ಸ್ಯಾಂಡಲ್ವುಡ್ ನ ಸರಳ ಸುಂದರಿ ಚತುರ್ ಭಾಷೆಯಲ್ಲಿ ನಟಿಸಿ ಸೈ ಎನಿಸಿಕೊಂಡ ಬಹುಮುಖ ಪ್ರತಿಭೆ ಸಿಂಧೂ ಮೆನನ್ ಅವರ ನೆನಪನ್ನು ಯಾರಿಗೆ ತಾನೇ ಮರೆಯಲು ಸಾಧ್ಯ ಹೇಳಿ. ಸಿಂಧೂ ಮೆನನ್ ಅವರು ಬಾಲನಟಿಯಾಗಿದ್ದಾಗಲೇ ಸಿನೆಮಾರಂಗಕ್ಕೆ ಕಲಿಟ್ಟಿದ್ದು ಸದ್ಯ ಸಿನೆಮಾರಂಗದಿಂದ ದೂರ ಉಳಿದಿದ್ದರೆ. ಈಗ ಅವರು ಎಲ್ಲಿದ್ದಾರೆ. ಯಾವೆಲ್ಲ ಸಿನೆಮಾದಲ್ಲಿ ನಟಿಸಿದ್ದರು ಎಂಬ ಮಾಹಿತಿ ನಿಮಗೆ ನೀಡುತ್ತಿದ್ದೇವೆ ಈ ಲೇಖನವನ್ನು ಸಂಪೂರ್ಣ ಓದಿ.
ಸಿಂಧೂ ಅವರು “ರಶ್ಮಿ” ಚಿತ್ರದ ಮೂಲಕ ಬಾಲನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು ಸಿಂಧೂ ಮೆನನ್ ಮೂಲತಃ ಮಲಯಾಳಿ ಅಗಿದ್ದು. ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಭಾರತನಾಟ್ಯ ಅದ್ಭುತವಾಗಿ ಮಾಡುತ್ತಿದ್ದು ಸಿಂಧು ಅವರನ್ನು ಕನ್ನಡ ಚಿತ್ರರಂಗಕ್ಕೆ ಬರಮಾಡಿಕೊಂಡವರು ಕೆ ವಿ ಜಯರಾಮ್. ‘ಪ್ರೇಮ ಪ್ರೇಮ ಪ್ರೇಮ’ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗಿ ಸಿಂಧು ಪಾದಾರ್ಪಣೆ ಮಾಡಿದರು.
ಸಿಂಧು ಅಭಿನಯದ ಮಾರಿಕಣ್ಣು ಹೋರಿಮ್ಯಾಗೆ’ ಚಿತ್ರ ಸಿಂಧು ಅವರ ವೃತ್ತಿ ಜೀವನದಲ್ಲೇ ಬಿಗ್ ಟರ್ನಿಂಗ್ ಪಾಯಿಂಟ್. ಕನ್ನಡ, ತಮಿಳು, ತೆಲುಗು, ಹಾಗೂ ಮಲಯಾಳಂ, ಚಿತ್ರಗಳಲ್ಲಿ ನಟಿಸಿರುವ ಸಿಂಧು ಮೆನನ್ ಕನ್ನಡದ ‘ನಂದಿ’ ‘ಖುಷಿ’ ‘ಧರ್ಮ’ ‘ಯಾರೇ ನೀ ಹುಡುಗಿ’ ಜೇಷ್ಠ, ಅಂತಹ ಅದ್ಬುತ ಸಿನೆಮಾಗಳಲ್ಲಿ ನಟಿಸಿದ್ದಾರೆ. 2012ರಲ್ಲಿ ತೆಲುಗು ‘ಸುಧಾರ’ ಸಿಂಧು ಮೆನನ್ ಅವರ ಕೊನೆಯ ಚಿತ್ರ. ಸಿಂಧು ಅವರು ಸಿನೆಮಾಕ್ಷೇತ್ರದಲ್ಲಿ ಮಾತ್ರ ಅಲ್ಲದೆ ಕಿರುತೆರೆಯಲ್ಲೂ ಹೆಸರು ಮಾಡಿದ್ದಾರೆ. “ಶ್ರೀಮಾನ್ ಶ್ರೀಮತಿ” ಮತ್ತು ‘ಶ್ರೀ ಹೃದಯಂ” ಅವರಿಗೆ ಹೆಸರು ತಂದು ಕೊಟ್ಟ ಧಾರಾವಾಹಿಗಳು.
ಇನ್ನು ಸಿಂಧು ಮೆನನ್ ಅವರ ಬಗ್ಗೆ ಆ-ತ್ಮ-ಹ-ತ್ಯೆ ಗಾಸಿಪ್ ಹರಿದಾಡಿತ್ತು. ಕನ್ನಡ ಸಿನೆಮಾ ತಾರೆ ಸಿಂಧು ಮೆನನ್ ಅವರು ಲಕ್ಷಗಟ್ಟಲೆ ಸಾಲ ಮಾಡಿ ತೀರಿಸಲಾಗದೆ ಆ-ತ್ಮ-ಹ-ತ್ಯೆ ಗೆ ಯತ್ನಿಸಿದ್ದಾರೆ ಎಂಬ ಸುದ್ಧಿ ಅವರ ಅಭಿಮಾನಿಗಳನ್ನು ಹಾಗೂ ಸಿನಿಪ್ರಿಯರನ್ನು ಕೆಲಕಾಲ ದಿಗ್ಬ್ರಮೇಯನ್ನು ಉಂಟುಮಾಡಿಸಿತು. ಆದರೆ ಹಾಗೇನು ಇಲ್ಲ ನಾನು ಅರೋಗ್ಯವಾಗಿರುವುದಾಗಿ ಅಂದು ಅವರು ಸಾಮಾಜಿಕ ಜಾಲತಾಣಗಳಲ್ಲಿ ಸ್ಪಷ್ಟನೆ ನೀಡಿದ್ದರು.
2010ರಲ್ಲಿ ನೆಲೆಸಿರುವ ಉದ್ಯಮಿ ಪ್ರಭು ಎಂಬುವವರ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಸಿಂಧು ದಂಪತಿಗಳಿಗೆ ಒಂದು ಹೆಣ್ಣು ಹಾಗೂ ಒಂದು ಗಂಡು ಮಕ್ಕಳಿದ್ದಾರೆ. ಮುದ್ದಿನ ಮಕ್ಕಳ ಜೊತೆ ಕಳೆಯುವ ಪ್ರತಿ ಕ್ಷಣದ ಫೋಟೋಗಳನ್ನು ಸಿಂಧು ಶೇರ್ ಮಾಡಿಕೊಳ್ಳುತ್ತಾರೆ. ಈ ಮೂಲಕ ಅವರ ಫೋಟೋ ಮತ್ತು ವಿಡಿಯೋ ಗಳಿಗೆ ಅಭಿಮಾನಿಗಳು ಲೈಕ್ಸ್ ಹಾಗೂ ಕಾಮೆಂಟ್ ಮಾಡುತ್ತಿದ್ದಾರೆ.
ತಮ್ಮ ನೆಚ್ಚಿನ ನಟಿ ಮುಂದಿನ ದಿನದಲ್ಲಿ ಸಿನೆಮಾ ಮಾಡಲಿ ಎನ್ನುವುದೇ ಅವರ ಅಭಿಮಾನಿಗಳ ದೊಡ್ಡ ಆಸೆ. ನಟಿ ಸಿಂಧು ಮೆನನ್ ಅವರ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.