ನಟಿ ಅಮೂಲ್ಯ ತಾಯ್ತನದ ಬಗ್ಗೆ ಪತ್ರ ಬರೆದು ಭಾವುಕರಾದ ಅವಳಿ ಮಕ್ಕಳ ತಾಯಿ ಅಮೂಲ್ಯ.. ಅ ಪತ್ರದಲ್ಲಿ ಹೇಳಿಕೊಂಡಿದ್ದು ಏನು ಗೊತ್ತಾ..?

ಸುದ್ದಿ

ಕನ್ನಡ ಸಿನಿಮಾರಂಗಕ್ಕೆ ಬಾಲನಟಿಯಾಗಿ ಪಾದಾರ್ಪಣೆ ಮಾಡಿದ ಚಲುವಿನ ಚಿತ್ತಾರದ ಬೆಡಗಿ ನಟಿ ಅಮೂಲ್ಯ ಅವರು ಬಹಳಷ್ಟು ಜನಪ್ರಿಯತೆ ಗೊಂಡರು. ನಟಿ ಅಮೂಲ್ಯ ಅವರು ಚಲುವಿನ ಚಿತ್ತಾರ ಸಿನಿಮಾದಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿಯಾಗಿದ್ದು. ಪ್ರೇಮಕಾವ್ಯ ಚಿತ್ರವಾಗಿ ಕಾಣಿಸಿಕೊಂಡಿತ್ತು. ಆ ಚಿತ್ರ ಕನ್ನಡ ಚಿತ್ರರಂಗದ ಇತಿಹಾಸದಲ್ಲೆ ಎಲ್ಲರ ಮನಸ್ಸಲ್ಲಿ ಉಳಿಯುವ ಹಾಗೇ ಮಾಡಿತು.
ಆ ಚಿತ್ರದ ಮೂಲಕ ಜನಮಾನ ಗೆದ್ದ ನಟಿ ಅಮೂಲ್ಯ ಅವರಿಗೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಕನ್ನಡಿಗರ ಮನೆ ಮನೆಮಾತಾದರು. ಹಾಗೂ ಅನೇಕ ಚಿತ್ರಗಳ್ಳಲ್ಲಿ ನಟಿಸಿ ಅವರ ಅಭಿನಯಕ್ಕೆ ಮನಸೋತ ಅಭಿಮಾನಿಗಳು ಅವರಿಗೆ “ಗೋಲ್ಡನ್ ಕ್ವೀನ್” ಎಂದು ನಾಮಕರಣ ಮಾಡಿದರು. ಇದೀಗ ಅಮೂಲ್ಯ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟು ಗರ್ಭಿಣಿಯಾಗಿರುವ ವಿಚಾರ ನಿಮಗೆಲ್ಲರಿಗೂ ಗೊತ್ತೇ ಇದೇ.
ಅವರ ಹಾಗೂ ಪತಿಯ ಕುಟುಂಬದವರು ಸೇರಿ ನಟಿ ಅಮೂಲ್ಯ ಅವರಿಗೆ ಸೀಮಂತ ಕಾರ್ಯ ಮಾಡಿರೋದು ನಿಮಗೆ ಗೊತ್ತೇ ಇದೇ ಆದರ ನೆನಪಿಗೋಸ್ಕರ ದಂಪತಿಗಳು ಫೋಟೋ ಶೊಟ್ ಕೂಡ ಮಾಡುಸಿದ್ದರು. ಅಷ್ಟೇ ಅಲ್ಲದೇ ಅವರ ಸೀಮಂತ ಕಾರ್ಯಕ್ಕೆ ಚಿತ್ರರಂಗದ ಸೆಲೆಬ್ರೇಟಿಗಳು ಸ್ನೇಹಿತರು ಹಾಗೂ ಹಲವಾರು ಗಣ್ಯರು ಕೂಡ ಭಾಗವಹಿಸಿದ್ದರು. ಅವರ ಇಡೀ ಕುಟುಂಬವೇ ಸಂತೋಷದಲ್ಲಿ ತೆಲಡುತ್ತಿದ್ದಾರೆ. ಯಾಕೆಅಂದ್ರೆ ನಟಿ ಅಮೂಲ್ಯ ಅವರಿಗೆ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ.
