ಸ್ಯಾಂಡಲ್ವುಡ್ ನ ಕಾಮಿಡಿ ಕಿಂಗ್ ಶರಣ್ ಅಭಿನಯದ ಗುರುಶಿಷ್ಯರ ಹವಾ ಜೋರಾಗಿದೆ. ಬಹುನಿರೀಕ್ಷಿತ ಸಿನೆಮಾ ಸದ್ಯ ರಿಲೀಸ್ ಗೆ ರೆಡಿಯಾಗಿದೆ. ಈ ಬಾರಿ ಗುರು ಶಿಷ್ಯರಾಗಿ ತೆರೆಮೇಲೆ ಮೋಡಿ ಮಾಡಲು ಶರಣ್ ಅವರು ಬರುತ್ತಿದ್ದಾರೆ. ಶರಣ್ ಅಭಿನಯಕ್ಕೆ ಜಡೇಶ್ ಕೆ ಹುಂಪಿ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಿಂದ ದಿನ ದಿನಕ್ಕೆ ಕುತೂಹಲ ಹೆಚ್ಚಿಸಿದೆ. ಈಗಾಗಲೇ ಚಿತ್ರದ ಟ್ರೈಲರ್ ಶಿಕ್ಷಕರ ದಿನದಂದು ಬಿಡುಗಡೆಯಗಿತ್ತು. 1995 ರಲ್ಲಿ ನಡೆದ ಕಥೆಯನ್ನು ಹೊಂದಿರುವ ಚಿತ್ರದಲ್ಲಿ ಶರಣ್ ಪಿಟಿ ಶಿಕ್ಷಕನ ಪಾತ್ರ ಮಾಡಿದ್ದಾರೆ.
ಅನುಭವ ಪ್ರಮಾಣಪತ್ರವನ್ನು ಪಡೆಯಲು ಶರಣ್ ಶಾಲೆಗೆ ಸೇರುತ್ತಾರೆ. ಆದರೆ ವಿದ್ಯಾರ್ಥಿಗಳಿಗೆ ಕೋ-ಕೋ ತರಬೇತಿ ನೀಡಲು ಅವರನ್ನು ನೇಮಿಸಲಾಗುತ್ತದೆ. ಮುಂದಿನದ್ದು ಪಿಟಿ ಶಿಕ್ಷಕ ಮತ್ತು ವಿದ್ಯಾರ್ಥಿಗಳ ನಡುವಿನ ಜಟಾ ಪಟಿ ಯಾಗಿದೆ. ಆದರೆ, ಶಾಲೆಯ ಭೂಮಿಯನ್ನು ಪಡೆಯಲು ವ್ಯಕ್ತಿಯೊಬ್ಬ ಪ್ರಯತ್ನಿಸಿದಾಗ ನಿಜವಾದ ಸವಾಲು ಅಲ್ಲಿಂದ ಪ್ರಾರಂಭವಾಗುತ್ತದೆ. ಶಾಲೆಯನ್ನು ಉಳಿಸಲು ಈ ಪಿಟಿ ಶಿಕ್ಷಕರು ಏನೆಲ್ಲಾ ಮಾಡುತ್ತಾರೆ.? ಎನ್ನುವುದೇ ಸಿನೆಮಾದ ಕಥೆಯಾಗಿದೆ.
ಈ ಎಲ್ಲಾ ಪ್ರೆಶ್ನೆಗಳಿಗೆ ಸೆಪ್ಟೆಂಬರ್ 23 ರಂದು ತೆರೆಗೆ ಬರಲಿರುವ ಗುರು ಶಿಷ್ಯರು ಸಿನೆಮಾದಲ್ಲಿ ಉತ್ತರ ಸಿಗಲಿದೆ. ಈ ಚಿತ್ರವನ್ನು ಶರಣ್ ಅವರ ಲಡ್ಡು ಸಿನೆಮಾಸ್ ಬ್ಯಾನರ್ ಮತ್ತು ತರುಣ್ ಕಿಶೋರ್ ಸುಧೀರ್ ತರುಣ್ ಕಿಶೋರ್ ಕ್ರಿಯೇಟಿವ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಮಾಡಲಾಗಿದೆ. ಇನ್ನು ಈ ಸಿನೆಮಾದಲ್ಲಿ ಸ್ಟಾರ್ ನಟರ ಮಕ್ಕಳು ಅಭಿನಯಿಸಿದ್ದರೆ, ಆದರೆ ದುನಿಯಾ ವಿಜಯ್ ಅವರ ಮಗನನ್ನು ಈ ಸಿನೆಮಾದಲ್ಲಿ ಹಾಕಿಕೊಂಡಿಲ್ಲ, ಈ ಕುರಿತು ಅಸಲಿ ಕಾರಣವನ್ನು ಬಿಚ್ಚಿಟ್ಟಿದ್ದಾರೆ. ಹಾಗಾದರೆ ನಟ ಶರಣ್ ಏನು ಹೇಳಿದ್ದಾರೆ ಎನ್ನುವುದಕ್ಕೆ ಉತ್ತರ ಇಲ್ಲಿದೆ ನೋಡಿ.
