ಸ್ಯಾಂಡಲ್ವುಡ್ ನಲ್ಲಿ ದೊಡ್ಮನೆ ಕುಟುಂಬ ಎಂದೇ ನಾಮಕರಣವಾದ ಅಣ್ಣಾವ್ರು ವಂಶದ ಕುಡಿ ಡಾ. ರಾಜಕುಮಾರ್ ಅವರ ಮೊಮ್ಮಗ ಭರವಸೆಯ ಯುವ ನಟ ಯುವ ರಾಜಕುಮಾರ್ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಇತ್ತೀಚಿಗೆ ಅಷ್ಟೇ ನೀವು ಆ ಸುದ್ದಿಯನ್ನು ಸೋಶಿಯಲ್ ಮೀಡಿಯಾದಲ್ಲಿ ನೋಡಿರಬಹುದು. ಯುವ ರಾಜಕುಮಾರ್ ಹಾಗೂ ಸ್ಟಾರ್ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರ ಕಾಂಬಿನೇಶನ್ ನಲ್ಲಿ ಹೊಸ ಚಿತ್ರದ ಕುರಿತು ಒಂದು ಹೊಸ ಅನೌನ್ಸ್ಮೆಂಟ್ ಮಾಡಲಾಗಿತ್ತು
ಇದರ ಬೆನ್ನಲ್ಲೇ ಚಿತ್ರತಂಡ ದಿಂದ ಇನ್ನೊಂದು ದೊಡ್ಡ ಬ್ರೇಕಿಂಗ್ ನ್ಯೂಸ್ ಹೊರಬಿದ್ದಿದೆ. ಯುವ ನಟ ಯುವ ರಾಜಕುಮಾರ್ ಎದುರು ಖಡಕ್ ವಿಲನ್ ಆಗಿ ನಟ ರಾಕ್ಷಸ ಡಾಲಿ ಧನಂಜಯ್ ಕಾಣಿಸಿಕೊಳ್ಳಲಿದ್ದಾರೆ. ಈ ಕಾಂಬಿನೇಶನ್ ಸಿನಿ ಪ್ರೇಕ್ಷಕರನ್ನು ಮೋಡಿಮಾಡೋದು ಪಕ್ಕ.
ಅಣ್ಣಾವ್ರು ಕುಟುಂಬದಿಂದ ಬಂದವರು ಅಂದ್ರೆ ಒಂದು ಭರವಸೆ, ಮೂರು ತಲೆಮಾರಿನಿಂದ ತಮ್ಮ ಸಿನಿಮಾಗಳ ಮೂಲಕ ಅವರ ಅಭಿಮಾನಿಗಳನ್ನು ರಂಜಿಸುತ್ತಾಳೆ ಬಂದಿದ್ದಾರೆ. ಈಗ ಆ ಸಾಲಿಗೆ ಭರವಸೆಯ ಯುವ ನಟ ಯುವ ರಾಜಕುಮಾರ್ ಸೇರ್ಪಡೆಯಾಗಿದ್ದಾರೆ.
ಕನ್ನಡದ ಅತೀ ದೊಡ್ಡ ನಿರ್ಮಾಣ ಸಂಸ್ಥೆ ಹೊಂಬಾಳೆ ಬ್ಯಾನರ್ ನಲ್ಲಿ ಈಗಾಗಲೇ ಹಿಟ್ ಚಿತ್ರಗಳನ್ನು ನೀಡಿರುವ ಸಂತೋಷ ಆನಂದ್ ರಾಮ್ ನಿರ್ದೇಶನದಲ್ಲಿ ಯುವರಾಜ್ ಕಾಣಿಸಿಕೊಳ್ಳಲಿದ್ದಾರೆ. ದೊಡ್ಮನೆ ಮಗ ಯುವರಾಜನಿಗೆ ಚಮಕ್ ಕೊಡಲು ಡಾಲಿ ಧನಂಜಯ್ ರೆಡಿಯಾಗಿದ್ದಾರೆ ಎಂಬ ಸುದ್ಧಿ ಹೊರಬಿದ್ದಿದೆ.