ನಟಿ ಅಮೂಲ್ಯ ಚಲುವಿನ ಚಿತ್ತಾರ, ಚೈತ್ರದ ಚಂದ್ರಮ, ನಾನು ನನ್ನ ಕನಸು, ಶ್ರಾವಣಿ ಸುಬ್ರಮಣ್ಯ, ಗಜಕೇಸರಿ, ಹಾಗೇ ಅನೇಕ ಚಿತ್ರಗಳಲ್ಲಿ ನಟಿಸಿ ತಮ್ಮ ಟ್ಯಾಲೆಂಟ್ ತೋರಿಸಿದ್ದಾರೆ. ಇನ್ನು ನಟಿ ಅಮೂಲ್ಯ ಅವರು ಹುಟ್ಟಿ ಬೆಳೆದಿದ್ದು ಎಲ್ಲ ಬೆಂಗಳೂರಿನಲ್ಲಿ ಅವರ ತಂದೆ ಗುಮಸ್ತರಾಗಿದ್ರು ಹಾಗೂ ತಾಯಿ ಗೃಹಿಣಿ. ಇನ್ನು ಅಮೂಲ್ಯ ಅವರಿಗೆ ಒಬ್ಬ ಅಣ್ಣ ಅವರು ದೀಪಕ್ ಅರಸ್. ಅವರು ಕನ್ನಡ ಚಿತ್ರರಂಗದಲ್ಲಿ ನಿರ್ದೇಶನವನ್ನು ಮಾಡಿದ್ದಾರೆ. ಅವರು ಮಾಧ್ಯಮ ವರ್ಗ ಕುಟುಂಬ ದಿಂದ ಬಂದ ನಟಿ ಇವರು ನಟನೆಯ ಮೂಲಕ ಗುರುತಿಸಿಕೊಂಡಿದ್ದರು. ಅವರ ಬಣ್ಣದ ಸಿನಿಮಾ ರಂಗದ ಬದುಕಿನಲ್ಲಿ ಸುಮಾರು 37 ಕ್ಕು ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿದ್ದಾರೆ.
ನಟಿ ಅಮೂಲ್ಯ ಅವರು 2017 ರಲ್ಲಿ ಜಗದೀಶ್ ಎಂಬುವವರನ್ನು ಮದುವೆಯಾದರು. ಮದುವೆಯಾದ ನಂತರ ಅಮೂಲ್ಯ ಅವರು ಸಂಪೂರ್ಣ ಸಿನಿಮಾರಂಗದಿಂದ ದೂರ ಸರಿದರು. ತಮ್ಮ ಸಂಪೂರ್ಣ ಸಮಯವನ್ನು ತನ್ನ ಕುಟುಂಬಕ್ಕೆ ನೀಡಿದರು ದುನಿಯಾ ವಿಜಯ್ ಮಾಸ್ತಿಗುಡಿ ಹಾಗೂ ಮುಗುಳುನಗೆ ಸಿನಿಮಾಗಳ ನಂತರ ಯಾವ ಚಿತ್ರದಲ್ಲೂ ನಟಿಸಿಲ್ಲ. ಇನ್ನು ಅವರ ಮುದ್ದಿನ ಮಗುವಿನ ನಿರೀಕ್ಷೆಯಲ್ಲಿದ್ದ ದಂಪತಿಗಳಿಗೆ ಡಬಲ್ ಬಂಪರ್ ಆಫರ್ ಸಿಕ್ಕಿದೆ. ಜಗದೀಶ್ ದಂಪತಿಗಳಿಗೆ ಅವಳಿ ಗಂಡು ಮಕ್ಕಳಿಗೆ ತಂದೆ ತಾಯಿ ಆಗಿದ್ದಾರೆ. ಶಿವರಾತ್ರಿಯ ಹಬ್ಬದಂದು ಹುಟ್ಟಿದ್ದು ವಿಶೇಷವಾಗಿ ಜಗದೀಶ್ ಅವರಿಗೆ ತುಂಬಾ ಖುಷಿ ಕೊಟ್ಟಿದೆ.
ಅಮೂಲ್ಯ ಅವರು ಮಕ್ಕಳು ಪಾಲನೆ ಪೋಷಣೆಯಲ್ಲಿ ತೊದಗೋಕೊಂಡಿರುವ ಅವರು ಸಾಮಾಜಿಕ ಜಾಲತಾಣಗಳಲ್ಲಿ ತಾಯಿತನದ ಬಗ್ಗೆ ಭಾವುಕರಾಗಿ ಪತ್ರಒಂದನ್ನು ಬರೆದಿದ್ದಾರೆ. ಆ ಪತ್ರದಲ್ಲಿ ನನ್ನ ತಾಯಿತನದ ಸಂಭ್ರಮಕ್ಕೆ ಎರಡು ತಿಂಗಳು ಇದು ನನ್ನ ಜೀವನದಲ್ಲಿ ಬಹು ದೊಡ್ಡ ಜರ್ನಿ ಅಂತ ಹೇಳಬಹುದು. ನಾನು ಅವಳಿ ಮಕ್ಕಳಿಗೆ ತಾಯಿ ಆಗಿದ್ದೇನೆ ಎಂದು ನನಗೆ ಗೊತ್ತಾದಾಗ ನನಗಾದ ಸಂತೋಷ ಅಷ್ಟಿಷ್ಟಲ್ಲ. ಈ ಖುಷಿಗಿಂತ ಸಂತೋಷ ಬೇರೆ ಇನ್ನೊಂದ್ ಇಲ್ಲ ಹೇರುವಾಗ ಪಡುವ ಎಲ್ಲಾ ನೋವುಗಳು ಸವಾಲುಗಳು ಮರೆತುಬಿಡುವಂತೆ ಮಾಡಿತು. ಈಗಾಗಲೇ ನನ್ನ ಬೇಬಿ ಬಂಪ್ ಮಿಸ್ ಮಾಡಿಕೊಳ್ಳುತ್ತಿದ್ದೇನೆ.

