ದೊಡ್ಡ ಸ್ಟಾರ್ ನಟನ ಸಿನಿಮಾವನ್ನೇ ರಿಜೆಕ್ಟ್ ಮಾಡಿದ ಕೃತಿ ಶೆಟ್ಟಿ; ಯಾರ ಸಿನಿಮಾ ಗೊತ್ತಾ..!?

Entertainment

ನಮ್ಮ ಕರ್ನಾಟಕ ಮೂಲದ ಹಲವಾರು ನಟಿಯರು ಪರಭಾಷೆಗಳಲ್ಲಿ ನಟಿಸಿ ಜನಪ್ರಿಯತೆ ಪಡೆದುಕೊಳ್ಳುತ್ತಿರುವುದು ನೋಡಲು ನಿಜಕ್ಕೂ ಕೂಡ ಖುಷಿಯಾಗುತ್ತದೆ. ಈಗಾಗಲೇ ಹಲವಾರು ಸ್ಟಾರ್ ನಟ ಹಾಗೂ ನಟಿಯರು ಪರಭಾಷೆಗಳಲ್ಲಿ ಮಿಂಚುತ್ತಿದ್ದಾರೆ. ಅವರಲ್ಲಿ ಇಂದು ನಾವು ಮಾತನಾಡಲು ಹೊರಟಿರುವುದು ನಟಿ ಕೃತಿ ಶೆಟ್ಟಿ ರವರ ಕುರಿತಂತೆ. ನಟಿ ಕೃತಿ ಶೆಟ್ಟಿ ಅವರು ಮೂಲತಹ ಮಂಗಳೂರಿನವರು. ಆದರೂ ಕೂಡ ಈಗ ಮಿಂಚುತ್ತಿರುವುದು ತೆಲುಗು ಚಿತ್ರರಂಗದಲ್ಲಿ.

ಸದ್ಯದ ಮಟ್ಟಿಗೆ ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಚಿತ್ರರಂಗವೆಂದರೆ ಅದು ತೆಲುಗು ಚಿತ್ರರಂಗ ಎನ್ನುವುದನ್ನು ಎಲ್ಲರೂ ಕೂಡ ಒಪ್ಪಿಕೊಳ್ಳಲೇಬೇಕು. ಇತ್ತೀಚಿನ ದಿನಗಳಲ್ಲಿ ತೆಲುಗು ಚಿತ್ರರಂಗದಿಂದ ಮೂಡಿ ಬರುವಂತಹ ಎಲ್ಲಾ ಸಿನಿಮಾಗಳು ಕೂಡ ಭಾರತದ ಬೇರೆ ಬೇರೆ ಭಾಷೆಗಳಲ್ಲಿ ರಿಮೇಕ್ ಆಗುತ್ತಿರುವುದು ಚಿತ್ರರಂಗದ ಬೆಳವಣಿಗೆಗೆ ನೀಡುವಂತಹ ಒಂದು ಒಳ್ಳೆಯ ಉದಾಹರಣೆಯಾಗಿದೆ.

ಇನ್ನು ಕೃತಿ ಶೆಟ್ಟಿ ಅವರು ತೆಲುಗು ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡಿದ್ದು ಉಪ್ಪೇನ ಚಿತ್ರದ ಮೂಲಕ. ಹೊಸಬರೇ ನಟಿಸಿರುವ ಉಪ್ಪೇನ ಚಿತ್ರದ ಮೂಲಕ ತಮ್ಮ ನಾಯಕನಟಿ ಯ ಪಾತ್ರವನ್ನು ಆರಂಭಿಸಿ ಈಗ ತೆಲುಗು ಚಿತ್ರರಂಗದಲ್ಲಿ ಬಹುಬೇಡಿಕೆಯ ನಾಯಕ ನಟಿಯಾಗಿ ಕೃತಿ ಶೆಟ್ಟಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ನಿಜವಾಗ್ಲೂ ಹೇಳಬೇಕೆಂದರೆ ಕೃತಿ ಶೆಟ್ಟಿ ಅವರು ಮೊದಲ ಬಾರಿಗೆ ದೊಡ್ಡ ಪರದೆ ಮೇಲೆ ಕಾಣಿಸಿಕೊಂಡಿದ್ದು ಹೃತಿಕ್ ರೋಷನ್ ರವರ ಸೂಪರ್ ಹಿಟ್ ಸಿನಿಮಾ ವಾಗಿರುವ ಸೂಪರ್-30 ಚಿತ್ರದಲ್ಲಿ.

ಇನ್ನೂ ಸದ್ಯಕ್ಕೆ ಕೃತಿ ಶೆಟ್ಟಿ ಅವರ ಕೈಯಲ್ಲಿ ಹಲವಾರು ದೊಡ್ಡ ದೊಡ್ಡ ಸ್ಟಾರ್ ನಟರ ಸಿನಿಮಾಗಳು ಇವೆ. ಈ ಮಧ್ಯದಲ್ಲಿ ಲೆಜೆಂಡರಿ ನಟರೊಬ್ಬರ ಸಿನಿಮಾವನ್ನು ತಿರಸ್ಕರಿಸಿ ದೊಡ್ಡಮಟ್ಟದಲ್ಲಿ ಸುದ್ದಿಯಾಗುತ್ತಿದ್ದಾರೆ ನಟಿ ಕೃತಿ ಶೆಟ್ಟಿ. ಹಾಗಿದ್ದರೆ ಅಷ್ಟಕ್ಕೂ ಕೃತಿ ಶೆಟ್ಟಿ ಯಾವ ನಟನ ಸಿನಿಮಾವನ್ನು ತಿರಸ್ಕರಿಸಿದ್ದಾರೆ ಹಾಗೂ ಯಾವ ಕಾರಣಕ್ಕಾಗಿ ತಿರಸ್ಕರಿಸಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಹೌದು ಅವರು ತಿರಸ್ಕರಿಸಿರುವುದು ಲೆಜೆಂಡರಿ ನಟ ಬಾಲಯ್ಯ ನವರ ಸಿನಿಮಾ ಆಫರ್. ಈಗಾಗಲೇ ಅಖಂಡ ಚಿತ್ರದ ಗೆಲುವಿನಲ್ಲಿ ಇರುವ ಬಾಲಯ್ಯ ಕರುನಾಡ ಚಕ್ರವರ್ತಿ ಶಿವಣ್ಣ ನಟನೆಯ ಮಫ್ತಿ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದಲ್ಲಿ ವಿಲನ್ ಆಗಿ ಬ್ಲಾಕ್ ಕೋಬ್ರಾ ದುನಿಯಾ ವಿಜಯ್ ರವರು ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾಗೆ ನಾಯಕಿಯಾಗಿ ಕೃತಿ ಶೆಟ್ಟಿ ಅವರಿಗೆ ಆಹ್ವಾನ ನೀಡಲಾಗಿತ್ತು. ಆದರೆ ಬಾಲಯ್ಯ ನವರ ವಯಸ್ಸು ಕೃತಿ ಶೆಟ್ಟಿ ಅವರಿಗಿಂತ ತುಂಬಾ ಹೆಚ್ಚಾಗಿದ್ದು ಮುಂದಿನ ದಿನಗಳಲ್ಲಿ ಇದು ನನಗೆ ಸಮಸ್ಯೆಯಾಗಿ ಪರಿಣಮಿಸಬಹುದು ಇದೇ ಕಾರಣದಿಂದಾಗಿ ಚಿತ್ರವನ್ನು ನಿರಾಕರಿಸಿದ್ದೇನೆ ಎಂಬುದಾಗಿ ಕೃತಿ ಶೆಟ್ಟಿ ಅವರು ಹೇಳಿದ್ದಾರೆ.

ಕೃತಿ ಶೆಟ್ಟಿ ಅವರ ನಿರಾಕರಣೆಯಿಂದಾಗಿ ತಮಿಳು ಚಿತ್ರರಂಗದ ಖ್ಯಾತ ನಟಿಯಾಗಿರುವ ಶ್ರುತಿ ಹಾಸನ್ ರವರನ್ನು ನಾಯಕಿಯ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ. ಸದ್ಯದ ಮಟ್ಟಿಗೆ ತೆಲುಗು ಚಿತ್ರರಂಗದಲ್ಲಿ ಬ್ಯಾಕ್ ಟು ಬ್ಯಾಕ್ ಆಫರ್ ಗಳನ್ನು ಪಡೆಯುತ್ತಿರುವ ನಟಿಯಾಗಿರುವ ಕೃತಿ ಶೆಟ್ಟಿಯವರಿಗೆ ವಯಸ್ಸು ಕೇವಲ 18 ವರ್ಷ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಷ್ಟೊಂದು ಜನಪ್ರಿಯತೆ ಹಾಗೂ ಬೇಡಿಕೆಯನ್ನು ಹೊಂದಿರುವುದು ನಿಜಕ್ಕೂ ಕೂಡ ಎಲ್ಲರೂ ಮೆಚ್ಚಲೇ ಬೇಕಾದಂತಹ ವಿಚಾರ. ಮುಂದಿನ ದಿನಗಳಲ್ಲಿ ಕೃತಿ ಶೆಟ್ಟಿ ಅವರಿಗೆ ತೆಲುಗು ಹಾಗೂ ದಕ್ಷಿಣ ಭಾರತ ಚಿತ್ರರಂಗದ ಟಾಪ್ ನಟಿ ಆಗುವಂತಹ ಎಲ್ಲಾ ಅವಕಾಶಗಳು ಕೂಡ ಮುಕ್ತವಾಗಿದೆ. ಈ ಕುರಿತಂತೆ ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.


Leave a Reply

Your email address will not be published. Required fields are marked *