ನಮಸ್ತೆ ಪ್ರೀತಿಯ ವೀಕ್ಷಕರೆ ಕನ್ನಡ ಕಿರುತೆರೆ ಲೋಕದಲ್ಲಿ ಈಗಾಗಲೇ ಸಾಕಷ್ಟು ಹೆಸರು ಮಾಡಿರುವ ನಿರೂಪಕ ಮಾಸ್ಟರ್ ಆನಂದ್ ಅವರ ಮಗಳು ವಂಶಿಕಾ ಹೆಸರು ಈಗ ಕರ್ನಾಟಕದಾದ್ಯಂತ ಫುಲ್ ಫೇಮಸ್ ಆಗಿದ್ದಾಳೆ. ಐದು ವರ್ಷ ವಯಸ್ಸಿನ ಈ ಪುಟ್ಟ ಪೋರಿ ವಂಶಿಕಾ ಸದ್ಯಕ್ಕೆ ಕನ್ನಡ ಕಿರುತೆರೆ ಲೋಕವನ್ನು ಆಳುತ್ತಿದ್ದಾಳೆ ಎಂದರೆ ತಪ್ಪಾಗಲಾರದು. ಕಿರುತೆರೆಯಲ್ಲಿ ಪ್ರಸಾರವಾಗಿದ್ದ ನಮ್ಮಮ್ಮ ಸೂಪರ್ ಸ್ಟಾರ್ ಎನ್ನುವ ರಿಯಾಲಿಟಿ ಶೋನಲ್ಲಿ ವಂಶಿಕಾ ಮತ್ತು ಅವರು ತಾಯಿ ಭಾಗವಹಿಸಿದ್ದರು. ಅಮ್ಮ ಮಗಳ ಜೋಡಿ ಈ ರಿಯಾಲಿಟಿ ಶೋ ವಿನ್ನರ್ ಕೂಡ ಆಗಿದ್ದರು.ಈ ಕಾರ್ಯಕ್ರಮ ನೋಡುತ್ತಿದ್ದ ವೀಕ್ಷಕರಿಗೆ ವಂಶಿಕಾ ಸಿಕ್ಕಾಪಟ್ಟೆ ಎಂಟರ್ಟೈನ್ಮೆಂಟ್ ಕೊಟ್ಟು ಎಲ್ಲರ ಪ್ರೀತಿಯನ್ನು ಗಳಿಸಿಕೊಂಡಿದ್ದಾಳೆ.
ತನ್ನ ಮುಗ್ದ ಅಭಿನಯ ಹಾಗೂ ಡಾನ್ಸ್ ನಿಂದ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡುವ ಮೂಲಕ ಸಾಕಷ್ಟು ಮೆಚ್ಚುಗೆಯನ್ನು ಗಳಿಸಿದ್ದ ಈ ಹುಡುಗಿ ವಂಶಿಕಾ ಇದೀಗ ಎಲ್ಲಾ ಕಾರ್ಯಕ್ರಮಗಳಲ್ಲಿ ಜನರನ್ನು ರಂಜಿಸಿದ್ದಾಳೆ. ಹೌದು ನಮ್ಮಮ್ಮ ಸೂಪರ್ ಸ್ಟಾರ್ ಹಾಗೂ ಗಿಚ್ಚಿ ಗಿಲಿ ಗಿಲಿ ಶೋಗಳ ಮೂಲಕ ತನ್ನ ಅಭಿನಯದಿಂದ ಪ್ರೇಕ್ಷಕರನ್ನು ಮೋಡಿಮಾಡಿ ಮೆಚ್ಚಿಗೆಯನ್ನು ಹಿಟ್ಟಿಸಿಕೊಂಡಿದ್ದು,ಅವಳ ವಯಸ್ಸಿಗೂ ಮೀರಿದ ಆಕೆಯ ಅಭಿನಯದ ಎಲ್ಲರನ್ನು ಮರಳು ಮಾಡಿದೆ.
ಇನ್ನೂ ಕೂಡ ಸೋಷಿಯಲ್ ಮೀಡಿಯಾದ್ಲಲಿ ಕೆಲವರು ದೊಡ್ಡವರ ಶೋನಲ್ಲಿ ಚಿಕ್ಕ ಮಕ್ಕಳನ್ನು ಹಾಕಿಕೊಂಡು ನಿಮ್ಮ ಟಿ. ಆರ್. ಪಿ ಹೆಚ್ಚಿಸಿಕೊಳ್ಳುತ್ತಿದ್ದೀರ ಎಂದು ಗುಡುಗಿದ್ದಾರೆ. ಇನ್ನೂ ವಂಶಿಕಾ ಕೂಡ ಅಪ್ಪನಂತೆ ಬಲು ಚತುರೆ, ಮಾಸ್ಟರ್ ಆನಂದ್ ಕೂಡ ಸಿನೆಮಾರಂಗದಲ್ಲಿ ಬಾಲನಾಟನಾಗಿ ಮಿಂಚಿದ್ದು ಸಾಕಷ್ಟು ಹೆಸರು ಮಾಡಿದ್ದರು.ಈಗ ಸಾಕಷ್ಟು ಜನರು ಅಪ್ಪನಂತೆ ಮಗಳು ಎನ್ನುತ್ತಿದ್ದಾರೆ.