ಆದರೆ ಪ್ರತಿಯೊಬ್ಬ ತಾಯಿಯು ಜಗತ್ತಿಗೆ ತನ್ನ ಕೆಚ್ಚೆದೆಯ ಮುಖವನ್ನು ತೋರಿಸುತ್ತಾಳೆ. ಆದರೆ ಈ ಗರ್ಭಿವಸ್ತೆಯ ಸಮಯದಲ್ಲಿ ಗುಲಾಬಿಗಳು ಮತ್ತು ಮುಳ್ಳುಗಳು ತಾಯಿಗೆ ಮಾತ್ರ ತಿಳಿದಿರುತ್ತದೆ ಎಂಬುದು ನಾನು ಹೇಳಬಲ್ಲೆ. ಅವಾಗ ಎಷ್ಟೇ ಕಷ್ಟ ಆದರೂ ಕೊನೆಯಲ್ಲಿ ನಾನು ನನ್ನ ಮಕ್ಕಳ ಪುಟ್ಟ ಪುಟ್ಟ ಪದಗಳನ್ನು ಅಥವಾ ಅವರ ಕೈಗಳನ್ನು ನನ್ನ ಕೈಯಲ್ಲಿ ಹಿಡಿದಾಗ, ನಾನು ನನ್ನ ಶಕ್ತಿ ಮೀರಿ ಮಾಡಿದ್ದೇನೆ ಮತ್ತು ಅದನ್ನು ಇನ್ನು ಮುಂದುವರಿಸುತ್ತೇನೆ ಎಂಬುದು ನನಗೆ ಗೊತ್ತಾಗಿದೆ. ಎಂದು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಭಾವುಕರಗಿ ನಟಿ ಅಮೂಲ್ಯ ಪೋಸ್ಟ್ ಮಾಡಿದ್ದಾರೆ.
ನಿಮ್ಮ ಆಸೆ ಹೇಗೆ ಇರಲಿ ನಿಮ್ಮ ಮಕ್ಕಳಿಗೆ ದೇವರು ಅರೋಗ್ಯ ಹಾಗೂ ಆಯುಷ್ಯ ಕೊಟ್ಟು ಕಾಪಾಡಲಿ ಎಂದು ಬೇಡಿಕೊಳ್ಳುತ್ತೇವೆ ನಿಮ್ಮ ಅಭಿಮಾನಿಗಳಿಗೆ ನಿಮ್ಮ ಅವಳಿ ಗಂಡು ಮಕ್ಕಳ ಮುಖದರ್ಶನ ಆದಷ್ಟು ಬೇಗ ಮಾಡಿ ಎಂಬ ಕೋರಿಕೆ ನಮ್ಮದು. ಧನ್ಯವಾದಗಳು


Leave a Reply

Your email address will not be published. Required fields are marked *