ಇನ್ನು ಡಾಲಿ ಬಗ್ಗೆ ಹೇಳೋದಾದ್ರೆ ಅವರೋಬ್ಬ ನಟನೆಯಲ್ಲಿ ರಾಕ್ಷಸ, ಯಾವುದೇ ಪಾತ್ರ ಆಗಿದ್ರು ಆ ಪಾತ್ರಕ್ಕೆ ಜೀವ ತುಂಬೋ ಮಹಾನ್ ಕಲಾವಿದ. ದೊಡ್ಮನೆಗೆ ನಟನೆ ಅನ್ನೋದು ರಕ್ತದಿಂದ ಬಂದಿರೋದ್ರಿಂದ ಯುವರಾಜ ಮತ್ತು ಡಾಲಿ ಡೆಡ್ಲಿ ಕಾಂಬಿನೇಶನ್ ಬಗ್ಗೆ ಅವರ ಫ್ಯಾನ್ಸ್ ಗಳು ಈಗಾಗಲೇ ಸಿಕ್ಕಾಪಟ್ಟೆ ಕುತೂಹಲ ಮೂಡಿಸುತ್ತಿದೆ. ಒಬ್ಬ ಹೀರೊ ಮುಂದೆ ಖಡಕ್ ವಿಲನ್ ಎದುರಿದ್ರೆ ಹೀರೊಗೆ ಆ ಗತ್ತು ಗಮ್ಮತ್ತೆ ಬೇರೆ ಈ ಕಾಂಬಿನೇಶನ್ ಅದೇಷ್ಟರ ಮಟ್ಟಿಗೆ ಹಿಟ್ ಆಗುತ್ತದೆ ಅಂತ ಕಾದುನೋಡಬೇಕಾಗಿದೆ.
ಯುವ ರಾಜಕುಮಾರ್ ನಟನೆಯ ಈ ಚಿತ್ರದ ಟೈಟಲ್ ಹಾಗೂ ಪಾತ್ರ ಹಾಗೂ ಕಥೆ ಹೇಗಿರಬಹುದು ಎಂಬುದು ಈಗಾಗಲೇ ಯೋಚನೆ ಮಾಡೋದಕ್ಕೆ ಶುರು ಮಾಡಿದ್ದಾರೆ. ಸಂತೋಷ ಆನಂದ್ ರಾಮ್ ನಟ ಜಗ್ಗೇಶ್ ಅವರ ರಾಘವೇಂದ್ರ ಸ್ಟೋರ್ಸ್ ಚಿತ್ರದ ನಿರ್ದೇಶನದಲ್ಲಿ ಬ್ಯುಸಿ ಆಗಿದ್ದಾರೆ. ಆ ಚಿತ್ರದ ಶೂಟಿಂಗ್ ಸಂಪೂರ್ಣ ಮುಗಿದ ಮೇಲೆ ಯುವ ರಾಜಕುಮಾರ್ ಹಾಗೂ ಸಂತೋಷ ಆನಂದ್ ರಾಮ್ ಅವರ ಪ್ರಾಜೆಕ್ಟ್ ಕೈಗೆತ್ತಿಕೊಳ್ಳಲಿದ್ದಾರೆ.
ಈ ಕಾಂಬಿನೇಶನ್ ಕೇಳಿದ್ರೆ ಯಂತಹ ಅಭಿಮಾನಿಗಳಗೂ ಕುತೂಹಲ ಹೆಚ್ಚಾಗುತ್ತದೆ. ಎಲ್ಲದಕ್ಕೂ ಚಿತ್ರತಂಡದ ಅಧಿಕೃತ ಮಾಹಿತಿಗಾಗಿ ಸಿನಿ ಪ್ರೇಕ್ಷಕರು ಕಾದು ನೋಡಬೇಕಿದೆ. ಯುವ ರಾಜಕುಮಾರ್ ಹಾಗೂ ಸಂತೋಷ ಆನಂದ್ ರಾಮ್ ಅವರ ಈ ಕಾಂಬಿನೇಷನ್ ಬಗ್ಗೆ ನಿಮ್ಮ ಅನಿಸಿಕೆ ಯನ್ನು ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು