ನಾನು ಬದುಕಿದ್ದಾಗಲೇ ತೋರಿಸಿ ಬಿಟ್ಟರಲ್ಲ ನನಗೆ ಅಷ್ಟೇ ಸಾಕು ಅನಿಸಿಬಿಡ್ತು. ಬಿಡಯ್ಯ ಇದಕ್ಕಿಂತ ಇನ್ನೇನು ಬೇಕು.” ಅಂತ ಹೇಳಿದ್ದರು. ಈ ವಿಡಿಯೋ ಸೋಶಿಯಲ್ ಮಿಡಿಯದಲ್ಲಿ ವೈ@ರಲ್ ಆಗುತ್ತಿದ್ದಂತೆ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ.

ಪುನೀತ್ ರಾಜ್ ಕುಮಾರ್ ಅಗಲಿಕೆಯ ಬಗ್ಗೆ ಮಾತನಾಡಿದ್ದು ಅಪ್ಪು ಅಭಿಮಾನಿಗಳಿಗೆ ಸರಿ ಅನ್ನಿಸಲಿಲ್ಲ. ಹೀಗಾಗಿ ಬೆಂಗಳೂರು, ಹೊಸಪೇಟೆ, ಬಳ್ಳಾರಿ, ಹುಬ್ಬಳ್ಳಿ ಸೇರಿದಂತೆ ಹಲವೆಡೆ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ಸಾ-ವಿ-ನ ಬಗ್ಗೆ ಮಾತಾಡಿದ್ದಕ್ಕೆ ದರ್ಶನ್ ಅವರು ಕ್ಷಮೆ ಕೇಳಲೇ ಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಮಾಡುವುದಾಗಿ ಹೊಸಪೇಟೆಯ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಹೇಳಿದ್ದಾರೆ.

ಹೊಸಪೇಟೆಯಲ್ಲಿ ಅಪ್ಪು ಅಭಿಮಾನಿಗಳು ಅಪ್ಪು ಪ್ರತಿಮೆ ಮುಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನಾವು ಎಷ್ಟು ಬೇಜಾರಾಗಿದ್ದೇವೆ ಅನ್ನೋದು ಆ ಪುಣ್ಯತ್ಮನಿಗೆ ಗೊತ್ತು. ಅಂಥದ್ರಲ್ಲಿ ಮತ್ತೆ ಇವರು ನೋವು ಕೊಟ್ಟಿದ್ದಾರೆ. ಲಕ್ಷಾಂತರ ಅಸಹಾಯಕರಿಗೆ ದಾರಿದೀಪ ಆಗಿರುವ ಅಂಥ ಪುಣ್ಯಾತ್ಮನ ಬಗ್ಗೆ ಹೇಗೆ ಮಾತಾಡಿರೋದು ಅವರ ಅಭಿಮಾನಿಗಳಿಗೆ ತುಂಬಾ ಬೇಸರ ಸಂಗತಿ. ಹಾಗಾಗಿ ಅಪ್ಪು ಅಭಿಮಾನಿಗಳು ದರ್ಶನ್ ಅವರು ಕ್ಷಮೆ ಕೇಳಬೇಕು ಎಂದು ಕೇಳಿಕೊಂಡಿದ್ದಾರೆ.

ದರ್ಶನ್ ಅವರು ಕ್ಷಮೆ ಕೇಳಿಲ್ಲ ಆದರೆ, ಅವರ ಎಂದಿಗೂ ಅವರ ಸಿನೆಮಾವನ್ನು ಹೊಸಪೇಟೆಯಲ್ಲಿ ಬಿಡುಗಡೆಯಾಗುವುದಕ್ಕೆ ಬಿಡುವುದಿಲ್ಲ. ದರ್ಶನ್ ಅವರು ಮೊದಲಿನಿಂದ ದೊಡ್ಮನೆಯ ಕಾಲು ಧೂಳಿಗೂ ಸಮಯಿಲ್ಲ ಅಂತ ಹೇಳುತ್ತಿದ್ದರು. ಅಲ್ಲಿಂದ ಬಂದಿದ್ದು ಅವರೇ ನಮ್ಮನ್ನು ಬೆಳೆಸಿದ್ದು ಎಂದು ಹೇಳುತ್ತಿದ್ರು. ಇವತ್ತು ನಿಮ್ಮ ಬಾಯಿಯಲ್ಲಿ ಯಾಕೆ ಇಂತಹ ಮಾತು ಬರುತ್ತಿದೆ. ಎಂದು ವಿಜಯನಾಗರ ಹಾಗೂ ಉತ್ತರ ಕನ್ನಡ ಭಾಗದ ಅಖಿಲ ಕರ್ನಾಟಕ ರಾಜವಂಶ ಕನ್ನಡ ಯುವಸೇನೆ ನೋವನ್ನು ಹೊರಹಕಿದ್ದಾರೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಿಳಿಸಿ.


Leave a Reply

Your email address will not be published. Required fields are marked *