ಅಂದಹಾಗೆ, ಗುರು ಶಿಷ್ಯರು ಚಿತ್ರದಲ್ಲಿ ಶರಣ್, ಸುರೇಶ್ ಹೆಬ್ಳಿಕರ್, ದತ್ತಣ್ಣ, ನಿಶ್ವಿಕಾ ನಾಯ್ಡು ಮತ್ತು ಅಪೂರ್ವ ಕಾಸರವಳ್ಳಿ, ಪ್ರಮುಖ ಪಾತ್ರದಲ್ಲ ಕಾಣಿಸಿಕೊಂಡಿದ್ದಾರೆ. ಈ ಸಿನೆಮಾದಲ್ಲಿ ಸ್ಟಾರ್ ನಟರ ಮಕ್ಕಳು ನಟಿಸಿದ್ದಾರೆ. ಹೃದಯ (ಶರಣ್ ಮಗ ) ಏಕಾಂತ್ (ಪ್ರೇಮ್ ಮಗ ) ರಕ್ಷಕ್ (ಬುಲೆಟ್ ಪ್ರಕಾಶ್ ಮಗ ) ಮಣಿಕಂಠ ನಾಯಕ್ (ರಾಜುಗೌಡ ಅವರ ಮಗ) ಸೂರ್ಯ (ರವಿ ಶಂಕರ್ ಗೌಡ ಮಗ) ಮತ್ತು ಹರ್ಷಿತ್ (ನವೀನ್ ಕೃಷ್ಣ ಅವರ ಮಗ) ಇಷ್ಟು ಜನ ಕಾಣಿಸಿಕೊಂಡಿದ್ದಾರೆ. ಇವರಲ್ಲದೆ ಕೋಂ ಕೋಂ ಆಟಗಾರರಾಗಿ ಆಸೀಫ್ ಮುಲ್ಲಾ, ಸಾಂಬಶಿವ, ಸಂದೇಶ್, ಸಾಗರ್, ರುದ್ರಗೌಡ, ಅನೂಪ್ ರಾಮಣ, ಅಮಿತ್ ಬಿ ಕೂಡ ಕಾಣಿಸಿಕೊಂಡಿದ್ದಾರೆ.
ಹೌದು ಶರಣ್ ಅವರು ಸಂದರ್ಶನ ಒಂದರಲ್ಲಿ ದುನಿಯಾ ವಿಜಯ್ ಅವರ ಮಗನನ್ನು ಈ ಸಿನೆಮಾದಲ್ಲಿ ಹಾಕಿಕೊಳ್ಳದೆ ಇರಲು ಕಾರಣವನ್ನು ತಿಳಿಸಿದ್ದಾರೆ. ಖಾಸಗಿ ಮಧ್ಯಮದ ಸಂದರ್ಶನದಲ್ಲಿ ಭಾಗಿಯಾಗಿದ್ದ ಶರಣ್ ಅವರಿಗೆ, ದುನಿಯಾ ವಿಜಯ್ ಅವರ ಮಗನನ್ನು ಸಿನೆಮಾದಲ್ಲಿ ಹಾಕಿಕೊಳ್ಳದಿರಲು ಕಾರಣವೇನು ಎಂದು ಹೇಳಿದ್ದಾರೆ, ಇದಕ್ಕೆ ಪ್ರತಿಕ್ರಿಯೇ ನೀಡಿದ ನಟ ಶರಣ್ ಅವರು, ಆ ಟೈಮ್ ನಲ್ಲಿ ದುನಿಯಾ ವಿಜಯ್ ಅವರ ಮಗನಿಗೆ ಎಕ್ಸಾಮ್ ಇತ್ತು.
ಇಲ್ಲ ಅಂದ್ರೆ ನನ್ನ ಗೆಳೆಯನ ಮಗನನ್ನು ಬಿಡೋಕೆ ಆಗುತ್ತಾ. ನಾವು ಅಪ್ರೂಚ್ ಮಾಡಿದ್ವಿ ಎಕ್ಸಾಮ್ ಇದ್ದ ಕಾರಣದಿಂದ ಮಿಸ್ ಆಯ್ತು. ಸುಮಾರು ಮಕ್ಕಳು ಈ ಕಾರಣದಿಂದ ಮಿಸ್ ಆದ್ರೂ ಅಷ್ಟೇ ಅಂದಿದ್ದಾರೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.