ಚಂದನವನದಲ್ಲಿ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಅವರ ಬಗ್ಗೆ ನಿಮಗೆ ಗೊತ್ತೇ ಇರುತ್ತೆ. ಗುಡು ಗುಡಿಯ ಸೇದಿ ನೋಡೋ ಎಂಬ ಹಾಡಿನ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆದವರು. ರಘು ದೀಕ್ಷಿತ್ ಅವರು ಸಂಗೀತ ನಿರ್ದೇಶನ ಹಾಗೂ ಉತ್ತಮ ಗಾಯಕರಾಗಿ ಖ್ಯಾತಿ ಹೊಂದಿದ್ದಾರೆ. ಇವರಿಗೆ ಚಿತ್ರರಂಗದಲ್ಲಿ ಹೆಸರು ಮತ್ತು ಗಳಿಕೆ ಎರಡು ಇದ್ದರು, ಇವರ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏರು ಪೆರು ಕಂಡಿದ್ದಾರೆ.
ಗಾಯಕ ರಘು ದೀಕ್ಷಿತ್ ಅವರ ಬದುಕಲ್ಲಿ ನಡೆದಿದ್ದ ಗುಟ್ಟೇನು ನೋಡೋಣ ಬನ್ನಿ. ರಘು ದೀಕ್ಷಿತ್ ಹೆಂಡತಿಯಿಂದ ಯಾವ ಕಾರಣಕ್ಕಾಗಿ ದೂರ ಉಳಿದರು ಎಂಬುದನ್ನು ಕೇಳಿದರೆ ನಿಮಗೆ ನಿಜಕ್ಕೂ ಆಶ್ಚರ್ಯ ಪಡ್ತಿರಾ. ಗಾಯಕ ರಘು ದೀಕ್ಷಿತ್ ಅವರು ನವೆಂಬರ್ 11, 1974 ರಲ್ಲಿ ಮುಂಬೈ ನಲ್ಲಿ ಜನಿಸಿದರು. ಸಿನೆಮಾರಂಗದಲ್ಲಿ ಒಬ್ಬ ಸ್ರೇಷ್ಟ ಸಂಗೀತ ನಿರ್ದೇಶಕ ಹಾಗೂ ಗಾಯಕರಾಗಿ ಗುರುತಿಸಿಕೊಂಡಿದ್ದಾರೆ.
ರಘು ದೀಕ್ಷಿತ್ ಅವರು ಗಿಟಾರ್, ಬ್ಯಾಂಡ್, ಬಾರಿಸುವುದರಲ್ಲಿ ಪ್ರವೀಣರು ಇವರಿಗೆ ಕರ್ನಾಟಕ ಮಾತ್ರಅಲ್ಲದೆ ದೇಶ ವಿದೇಶಗಳಲ್ಲಿಯೂ ಜನಪ್ರಿಯತೆ ಗೊಂಡು ಅಲ್ಲಿಯೂ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅದರ ಜೊತೆಗೆ ಅನೇಕ ಕಾರ್ಯಕ್ರಮಗಳಲ್ಲಿ ತಮ್ಮದೇ ಸ್ವಂತ ಮೆಲೋಡಿಸ್ ಮೂಲಕ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದರೆ. ಇವರು ಕನ್ನಡ, ಇಂಗ್ಲಿಷ್, ತೆಲುಗು ಸಿನಿಮಾಗಳಲ್ಲಿ ಆಲ್ಬಮ್ ಸಾಂಗ್ ಗಳನ್ನು ರಚಿಸಿ ಎಲ್ಲಾ ಸಿನಿ ಪ್ರಿಯರನ್ನು ರಂಜಿಸಿದ್ದಾರೆ. ಕನ್ನಡ ಚಿತ್ರ ಸೈಕೋ ಚಿತ್ರದಲ್ಲಿ ಅದ್ಭುತವಾದ ಸಂಗೀತದ ಮೂಲಕ ಜನರನ್ನು ಮೋಡಿ ಮಾಡಿದ್ದಾರೆ.
ಅಲ್ಲದೆ, ಜಸ್ಟ್ ಮತ್ ಮಾತಲ್ಲಿ, ಸೂಪರ್ ಮ್ಯಾನ್, ಕೋಟೆ, ಲವ್ ಮಾಕ್ಟೇಲ್, ಹೀಗೆ ಹಲವು ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಕನ್ನಡ ಮಾತ್ರವಾಲ್ಲದೆ ಬೇರೆ ಭಾಷೆಯಲ್ಲಿ ಕೂಡ ತಮ್ಮ ವಿಭಿನ್ನವಾದ ಸಂಗೀತದಿಂದ ಫೇಮಸ್ ಆಗಿದ್ದಾರೆ. ಗಾಯಕ ರಘು ದೀಕ್ಷಿತ್ ಅವರ ವೈವಾಹಿಕ ಜೀವನದ ಬಗ್ಗೆ ಗಮನ ಹರಿಸಿದರೆ ರಘು ದೀಕ್ಷಿತ್ ಅವರು ಡ್ಯಾನ್ಸರ್ ಮಯೂರಿ ಮದುವೆ ಯಾಗಿದ್ದರು. ನಂತರ ಇಬ್ಬರು ಪರಸ್ಪರ ಒಪ್ಪಿಗೆಯ ಮೇರೆಗೆ ಡೈವೋರ್ಸ್ ಪಡೆದುಕೊಂಡು ದೂರವಾಗಿದ್ದರೆ.
ಡೈವೋರ್ಸ್ ಪಡೆಯುದಕ್ಕೂ ಮೊದಲೇ ಒಂದು ವರ್ಷದಿಂದ ರಘು ಮತ್ತು ಮಯೂರಿ ಬೇರೆ ಬೇರೆಯಾಗಿ ಜೀವನ ಸಾಗಿಸುತಿದ್ದರು. ನಂತರ ವಿಚ್ಚೇದಾನಕ್ಕೆ ಕೋರ್ಟ್ಗೆ ಅರ್ಜಿ
ಸಲ್ಲಿಸಿದರು. ಕಳೆದ ವರ್ಷ ಮೀಟು ಆರೋಪ ಕೇಳಿ ಬಂದಾಗಲೇ ರಘು ಹಾಗೂ ಮಯೂರಿ ಇವರಿಬ್ಬರ ಮದ್ಯೆ ಹೊಂದಾಣಿಕೆ ಸರಿ ಇಲ್ಲ ಎಂದು ಎಲ್ಲರಿಗೂ ತಿಳಿದು ಬಂದಿತ್ತು. ಆದರೆ ಈ ದಂಪತಿಗಳ ವಿಚ್ಚೆಧಾನ ಕುರಿತು ಸುದ್ಧಿ ಹೊರ ಬೀಳುತ್ತೀದ್ದಂತೆ ಈ ಜೋಡಿಗಳು ಬೇರೆಯಾಗಿದ್ದಾರೆ ಎನ್ನುವುದು ಪಕ್ಕ ಆಗಿತ್ತು.
ಕೆಲವು ವರ್ಷಗಳ ಹಿಂದೆ, ಗಾಯಕಿ ಚಿನ್ಮಯಿ ಶ್ರೀಪಾದ ಅವರು ಕೂಡ ರಘು ದೀಕ್ಷಿತ್ ಮೇಲೆ ಮೀಟೂ ಆರೋಪ ಮಾಡಿದ್ದರು. ಚಿನ್ಮಯ್ ತನ್ನ ಗೆಳಯರಿಗೆ ಆದ ಅನುಭವಗಳನ್ನು 2 ಪತ್ರಗಳಲ್ಲಿ ಬರೆದು ತಮ್ಮ ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಂಡಿದ್ದರು. ಈ ಆರೋಪ ಕೇಳಿಬರುತಿದ್ದಂತೆ ರಘು ದೀಕ್ಷಿತ್ ಪ್ರತಿಕ್ರಿಯೆ ನೀಡಿದ್ದರು. ನಿಜ ರಘು ಅವರು ಚಿನ್ಮಯಿ ಶ್ರೀಪಾದ ಕಾರ್ಯವನ್ನು ಶ್ಲಾಘೀಸಿದ್ದರು. ಆದರೆ ಅವರು ಹೇಳಿದ ಕೆಲ ಭಾಗ ನಿಜಾವಿದ್ದರೂ. ಕೆಲವು ನಿಜವಲ್ಲ ಎಂದು ತಮ್ಮ ಟ್ವಿಟ್ಟರ್ ನಲ್ಲಿ ಹೇಳಿದ್ದರು. ನಾನು ಆಕೆ ಹೇಳಿದ ಹಾಗೇ ಮಾಡಿದ್ದು ನಿಜ ಅದರೆ ಅದಕ್ಕೆ ಕ್ಷಮೆ ಕೂಡ ಕೇಳಿದ್ದಾನೆ. ಈಗಲೂ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ ರಘು ದೀಕ್ಷಿತ್.
ಇನ್ನು ರಘು ಬಗ್ಗೆ ಆರೋಪ ಬರುತ್ತಿದ್ದಂತೆ ಪತ್ನಿ ಮಯೂರಿ ಕೂಡ ತಮ್ಮ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಲೈಂ’ಗಿ’ಕ ಕಿ ರು ಕು ಳಕ್ಕೆ ಒಳಗದವರ ಪರವಾಗಿ ನಾನು ಸದಾ ನಿಲ್ಲುತ್ತೇನೆ. ನನ್ನ ಬೆಂಬಲ ಸದಾ ಇದೇ ಎಂದು ಹೇಳಿದ್ದಾರೆ. ಬಳಿಕ ಮಯೂರಿ ಹಾಗೂ ರಘು ದೀಕ್ಷಿತ್ ಇವರ ವಿಚ್ಚೇದನ ಪಡೆಯುವ ಮೂಲಕ ಅವರ ವೈವಾಹಿಕ ಜೀವನದಿಂದ ದೂರವಾದರು. ಇವರಿಬ್ಬರು ಕೂಡ ತಮ್ಮ ತಮ್ಮ ವೃತ್ತಿಯ ಕಡೆ ತುಂಬಾ ಬ್ಯುಸಿ ಆಗಿದ್ದಾರೆ. ರಘು ದೀಕ್ಷಿತ್ ಹಾಗೂ ಮಯೂರಿ ಅವರ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