ಇತ್ತೀಚಿಗೆ ಮಾಸ್ಟರ್ ಆನಂದ್ ಅವರ ಕುಟುಂಬದವರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದರು ಹಾಗೆ ತಮ್ಮ ಗ್ರೀನ್ ಗೆಳೆಯರ ತಂಡದ ಮೂಲಕ ಸ್ವಚ್ಛತಾ ಕಾರ್ಯಕ್ರಮವನ್ನು ಧರ್ಮಸ್ಥಳದಲ್ಲಿ ಹಮ್ಮಿಕೊಂಡಿದ್ದರು. ಅಲ್ಲದೆ ಶ್ರೀ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿಗಳನ್ನು ಭೇಟಿ ಮಾಡಿ ಅವರಿಂದ ಆಶೀರ್ವಾದವನ್ನು ಪಡೆಯುವ ವೇಳೆ ಮಾಸ್ಟರ್ ಆನಂದ್ ಅವರ ಮಗಳು ವಂಶಿಕಾಳಿಂದ ಸ್ತೋತ್ರವನ್ನು ಕೂಡ ಹೇಳಿದ್ದಳು.
ಇನ್ನು ಬೇಬಿ ವಂಶಿಕಾ ತನ್ನ ಮುಗ್ಧ ಮಾತುಗಳಿಂದ ಸಾಸುವೆಕಾಳಂತೆ ಪಟಪಟನೆ ಹೊಡೆಯುವ ಡೈಲಾಗ್ ಹೇಳುವುದು ಡಾನ್ಸ್ ಮಾಡುವುದು ದೇವರ ನಾಮಗಳನ್ನು ಹೇಳುವುದು ಹೇಳು ನಾನು ಎಲ್ಲದಕ್ಕೂ ಸಿದ್ಧ ಎಂದು ಸಾಬೀತುಪಡಿಸಿದ್ದಾಳೆ.
ಹೌದು ವಂಶಿಕಾ ಇವರ ಈ ಸ್ಲೋಕವನ್ನು ಮೌನದಿಂದ ಆಲಿಸಿದ ಧರ್ಮಾಧಿಕಾರಿಗಳು ಡಾ. ವೀರೇಂದ್ರ ಹೆಗ್ಗಡೆಯವರು ಖುಷಿಯಿಂದ ಉಡುಗೊರೆಯನ್ನು ಕೂಡ ನೀಡಿದ್ದಾರೆ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಮಾಸ್ಟರ್ ಆನಂದ್ ಅವರು ಹೇಳಿಕೊಂಡಿರೋದು ಹೀಗೆ. ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಗಡೆ ಅವರ ಮುಂದೆ ವಂಶಿಕಾ ಹೇಳಿದ ಶ್ಲೋಕವನ್ನು ತಂದೆಯಂತೆ ಆಲಿಸಿ ತಾಯಿಯಂತೆ ಅವಳಿಗೆ ಉಡುಗೊರೆಯನ್ನು ನೀಡಿದ ಧರ್ಮದೇವತೆಯ ಪ್ರೀತಿಯ ಪುತ್ರ ಶ್ರೀ ವೀರೇಂದ್ರ ಹೆಗ್ಗಡೆ ಅಪ್ಪಾಜಿಯವರಿಗೆ ಧನ್ಯವಾದಗಳು ಎಂದಿದ್ದಾರೆ.
ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು ಕರ್ನಾಟಕದ ಅಭಿಮಾನಿಗಳು ಇಂತಹ ಮಗಳನ್ನು ಪಡೆಯುದಕ್ಕೆ ಪುಣ್ಯಮಾಡಿದ್ದೀರಾ ಎಂದು ಎಂದು ಹಾಡಿ ಹೋಗಳುತ್ತಿದ್ದಾರೆ. ಇನ್ನು ವಂಶಿಕಾ ಮಾಡುವ ಪ್ರತಿಯೊಂದು ವಿಡಿಯೋಗಳು ಕೂಡ ಲಕ್ಷಾಂತರ ಅಭಿಮಾನಿಗಳು ಲೈಕ್ಸ್ ಕೊಟ್ಟು ಕಾಮೆಂಟ್ ಮಾಡುತ್ತಾರೆ.
ಸದ್ಯಕ್ಕೆ ವಂಶಿಕಾ ಕರ್ನಾಟಕದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ ಸಾಲೆಬ್ರೇಟಿ ಕೂಡ ಆಗಿದ್ದಾಳೆ. ಮತ್ತು ಕಾಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಗಿಚ್ಚಿ ಗಿಲಿ ಗಿಲಿ ಎನ್ನುವ ರಿಯಾಲಿಟಿ ಶೋ ನಲ್ಲಿ ಕೂಡ ವಂಶಿಕಾ ಭಾಗವಹಿಸಿದ್ದಾಳೆ ಅಲ್ಲಿ ಕೂಡ ಅವಳ ಅಭಿನಯ ಜನರನ್ನು ನಗಿಸುವಲ್ಲಿ ಯಶಸ್ವಿಯಾಗಿದ್ದಾಳೆ. ಹೌದು ಈ ಎಲ್ಲಾ ಕಾರ್ಯಕ್ರಮವನ್ನು ನೋಡಿದ ನೀವು ಈ ಪುಟಾಣಿ ವಂಶಿಕಾ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.