ದೊಡ್ಮನೆಯ ಕುಟುಂಬದ ಮಗಳು ಧನ್ಯಾ ರಾಮ್ ಕುಮಾರ್ ವಿಚಾರವಾಗಿ ಹೊರ ಬಂತು ಸಿಹಿ ಸುದ್ದಿ..! ಸಿಹಿ ಸುದ್ಧಿ ಹಂಚಿಕೊಂಡ ರಾಜ್ ಕುಟುಂಬ

ಸುದ್ದಿ

ಚಂದನವನದ ಮೇರು ನಟ ಡಾ. ರಾಜಕುಮಾರ್ ಅವರ ಕುಟುಂಬದ ಕುಡಿ ರಾಜಕುಮಾರ್ ಅವರ ಮೊಮ್ಮಗಳು ರಾಮ್ ಕುಮಾರ್ ಅವರ ಮಗಳು ಧನ್ಯರಾಮ್ ಕುಮಾರ್ ಇವರ ವಿಚಾರವಾಗಿ ನಿಮಗೆ ಇಂದು ನಾವು ಸಿಹಿ ಸುದ್ದಿಯನ್ನು ನೀಡುತ್ತೇವೆ. ಈ ಲೇಖನವನ್ನು ಸಂಪೂರ್ಣ ಓದಿ. ನಿಮಗೆ ಗೊತ್ತಿರುವ ಹಾಗೇ ದೊಡ್ಮನೆ ಕುಟುಂಬದಿಂದ ಇದುವರೆಗು ಹೆಣ್ಣುಮಕ್ಕಳು ಯಾರು ಸಹ ಚಿತ್ರರಂಗಕ್ಕೆ ಕಲಿಟ್ಟಿರಲಿಲ್ಲ ಅಂಡಮಾನ್ ಚಿತ್ರದಲ್ಲಿ ಶಿವಣ್ಣ ಅವರ ಪುತ್ರಿ ಬಾಲ ಕಲಾವಿದೆಯಾಗಿ ಶಿವಣ್ಣನ ಮಗಳ ಪಾತ್ರ ನಿರ್ವಹಿಸಿದ್ದಾರೆ.

ಅದೇ ಕೊನೆ ಮತ್ಯಾರು ಸಿನೆಮಾ ರಂಗಕ್ಕೆ ಮುಖ ಮಾಡಿಲ್ಲ. ಆದರೆ ರಾಮ್ ಕುಮಾರ್ ಅವರ ಮಗಳು ಧನ್ಯ ರಾಮ್ ಕುಮಾರ್ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದಾರೆ. ಧನ್ಯ ರಾಮ್ ಕುಮಾರ್ ಸಿನೆಮಾಗಳಲ್ಲಿ ಅಭಿನಯಿಸಲು ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ. ನಿನ್ನ ಸನಿಹಕೆ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡಿದ್ದಾರೆ. ಈ ಸಿನೆಮಾದ ಮೂಲಕ ಧನ್ಯ ತನೊಬ್ಬ ಉತ್ತಮ ಕಲಾವಿದೆ ಯಂಥ ಪಾತ್ರ ಮಾಡಲು ಸಿದ್ದವಾಗಿದ್ದೇನೆ ಎನ್ನುದನ್ನು ತೋರಿಸಿಕೊಟ್ಟಿದ್ದಾರೆ.

ಇನ್ನು ವಿಶೇಷ ಏನಪ್ಪಾ ಅಂದರೆ ಅಣ್ಣಾವ್ರ ಕುಟುಂಬದ ಮನೆಯಿಂದ ಹೊರಬಂದ ಮೊದಲ ನಟಿ ಧನ್ಯ ರಾಮಕುಮಾರ್ ನಿನ್ನ ಸನಿಹಕೆ ಚಿತ್ರದಲ್ಲಿ ಅವರ ಅಭಿನಯಕ್ಕೆ ಅಭಿಮಾನಿಗಳಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಈ ಸಿನೆಮಾ ಯಶಸ್ಸಿನ ನಂತರ ಧನ್ಯ ರಾಮ್ ಕುಮಾರ್ ಅವರಿಗೆ ಕೆಲವು ಸಿನಿಮಾಗಳ ಅವಕಾಶಗಳು ಸಹ ಹುಡುಕಿಕೊಂಡು ಬಂದಿದೆ ಎನ್ನಲಾಗಿದೆ.

ಸಂತೋಷ ವಿಷಯ ಏನೆಂದರೆ ಇದೀಗ ಧನ್ಯ ರಾಮ್ ಕುಮಾರ್ ಪರಭಾಷಾ ಸಿನಿಮಾಗಳಲ್ಲಿ ಕಲಿಡುತ್ತಿದ್ದಾರೆ. ಹೌದು ಕನ್ನಡದ ಜೊತೆಗೆ ಬೇರೆ ಭಾಷೆಯ ಸಿನೆಮಾಗಳಲ್ಲಿ ಅವರಿಗೆ ಅವಕಾಶಗಳು ಸಹ ಹುಡುಕಿ ಬರುತ್ತಿದೆ. ನಟಿ ಧನ್ಯ ರಾಮ್ ಕುಮಾರ್ ಅವರು ಈಗಾಗಲೇ ಕೆಲ ಸಿನಿಮಾಗಳ ಶೂಟಿಂಗ್ ನಲ್ಲಿ ಬ್ಯುಸಿ ಅಗಿದ್ದು ಸದ್ಯದಲ್ಲೇ ಹೊಸ ಚಿತ್ರಗಳ ಕುರಿತು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ.

ಇನ್ನು ಧನ್ಯ ಅವರು ನಿನ್ನ ಸನಿಹಕೆ ಚಿತ್ರದ ನಂತರ ವಿಕ್ಕಿ ವರುಣ್ ನಿರ್ದೇಶದ ಕಲಾಪತ್ತಾರ್ ಚಿತ್ರದಲ್ಲಿ ನಾಯಕಿ ನಟಿಯಾಗಿ ಅಭಿನಯಿಸಲಿದ್ದಾರೆ. ಈ ಚಿತ್ರದ ನಂತರ ತೆಲುಗು ಸಿನೆಮಾ ಸೆಟ್ಟೆರಲಿದೆ ಎನ್ನಲಾಗಿದೆ ಇನ್ನು ಕೆಲವೇ ದಿನಗಳಲ್ಲಿ ಆ ಹೊಸ ಸಿನೆಮಾಗಳ ಬಗ್ಗೆಯೂ ಮಾಹಿತಿ ಹೊರಬೀಳಲಿದೆ.
ಇನ್ನುತ್ತಿದ್ದಾರೆ. ಇನ್ನು ತಮ್ಮ ಸಿನೆಮಾ ಜರ್ನಿಯ ಬಗ್ಗೆ ಮಾತನಾಡಿರುವ ಧನ್ಯ ರಾಮ್ ಕುಮಾರ್ ಎಲ್ಲ ವಿಚಾರವನ್ನು ಹಂಚಿಕೊಂಡಿದ್ದು ಡಾ. ರಾಜ್ ಕುಮಾರ್ ಅವರ ಹೆರಸು ತುಂಬಾ ದೊಡ್ಡದು ನಾನು ಆ ಹೆಸರನ್ನು ಉಳಿಸಬೇಕು ಎಂದಿದ್ದಾರೆ ಧನ್ಯ ರಾಮ್ ಕುಮಾರ್. ನಟಿ ಧನ್ಯ ರಾಮ್ ಕುಮಾರ್ ಅವರ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ…


Leave a Reply

Your email address will not be published. Required fields are marked *